Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಡಿಫರೆಂಟ್ ಶೈಲಿಯ ಬಿಳಿ ಪುಳಿಯೋಗರೆ: ಇದಕ್ಕಿಂತ ರುಚಿ ಮತ್ತೊಂದಿಲ್ಲ!
ನೀವು ಬೆಳಗ್ಗೆ ತಿಂಡಿಗೆ ರುಚಿ ರುಚಿಯಾದ ಖಾದ್ಯ ಮಾಡಿ ಸವಿಯುವ ಆಸೆ ಇಟ್ಟುಕೊಂಡಿರುತ್ತೀರಿ. ಹಾಗೆ ರೈಸ್‌ನಿಂದ ಮಾಡುವ ಹಲವು ಖಾದ್ಯಗಳು ನಿಮಗೆ ಯಾವಾಗಲು ರುಚಿ ತರಬಹುದು. ಅದ್ರಲ್ಲೂ ಪಲಾವ್, ರೈಸ್ ಬಾತ್, ಟೊಮೆಟೋ ಬಾತ್, ಪುಳಿಯೋಗರೆ, ಚಿತ್ರಾನ್ನಗಳು ಎಲ್ಲರಿಗೂ ಇಷ್ಟವಾಗುತ್ತೆ. ಇದ್ರಲ್ಲೂ ವಿವಿಧ ರೀತಿಯಲ್ಲಿ ಮಾಡಿ ಸವಿಯೋಕೆ ಎಲ್ಲರು ಬಯಸುತ್ತಾರೆ.
ಆದರೆ ಪುಳಿಯೋಗರೆ ಅಂದರೆ ಕೂಡ ಹಲವರು ಇಷ್ಟಪಟ್ಟು ಸವಿಯುತ್ತಾರೆ. ಅದ್ರಲ್ಲೂ ಹೋಟೆಲ್‌ಗಳಲ್ಲಿ ನೀಡುವಂತಹ ಪುಳಿಯೋಗರೆ ಅಂದ್ರೆ ಎಲ್ಲರ ಬಾಯಲ್ಲೂ ನೀರು ಬರುವುದು ಸಹಜ. ಅದ್ರಲ್ಲೂ ಪುಳಿಯೋಗರೆ ಮಾಡೋದು ಅಂದ್ರೆ ಬಹಳ ಸುಲಭ. ಕೆಲವೇ ವಸ್ತುಗಳಿಂದ ಥಟ್ ಎಂದು ಮಾಡಬಹುದು. ಗಡಿ ಬಿಡಿಯಲ್ಲಿದ್ದಾಗ ಹಾಗೆ ಮಧ್ಯಾಹ್ನದ ಬಾಕ್ಸ್‌ಗೂ ಇದು ಬಹಳ ರುಚಿ ನೀಡಲಿದೆ.

ಪುಳಿಯೋಗರೆ ಪುಡಿಯನ್ನು ಮೊದಲೇ ಮಾಡಿಟ್ಟರೆ ಅಥವಾ ಅಂಗಡಿಯಿಂದ ತಂದರೆ 5 ನಿಮಿಷದಲ್ಲಿ ಈ ಪುಳಿಯೋಗರೆ ಸಿದ್ದ ಮಾಡಬಹುದು. ಆದ್ರೆ ಎಂದಿನಂತೆ ಸಾಮಾನ್ಯ ರುಚಿಯ ಪುಳಿಯೋಗರೆ ಮಾಡುವುದಕ್ಕಿಂತಲೂ ನಾವು ವಿಶೇಷ ರೀತಿಯಲ್ಲಿ ಪುಳಿಯೋಗರೆ ಮಾಡಿ ಸವಿಯುವ ಕುರಿತಾಗಿ ಇಂದು ತಿಳಿದುಕೊಳ್ಳೋಣ.
ಪುಳಿಯೋಗರೆ ಕಂದು ಬಣ್ಣದಲ್ಲಿ ಮಾಡಿ ಸವಿಯೋದು ನೀವೆಲ್ಲಾ ನೋಡಿರುತ್ತೀರಿ. ಬಹಳ ರುಚಿಯಾದ ಖಾದ್ಯ ಇದಾಗಿರಲಿದೆ, ಆದ್ರೆ ನಾವಿಂದು ಬಿಳಿ ಪುಳಿಯೋಗರೆ ಮಾಡುವ ಕುರಿತು ತಿಳಿಯೋಣ. ಮನೆಯಲ್ಲಿರುವ ವಸ್ತುಗಳನ್ನೇ ಬಳಸಿಕೊಂಡು ಬಹಳ ಸುಲಭವಾಗಿ ಬಿಳಿಯಾದ ಪುಳಿಯೋಗರೆ ಮಾಡಿ ಸವಿಯುವ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಬಿಳಿ ಪುಳಿಯೋಗರೆ ಮಾಡಲು ಬೇಕಾಗುವ ವಸ್ತುಗಳು
- ಅನ್ನ
- ಕರಿಬೇವು - ಸ್ವಲ್ಪ
- ಕಡಲೆ ಬೀಜ
- ಕಡಲೆ ಬೇಳೆ
- ಉದ್ದಿನ ಬೇಳೆ
- ಸಾಸಿವೆ
- ಹಸಿ ಮೆಣಸಿನಕಾಯಿ
- ಒಣ ಮೆಣಸಿನಕಾಯಿ - 5
- ಬಿಳಿ ಎಳ್ಳು - 1 ಚಮಚ
- ಹುಣಸೆ ಹುಳಿ
- ಬೆಳ್ಳುಳ್ಳಿ
- ರುಚಿಗೆ ತಕ್ಕಷ್ಟು ಉಪ್ಪು
- ಅಡುಗೆ ಎಣ್ಣೆ
ಬಿಳಿ ಪುಳಿಯೋಗರೆ ಮಾಡುವ ಸುಲಭದ ವಿಧಾನವೇನು?
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಳ್ಳಿ, ಎಣ್ಣೆ ತುಸು ಹೆಚ್ಚು ಹಾಕಿ ಬಳಿಕ ಕರಿಬೇವು ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ನಂತರ ತೆಗೆದು ಇದನ್ನು ತಣ್ಣಗಾಗಲು ಎತ್ತಿಟ್ಟುಕೊಳ್ಳಿ. ಈಗ ಅದೇ ಎಣ್ಣೆಗೆ ಕಡಲೆಬೀಜ ಹಾಕಿಕೊಂಡು ಫ್ರೈ ಮಾಡಿಕೊಂಡು ಎತ್ತಿಟ್ಟುಕೊಳ್ಳಿ.
ಈಗ ಎಣ್ಣೆಗೆ ಸಾಸಿವೆ, ಕಡಲೆ ಬೇಳೆ, ಉದ್ದಿನ ಬೇಳೆ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. 1 ನಿಮಿಷದ ಬಳಿಕ ಇದಕ್ಕೆ ಹಸಿ ಮೆಣಸು, ಒಣ ಮೆಣಸು, ಬಿಳಿ ಎಳ್ಳು ಕರಿಬೇವು ಸಹ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಅರಶಿಣ ಪುಡಿ ಸಹ ಸೇರಿಸಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಈಗ ನೆನೆಸಿಟ್ಟ ಹುಣಸೆ ಹುಳಿಯನ್ನು ಸಹ ಇದಕ್ಕೆ ಹಾಕಿಕೊಳ್ಳಬೇಕು.
ಈಗ ಸ್ವಲ್ಪ ನೀರು ಹಾಗೂ ಉಪ್ಪು ಸಹ ಹಾಕಿಕೊಂಡು ಗೊಜ್ಜಾಗಿಸಲು ಕುದಿಬರಲು ಬಿಡಿ. ಈಗ ಒಂದು ಮಿಕ್ಸಿ ಜಾರ್‌ಗೆ ಮೊದಲು ಫ್ರೈ ಮಾಡಿಕೊಂಡಿದ್ದ ಕರಿಬೇವು, ಸ್ಪೂನ್ ಸಾಸಿವೆ, ಬೆಳ್ಳುಳ್ಳಿ ಹಾಕಿಕೊಂಡು ತರಿತರಿಯಾಗಿ ರುಬ್ಬಿಕೊಳ್ಳಬೇಕು. ಈಗ ಒಲೆ ಮೇಲಿನ ಗೊಜ್ಜು ಕಡಿಮೆಯಾದ ಬಳಿಕ ರುಬ್ಬಿಕೊಂಡ ಮಿಶ್ರಣ ಇದಕ್ಕೆ ಹಾಕಿ ಸಣ್ಣ ಉರಿಯಲ್ಲಿ ಇಟ್ಟು ಮಿಕ್ಸ್ ಮಾಡಿ. ಹಾಗೆ ಮೊದಲು ಹುರಿದುಕೊಂಡ ಕಡಲೆ ಬೀಜ ಕೂಡ ಇದಕ್ಕೆ ಹಾಕಿಕೊಳ್ಳಿ.
ಈಗ ಕೊನೆಯದಾಗಿ ಮೊದಲೇ ಮಾಡಿಟ್ಟುಕೊಂಡ ಅನ್ನವನ್ನು ಇದಕ್ಕೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಈಗ ಒಲೆ ಆಫ್ ಮಾಡಿಕೊಂಡರೆ ನಿಮ್ಮ ಮುಂದೆ ಬಿಳಿ ಪುಳಿಯೋಗರೆ ಸಿದ್ದವಾಗುತ್ತೆ.



Click it and Unblock the Notifications