Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಾಟಲಿಗೆ ಎಣ್ಣೆಯನ್ನು ಒಂದು ಹನಿ ಚೆಲ್ಲದಂತೆ ತುಂಬುವುದು ಹೇಗೆ? ಈ ಕಿಚನ್ ಟಿಪ್ಸ್ ಟ್ರೈ ಮಾಡಿ
ಅಡುಗೆ ಕೆಲಸವೇನೂ ರಾಕೆಟ್ ಸೈನ್ಸ್ ಅಲ್ಲ ನಿಜ ಆದರೆ ಕೆಲವೊಂದು ಟೆಕ್ನಿಕ್ ಗೊತ್ತಿದ್ದರೆ ಮಾತ್ರ ಅಡುಗೆ ಕೆಲಸ ಸುಲಭವಾಗುವುದು, ಅಡುಗೆ ಮನೆ ಒಪ್ಪವಾಗುವುದು, ಇಲ್ಲದಿದ್ದರೆ ಎಷ್ಟು ಕೆಲಸ ಮಾಡಿದರೂ ಸಾಕಾಗುವುದಿಲ್ಲ.
ಕೆಲವೊಮ್ಮೆ ಒಂದು ಕೆಲಸ ಮಾಡಲು ಹೋಗಿ ಕೆಲಸ ಡಬಲ್ ಆಗುವುದು, ಉದಾಹರಣೆಗೆ ಪ್ಯಾಕೆಟ್ ಎಣ್ಣೆಯನ್ನ ಬಾಟಲಿಗೆ ತುಂಬುವುದು, ಎಣ್ಣೆ ಹೊರ ಚೆಲ್ಲಿದರೆ ಎಣ್ಣೆ ವ್ಯರ್ಥವಾಗುವುದು, ಅಲ್ಲದೆ ಎಣ್ಣೆ ಚೆಲ್ಲಿದ ಭಾಗವನ್ನು ಒರೆಸಿ ಶುದ್ಧ ಮಾಡುವ ಕೆಲಸ ಬೇರೆ, ಒಂದು ಬಾರಿ ಒರೆಸಿದರೆ ಜಿಡ್ಡಿನಂಶ ಹೋಗುವುದಿಲ್ಲ ಪದೇ ಪದೇ ಒರೆಸಬೇಕಾಗುತ್ತದೆ, ಈ ಎಲ್ಲಾ ತಾಪತ್ರೆ ನೀವು ಅಡುಗೆ ಮನೆಯಲ್ಲಿ ಕೆಲಸ ಮಾಡಿದ್ದರೆ ಖಂಡಿತ ನಿಮ್ಮ ಅನುಭವಕ್ಕೆ ಬಂದಿರುತ್ತದೆ.

ಆದರೆ ಇಲ್ಲೊಬ್ಬರು ಪ್ಯಾಕೆಟ್ನಲ್ಲಿದ್ದ ಎಣ್ಣೆಯನ್ನು ಬಾಟಲಿಗೆ ತುಂಬುವುದು ಹೇಗೆ ಎಂಬುವುದರ ಬಗ್ಗೆ ಕಿಚನ್ ಹ್ಯಾಕ್ ನೀಡಿದ್ದಾರೆ. ಅದು ತುಂಬಾನೇ ಪ್ರಯೋಜನಕಾರಿಯಾಗಿರುವುದರಿಂದ ಆ ವೀಡಿಯೋ ಕೂಡ ವೈರಲ್ ಆಗಿದೆ.
ಬಾಟಲಿ ಹಾಗೂ ಅಗಲ ಬಾಯಿಯ ಸೌಟು ಇದ್ದರೆ ಸಾಕು, ಒಂದು ಹನಿ ಎಣ್ಣೆ ಹೊರಗಡೆ ಚೆಲ್ಲಲ್ಲ
ಹೌದು ಬಾಟಲಿಗೆ ಒಂದು ಸೌಟು ಇಡಬೇಕು, ಆ ನಂತರ ಎಣ್ಣೆ ಸುರಿಯಬೇಕು, ಇದರಿಂದ ಒಂದು ತೊಟ್ಟು ಎಣ್ಣೆ ವ್ಯರ್ಥವಾಗಲ್ಲ, ಹಣ ಉಳಿತಾಯ, ಶ್ರಮವೂ ಉಳಿತಾಯ.
ಇಲ್ಲಿ ನೆಟ್ಟಿಗರು ಗಮನಿಸಿರುವುದು ಈ ಕಿಚನ್ ಹ್ಯಾಕ್ ಮಾತ್ರವಲ್ಲ
ಅವರ ಎನರ್ಜಿ ಕೂಡ
ಹೌದು ಅವರು ಮಧ್ಯವಯಸ್ಸು ದಾಟಿದ ಮಹಿಳೆ ಆದರೆ ಎಷ್ಟೊಂದು ಎನರ್ಜಿಯಿಂದ ಟಿಪ್ಸ್
ನೀಡುತ್ತಿದ್ದಾರೆ ಅದನ್ನು ನೋಡುವುದೇ ಖುಷಿ, ಅಲ್ಲದೆ ಈ ಕಿಚನ್ ಹ್ಯಾಕ್ ಕೂಡ
ಪ್ರತಿಯೊಂದು ಮನೆಗೆ ಪ್ರಯೋಜನಕಾರಿಯಾಗಿದೆ, ಹಾಗಾಗಿ ಈ ಹ್ಯಾಕ್ ಬೇಗನೆ ಜನರನ್ನು
ತಲುಪಿದೆ.
ಇದನ್ನು ನೋಡಿದವರು ನಾನು ಟ್ರೈ ಮಾಡುತ್ತೇನೆ ಎಂದು ಹೇಳಿದ್ದಾರೆ.
ಎಣ್ಣೆ ಡಬ್ಬಕ್ಕೆ ತುಂಬಲೆಂದೇ ಒಂದು ಪ್ಲಾಸ್ಟಿಕ್ ಪಾತ್ರೆ ಸಿಗುತ್ತದೆ, ಅದನ್ನು ಇಟ್ಟು ಕೂಡ ತುಂಬಬಹುದು. ಆದರೆ ಅದರಲ್ಲಿ ಎಣ್ಣೆ ಮಾತ್ರ ಹಾಕಲು ಸಾಧ್ಯ ಅಲ್ಲದೆ ಈ ಸ್ಟೀಲ್ ಸೌಟು ತೊಳೆದಷ್ಟು ಸುಲಭದಲ್ಲಿ ಅದನ್ನು ಶುಚಿಗೊಳಿಸಲು ಕಷ್ಟ, ಎಣ್ಣೆ ಜಿಡ್ಡು ಹೋಗಿಸುವುದು ಕೂಡ ಕಷ್ಟ, ಆದರೆ ಇದರಲ್ಲಿ ಎಣ್ಣೆಯನ್ನು ಸಲೀಸಾಗಿ ಬಾಟಲಿಗೆ ತುಂಬಬಹುದು, ಜೊತೆಗೆ ಸ್ಟೀಲ್ ಸೌಟು ತೊಳೆಯುವುದೇನು ದೊಡ್ಡ ಕೆಲಸವೂ ಅಲ್ಲ.
ಬಳಸಿದ ಎಣ್ಣೆಯನ್ನು ತುಂಬಿಡಲು ಈ ಟ್ರಿಕ್ಸ್
ಬಳಸಬಹುದು
ನಾವು ಬಜ್ಜಿ, ಬೋಂಡಾ ಮಾಡಿದ ಎಣ್ಣೆಯನ್ನು ಮತ್ತೆ ಬಾಟಲಿಗೆ ತುಂಬಿಡುವಾಗ ಈ
ಟ್ರಿಕ್ಸ್ ಬಳಸಬಹುದು.
ಬಾಟಲಿಗೆ ಹಾಲು ತುಂಬುವಾಗ ಈ ಟ್ರಿಕ್ಸ್ ಬಳಸಬಹುದು
ಹಾಲು ಮಾರಾಟ ಮಾಡುವವರಿಗೆ ಈ ಟ್ರಿಕ್ಸ್ ತುಂಬಾನೇ ಸಹಾಯವಾಗಬಹುದು, ಮನೆಯ
ಅಕ್ಕದವರು ಹಾಲು ಖರೀದಿಸಲು ಬರುವಾಗ ಬಾಟಲಿ ಹಿಡಿದು ಬರುತ್ತಾರೆ, ಆ ಬಾಟಲಿಗೆ
ಹಾಲು ತುಂಬುವಾಗ ಸ್ವಲ್ಪ ಚೆಲ್ಲಿ ಹೋಗುತ್ತೆ, ಈ ಟ್ರಿಕ್ಸ್ ಬಳಸಿ ಸುಲಭವಾಗಿ
ತುಂಬಬಹುದು. ಏನೇ ಅಗಲಿ ಈ ಕಿಚನ್ ಹ್ಯಾಕ್ ಅಂತು ಗಮನ ಸೆಳೆದಿದ್ದು ಮುಂದಿನ
ಬಾರಿಯಿಂದ ಎಲ್ಲರೂ ಈ ರೀತಿಯಲ್ಲಿ ಎಣ್ಣೆಯನ್ನು ಬಾಟಲಿಗೆ ತುಂಬುವುದಂತು ಗ್ಯಾರಂಟಿ
ನೋಡಿ...



Click it and Unblock the Notifications