Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವ್ರತ ರೆಸಿಪಿ: ಮಹಾಶಿವರಾತ್ರಿ ವ್ರತ ದಿನದಂದು ಸಾಬುದಾನ ಕಿಚಡಿ ಹೀಗೆ ಮಾಡಿದರೆ ಬೊಂಬಾಟ್ ರುಚಿ
ಶಿವರಾತ್ರಿಗೆ ವ್ರತ ನಿಯಮ ಪಾಲಿಸುವವರು ಎಲ್ಲಾ ಬಗೆಯ ಆಹಾರ ಸೇವಿಸುವಂತಿಲ್ಲ, ಹಾಗಾಗಿ ಈ ದಿನ ಕೆಲವೊಂದು ಆಹಾರವನ್ನು ಸೇವಿಸಬಹುದು, ಅದರಲ್ಲಿ ಸಾಬುದಾನ ಕಿಚಡಿ, ಈ ಸಾಬುದಾನ ಕಿಚಡಿಯನ್ನು ನೀವು ಉಪ್ಪಿಟ್ಟು ರೀತಿ ಮಾಡಿದರೆ ಟೇಸ್ಟ್ ಅನಿಸಲ್ಲ, ಬದಲಿಗೆ ಈ ರೀತಿ ಮಾಡಿದರೆ ರುಚಿ ತುಂಬಾ ಚೆನ್ನಾಗಿರಲಿದೆ.

ಸಾಬುದಾನ ಕಿಚಡಿಗೆ ಬೇಕಾಗುವ ಸಾಮಗ್ರಿ
ಸಾಬುದಾನ 1 ಕಪ್
100 ಗ್ರಾಂ ನೆಲಗಡಲೆ
ಬೇಯಿಸಿದ ಆಲೂಗೆಡ್ಡೆ
ಕಲ್ಲುಪ್ಪು 1/2 ಚಮಚ
1 ಚಮಚ ನಿಂಬೆರಸ
ಸ್ವಲ್ಪ ಕೊತ್ತಂಬರಿ ಸೊಪ್ಪು
ತುಪ್ಪ 2 ಚಮಚ'
ಹಸಿಮೆಣಸು 2-3(ನಿಮ್ಮ ಖಾರಕ್ಕೆ ತಕ್ಕಂತೆ)
ಸಾಬುದಾನ ಕಿಚಡಿ ಮಾಡುವುದು ಹೇಗೆ?
ಸಾಬುದಾನವನ್ನು ನೆನೆಹಾಕಿ
ಒಂದು ಕಪ್ ಸಾಬುದಾನವನ್ನು ನೆನೆ ಹಾಕಿ ಸಾಬುದಾನ ನೆನೆ ಹಾಕುವಾಗ ಸಾಬೂದಾನ
ಚೆನ್ನಾಗಿ ನೀರಿನಲ್ಲಿ ಮುಳುಗಿರಬೇಕು. ನೀವು ಒಂದು ಕಪ್ ಸಾಬುದಾನ ನೆನೆ ಹಾಕಲು
ಎರಡೂವರೆ ಕಪ್ ನೀರು ಹಾಕಿ. ನೀವು ಯಾವಾಗಲೂ ರಾತ್ರಿ ನೆನೆ ಹಾಕುವುದು ಒಳ್ಳೆಯದು.
2-3 ಹಾಕಿ ಗಂಟೆ ನೆನೆ ಹಾಕಿದರೆ ಅಷ್ಟು ಮೃದುವಾಗಲ್ಲ, ಅದರ ಬದಲಿಗೆ ರಾತ್ರಿಯಲ್ಲಿ
ನೆನೆಹಾಕಿ.
ನೀವು ಸಾಬುದಾನವನ್ನು ಮುಟ್ಟಿ ನೋಡಬೇಕು, ಕೈಯಿಂದ ಹಿಸುಕಿದರೆ ಮೃದುವಾಗುವುದು. ಮಧ್ಯದಲ್ಲಿ ಸ್ವಲ್ಪ ಗಟ್ಟಿಯಾಗಿದ್ದರೆ ಇನ್ನೂ ಸ್ವಲ್ಪ ನೀರು ಹಾಕಿ ಮತ್ತೆ 30 ನಿಮಿಷ ನೆನೆಹಾಕಿ.
ನಂತರ ನೀರನ್ನು ಸೋಸಿ ಇಡಿ. ಅದರಲ್ಲಿ ನೀರಿನಂಶವಿರಬಾರದು, ಇಲ್ಲದಿದ್ದರೆ ಕಿಚಡಿ ಮುದ್ದೆ-ಮುದ್ದೆಯಾಗುವುದು.
ಆಲೂಗೆಡ್ಡೆ ಬೇಯಿಸಿ
ಎರಡು ದೊಡ್ಡ ಗಾತ್ರದ ಆಲೂಗೆಡ್ಡೆಯನ್ನು ಬೇಯಿಸಿ ಅದು ತಣ್ಣಗಾದ ಮೇಲೆ ಸಿಪ್ಪೆ
ಸುಲಿಯಿರಿ.
ನೆಲಗಡಲೆ ಪುಡಿ ಮಾಡಿ
ಕಡಾಯಿ ಬಿಸಿ ಮಾಡಿ ನೆಲಗಡಲೆಯನ್ನು ಹಾಕಿ ಹುರಿಯಿರಿ. ನಂತರ ನೆಲಗಡಲೆ ಸ್ವಲ್ಪ
ತಣ್ಣಗಾದ ಮೇಲೆ ಪುಡಿ ಮಾಡಿ.
ನಂತರ ಅದನ್ನು ಒಂದು ದೊಡ್ಡ ಬೌಲ್‌ಗೆ ಹಾಕಿ, ಅದಾದ ಬಳಿಕ ಸೋಸಿ ಇಟ್ಟ ಸಾಬುದಾನ ಹಾಕಿ. ಕಲ್ಲುಪ್ಪು ಸೇರಿಸಿ, 1 ಚಮಚ ಸಕ್ಕರೆ ಸೇರಿಸಿ, ವ್ರತದ ಅಡುಗೆ ಮಾಡುವಾಗ ಕಲ್ಲುಪ್ಪು ಬಳಸಬೇಕು. ನಂತರ ಚೆನ್ನಾಗಿ ಮಿಕ್ಸ್ ಮಾಡಿ.
ಈಗ ಕಡಾಯಿಗೆ 2 ಚಮಚ ತುಪ್ಪ ಹಾಕಿ ಬಿಸಿ ಮಾಡಿ, ತುಪ್ಪ ಬಿಸಿ ಮಾಡಿದಾಗ1 ಚಮಚ ಜೀರಿಗೆ ಹಾಕಿ, ಜೀರಿಗೆ ಚಟ್‌ಪಟ್ ಶಬ್ದ ಬರುವಾಗ ಕತ್ತರಿಸಿದ ಹಸಿ ಮೆಣಸು ಹಾಕಿ.
ಈಗ ಬೇಯಿಸಿದ ಆಲೂಗೆಡ್ಡೆ ಹಾಕಿ.
ಕಡಿಮೆ ಉರಿಯಲ್ಲಿ ಫ್ರೈ ಮಾಡಿ.
ಅದಾದ ಬಳಿಕ ಸಾಬುದಾನ, ನೆಲಗಡಲೆ ಪುಡಿ ಮಿಕ್ಸ್ ಮಾಡಿದ ಮಿಶ್ರಣ ಹಾಕಿ. ನಂತರ
ಚೆನ್ನಾಗಿ ಮಿಕ್ಸ್ ಮಾಡಿ, ನಂತರ 3-5 ನಿಮಿಷ ಮಿಕ್ಸ್ ಮಾಡುತ್ತಾ ಫ್ರೈ ಮಾಡಿ.
ನಂತರ ಒಂದು ಚಮಚ ನಿಂಬೆರಸ ಹಾಕಿ ಮಿಕ್ಸ್ ಮಾಡಿ.
ನಂತರ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿ, ಬೇಕಿದ್ದರೆ ರೋಸ್ಟ್
ಮಾಡಿಟ್ಟ ನೆಲಗಡಲೆಯನ್ನು ಸ್ಚಲ್ಪ ತೆಗೆದಿಟ್ಟು ಅದನ್ನು ಅದರ ಮೇಲೆ ಹಾಕಿ ಮಿಕ್ಸ್
ಮಾಡಬಹುದು.
ಇತರ ಸಲಹೆ:
ನೀವು ಸಾಬುದಾನವನ್ನು ಚೆನ್ನಾಗಿ ತೊಳೆದು ನಂತರ ನೆನೆಹಾಕಿ. ನೀವು ಎಷ್ಟು ಹೊತ್ತು
ನೆನೆಹಾಕಿದ್ದೀರಾ ಅದು ತುಂಬಾ ಮುಖ್ಯವಾಗುತ್ತದೆ.
ಇನ್ನು ಸಾಬುದಾನ ಉಪ್ಪಿಟ್ಟು ಮಾಡುವಾಗ ದಪ್ಪವಿಳವಿರುವ ಕಡಾಯಿ ಬಳಸಿ. ಸಾಧಾರಣ
ಉರಿಯಲ್ಲಿ ಕಿಚಡಿ ರೆಡಿ ಮಾಡಿ.
ಇನ್ನು ವ್ರತದ ಸಮಯದಲ್ಲಿ ಸಾಬುದಾನ ಕಿಚಡಿ ಮಾಡುವಾಗ ಎಣ್ಣೆ ಬದಲಿಗೆ ತುಪ್ಪ
ಹಾಕಿ.
ಸಾನುದಾನ ಕಿಚಡಿಯನ್ನು ನೀವು ಈ ರೀತಿ ಮಾಡಿದರೆ ರುಚಿ ತುಂಬಾ ಚೆನ್ನಾಗಿರಲಿದೆ, ನೀವು ಇದನ್ನು ಹಾಗೆ ತಿನ್ನಬಹುದು ಅಥವಾ ಮೊಸರು ಜೊತೆ ಸವಿಯಬಹುದು.



Click it and Unblock the Notifications