Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕುಕ್ಕರ್‌ನಲ್ಲಿ ಕೇವಲ 5 ನಿಮಿಷದಲ್ಲಿ ಕೇಸರಿ ಬಾತ್ ಮಾಡಿ! ಸಿಕ್ಕಾಪಟ್ಟೆ ಸುಲಭ
ಬೆಳಗ್ಗೆ ಎದ್ದಾಗ ಇಂದು ಯಾವ ತಿಂಡಿ ಮಾಡಬೇಕು ಎಂಬುದೇ ಬಹುಪಾಲು ಗೃಹಿಣಿಯರ ಪ್ರಶ್ನೆಯಾಗಿರುತ್ತೆ. ಆದ್ರೆ ಅವರಿಗೆ ತಿಂಡಿ ಮಾಡಲು ಬರಲ್ಲ ಎಂದರ್ಥವಲ್ಲ. ಆದ್ರೆ ಯಾವ ತಿಂಡಿ ಮಾಡಬೇಕು ಅನ್ನೋದೆ ಗೊಂದಲ. ಏಕೆಂದರೆ ಕಡಿಮೆ ಸಮಯದಲ್ಲಿ ರುಚಿಕರ ತಿಂಡಿ ಮಾಡಬೇಕು ಅನ್ನೋದು ಅವರ ಉದ್ದೇಶವಾಗಿರುತ್ತೆ.
ಇದಕ್ಕೆ ಪೂರಕ ಅಂತ ನೋಡೋದಾದ್ರೆ ನೀವು ಬೆಳಗ್ಗೆ ತಿಂಡಿಗೆ, ಅಥವಾ ಯಾರಾದ್ರು ಸಂಬಂಧಿಕರು, ಸ್ನೇಹಿತರು ದಿಢೀರ್ ನಿಮ್ಮ ಮನೆಗೆ ಬಂದಾಗ ಕೇಸರಿಬಾತ್ ಮಾಡಿ ಕೊಡಿ. ಆದ್ರೆ ಈ ಕೇಸರಿ ಮಾಡೋಕು ಸಮಯ ಹಿಡಿಯುತ್ತೆ ಎಂದುಕೊಳ್ಳಬಹುದು. ಹೌದು ಸಾಮಾನ್ಯವಾಗಿ ಕೇಸರಿ ಬಾತ್ ಮಾಡಲಿ ಕೆಲ ಸಮಯ ಹಿಡಿಯುತ್ತೆ. ಆದ್ರೆ ನಾವಿಂದು ಕಡಿಮೆ ಸಮಯದಲ್ಲಿ ಕುಕ್ಕರ್‌ನಲ್ಲಿ ಕೇಸರಿ ಬಾತ್ ಮಾಡುವುದ ಹೇಗೆ ಎಂಬುದನ್ನ ತಿಳಿಸಲಿದ್ದೇವೆ.

ಹೌದು ಕುಕ್ಕರ್ ಬಳಸಿ ರುಚಿಕರ ಕೇಸರಿಬಾತ್ ಮಾಡಬಹುದು. ಕೇಸರಿ ಬಾತ್ ಮಾಡಲು ಸದಾ ಕಾಲ ಒಲೆ ಬಳಿ ನಿಂತಿರಬೇಕು ಎಂಬುದೇನು ಇಲ್ಲ ಈ ರೀತಿಯಾಗಿ ಸುಲಭವಾಗಿ ಕೇಸರಿ ಬಾತ್ ಮಾಡಿ ನೋಡಿ. ಹಾಗಾದ್ರೆ ಈ ಕೇಸರಿ ಬಾತ್ ಮಾಡೋದು ಹೇಗೆ? ಕೇಸರಿ ಬಾತ್ ಮಾಡಲು ಬೇಕಾಗುವ ಪದಾರ್ಥಗಳೇನು? ಮಾಡುವ ವಿಧಾನವೇನು ಎಂಬುದನ್ನು ನಾವಿಂದು ವಿವರವಾಗಿ ತಿಳಿದುಕೊಳ್ಳೋಣ
ಕೇಸರಿ ಬಾತ್ ಮಾಡಲು ಬೇಕಾಗುವ ಪದಾರ್ಥಗಳು
- ಕೇಸರಿ ಬಾತ್ ರೆವೆ/ ಬನ್ಸಿ ರವೆ - 1 ಗ್ಲಾಸ್
- ಹಾಲು - 2 ಗ್ಲಾಸ್
- ತುಪ್ಪ
- ಏಲಕ್ಕಿ
- ಲವಂಗ
- ಅರಶಿಣ
- ಒಣದ್ರಾಕ್ಷಿ
- ಸಕ್ಕರೆ
- ಗೋಡಂಬಿ
ಕುಕ್ಕರ್‌ನಲ್ಲಿ ರುಚಿಕರ ಕೇಸರಿ ಬಾತ್ ಮಾಡುವ ವಿಧಾನ
ಮೊದಲು ಕುಕ್ಕರ್ ಒಲೆ ಮೇಲೆ ಇಟ್ಟು ತುಪ್ಪ ಹಾಕಿ, ತುಪ್ಪಕ್ಕೆ ಗೋಡಂಬಿ, ದ್ರಾಕ್ಷಿ ಹಾಕಿ ಫ್ರೈ ಮಾಡಿ ಬಳಿಕ ತೆಗೆದಿಟ್ಟುಕೊಳ್ಳಿ. ಇದಕ್ಕೆ ಲವಂಗ ಹಾಗೂ ರವೆಯನ್ನು ಹಾಕಿಕೊಂಡು ಹುರಿದುಕೊಳ್ಳಿ. ಮೊದಲು ಅಳತೆಗೆ ಒಂದು ಲೋಟ ತೆಗೆದುಕೊಳ್ಳಿ. ಆ ಲೋಟದಲ್ಲಿ ಒಂದು ಗ್ಲಾಸ್ ರವೆ ತೆಗೆದುಕೊಳ್ಳಿ.
ಇದಾದ ಬಳಿಕ ಹುರಿದಿರುವ ರವೆಗೆ ಹಾಲು ಹಾಕಿಕೊಳ್ಳಿ. ಹಾಲು ಹಾಕಿದ್ದ ಗ್ಲಾಸ್‌ನಲ್ಲೇ 2 ಗ್ಲಾಸ್ ನೀರು ಹಾಕಿಕೊಳ್ಳಿ. ನೀವು ರವೆ ತೆಗೆದುಕೊಂಡ ಗ್ಲಾಸ್ ಅನ್ನೇ ಬಳಸಿ. ಇದಕ್ಕೆ ಮೊದಲು ಫ್ರೈ ಮಾಡಿಕೊಂಡ ಗೋಡಂಬಿ, ದ್ರಾಕ್ಷಿ, ಏಲಕ್ಕಿ, ಸಕ್ಕರೆ ಸ್ವಲ್ಪ ಅರಶಿಣ ಹಾಕಿ. ಇದಕ್ಕೆ ಇನ್ನೊಂದು ಚಮಚ ತುಪ್ಪ ಹಾಕಿ ಕಲಸಿಕೊಳ್ಳಿ.
ಬಳಿಕ ಕುಕ್ಕರ್ ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ ಒಂದು ಸೀಟಿ ಹೊಡೆಸಿಕೊಳ್ಳಿ. ಸಂಪೂರ್ಣವಾಗಿ ಗ್ಯಾಸ್ ಹೋಗುವವರೆಗೂ ಬಿಡಿ. ಬಳಿಕ ಕುಕ್ಕರ್ ಮುಚ್ಚಳ ತೆಗೆಯಿತು. ನಿಮ್ಮ ಮುಂದಿರುವ ಕೇಸರಿ ಬಾತ್ ಅನ್ನು ಚೆನ್ನಾಗಿ ಕಲಿಸಿಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಕೇಸರಿ ಬಾತು ರೆಡಿಯಾಗಿರುತ್ತದೆ. ಕೇವಲ 5 ನಿಮಿಷದಲ್ಲಿ ಇದನ್ನು ಮಾಡಬಹುದು. ನೀವು ಅಳತೆಯ ಗ್ಲಾಸ್‌ನಂತೆಯೇ ಎಲ್ಲಾ ವಸ್ತು ಹಾಕಿದರೆ ಕುಕ್ಕರ್ ತಳ ಹಿಡಿಯುವುದಿಲ್ಲ. ಇದನ್ನು ಸುಲಭವಾಗಿ ಮಾಡಬಹುದು ನೀವು ಒಲೆಯ ಮುಂದೆ ನಿಂತು ಯಾವಾಗಲು ಕೇಸರಿ ಬಾತ್ ನೋಡುತ್ತಾ ಇರಬೇಕು ಎಂಬುದೇನಿಲ್ಲ. ನೀವು ಕುಕ್ಕರ್‌ಗೆ ಹಾಕಿ ಒಂದು ಸೀಟಿ ಹೊಡೆಸಿದರೆ ಸಾಕಾಗುತ್ತದೆ.



Click it and Unblock the Notifications