Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಕುಟ್ಟು ಕೀ ಪೂರಿ: ನವರಾತ್ರಿ ಉಪವಾಸದ ಪಾಕವಿಧಾನ
ಉತ್ತರ ಭಾರತದ ಪ್ರಸಿದ್ಧ ಪಾಕವಿಧಾನವಾದ ಕುಟ್ಟು ಕೀ ಪೂರಿಯನ್ನು ಉಪವಾಸದ ಸಂದರ್ಭದಲ್ಲಿ ತಯಾರಿಸುತ್ತಾರೆ. ಕುಟ್ಟು ಹಿಟ್ಟಿ(ಹುರುಳಿ ಹಿಟ್ಟು)ನೊಂದಿಗೆ ಆಲೂಗಡ್ಡೆಯು ಮಿಶ್ರಣವೂ ಇರುವುದರಿಂದ ಇದು ಹೆಚ್ಚು ಕಾಲ ಗಟ್ಟಿ ಆಹಾರದಂತೆ ಇರುತ್ತದೆ. ಜೊತೆಗೆ ದಿನದಲ್ಲಿ ಒಂದು ಹೊತ್ತು ಸವಿದರೂ ದೇಹಕ್ಕೆ ಬೇಕಾದ ಎಲ್ಲಾ ಬಗೆಯ ಪೋಷಕಾಂಶವನ್ನು ನೀಡುತ್ತದೆ. ಕುಟ್ಟು ಪೂರಿ ತಿನ್ನುವುದರಿಂದ ಬಹು ಬೇಗ ಹಸಿವಾಗದು.
ಹುರುಳಿ ಹಿಟ್ಟು ಆರೋಗ್ಯಕ್ಕೆ ಹೆಚ್ಚು ಶಕ್ತಿಯನ್ನು ನೀಡುವುದರಿಂದ ಕುಟ್ಟೂ ಪೂರಿಯನ್ನು ಉತ್ಸವ ಹಾಗೂ ನವರಾತ್ರಿಯ ಉಪವಾಸಕ್ಕೆ ತಯಾರಿಸುತ್ತಾರೆ. ಈ ಪೂರಿಯನ್ನು ತುಪ್ಪದಲ್ಲಿ ಕರಿದು, ಬಿಸಿ ಬಿಸಿ ಇರುವಾಗಲೇ ಸವಿಯಬೇಕು. ವಿಶೇಷವಾದ ಇದರ ರುಚಿ ನಿಮಗೆ ಖುಷಿಯನ್ನು ನೀಡುತ್ತದೆ. ಈ ಪೂರಿಯನ್ನು ಹಾಗೆಯೇ ತಿನ್ನಬಹುದು. ಇಲ್ಲವಾದರೆ ಸಾಗೂ, ಪಲ್ಯ ಅಥವಾ ಚಟ್ನಿಯ ಜೊತೆಯೂ ತಿನ್ನಬಹುದು.
ದೇಹಕ್ಕೆ ಹೆಚ್ಚು ಶಕ್ತಿಯನ್ನು ನೀಡುವ ಆರೋಗ್ಯ ಪೂರ್ಣ ಪಾಕವಿಧಾನ ಇದು. ಕಡಿಮೆ ಸಮಯದಲ್ಲಿ ಬಹಳ ಸರಳವಾಗಿ ತಯಾರಿಸಬಹುದು. ವ್ರತ ಹಾಗೂ ಹಬ್ಬ ಹರಿದಿನಗಳಲ್ಲಿ ಉಪವಾಸ ಕೈಗೊಳ್ಳಲು ಬೇಕಾದ ಅನೇಕ ಬಗೆಯ ಪಾಕವಿಧಾನವನ್ನು ನಾವು ಹೊಂದಿದೇವೆ. ಈ ನವರಾತ್ರಿಯ ಉಪವಾಸಕ್ಕೆ ನೀವು ಕುಟ್ಟು ಪುರಿಯನ್ನು ಮಾಡುವ ಉತ್ಸಾಹದಲ್ಲಿದ್ದರೆ ಇಲ್ಲಿ ನೀಡಿರುವ ವಿಡಿಯೋ ಪಾಕವಿಧಾನ ಹಾಗೂ ಹಂತ ಹಂತವಾದ ಚಿತ್ರ ವಿವರಣೆಯನ್ನು ಪರಿಶೀಲಿಸಿ.

Recipe By: ಮೀನಾ ಭಂಡಾರಿ
Recipe Type: ಪ್ರಧಾನ ತಿನಿಸು
Serves: 7-8 ಮಂದಿಗೆ
-
ಬೇಯಿಸಿದ ಆಲೂಗಡ್ಡೆ (ಸಿಪ್ಪೆ ತೆಗೆದು, ಹಿಚುಕಿಕೊಂಡಿರುವುದು) -1
ಕಲ್ಲುಪ್ಪು - ರುಚಿಗೆ ತಕ್ಕಷ್ಟು
ಕುಟ್ಟು ಹಿಟ್ಟು (ಹುರುಳಿ ಹಿಟ್ಟು) -1 ಕಪ್
ನೀರು - 1/6 ಕಪ್
ಎಣ್ಣೆ -1 ಟೇಬಲ್ ಚಮಚ+ ಕರಿಯಲು
-
1. ಒಂದು ದೊಡ್ಡ ಪಾತ್ರೆಯಲ್ಲಿ ಬೇಯಿಸಿದ ಆಲೂಗಡ್ಡೆಯನ್ನು ಹಾಕಿ.
2. ರುಚಿಗೆ ತಕ್ಕಷ್ಟು ಕಲ್ಲುಪ್ಪನ್ನು ಸೇರಿಸಿ.
3. ಹುರುಳಿ ಹಿಟ್ಟು (ಕುಟ್ಟು ಹಿಟ್ಟು)ನ್ನು ಸೇರಿಸಿ.
4. ಈ ಎಲ್ಲಾ ಮಿಶ್ರಣವನ್ನು ಸೇರಿಸಿ ಒಂದು ಹಿಟ್ಟಿನ ಮುದ್ದೆಯನ್ನಾಗಿ ಮಾಡಿ. ನೀರಿನ ಅಗತ್ಯವಿದ್ದರೆ ಸ್ವಲ್ಪ ನೀರನ್ನಷ್ಟೇ ಬಳಸಿ.
5. ನಂತರ ಒಂದು ಮುಚ್ಚಳವನ್ನು ಮುಚ್ಚಿ, ಅರ್ಧ ಗಂಟೆಗಳ ಕಾಲ ಬಿಡಿ.
6. ಸ್ವಲ್ಪ ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ಒಂದು ಉಂಡೆಯನ್ನು ಮಾಡಿಕೊಳ್ಳಿ.
7. ಲಟ್ಟಣಿಗೆಗೆ ಸ್ವಲ್ಪ ಎಣ್ಣೆಯನ್ನು ಬಳಿದುಕೊಳ್ಳಬೇಕು.
8. ನಂತರ ಉಂಡೆಯನ್ನು ಪೂರಿಯ ಆಕಾರಕ್ಕೆ ಲಟ್ಟಿಸಿ.
9. ಹುರಿಯಲು/ಕರಿಯಲು ಒಂದು ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಲು ಇಡಿ.
10. ಕಾದಿರುವ ಎಣ್ಣೆಗೆ ಲಟ್ಟಿಸಿದ ಪೂರಿಯನ್ನು ಹಾಕಿ, ಚೆನ್ನಾಗಿ ಬೇಯಿಸಿ.
11. ಒಂದು ಭಾಗ ಬೆಂದ ನಂತರ ಇನ್ನೊಂದು ಭಾಗವನ್ನು ತಿರುವಿ ಬೇರಿಸಿ.
12. ಪೂರಿ ಕಂದು ಬಣ್ಣಕ್ಕೆ ತಿರುಗಿದ ಮೇಲೆ, ಎಣ್ಣೆಯಿಂದ ತೆಗೆದು ಒಂದು ಪಾತ್ರೆಗೆ ವರ್ಗಾಯಿಸಿ.
13. ಬಿಸಿ ಬಿಸಿ ಇರುವಾಗಲೇ ಸವಿಯಲು ನೀಡಿ.
- 1. ಅಗತ್ಯ ವಿದ್ದರಷ್ಟೇ ನೀರನ್ನು ಸೇರಿಸಬೇಕು. ಇದು ಬಹಳ ಗಟ್ಟಿಯಾದ ಹಿಟ್ಟಿನ ಮಿಶ್ರಣದಂತೆ ಇರಬೇಕು. ಬೇಕಾದರೆ ಇನ್ನಷ್ಟು ಹಿಟ್ಟನ್ನು ಸೇರಿಸಿ ಗಟ್ಟಿ ಮಾಡಿಕೊಳ್ಳಬಹುದು.
- 2. ಹಿಟ್ಟನ್ನು ಕಲಸಿ ಅರ್ಧ ಗಂಟೆ ವಿಶ್ರಾಂತಿಗೆ ಬಿಟ್ಟ ಮೇಲೆ, ರೆಫ್ರಿಜರೇಟರ್‍ನಲ್ಲಿ 15 ನಿಮಿಷ ಇಟ್ಟುಕೊಳ್ಳಿ.
- 3. ಆಲೂಗಡ್ಡೆಯ ಬದಲಾಗಿ ಮೊಟ್ಟೆ ಕೆಸು (ಆರ್ಬಿ)ಯನ್ನು ಬಳಸಬಹುದು.
- ಸರ್ವಿಂಗ್ ಸೈಜ್ - 1 ಪೂರಿ
- ಕ್ಯಾಲೋರಿ - 133 ಕ್ಯಾಲ್
- ಫ್ಯಾಟ್ - 33 ಗ್ರಾಂ.
- ಪ್ರೋಟೀನ್ - 7 ಗ್ರಾಂ.
- ಕಾರ್ಬೋಹೈಡ್ರೇಟ್ - 27 ಗ್ರಾಂ.
- ಫೈಬರ್ - 3 ಗ್ರಾಂ.
ಕುಟ್ಟು ಕೀ ಪೂರಿ: ಸ್ಟೆಪ್-ಬೈ ಸ್ಟೆಪ್ ಮಾಡುವ ವಿಧಾನ
1. ಒಂದು ದೊಡ್ಡ ಪಾತ್ರೆಯಲ್ಲಿ ಬೇಯಿಸಿದ ಆಲೂಗಡ್ಡೆಯನ್ನು ಹಾಕಿ.

2. ರುಚಿಗೆ ತಕ್ಕಷ್ಟು ಕಲ್ಲುಪ್ಪನ್ನು ಸೇರಿಸಿ.

3. ಹುರುಳಿ ಹಿಟ್ಟು (ಕುಟ್ಟು ಹಿಟ್ಟು)ನ್ನು ಸೇರಿಸಿ.

4. ಈ ಎಲ್ಲಾ ಮಿಶ್ರಣವನ್ನು ಸೇರಿಸಿ ಒಂದು ಹಿಟ್ಟಿನ ಮುದ್ದೆಯನ್ನಾಗಿ ಮಾಡಿ. ನೀರಿನ ಅಗತ್ಯವಿದ್ದರೆ ಸ್ವಲ್ಪ ನೀರನ್ನಷ್ಟೇ ಬಳಸಿ.

5. ನಂತರ ಒಂದು ಮುಚ್ಚಳವನ್ನು ಮುಚ್ಚಿ, ಅರ್ಧ ಗಂಟೆಗಳ ಕಾಲ ಬಿಡಿ.

6. ಸ್ವಲ್ಪ ಸ್ವಲ್ಪ ಹಿಟ್ಟನ್ನು ತೆಗೆದುಕೊಂಡು ಒಂದು ಉಂಡೆಯನ್ನು ಮಾಡಿಕೊಳ್ಳಿ.

7. ಲಟ್ಟಣಿಗೆಗೆ ಸ್ವಲ್ಪ ಎಣ್ಣೆಯನ್ನು ಬಳಿದುಕೊಳ್ಳಬೇಕು.

8. ನಂತರ ಉಂಡೆಯನ್ನು ಪೂರಿಯ ಆಕಾರಕ್ಕೆ ಲಟ್ಟಿಸಿ.

9. ಹುರಿಯಲು/ಕರಿಯಲು ಒಂದು ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಲು ಇಡಿ.

10. ಕಾದಿರುವ ಎಣ್ಣೆಗೆ ಲಟ್ಟಿಸಿದ ಪೂರಿಯನ್ನು ಹಾಕಿ, ಚೆನ್ನಾಗಿ ಬೇಯಿಸಿ.

11. ಒಂದು ಭಾಗ ಬೆಂದ ನಂತರ ಇನ್ನೊಂದು ಭಾಗವನ್ನು ತಿರುವಿ ಬೇರಿಸಿ.

12. ಪೂರಿ ಕಂದು ಬಣ್ಣಕ್ಕೆ ತಿರುಗಿದ ಮೇಲೆ, ಎಣ್ಣೆಯಿಂದ ತೆಗೆದು ಒಂದು ಪಾತ್ರೆಗೆ ವರ್ಗಾಯಿಸಿ.

13. ಬಿಸಿ ಬಿಸಿ ಇರುವಾಗಲೇ ಸವಿಯಲು ನೀಡಿ.

Click it and Unblock the Notifications