Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನವರಾತ್ರಿ ಸ್ಪೆಷಲ್: ಲುಚಿ ಅಲ್ಲೂರ್ ದಮ್ ರೆಸಿಪಿ
ನಿಯಮಿತ ದಿನಗಳಲ್ಲಿ ಮುಖ್ಯವಾದ ಭಕ್ಷ್ಯವನ್ನಾಗಿ ಲುಚಿ ಅಲ್ಲೂರ್ ದಮ್ನ್ನು ತಯಾರಿಸಲಾಗುತ್ತದೆ. ರುಚಿಕರವಾದ ಈ ಭಕ್ಷ್ಯ ಬೆಂಗಾಲಿಯಲ್ಲಿ ವಿಶೇಷವಾದದ್ದು. ಪೂರಿಯನ್ನು ಸಾಮಾನ್ಯವಾಗಿ ಮೈದಾದಿಂದ ತಯಾರಿಸುತ್ತಾರೆ. ಇದಕ್ಕೆ ಸಾಥ್ ನೀಡುವ ಲುಚಿ ಅಲ್ಲೂರ್ ದಮ್ ರೆಸಿಪಿ ವಿಶಿಷ್ಟವಾದ ಮಸಾಲೆಯ ಮಿಶ್ರಣ ಹಾಗೂ ಆಲೂಗಡ್ಡೆಯಿಂದ ತಯಾರಿಸಲಾಗುತ್ತದೆ. ಇದರ ರುಚಿ ಹಾಗೂ ಪರಿಮಳ ಎಲ್ಲರಿಗೂ ಇಷ್ಟವಾಗುವಂತೆ ಮಾಡುತ್ತವೆ.
ಆರೋಗ್ಯಕ್ಕೆ ಪೂರಕವಾದ ಪೋಷಕಾಂಶವನ್ನು ನೀಡುವ ಈ ಭಕ್ಷ್ಯವನ್ನು ಬೆಂಗಾಲಿ ಹಾಗೂ ಭಾರತದ ಕೆಲವು ಪ್ರದೇಶದಲ್ಲಿ ಸಾಮಾನ್ಯವಾಗಿ ತಯಾರಿಸುತ್ತಾರೆ. ಗರಿಗರಿಯಾದ ಪೂರಿಯ ಜೊತೆ ರುಚಿಕರವಾದ ಅಲ್ಲೂರ್ ದಮ್ಹೆಚ್ಚು ಆಹ್ಲಾದವನ್ನು ನೀಡುತ್ತದೆ. ನೀವು ನಿಮ್ಮ ಮನೆಯಲ್ಲಿ ಈ ಹೊಸ ರುಚಿಯನ್ನು ತಯಾರಿಸಬೇಕೆಂಬ ಹವಣಿಕೆಯಲ್ಲಿದ್ದರೆ ಇಲ್ಲಿರುವ ವೀಡಿಯೋ ಹಾಗೂ ಹಂತ ಹಂತವಾದ ಚಿತ್ರವಿವರಣೆಯನ್ನು ಪರಿಶೀಲಿಸಬಹುದು.

Recipe By: ಮೀನಾ ಭಂಡಾರಿ
Recipe Type: ಪ್ರಧಾನ ತಿನಿಸು
Serves: 2 ಮಂದಿಗೆ
-
ಬೆಂಗಾಲಿ ಗರಮ್ ಮಸಾಲ (ಗೋರೋಮ್ ಮಶ್ಲಾ)
ದಾಲ್ಚಿನ್ನಿ ಚೆಕ್ಕೆ -3
ಏಲಕ್ಕಿ - 4
ಲವಂಗ -5
ಲುಚಿ ತಯಾರಿಸಲು:
ಮೈದಾ -1 ಕಪ್
ತುಪ್ಪ - 1 ಟೇಬಲ್ ಚಮಚ
ಉಪ್ಪು - 1 ಟೀ ಚಮಚ
ನೀರು 1/6 ಕಪ್
ಎಣ್ಣೆ - ಕರಿಯಲು
ಅಲ್ಲೂರ್ ದಮ್ತಯಾರಿಸಲು:
ಬೇಯಿಸಿ ಸಿಪ್ಪೆ ತೆಗೆದ ಚಿಕ್ಕ ಚಿಕ್ಕ ಆಲೂಗಡ್ಡೆ -20 (350 ಗ್ರಾಂ)
ಎಣ್ಣೆ -2 ಟೇಬಲ್ ಚಮಚ
ಬೇ ಎಲೆ/ಪರಿಮಳದ ಎಲೆ- 2
ಜೀರಿಗೆ - 1 ಟೀ ಚಮಚ
ಹೆಚ್ಚಿಕೊಂಡ ಹಸಿಮೆಣಸಿನ ಕಾಯಿ - 1 ಟೀ ಚಮಚ
ಸಕ್ಕರೆ - 1 ಟೇಬಲ್ ಚಮಚ
ಈರುಳ್ಳಿ ಪೇಸ್ಟ್ - 1 ಈರುಳ್ಳಿ
ತುರಿದುಕೊಂಡ ಶುಂಠಿ - 1 ಟೇಬಲ್ ಚಮಚ
ಬೆಳ್ಳುಳ್ಳಿ ಪೇಸ್ಟ್ -1 ಟೇಬಲ್ ಚಮಚ
ಟೊಮ್ಯಾಟೋ ಪೇಸ್ಟ್ - 2 ಟೊಮ್ಯಾಟೋ
ರುಚಿಗೆ ತಕ್ಕಷ್ಟು ಉಪ್ಪು
ಖಾರದ ಪುಡಿ -1 ಟೀ ಚಮಚ
ಅರಿಶಿನ ಪುಡಿ- 1/2 ಟೀ ಚಮಚ
ಜೀರಿಗೆ ಪುಡಿ - 1 ಟೀ ಚಮಚ
ಧನಿಯಾ ಪುಡಿ -1 ಟೀ ಚಮಚ
ನೀರು- 1/2 ಕಪ್
ತುಪ್ಪ -1/2 ಟೇಬಲ್ ಚಮಚ
-
1. ಒಂದು ಪಾತ್ರೆಯಲ್ಲಿ ದಾಲ್ಚಿನ್ನಿ ಚೆಕ್ಕೆಯನ್ನು ಹಾಕಿ ಹುರಿಯಿರಿ.
2. ಏಲಕ್ಕಿ ಮತ್ತು ಲವಂಗವನ್ನು ಸೇರಿಸಿ.
3. ಬಣ್ಣ ಬದಲಾಗುವವರೆಗೂ ಡ್ರೈ ರೋಸ್ಟ್ (ಒಣದಾಗಿಯೇ) ಮಾಡಿ.
4. ಮಿಕ್ಸರ್ ಪಾತ್ರೆಗೆ ವರ್ಗಾಯಿಸಿ.
5. ನುಣುಪಾದ ಪುಡಿಯಂತೆ ರುಬ್ಬಿಕೊಂಡು, ಬೆಂಗಾಲಿ ಗರಮ್ ಮಸಾಲವನ್ನಾಗಿ ತಯಾರಿಸಿ.
6. ಮಿಶ್ರಣದ ಪಾತ್ರೆಯಲ್ಲಿ ಮೈದಾವನ್ನು ಹಾಕಿ.
7. ಟೀ ಚಮಚ ಉಪ್ಪನ್ನು ಸೇರಿಸಿ.
8. ಅರ್ಧ ಟೇಬಲ್ ಚಮಚ ತುಪ್ಪವನ್ನು ಬೆರೆಸಿ, ಚೆನ್ನಾಗಿ ಮಿಶ್ರಗೊಳಿಸಿ.
9. ಸ್ವಲ್ಪ ನೀರನ್ನು ಸೇರಿಸಿ (ನಿರ್ದಿಷ್ಟ ಅಳತೆಯ ಪ್ರಕಾರ 1/6 ಕಪ್) ಗಟ್ಟಿಯಾದ ಹಿಟ್ಟಿನಂತೆ ಮಾಡಿಕೊಳ್ಳಬೇಕು.
10. ಮುಚ್ಚಳವನ್ನು ಮುಚ್ಚಿ 15-20 ನಿಮಿಷಗಳ ಕಾಲ ಬಿಡಿ.
11. ಈ ಮಧ್ಯೆ, ಬೇಯಿಸಿಕೊಂಡ ಆಲೂಗಡ್ಡೆಗೆ ಚಮಚದ ಸಹಾಯದಿಂದ ಒಂದು ರಂಧ್ರವನ್ನು ಮಾಡಿ ಒಂದೆಡೆ ಇಡಿ.
12. ಪಾತ್ರೆಯೊಂದಕ್ಕೆ 2 ಟೇಬಲ್ ಚಮಚ ಎಣ್ಣೆಯನ್ನು ಹಾಕಿ ಬಿಸಿ ಮಾಡಿ.
13. ಬೇ ಎಲೆ/ಪರಿಮಳದ ಎಲೆ ಮತ್ತು ಜೀರಿಗೆಯನ್ನು ಸೇರಿಸಿ.
14. ಹೆಚ್ಚಿಕೊಂಡ ಹಸಿಮೆಣಸಿನ ಕಾಯಿಯನ್ನು ಸೇರಿಸಿ ಹುರಿಯಿರಿ.
15. ಸಕ್ಕರೆಯನ್ನು ಸೇರಿಸಿ, ಕರಗುವ ತನಕ ಚೆನ್ನಾಗಿ ಕಲುಕುತ್ತಿರಿ.
16. ಈರುಳ್ಳಿ ಪೇಸ್ಟ್ ಅನ್ನು ಸೇರಿಸಿ, ಕಂದು ಬಣ್ಣಕ್ಕೆ ತಿರುಗುವ ತನಕ ಚೆನ್ನಾಗಿ ಹುರಿಯಿರಿ.
17. ನಂತರ ಶುಂಠಿ, ಬೆಳ್ಳುಳ್ಳಿ ಮತ್ತು ಟೊಮ್ಯಾಟೋ ಪೇಸ್ಟ್ಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.
18. ಇದಕ್ಕೆ ಮುಚ್ಚಳವನ್ನು ಮುಚ್ಚಿ 5-6 ನಿಮಿಷ ಬೇಯಲು ಬಿಡಿ.
19. ಮುಚ್ಚಳವನ್ನು ತೆರೆದು, ಉಪ್ಪು ಮತ್ತು ಖಾರದ ಪುಡಿಯನ್ನು ಸೇರಿಸಿ.
20. ಜೀರಿಗೆ ಪುಡಿ ಮತ್ತು ಧನಿಯಾ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.
21. ಪುನಃ ಮುಚ್ಚಳವನ್ನು ಮುಚ್ಚಿ 4-5 ನಿಮಿಷಗಳ ಕಾಲ ಬೇಯಲು ಬಿಡಿ.
22. ಮುಚ್ಚಳವನ್ನು ತೆರೆದು ಬೇಯಿಸಿಕೊಂಡ ಚಿಕ್ಕ ಚಿಕ್ಕ ಆಲೂಗಡ್ಡೆಯನ್ನು ಸೇರಿಸಿ.
23. ಅರ್ಧ ಕಪ್ ನೀರನ್ನು ಸೇರಿಸಿ.
24. ಪುನಃ ಮುಚ್ಚಳವನ್ನು ಮುಚ್ಚಿ, ದೊಡ್ಡ ಉರಿಯಲ್ಲಿ 5 ನಿಮಿಷಗಳಕಾಲ ಬೇಯಲು ಬಿಡಿ.
25. ಮುಚ್ಚಳವನ್ನು ತೆರೆದು ರುಬ್ಬಿಕೊಂಡ ಬೆಂಗಾಲಿ ಗರಮ್ ಮಸಾಲವನ್ನು 1 ಟೀ ಚಮಚ ಸೇರಿಸಿ.
26. ಅರ್ಧ ಟೇಬಲ್ ಚಮಚ ತುಪ್ಪವನ್ನು ಬೆರೆಸಿ, ಚೆನ್ನಾಗಿ ಮಿಶ್ರಗೊಳಿಸಿ, ಪಕ್ಕಕ್ಕಿಡಿ.
27. ಮೈದಾ ಹಿಟ್ಟಿನ ಮುದ್ದೆಯನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಚಿಕ್ಕ ಚಿಕ್ಕ ಉಂಡೆಯನ್ನಾಗಿ ಮಾಡಿಕೊಳ್ಳಿ.
28. ಲಟ್ಟಣಿಗೆಗೆ ಅರ್ಧ ಟೇಬಲ್ ಚಮಚ ತುಪ್ಪವನ್ನು ಅನ್ವಯಿಸಿ/ಹಚ್ಚಿ.
29. ಲಟ್ಟಣಿಗೆಯಿಂದ ಪೂರಿಯ ಆಕಾರದಲ್ಲಿ ಲಟ್ಟಿಸಿ.
30. ಕರಿಯುವ ಪಾತ್ರೆಗೆ ಎಣ್ಣೆಯನ್ನು ಬೆರೆಸಿ ಬಿಸಿ ಮಾಡಿ.
31. ಕಾದಿರುವ ಎಣ್ಣೆಯಲ್ಲಿ ಪೂರಿಯನ್ನು ಬಿಡಿ.
32. ಒಮ್ಮೆ ಇದು ಹುರಿದು, ಉಬ್ಬಿ ಬಂದಾಗ ಅದನ್ನು ತಿರುಗಿಸಿ.
33. ಎರಡು ಬದಿಯಲ್ಲೂ ತಿಳಿ ಹೊಂಬಣ್ಣ ಬರುವ ಹಾಗೆ ಬೇಯಿಸಿ.
34. ಬಿಸಿ ಬಿಸಿಯಾದ ಪೂರಿಯ ಜೊತೆ ಆಲೂ ದಮ್ಅನ್ನು ಸವಿಯಲು ನೀಡಿ.
- 1. ಆಲೂಗಡ್ಡೆಯನ್ನು ಕುಕ್ಕರ್ನಲ್ಲಿ ಬೇಯಿಸಿ. ಅತಿಯಾಗಿ ಬೆಂದಿರುವಂತೆ ಆಗಬಾರದು.
- 2. ಮಸಾಲೆಯೊಂದಿಗೆ ಆರಂಭದಲ್ಲಿ ಸಕ್ಕರೆಯನ್ನು ಬೆರೆಸಲಾಗುತ್ತದೆ. ಇದು ಗ್ರೇವಿಯನ್ನು ಮೃದುವಾಗಿಸುವಂತೆ ಮಾಡುತ್ತದೆ.
- ಸರ್ವಿಂಗ್ ಸೈಜ್ - ಒಬ್ಬರಿಗೆ
- ಕ್ಯಾಲೋರಿ - 568 ಕ್ಯಾಲ್
- ಫ್ಯಾಟ್ - 18.6 ಗ್ರಾಂ.
- ಪ್ರೋಟೀನ್ - 18.3 ಗ್ರಾಂ.
- ಕಾರ್ಬೋಹೈಡ್ರೇಟ್ - 75.2 ಗ್ರಾಂ.
- ಫೈಬರ್ - 5.6 ಗ್ರಾಂ.
ಹಂತ ಹಂತವಾದ ಚಿತ್ರ ವಿವರಣೆ
1. ಒಂದು ಪಾತ್ರೆಯಲ್ಲಿ ದಾಲ್ಚಿನ್ನಿ ಚೆಕ್ಕೆಯನ್ನು ಹಾಕಿ ಹುರಿಯಿರಿ.

2. ಏಲಕ್ಕಿ ಮತ್ತು ಲವಂಗವನ್ನು ಸೇರಿಸಿ.

3. ಬಣ್ಣ ಬದಲಾಗುವವರೆಗೂ ಡ್ರೈ ರೋಸ್ಟ್ (ಒಣದಾಗಿಯೇ) ಮಾಡಿ.

4. ಮಿಕ್ಸರ್ ಪಾತ್ರೆಗೆ ವರ್ಗಾಯಿಸಿ.

5. ನುಣುಪಾದ ಪುಡಿಯಂತೆ ರುಬ್ಬಿಕೊಂಡು, ಬೆಂಗಾಲಿ ಗರಮ್ ಮಸಾಲವನ್ನಾಗಿ ತಯಾರಿಸಿ.

6. ಮಿಶ್ರಣದ ಪಾತ್ರೆಯಲ್ಲಿ ಮೈದಾವನ್ನು ಹಾಕಿ.

7. ಟೀ ಚಮಚ ಉಪ್ಪನ್ನು ಸೇರಿಸಿ.

8. ಅರ್ಧ ಟೇಬಲ್ ಚಮಚ ತುಪ್ಪವನ್ನು ಬೆರೆಸಿ, ಚೆನ್ನಾಗಿ ಮಿಶ್ರಗೊಳಿಸಿ.

9. ಸ್ವಲ್ಪ ನೀರನ್ನು ಸೇರಿಸಿ (ನಿರ್ದಿಷ್ಟ ಅಳತೆಯ ಪ್ರಕಾರ 1/6 ಕಪ್) ಗಟ್ಟಿಯಾದ ಹಿಟ್ಟಿನಂತೆ ಮಾಡಿಕೊಳ್ಳಬೇಕು.

10. ಮುಚ್ಚಳವನ್ನು ಮುಚ್ಚಿ 15-20 ನಿಮಿಷಗಳ ಕಾಲ ಬಿಡಿ.

11. ಈ ಮಧ್ಯೆ, ಬೇಯಿಸಿಕೊಂಡ ಆಲೂಗಡ್ಡೆಗೆ ಚಮಚದ ಸಹಾಯದಿಂದ ಒಂದು ರಂಧ್ರವನ್ನು ಮಾಡಿ ಒಂದೆಡೆ ಇಡಿ.

12. ಪಾತ್ರೆಯೊಂದಕ್ಕೆ 2 ಟೇಬಲ್ ಚಮಚ ಎಣ್ಣೆಯನ್ನು ಹಾಕಿ ಬಿಸಿ ಮಾಡಿ.

13. ಬೇ ಎಲೆ/ಪರಿಮಳದ ಎಲೆ ಮತ್ತು ಜೀರಿಗೆಯನ್ನು ಸೇರಿಸಿ.

14. ಹೆಚ್ಚಿಕೊಂಡ ಹಸಿಮೆಣಸಿನ ಕಾಯಿಯನ್ನು ಸೇರಿಸಿ ಹುರಿಯಿರಿ.

15. ಸಕ್ಕರೆಯನ್ನು ಸೇರಿಸಿ, ಕರಗುವ ತನಕ ಚೆನ್ನಾಗಿ ಕಲುಕುತ್ತಿರಿ.

16. ಈರುಳ್ಳಿ ಪೇಸ್ಟ್ ಅನ್ನು ಸೇರಿಸಿ, ಕಂದು ಬಣ್ಣಕ್ಕೆ ತಿರುಗುವ ತನಕ ಚೆನ್ನಾಗಿ ಹುರಿಯಿರಿ.

17. ನಂತರ ಶುಂಠಿ, ಬೆಳ್ಳುಳ್ಳಿ ಮತ್ತು ಟೊಮ್ಯಾಟೋ ಪೇಸ್ಟ್ಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.

18. ಇದಕ್ಕೆ ಮುಚ್ಚಳವನ್ನು ಮುಚ್ಚಿ 5-6 ನಿಮಿಷ ಬೇಯಲು ಬಿಡಿ.

19. ಮುಚ್ಚಳವನ್ನು ತೆರೆದು, ಉಪ್ಪು ಮತ್ತು ಖಾರದ ಪುಡಿಯನ್ನು ಸೇರಿಸಿ.

20. ಜೀರಿಗೆ ಪುಡಿ ಮತ್ತು ಧನಿಯಾ ಪುಡಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ.

21. ಪುನಃ ಮುಚ್ಚಳವನ್ನು ಮುಚ್ಚಿ 4-5 ನಿಮಿಷಗಳ ಕಾಲ ಬೇಯಲು ಬಿಡಿ.

22. ಮುಚ್ಚಳವನ್ನು ತೆರೆದು ಬೇಯಿಸಿಕೊಂಡ ಚಿಕ್ಕ ಚಿಕ್ಕ ಆಲೂಗಡ್ಡೆಯನ್ನು ಸೇರಿಸಿ.

23. ಅರ್ಧ ಕಪ್ ನೀರನ್ನು ಸೇರಿಸಿ.

24. ಪುನಃ ಮುಚ್ಚಳವನ್ನು ಮುಚ್ಚಿ, ದೊಡ್ಡ ಉರಿಯಲ್ಲಿ 5 ನಿಮಿಷಗಳಕಾಲ ಬೇಯಲು ಬಿಡಿ.

25. ಮುಚ್ಚಳವನ್ನು ತೆರೆದು ರುಬ್ಬಿಕೊಂಡ ಬೆಂಗಾಲಿ ಗರಮ್ ಮಸಾಲವನ್ನು 1 ಟೀ ಚಮಚ ಸೇರಿಸಿ.

26. ಅರ್ಧ ಟೇಬಲ್ ಚಮಚ ತುಪ್ಪವನ್ನು ಬೆರೆಸಿ, ಚೆನ್ನಾಗಿ ಮಿಶ್ರಗೊಳಿಸಿ, ಪಕ್ಕಕ್ಕಿಡಿ.

27. ಮೈದಾ ಹಿಟ್ಟಿನ ಮುದ್ದೆಯನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಚಿಕ್ಕ ಚಿಕ್ಕ ಉಂಡೆಯನ್ನಾಗಿ ಮಾಡಿಕೊಳ್ಳಿ.

28. ಲಟ್ಟಣಿಗೆಗೆ ಅರ್ಧ ಟೇಬಲ್ ಚಮಚ ತುಪ್ಪವನ್ನು ಅನ್ವಯಿಸಿ/ಹಚ್ಚಿ.

29. ಲಟ್ಟಣಿಗೆಯಿಂದ ಪೂರಿಯ ಆಕಾರದಲ್ಲಿ ಲಟ್ಟಿಸಿ.

30. ಕರಿಯುವ ಪಾತ್ರೆಗೆ ಎಣ್ಣೆಯನ್ನು ಬೆರೆಸಿ ಬಿಸಿ ಮಾಡಿ.

31. ಕಾದಿರುವ ಎಣ್ಣೆಯಲ್ಲಿ ಪೂರಿಯನ್ನು ಬಿಡಿ.

32. ಒಮ್ಮೆ ಇದು ಹುರಿದು, ಉಬ್ಬಿ ಬಂದಾಗ ಅದನ್ನು ತಿರುಗಿಸಿ.

33. ಎರಡು ಬದಿಯಲ್ಲೂ ತಿಳಿ ಹೊಂಬಣ್ಣ ಬರುವ ಹಾಗೆ ಬೇಯಿಸಿ.

34. ಬಿಸಿ ಬಿಸಿಯಾದ ಪೂರಿಯ ಜೊತೆ ಆಲೂ ದಮ್ಅನ್ನು ಸವಿಯಲು ನೀಡಿ.

Click it and Unblock the Notifications