Jackfruit Chips: ಎಂದಾದರೂ 'ಹಲಸಿನ ಚಿಪ್ಸ್' ಮಾಡಿದ್ದೀರಾ? ಸಖತ್ ಟೇಸ್ಟಿ.. ಒಮ್ಮೆ ಟ್ರೈ ಮಾಡಿ

Posted By:

ನೀವು ಹಲಸಿನ ಹಣ್ಣಿನ ಉಪ್ಪಿನಕಾಯಿ ತಿಂದಿರಬೇಕು. ಉಪಹಾರದಲ್ಲಿಯೂ ತಿಂದಿರಬಹುದು. ಆದರೆ, ನೀವು ಎಂದಾದರೂ 'ಹಲಸಿನ ಹಣ್ಣಿನ ಚಿಪ್ಸ್' (jackfruit chips) ಪ್ರಯತ್ನಿಸಿದ್ದೀರಾ? ನಾವು ಈ ಲೇಖನದಲ್ಲಿ ರುಚಿಕರವಾದ, ಗರಿಗರಿಯಾದ ಮತ್ತು ಆರೋಗ್ಯಕರವಾದ ಹಲಸಿನ ಹಣ್ಣಿನ ಚಿಪ್ಸ್ ಮಾಡುವ ವಿಧಾನದ ಬಗ್ಗೆ ತಿಳಿಸಿಕೊಟ್ಟಿದ್ದೇವೆ. ನೀವು, ಇದನ್ನು ಸಂಜೆ ಟೀ ಅಥವಾ ಕಾಫಿಯೊಂದಿಗೆ ಸವಿಯಬಹುದು. ಈ ಗರಿಗರಿಯಾದ ಮತ್ತು ಸುವಾಸನೆಯ ಚಿಪ್ಸ್ ತಿನ್ನಲು ಖುಷಿ ಕೊಡುವುದಲ್ಲದೆ, ತಯಾರಿಸಲು ತುಂಬಾನೇ ಸುಲಭ. ಇನ್ನೇಕೆ ತಡ.. ಬನ್ನಿ, ಹಲಸಿನ ಚಿಪ್ಸ್ ತಯಾರಿಸುವ ವಿಧಾನದ ಬಗ್ಗೆ ತಿಳಿಯೋಣ.

ಹಲಸಿನ ಹಣ್ಣಿನ ಚಿಪ್ಸ್ ದಕ್ಷಿಣ ಭಾರತದ ಪ್ರಸಿದ್ಧ ತಿಂಡಿ ಆಹಾರಗಳಲ್ಲಿ ಒಂದಾಗಿದೆ. ಬಹುತೇಕ ಪ್ರತಿಯೊಂದು ಮನೆಯಲ್ಲೂ ಇದನ್ನು ಒಂದಲ್ಲ ಒಂದು ಸಮಯದಲ್ಲಿ ಹಲಸಿನ ಹಣ್ಣಿನ (jackfruit) ಉಪಹಾರ ತಯಾರಿಸಿರಬೇಕು. ಆದರೆ, ನೀವು ಹಲಸಿನ ಹಣ್ಣಿನ ಚಿಪ್ಸ್ ತಿಂದಿರಲು ಸಾಧ್ಯವೇ ಇಲ್ಲ ಬಿಡಿ. ಇಲ್ಲದಿದ್ದರೆ, ನಾವು ನಿಮಗಾಗಿ ಸಂಪೂರ್ಣ ವಿಭಿನ್ನ ಮತ್ತು ಅದ್ಭುತವಾದ ಹಲಸಿನ ಹಣ್ಣಿನಿಂದ ತಯಾರಿಸುವ ಹೊಸ ಪಾಕವಿಧಾನವನ್ನು ಪರಿಚಯಿಸಿದ್ದೇವೆ. ಅದುವೇ, ಗರಿಗರಿಯಾದ ಹಲಸಿನ ಚಿಪ್ಸ್. ಇದು ಒಂದು ಸಂಜೆಯ ತಿಂಡಿಯಾಗಿದ್ದು, ನಿಮ್ಮ ಮಕ್ಕಳಿಗೆ ಚಹಾದ ಜೊತೆಗೆ ಇದನ್ನು ಸವಿಯಲು ಮಾಡಿಕೊಡಬಹುದು.

jackfruit chips

ಹಲಸಿನ ಚಿಪ್ಸ್ ತಯಾರಿಸಲು ಬೇಕಾಗುವ ಪದಾರ್ಥಗಳು

ಹಸಿ ಹಲಸಿನ ಹಣ್ಣು - 500 ಗ್ರಾಂ
ಎಣ್ಣೆ - ಹುರಿಯಲು
ಉಪ್ಪು - ರುಚಿಗೆ ತಕ್ಕಂತೆ
ಅರಿಶಿನ - 2 ಟೀಸ್ಪೂನ್
ಕೆಂಪು ಮೆಣಸಿನ ಪುಡಿ - 1 ಟೀಚಮಚ
ನಿಂಬೆ ಹಣ್ಣಿನ ರಸ - 3 ಚಮಚ

Take a Poll

ಹಲಸಿನ ಹಣ್ಣಿನ ಚಿಪ್ಸ್ ತಯಾರಿಸುವ ವಿಧಾನ

ಮೊದಲು ಹಲಸಿನ ಹಣ್ಣಿನ ಸಿಪ್ಪೆ ತೆಗೆದು, ಬೀಜಗಳನ್ನು ತೆಗೆದು ಚೆನ್ನಾಗಿ ಕತ್ತರಿಸಿಕೊಳ್ಳಿ. ಬಳಿಕ ಆ ಹೋಳನ್ನು ತಣ್ಣೀರಿನಲ್ಲಿ 10 ನಿಮಿಷಗಳ ಕಾಲ ನೆನೆಸಿಡಬೇಕು. ಇದರಿಂದ ಅದರ ಪಿಷ್ಟವು ತೆಗೆದು ಚಿಪ್ಸ್ ಗರಿಗರಿಯಾಗುತ್ತದೆ. ಇದಾದ ಬಳಿಕ, ಹಲಸಿನ ಹೋಳನ್ನು ತೆಗೆದು ಸ್ವಚ್ಛವಾದ ಬಟ್ಟೆಯಿಂದ ಚೆನ್ನಾಗಿ ಒಣಗಿಸಿ. ಇದಾದ ನಂತರ, ಈಗ ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಬೇಕು.

ಎಣ್ಣೆ ಬಿಸಿಯಾದ ಬಳಿಕ ನಿಧಾನವಾಗಿ ಹಲಸಿನ ಹಣ್ಣಿನ ಚೂರುಗಳನ್ನು ಬಾಣಲೆಯಲ್ಲಿ ಹಾಕಬೇಕು. ಇದು ಗೋಲ್ಡನ್ ಬಣ್ಣ ಬರುವವರೆಗೆ ಮತ್ತು ಗರಿಗರಿಯಾಗುವವರೆಗೆ ಚೆನ್ನಾಗಿ ಹುರಿಯಬೇಕು. ಚಿಪ್ಸ್ ಹುರಿದ ನಂತರ, ಅವುಗಳನ್ನು ಕಾಗದದ ಟಿಶ್ಯೂ ಮೇಲೆ ಇರಿಸಬೇಕು. ಅದಕ್ಕೆ ಉಪ್ಪು, ಕೆಂಪು ಮೆಣಸಿನ ಪುಡಿ ಮತ್ತು ನಿಂಬೆ ಹಣ್ಣಿನ ರಸವನ್ನು ಬೆರಸಬೇಕು. ಇಷ್ಟು ಮಾಡಿದರೆ ಸಾಕು.. ಹಲಸಿನ ಹಣ್ಣಿನ ಚಿಪ್ಸ್ ಸವಿಯಲು ಸಿದ್ಧ. ನೆನಪಿಡಿ, ಬಿಸಿ ಇರುವಾಗಲೇ ತಿಂದರೆ, ಸಿಗುವ ಮಜವೇ ಬೇರೆ.

ಈ ಆರೋಗ್ಯ ಸಮಸ್ಯೆ ಇದ್ದವರು ತಿನ್ನಬೇಡಿ!

ಹಲಸಿನ ಹಣ್ಣು ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಇದರಲ್ಲಿ ವಿಟಮಿನ್ ಎ (A) ಮತ್ತು ಸಿ (C) ಜೊತೆಗೆ ಫೈಬರ್, ಮೆನ್ನೀಸಿಯಮ್, ಪೊಟ್ಯಾಸಿಯಮ್, ರೈಬೋಫ್ಲಾವಿನ್ ಮತ್ತು ತಾಮ್ರ ಸಮೃದ್ದವಾಗಿದೆ. ಇನ್ನು ಈ ಹಣ್ಣನ್ನು ಮೂತ್ರಪಿಂಡದ ಸಮಸ್ಯೆ ಇರುವವರು ತಿನ್ನಬಾರದು ಎಂದು ಹೇಳಲಾಗುತ್ತದೆ. ಅದೇ ರೀತಿ, ಸಕ್ಕರೆ ಮತ್ತು ಚರ್ಮದ ಸಮಸ್ಯೆ ಇದ್ದವರು ತಿನ್ನಬಾರದು. ಇದರಲ್ಲಿರುವ ಗಟ್ಟಿಯಾದ ವಸ್ತುವು ಜೀರ್ಣಕ್ರಿಯೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಹೀಗಾಗಿ, ಗರ್ಭಿಣಿಯರು ಸಹ ಇದನ್ನು ತಿನ್ನಬಾರದು. ಹಲಸಿನ ಬೀಜದಲ್ಲಿ ಸಾಕಷ್ಟು ಪೋಷಕಾಂಶಗಳಿವೆ. ತೂಕ ಕಡಿಮೆ ಮಾಡಿಕೊಳ್ಳಲು ಈ ಬೀಜವನ್ನು ರಾತ್ರಿ ನೀರಿನಲ್ಲಿ ನೆನೆಸಿ ಬೆಳಗ್ಗೆ ಸೇವನೆ ಮಾಡಬಹುದು.

ಒಟ್ಟಾರೆ, ಹಲಸಿನ ಹಣ್ಣು ನೋಡೋಕೆ ಒರಟಾಗಿದ್ದರೂ, ಇದು ರುಚಿಕರವಾಗಿದೆ. ಇದು ಕ್ಯಾನ್ಸರ್ ತಡೆಗಟ್ಟುತ್ತದೆ. ರಕ್ತಹೀನತೆ ನಿವಾರಣೆ ಮಾಡುತ್ತದೆ. ಮಧುಮೇಹ ನಿಯಂತ್ರಣ ಮತ್ತು ಥೈರಾಯ್ಡ್ ಸಮಸ್ಯೆ ಪರಿಹಾರ ನೀಡುತ್ತದೆ. ಜೊತೆಗೆ ಹಲಸಿನ ಹಣ್ಣು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

[ of 5 - Users]
Story first published: Tuesday, May 27, 2025, 18:34 [IST]
X
Desktop Bottom Promotion