Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಕ್ಕಳಿಗೆ ಸ್ನ್ಯಾಕ್ಸ್ ರೆಸಿಪಿ:ಸುಲಭವಾಗಿ ಮಾಡಬಹುದು ಬಾಳೆಹಣ್ಣಿನ ಕಪ್ ಕೇಕ್
ಕಪ್ ಕೇಕ್ ಎಂದರೆ ಮಕ್ಕಳು ತುಂಬಾನೇ ಇಷ್ಟಪಟ್ಟು ತಿನ್ನುತ್ತಾರೆ, ಆದರೆ ಬೇಕರಿ ಐಟಂ ತಂದು ತಿನಿಸುವುದು ಒಳ್ಳೆಯದಲ್ಲ, ಈ ಕಪ್ ಕೇಕ್‌ಗೆ ಬಾಳೆಹಣ್ಣು, ಡ್ರೈ ಫ್ರೂಟ್ಸ್ ಎಲ್ಲಾ ಹಾಕಿ ಹಾಕಿ ಆರೋಗ್ಯಕರವಾಗಿ ಮಾಡಬಹುದು. ಈ ಕಪ್ ಕೇಕ್ ಮಾಡಿ ಎರಡು ವಾರದವರೆಗೆ ಇಟ್ಟು ಬಳಸಬಹುದು, ಬನ್ನಿ ಬಾಳೆಹಣ್ಣಿನ ಕಪ್ ಕೇಕ್ ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

ಬೇಕಾಗುವ ಸಾಮಗ್ರಿ
1/2 ಕಪ್ ಹಾಲು
2-3 ಚಮಚ ಬೆಣ್ಣೆ
2 ಮೊಟ್ಟೆ
ಸಕ್ಕರೆ(1/ 2 ಕಪ್)
2 ಕಪ್ ಬಾದಾಮಿ
1/2 ಚಮಚ ಅಡುಗೆ ಸೋಡಾ
2 ಚಮಚ ಮೈದಾ ಹಿಟ್ಟು
ಚಿಟಿಕೆಯಷ್ಟು ಉಪ್ಪು
3 ಬಾಳೆಹಣ್ಣು
ಮಾಡುವ ವಿಧಾನ
- ಮೊಟ್ಟೆಯನ್ನು ಒಡೆದು ಬೌಲ್‌ಗೆ ಹಾಕಿ ಚೆನ್ನಾಗಿ ಕದಡಬೇಕು, ಬೀಟರ್ ಇದ್ದರೆ ಅದನ್ನು ಬಳಸಬಹುದು, ಮೊಟ್ಟೆ ಮಿಶ್ರಣ ನೊರೆ ನೊರೆಯಾಗಿ ಬರಬೇಕು.
- ಬೆಣ್ಣೆ ಹಾಕಿ ಮಿಕ್ಸ್ ಮಾಡಿ. ಹಾಲು ಸೇರಿಸಿ ಚೆನ್ನಾಗಿ ಕದಡಿ.
- ಮತ್ತೊಂದು ಬೌಲ್‌ನಲ್ಲಿ ಮೈದಾ, ಬೇಕಿಂಗ್ ಸೋಡಾ, ಬೇಕಿಂಗ್ ಪೌಡರ್ ಹಾಕಿ ಮಿಕ್ಸ್ ಮಾಡಿ. ಚಿಟಿಕೆಯಷ್ಟು ಉಪ್ಪು ಸೇರಿಸಿ ಮಿಕ್ಸ್ ಮಾಡಿ
- ನಂತರ ಚೆನ್ನಾಗಿ ಕದಡಿದ ಮೊಟ್ಟೆ, ಬೆಣ್ಣೆ ಮಿಶ್ರಣ ಹಾಗೂ ಮ್ಯಾಶ್ ಮಾಡಿದ ಬಾಳೆಹಣ್ಣು ಹಾಕಿ, ಸಕ್ಕರೆ ಸೇರಿಸಿ, ಬಾದಾಮಿ ಹಾಕಿ( ಬಾದಾಮಿ ತರಿ-ತರಿ ಮಾಡಿ ಸೇರಿಸಿ) ಚೆನ್ನಾಗಿ ಕಲೆಸಿ.
- ಇದೇ ಸಮಯದಲ್ಲಿ ಓವನ್ ಅನ್ನು 375 degrees (F) ಪ್ರೀಹ್ಹೀಟ್ ಮಾಡಿ.
- ಕಪ್ ಕೇಕ್ ಡಿನ್ ಅಥವಾ ಟ್ರೇಗೆ ತುಪ್ಪ ಬೆಣ್ಣ ಸವರಿ, ಈ ಮಿಶ್ರಣವನ್ನು ಅದರಲ್ಲಿ ಮುಕ್ಕಾಲು ಭಾಗದಷ್ಟು ತುಂಬಿ
- ನಂತರ 10-13 ನಿಮಿಷ ಬೇಯಿಸಿ
- ಸೀದು ಹೋಗದಂತೆ ಒಂದು 6-7 ನಿಮಿಷವಾದಾಗ ಚೆಕ್ ಮಾಡಿ, ಆವಾಗಲೇ ಬೇಕ್ ಆದಂತೆ ಕಂಡರೆ ಮತ್ತೆ 2 ನಿಮಿಷ ಬೇಯಿಸಿದರೆ ಸಾಕು.
ಟಾಪಿಂಗ್ ಐಡಿಯಾ
ನೀವು ಬೇಕಿದ್ದರೆ ಟಾಪಿಂಗ್‌ಗೆ ಚಾಕೋಲೆಟ್ ಪುಡಿ ಮಾಡಬಹುದು
ಅಥವಾ ಡ್ರೈ ಫ್ರೂಟ್ಸ್ ಕೂಡ ಟಾಪಿಂಗ್‌ಗೆ ಬಳಸಬಹುದು.
ಮಕ್ಕಳಿಗೆ ಆರೋಗ್ಯಕರ ಸ್ನ್ಯಾಕ್ಸ್
ಕಪ್ ಕೇಕ್ ಮಕ್ಕಳು ತುಂಬಾ ಇಷ್ಟಪಡುತ್ತಾರೆ, ಆದರೆ ಹೊರಗಡೆ ದೊರೆಯುವ ಕೇಕ್
ಹೇಗೆ ಮಾಡುತ್ತಾರೆ, ಶುಚಿತ್ವ ಕಡೆಗೆ ಎಷ್ಟು ಗಮನ ಕೊಡುತ್ತಾರೆ ಎಂದು ಹೇಳಲು
ಸಾಧ್ಯವಿಲ್ಲ. ನಿಮ್ಮ ಮನೆಯಲ್ಲಿ ಓವನ್ ಇದ್ದರೆ ಕಪ್ ಕೇಕ್ ತುಂಬಾ ಸುಲಭವಾಗಿ
ಮಾಡಬಹುದು.
ಈ ಕೇಕ್ ಮಾಡಿಟ್ಟು ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ಎರಡು ವಾರದವರೆಗೆ ಇಟ್ಟು
ಬಳಸಬಹುದು.



Click it and Unblock the Notifications