Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕಡಲೆ ಬೇಳೆ ಕೋಸಂಬರಿ ರೆಸಿಪಿ
ಕಡಲೆ ಬೇಳೆ ಕೋಸಂಬರಿ ಕರ್ನಾಟಕದ ವಿಶೇಷ ಶೈಲಿಯ ಸಲಾಡ್ ಎಂದು ಹೇಳಬಹುದು. ಇದನ್ನು ಉತ್ಸವ, ಮಂಗಳ ಕಾರ್ಯ ಮತ್ತು ಹಬ್ಬ ಹರಿದಿನಗಳಲ್ಲಿ ತಯಾರಿಸುತ್ತಾರೆ. ಉಡುಪಿ ಶೈಲಿಯ ಊಟವಿಧಾನದಲ್ಲಿ ಇದೊಂದು ಪ್ರಮುಖ ಭಕ್ಷ್ಯವೂ ಹೌದು. ಸೌತೆಕಾಯಿ, ಕ್ಯಾರೆಟ್/ಗಜರಿ, ಕಡಲೇ ಬೇಳೆ ಮತ್ತು ತೆಂಗಿನ ತುರಿಯ ಸಮ್ಮಿಶ್ರಣದಿಂದ ರೂಪುಗೊಳ್ಳುತ್ತದೆ.
ಈ ಕೋಸಂಬರಿಯಲ್ಲಿ ಸಮೃದ್ಧವಾದ ಪ್ರೋಟೀನ್‍ಗಳಿರುತ್ತವೆ. ದಕ್ಷಿಣ ಭಾರತದಲ್ಲಿ ಇದನ್ನು ಊಟದ ಒಂದು ಪ್ರಮುಖ ಪದಾರ್ಥ/ಪಾಕವಿಧಾನ ಎಂದು ಪರಿಗಣಿಸಲಾಗಿದೆ. ದೇವರ ನೈವೇದ್ಯ ಹಾಗೂ ಪ್ರಸಾದದ ರೂಪದಲ್ಲೂ ಇದನ್ನು ವಿತರಿಸುತ್ತಾರೆ. ಕೋಸಂಬರಿಯನ್ನು ಕಡಲೆ ಬೇಳೆಯ ಹೊರತಾಗಿ ನೆನೆಸಿಕೊಂಡ ಹೆಸರುಕಾಳಿನಿಂದಲೂ ತಯಾರಿಸಬಹುದು.
ನಾಲಿಗೆ ಚಪ್ಪರಿಸುವಂತೆ ಮಾಡುವ ಕೋಸಂಬರಿಯನ್ನು ತಯಾರಿಸುವುದು ಬಹಳ ಸುಲಭ. ಅಲ್ಲದೆ ಇದಕ್ಕಾಗಿ ಅಧಿಕ ಸಮಯವೂ ಬೇಕಾಗದು. ಬೇಳೆಯನ್ನು ನೆನೆಸಿಕೊಂಡಿದ್ದರೆ ಬೇಕೆಂದಾಗ ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದು. ನೀವು ಮನೆಯಲ್ಲಿ ಈ ಪಾಕ ವಿಧಾನವನ್ನು ತಯಾರಿಸಬೇಕೆಂದರೆ ಇಲ್ಲಿರುವ ವೀಡಿಯೋ ಹಾಗೂ ಹಂತ ಹಂತವಾದ ಚಿತ್ರ ಬರಹದ ವಿವರಣೆಯನ್ನು ನೋಡಿ...
ಕಡಲೆ ಬೇಳೆ ಕೋಸಂಬರಿ ವೀಡಿಯೋ ಪಾಕವಿಧಾನ

Recipe By: ಸೌಮ್ಯಾ ಶೇಖರ್
Recipe Type: ಕೋಸಂಬರಿ/ಸಲಾಡ್
Serves: 2 ಮಂದಿಗೆ
-
ಕಡಲೆ ಬೇಳೆ - 1 ಕಪ್
ನೀರು - 2 ಕಪ್
ತೆಂಗಿನ ತುರಿ - 1 ಕಪ್
ಹೆಚ್ಚಿಕೊಂಡ ಸೌತೆಕಾಯಿ - 1 ಮಧ್ಯಮ ಗಾತ್ರದ್ದು.
ರುಚಿಗೆ ತಕ್ಕಷ್ಟು ಉಪ್ಪು
ನಿಂಬೆ ರಸ - 1 ಟೇಬಲ್ ಚಮಚ
ಎಣ್ಣೆ - 1 ಟೇಬಲ್ ಚಮಚ
ಸಾಸಿವೆ - 2 1/2 ಟೀಚಮಚ
ಹೆಚ್ಚಿಕೊಂಡ ಹಸಿಮೆಣಸು - 2-3 ಸಣ್ಣ ಗಾತ್ರದ್ದು
ಕರಿಬೇವಿನ ಎಲೆ 8-10
ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು - ಅಲಂಕಾರಕ್ಕೆ
-
1. ಒಂದು ಬೌಲ್‍ನಲ್ಲಿ ಕಡಲೆ ಬೇಳೆಯನ್ನು ಹಾಕಿ.
2. ಇದಕ್ಕೆ ನೀರನ್ನು ಸೇರಿಸಿ 2-3 ಗಂಟೆಗಳ ಕಾಲ ನೆನೆಯಲು ಬಿಡಿ. ಹೆಚ್ಚುವರಿ ನೀರನ್ನು ತೆಗೆಯಿರಿ
3. ಕಡಲೆ ಬೇಳೆ ಸರಿಯಾಗಿ ನನೆದಿದೆಯೇ ಎನ್ನುವುದನ್ನು ಪರೀಕ್ಷಿಸಿ. ನೆನೆಯಿಟ್ಟ ಬೇಳೆಯೊಂದನ್ನು ತೆಗೆದುಕೊಂಡು, ಹಿಸುಕಿ ನೋಡಿ. ಹಾಗೊಮ್ಮೆ ಇದು ಒಡೆದರೆ ಸರಿಯಾಗಿ ನೆನೆದಿದೆ ಎಂದು ಅರ್ಥ. ನೆನೆಯಿಟ್ಟ ನೀರನ್ನು ಬಳಿಸಿ/ ಸೋಸಿ ತೆಗೆಯಿರಿ.
4. ತೆಂಗಿನ ತುರಿ ಮತ್ತು ಹೆಚ್ಚಿಕೊಂಡ ಸೌತೆಕಾಯಿಯನ್ನು ಕಡಲೆ ಬೇಳೆಗೆ ಸೇರಿಸಿ.
5. ನಂತರ ಉಪ್ಪು ಮತ್ತು ನಿಂಬೆ ರಸವನ್ನು ಸೇರಿಸಿ.
6. ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ.
7. ಎಣ್ಣೆ ಬಿಸಿಯಾದ ತಕ್ಷಣ ಸಾಸಿವೆಯನ್ನು ಹಾಕಿ, ಚಟಪಟ ಎನ್ನುವ ತನಕ ಹುರಿಯಿರಿ.
8. ನಂತರ ಕರಿಬೇವಿನ ಎಲೆ, ಹಸಿಮೆಣಸನ್ನು ಸೇರಿಸಿ ಸರಿಯಾಗಿ ಹುರಿಯಿರಿ.
9. ಇದಕ್ಕೆ ಕಡಲೆ ಬೇಳೆ ಮಿಶ್ರಣವನ್ನು ಸೇರಿಸಿ, ಚೆನ್ನಾಗಿ ಕೈಯಾಡಿಸಿ.
10. ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪಿನಿಂದ ಅಲಂಕಾರ ಮಾಡಿ.
- 1. ಇದಕ್ಕೆ ಗಜರಿ/ಕ್ಯಾರೆಟ್ ಮತ್ತು ಕಚ್ಚಾ ಮಾವನ್ನು ಸೇರಿಸಿಕೊಳ್ಳಬಹುದು. ಆಗ ವಿಭಿನ್ನ ರುಚಿಯನ್ನು ಪಡೆಯಬಹುದು.
- ಸರ್ವಿಂಗ್ ಸೈಜ್ - 1 ಕಪ್
- ಕ್ಯಾಲೋರೀಸ್ - 240 ಕ್ಯಾಲ್
- ಫ್ಯಾಟ್ - 8.4 ಗ್ರಾಂ.
- ಪ್ರೋಟೀನ್ - 10.6 ಗ್ರಾಂ.
- ಕಾರ್ಬೋಹೈಡ್ರೇಟ್ಸ್ - 30.6 ಗ್ರಾಂ.
- ಫೈಬರ್ - 8.4 ಗ್ರಾಂ
ಕಡಲೆ ಬೇಳೆ ಕೋಸಂಬರಿ ಪಾಕವಿಧಾನ
1. ಒಂದು ಬೌಲ್‍ನಲ್ಲಿ ಕಡಲೆ ಬೇಳೆಯನ್ನು ಹಾಕಿ.

2. ಇದಕ್ಕೆ ನೀರನ್ನು ಸೇರಿಸಿ 2-3 ಗಂಟೆಗಳ ಕಾಲ ನೆನೆಯಲು ಬಿಡಿ. ಹೆಚ್ಚುವರಿ ನೀರನ್ನು ತೆಗೆಯಿರಿ.

3. ಕಡಲೆ ಬೇಳೆ ಸರಿಯಾಗಿ ನನೆದಿದೆಯೇ ಎನ್ನುವುದನ್ನು ಪರೀಕ್ಷಿಸಿ. ನೆನೆಯಿಟ್ಟ ಬೇಳೆಯೊಂದನ್ನು ತೆಗೆದುಕೊಂಡು, ಹಿಸುಕಿ ನೋಡಿ. ಹಾಗೊಮ್ಮೆ ಇದು ಒಡೆದರೆ ಸರಿಯಾಗಿ ನೆನೆದಿದೆ ಎಂದು ಅರ್ಥ. ನೆನೆಯಿಟ್ಟ ನೀರನ್ನು ಬಳಿಸಿ/ ಸೋಸಿ ತೆಗೆಯಿರಿ.

4. ತೆಂಗಿನ ತುರಿ ಮತ್ತು ಹೆಚ್ಚಿಕೊಂಡ ಸೌತೆಕಾಯಿಯನ್ನು ಕಡಲೆ ಬೇಳೆಗೆ ಸೇರಿಸಿ.

5. ನಂತರ ಉಪ್ಪು ಮತ್ತು ನಿಂಬೆ ರಸವನ್ನು ಸೇರಿಸಿ.

6. ದಪ್ಪ ತಳದ ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ ಬಿಸಿ ಮಾಡಿ.

7. ಎಣ್ಣೆ ಬಿಸಿಯಾದ ತಕ್ಷಣ ಸಾಸಿವೆಯನ್ನು ಹಾಕಿ, ಚಟಪಟ ಎನ್ನುವ ತನಕ ಹುರಿಯಿರಿ.

8. ನಂತರ ಕರಿಬೇವಿನ ಎಲೆ, ಹಸಿಮೆಣಸನ್ನು ಸೇರಿಸಿ ಸರಿಯಾಗಿ ಹುರಿಯಿರಿ.

9. ಇದಕ್ಕೆ ಕಡಲೆ ಬೇಳೆ ಮಿಶ್ರಣವನ್ನು ಸೇರಿಸಿ, ಚೆನ್ನಾಗಿ ಕೈಯಾಡಿಸಿ.

10. ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪಿನಿಂದ ಅಲಂಕಾರ ಮಾಡಿ.

Click it and Unblock the Notifications