Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಳೆಗಾಲದ ಆಹಾರ ಕಣಲೆ: ತೆಂಗಿನ ತುರಿ ಹುರಿದು ಮಾಡುವ ಸಾರಿನ ರೆಸಿಪಿ
ಮಳೆಗಾಲದ ಆಹಾರದಲ್ಲೊಂದು ಕಣಲೆ, ಕಾಡಿನಲ್ಲಿ ಹೋಗಿ ಕಣಲೆ ತರುವಂತಿಲ್ಲ, ಆದರೆ ಊರುಗಳ ಒಳಗೆಯೇ ಬಿದಿರಿನ ಗಿಡ ಇದ್ದರೆ ಜನರು ತಂದು ಸಾರು ಮಾಡುತ್ತಾರೆ, ಕಣಲೆ ಮಳೆಗಾಲದ ಆಹಾರವಾಗಿದ್ದು ಇದನ್ನು ತಿನ್ನುವುದರಿಂದ ಈ ಸಮಯಕ್ಕೆ ಆರೋಗ್ಯ ರಕ್ಷಣೆ ಅವಶ್ಯಕವಾದ ಗುಣಗಳು ಸಿಗುವುದು. ಇಲ್ಲಿ ಕಣಲೆ ಸಾರು ಮಾಡುವ ರೆಸಿಪಿ ನೀಡಿದ್ದೇವೆ ನೋಡಿ:

ಕಣಲೆ ಮತ್ತು ಕಡ್ಲೆ ಹಾಕಿ ಮಾಡುವ ಸಾರಿನ ರೆಸಿಪಿ
ಬೇಕಾಗುವ ಸಾಮಗ್ರಿ
ಎರಡು ಮುಷ್ಟಿಯಷ್ಟು ಕಣಲೆ
ಕಡ್ಲೆ 1/ 2 ಕಪ್ (ನೀರಿನಲ್ಲಿ -8 ಗಂಟೆ ನೆನೆಹಾಕಿ)
ತೆಂಗಿನ ತುರಿ 1ಕಪ್
ಈರುಳ್ಳಿ 1
ಟೊಮೆಟೊ 1-2
ಚಕ್ಕೆ ಒಂದು ಚಿಕ್ಕ ತುಂಡು
ಲವಂಗ 2-3
ಸ್ವಲ್ಪ ಶುಂಠಿ
1 ಬೆಳ್ಳುಳ್ಳಿ
(ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಕೂಡ ಬಳಸಬಹುದು)
ಕೊತ್ತಂಬರಿ ಪುಡಿ ಒಂದೂವರೆ ಚಮಚ
ಮೆಣಸಿನ ಪುಡಿ 1 ಚಮಚ
ಜೀರಿಗೆ
2 ಚಮಚ ಎಣ್ಣೆ
ಸ್ವಲ್ಪ ಸಾಸಿವೆ
ಕರಿಬೇವಿನ ಎಲೆ
ಕಡ್ಲೆ-ಕಣಲೆ ಸಾರು ಮಾಡುವ ವಿಧಾನ
- ಮೊದಲಿಗೆ ಕಡ್ಲೆ, ಕಣಲೆ, ಈರುಳ್ಳಿ, ಟೊಮೆಟೊ, 1 ಹಸಿ ಮೆಣಸು (ಬೇಕಿದ್ದರೆ) ಹಾಕಿ ರುಚಿಗೆ ತಕ್ಕ ಉಪ್ಪು ಹಾಕಿ, ಬೇಯಲು ತಕ್ಕ ನೀರು ಹಾಕಿ ಬೇಯಿಸಿ. ಕಣಲೆ ಕಡ್ಲೆ ಮುಳುಗುವಷ್ಟು ಹಾಕಿದರೆ ಸಾಕು ತುಂಬಾ ಹಾಕಬೇಡಿ.
- ಈಗ ತೆಂಗಿನ ತುರಿಯನ್ನು ಹುರಿಯಿರಿ, ತೆಂಗಿನ ತುರಿ ಉರಿಯುವಾಗ ಅದಕ್ಕೆ ಕೊತ್ತಂಬರಿ ಪುಡಿ, ಮೆಣಸಿನ ಪುಡಿ, ಅರಿಶಿಣ ಪುಡಿ, ಜೀರಿಗೆ, ಚಕ್ಕೆ, ಲವಂಗ, ಬೆಳ್ಳುಳ್ಳಿ, ಶುಂಠಿ ಸ್ವಲ್ಪ ಹುಣಸೆಹಣ್ಣು ಎಲ್ಲಾ ಹಾಕಿ ಹುರಿಯಿರಿ
- ಶುಂಠಿ ಬೆಳ್ಳುಳ್ಳಿ ಪೇಸ್ಟ್ ಆದರೆ ಒಗ್ಗರಣೆಗೆ ಹಾಕುವಾಗ ಹಾಕಿ
- ಈಗ ಸಾರಿನ ಪಾತ್ರೆಯನ್ನು ಗ್ಯಾಸ್ ಉರಿ ಮೇಲೆ ಇಟ್ಟು ಎಣ್ಣೆ ಹಾಕಿ , ನಂತರ ಸಾಸಿವೆ ಹಾಕಿ, ಸಾಸಿವೆ ಚಟ್ಪಟ್ ಶಬ್ದ ಮಾಡುವಾಗ ಕರಿ ಬೇವು ಹಾಕಿ, ನಂತರ ಬೇಯಿಸಿದ ಕಡ್ಲೆ, ಕಣಲೆ ಹಾಕಿ, ರುಬ್ಬಿದ ಮಸಾಲೆ ಹಾಕಿ ಬೇಯಿಸಿ, ಉಪ್ಪು ಸರಿಯಾಗಿದೆಯೇ ನೋಡಿ, ಬೇಕಿದ್ದರೆ ಇನ್ನೂ ಸ್ವಲ್ಪ ಉಪ್ಪು ಸೇರಿಸಿದರೆ ರುಚಿ-ರುಚಿಯಾದ ಕಣಲೆ ಸಾರು ರೆಡಿ.
ಸಲಹೆ: ಕಣಲೆಯನ್ನು ಈ ರೀತಿ ಕಡ್ಲೆ, ತಡುಗಿಣಿ, ಬೀನ್ಸ್
ಕಾಳು ಇವುಗಳ ಜೊತೆಗೆ ಕೂಡ ಮಾಡಬಹುದು.
ಕಣಲೆಯಲ್ಲಿರುವ ಪೋಷಕಾಂಶಗಳು
ಕಣಲೆಯಲ್ಲಿ
ಪೊಟಾಷ್ಯಿಯಂ
ಕ್ಯಾಲ್ಸಿಯಂ
ಮ್ಯಾಂಗನೀಸ್
ವಿಟಮಿನ್ ಎ
ವಿಟಮಿನ್ ಬಿ6
ವಿಟಮಿನ್ ಇ
ಸತು
ಕ್ರೋಮಿಯಂ
ಕಬ್ಬಿಣದಂಶ
ಥೈಯಾಮಿನ್
ನಿಯಾಸಿನ್
ಕಣಲೆ ಸೀಸನಲ್ ಆಹಾರವಾಗಿರುವುದರಿಂದ ಸಿಕ್ಕರೆ ರುಚಿ ನೋಡಲು ಮಿಸ್ ಮಾಡದಿರಿ.



Click it and Unblock the Notifications