Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಾಮೂಲಿ ಪುಲಾವ್ ಅಲ್ಲ.. ಕಡ್ಲೆಕಾಳು ಬಳಸಿ ಮಾಡಿ ಈ ಹೆಲ್ದಿ ಪುಲಾವ್! ತೂಕ ಇಳಿಯುತ್ತೆ, ಶುಗರ್ ಬರಲ್ಲ
ಅಪ್ಪಟ ಘಮಘಮಿಸುವ ರುಚಿ! ಲಂಚ್ ಬಾಕ್ಸ್ಗೆ ಸೂಪರ್.. ರೆಸ್ಟೋರೆಂಟ್ ಸ್ಟೈಲ್ ಹೆಲ್ದಿ & ಟೇಸ್ಟಿ ಚೆನ್ನಾ ಪುಲಾವ್ ಮಾಡಿ ನೋಡಿ. ಹೌದು, ಪ್ರತಿದಿನವೂ ಲಂಚ್ ಬಾಕ್ಸ್ಗೆ ಏನು ಮಾಡಬೇಕು ಎಂಬ ಗೊಂದಲಕ್ಕೆ ನಾವು ಸಿಲುಕುತ್ತೇವೆ. ಸಾರು-ಅನ್ನದಿಂದ ಬೇಸತ್ತಿದ್ದರೆ, ಕಡಿಮೆ ಸಮಯದಲ್ಲಿ ರುಚಿಕರ ಹಾಗೂ ಪೌಷ್ಟಿಕ ಆಹಾರ ತಯಾರಿಸಲು ಕಾಬೂಲಿ ಚನಾ ಪುಲಾವ್ (Kabuli Chana Pulao) ಅಥವಾ ಕಡ್ಲೆಕಾಳು ಪುಲಾವ್ (Kadalekalu Pulao) ಅತ್ಯುತ್ತಮ ಆಯ್ಕೆ.
ಇದು ಕೇವಲ ರುಚಿಯಲ್ಲಿ ಮಾತ್ರವಲ್ಲದೆ, ಆರೋಗ್ಯಕ್ಕೂ ಪೂರಕವಾಗಿದೆ. ಕಾಬೂಲಿ ಕಡ್ಲೆಯಲ್ಲಿರುವ ಅಧಿಕ ಪ್ರೋಟೀನ್ ಮತ್ತು ಫೈಬರ್ ದೇಹಕ್ಕೆ ಶಕ್ತಿ ನೀಡಿ, ಜೀರ್ಣಕ್ರಿಯೆ ಸುಧಾರಿಸುತ್ತದೆ. ಈ ಪ್ರೋಟೀನ್ ಯುಕ್ತ ಪುಲಾವ್ ಲಂಚ್ ಬಾಕ್ಸ್ಗೆ ಅಥವಾ ರಾತ್ರಿಯ ವಿಶೇಷ ಭೋಜನಕ್ಕೆ ಸೂಕ್ತ. ಘಮಘಮಿಸುವ ಮಸಾಲೆ ಮತ್ತು ಪೌಷ್ಟಿಕಾಂಶಗಳ ಈ ಅಡುಗೆಯನ್ನು ಸುಲಭವಾಗಿ ತಯಾರಿಸುವ ವಿಧಾನ (Kabuli Chana Pulao Recipe) ಇಲ್ಲಿದೆ.
ಸಸ್ಯಾಹಾರಿಗಳಿಗೆ ಇದು ಮಾಂಸಾಹಾರಕ್ಕೆ ಸರಿಸಮನಾದ ಪೌಷ್ಟಿಕಾಂಶ ಒದಗಿಸುತ್ತದೆ. ಜೊತೆಗೆ ತೂಕ ಇಳಿಸಲು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಕಾರಿ. ಕಡ್ಲೆಕಾಳು ಪುಲಾವ್ ಮಾಡಲು ಬೇಕಾಗುವ ಸಾಮಾಗ್ರಿಗಳು ಮತ್ತು ಸಿಂಪಲ್ ರೆಸಿಪಿ ನಿಮಗಾಗಿ.
ಕಡ್ಲೆಕಾಳು ಪುಲಾವ್ಗೆ ಬೇಕಾಗುವ ಸಾಮಾಗ್ರಿಗಳು
• ಬಾಸ್ಮತಿ ಅಕ್ಕಿ - 1 ಕಪ್
• ಬೇಯಿಸಿದ ಕಾಬುಲಿ ಚನಾ (ಕಡ್ಲೆಕಾಳು) - 1 ಕಪ್
• ಎಣ್ಣೆ ಅಥವಾ ತುಪ್ಪ - 2 ದೊಡ್ಡ ಚಮಚ
• ಈರುಳ್ಳಿ - 1 ಅಥವಾ 2
• ಟೊಮೆಟೊ - 1
• ಹಸಿಮೆಣಸು - 1
• ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಚಮಚ
• ಜೀರಿಗೆ - ½ ಚಮಚ
• ಬಿರಿಯಾನಿ ಎಲೆ - 1
• ಲವಂಗ - 2 ರಿಂದ 3
• ಏಲಕ್ಕಿ - 1
• ಗರಂ ಮಸಾಲಾ - ½ ಚಮಚ
• ಉಪ್ಪು - ರುಚಿಗೆ ತಕ್ಕಷ್ಟು
• ನೀರು - 2 ಕಪ್
• ಕೊತ್ತಂಬರಿ ಸೊಪ್ಪು - ಸ್ವಲ್ಪ (ಅಲಂಕಾರಕ್ಕಾಗಿ)
ಕಡ್ಲೆಕಾಳು ಪುಲಾವ್ ತಯಾರಿಸುವ ವಿಧಾನ
- ಮೊದಲು ಬಾಸುಮತಿ ಅಕ್ಕಿಯನ್ನು ಚೆನ್ನಾಗಿ ತೊಳೆದು ಇಪ್ಪತ್ತು ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ. ಇದು ಪುಲಾವ್ ಉದುರು ಉದುರಾಗಿ ಬರಲು ಸಹಕಾರಿ.
- ನಂತರ, ಕುಕ್ಕರ್ ಅಥವಾ ಅಗಲವಾದ ಪಾತ್ರೆಯಲ್ಲಿ ಎಣ್ಣೆ ಅಥವಾ ತುಪ್ಪ ಬಿಸಿ ಮಾಡಿ.
- ಜೀರಿಗೆ, ಪಲಾವ್ ಎಲೆ, ಲವಂಗ ಮತ್ತು ಏಲಕ್ಕಿಯನ್ನು ಹಾಕಿ ಅವು ಘಮ ಬಿಡುವವರೆಗೆ ಹುರಿಯಿರಿ. ಇದಕ್ಕೆ ಉದ್ದಕ್ಕೆ ಹೆಚ್ಚಿದ ಈರುಳ್ಳಿ ಸೇರಿಸಿ ಹೊಂಬಣ್ಣ ಬರುವವರೆಗೆ ಬಾಡಿಸಿ.
- ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಹಸಿಮೆಣಸಿನಕಾಯಿ ಹಾಕಿ ಹಸಿ ವಾಸನೆ ಹೋಗಲಾಡಿಸಿ, ಸಣ್ಣದಾಗಿ ಹೆಚ್ಚಿದ ಟೊಮೆಟೊ ಮೃದುವಾಗುವವರೆಗೆ ಬೇಯಿಸಿ.
- ಟೊಮೆಟೊ ಬೆಂದ ನಂತರ, ಮೊದಲೇ ಬೇಯಿಸಿಟ್ಟುಕೊಂಡ ಕಾಬೂಲಿ ಕಡ್ಲೆ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಗರಂ ಮಸಾಲವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದರಿಂದ ಮಸಾಲೆಗಳ ಸುವಾಸನೆಯು ಕಡ್ಲೆಕಾಳಿಗೆ ಸರಿಯಾಗಿ ಹಿಡಿದುಕೊಳ್ಳುತ್ತದೆ.
- ಈಗ ನೆನೆಸಿಟ್ಟ ಅಕ್ಕಿಯ ನೀರನ್ನು ಬಸಿದು ಕುಕ್ಕರ್ಗೆ ಹಾಕಿ, ಅಕ್ಕಿ ಮುರಿಯದಂತೆ ಮೆಲ್ಲಗೆ ಕೈಯಾಡಿಸಿ.
- ನಂತರ ಎರಡು ಕಪ್ ನೀರನ್ನು ಸೇರಿಸಿ ಕುಕ್ಕರ್ ಮುಚ್ಚಳ ಮುಚ್ಚಿ ಎರಡು ಸೀಟಿ ಬರುವವರೆಗೆ ಬೇಯಿಸಿ. ಕುಕ್ಕರ್ ತಣ್ಣಗಾದ ಮೇಲೆ ಮುಚ್ಚಳ ತೆಗೆದು, ಸಿದ್ಧವಾದ ಪುಲಾವ್ ಅನ್ನು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
- ಬಿಸಿ ಕಾಬೂಲಿ ಚನಾ ಪುಲಾವ್ ಅಥವಾ ಕಡ್ಲೆಕಾಳು ಪುಲಾವ್ ಅನ್ನು ಸೌತೆಕಾಯಿ ರೈತಾ, ಮೊಸರು ಬಜ್ಜಿ ಅಥವಾ ಸಲಾಡ್ ಜೊತೆಗೆ ಸವಿಯಲು ರುಚಿಕರವಾಗಿರುತ್ತದೆ.
- ಇದು ಡಿನ್ನರ್ಗೆ ಮಾತ್ರವಲ್ಲದೆ, ಮಕ್ಕಳ ಲಂಚ್ ಬಾಕ್ಸ್ಗೂ ಸೂಕ್ತವಾದ ಹೆಲ್ದಿ ರೆಸಿಪಿಯಾಗಿದೆ. ಪೌಷ್ಟಿಕಾಂಶ ಮತ್ತು ರುಚಿಯ ಪರಿಪೂರ್ಣ ಮಿಶ್ರಣವಾಗಿದೆ.



Click it and Unblock the Notifications
