Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸವಿರುಚಿಯ ಹಲಸಿನ ಹಣ್ಣಿನ ಪಡ್ಡು ರೆಸಿಪಿ
Recipes
oi-Reena TK
Posted By: Reena TK
ಹಲಸಿನ ಹಣ್ಣಿನ ತೊಳೆಯಿಂದ ಪಡ್ಡು ಮಾಡುವ ರೆಸಿಪಿ ನೀಡಿದ್ದೇವೆ, ಸಂಜೆ ಸ್ನ್ಯಾಕ್ಸ್‌ಗೆ ತುಂಬಾ ರುಚಿಕರವಾದ ತಿಂಡಿಯಾಗಿದೆ, ಅಲ್ಲದೆ ಇದನ್ನು ಮಾಡುವುದು ಹೆಚ್ಚಿನ ಶ್ರಮದ ಕೆಲಸವೇನೂ ಅಲ್ಲ, ಹಾಗಾಗಿ ತುಂಬಾ ಸುಲಭವಾಗಿ ಮಾಡಬಹುದು ಇದನ್ನು.
ಈ ಪಡ್ಡು ಸವಿಯುತ್ತಿದ್ದರೆ ಒನ್ ಮೋರ್ ಒನ್ ಮೋರ್ ಅಂತ 7-8 ಪಡ್ಡು ಹೊಟ್ಟೆಯೊಳಗಡೆ ಸೇರುವುದೇ ಗೊತ್ತಾಗುವುದೇ ಇಲ್ಲ, ಬನ್ನಿ ಹಲಸಿನ ಹಣ್ಣಿನ ಪಡ್ಡು ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

ಬೇಕಾಗುವ ಸಾಮಗ್ರಿ
1 ಕಪ್ ಇಡ್ಲಿ ಅಕ್ಕಿ
1/2 ಕಪ್ ತೊಳೆ ಹಲಸಿನ ಹಣ್ಣು
ಸ್ವಲ್ಪ ತೆಂಗಿನ ತುರಿ
ಸ್ವಲ್ಪ ಬೆಲ್ಲ
1-2 ಏಲಕ್ಕಿ
ಚಿಟಿಕೆಯಷ್ಟು ಸೋಡಾ
1/4 ಚಮಚ ಉಪ್ಪು
ಸ್ವಲ್ಪ ಶುಂಠಿ ಪುಡಿ (ಬೇಕಿದ್ದರೆ ಬಳಸಬಹುದು)
ತುಪ್ಪ
ಮಾಡುವ ವಿಧಾನ
- ನಂತರ ಅಕ್ಕಿಯನ್ನು 3-4 ಗಂಟೆ ನೆನೆ ಹಾಕಿರಬೇಕು.
- ಬಳಿಕ ನೀವು ಹಲಸಿನ ತೊಳೆ ಚಿಕ್ಕದಾಗಿ ಕತ್ತಿಸಿದರೆ ಒಳ್ಳೆಯದು.
- ನಂತರ ನೀರು ಸೋಸಿ ಅದಕ್ಕೆ ಬೆಲ್ಲ, ಹಲಸಿನ ಹಣ್ಣು, ಏಲಕ್ಕಿ ಹಾಕಿ ರುಬ್ಬಿಕೊಳ್ಳಿ
- ನಂತರ ಅದನ್ನು ಒಂದು ಬೌಲ್‌ಗೆ ಹಾಕಿ, ಅಡುಗೆ ಸೋಡಾ, ಉಪ್ಪು ಹಾಕಿ ತೆಂಗಿನ ತುರಿ, ಶುಂಠಿ ಪುಡಿ ಮಿಕ್ಸ್ ಮಾಡಿ.
- ಈಗ ನೀವು ಪಡ್ಡು ಪಾತ್ರೆಗೆ ತುಪ್ಪ ಸವರಿ, ಬಳಿಕ ಮೊದಲಿಗೆ ಒಂದು ಹಾಕಿ ನೋಡಿ, ಚೆನ್ನಾಗಿ ಏಳುತ್ತಿಲ್ಲ ಎಂದಾದರೆ ಅಕ್ಕಿ ಪುಡಿ ಸೇರಿಸಿ ಮಿಕ್ಸ್ ಮಾಡಿ.
- ಈಗ ಪಡ್ಡು ಪಾತ್ರೆಯ ಎಲ್ಲಾ ಗುಂಡಿಗೆ ತುಪ್ಪ ಸವರಿ ಪಾತ್ರ ಪಡ್ಡು ಹಿಟ್ಟು ಹಾಕಿ ಸಾಧಾರಣ ಉರಿಯಲ್ಲಿ ಬೇಯಿಸಿ 5-6 ನಿಮಿಷವಾದ ಮೇಲೆ ತಿರುಗಿಸಿ.
- ನಂತರ ಟೇಸ್ಟ್ ಮಾಡಿ ನೋಡಿದರೆ ಸೂಪರ್ ರುಚಿಯಾಗಿರುತ್ತದೆ.
ಇನ್ನು ನೀವು ಹಲಸಿನ ಹಣ್ಣು ಜೊತೆ ಬಾಳೆ ಹಣ್ಣು ಮಿಕ್ಸ್ ಮಾಡಿ ಪಡ್ಡು ತಯಾರಿಸಬಹುದು ಅದರ ರುಚಿ ಇನ್ನೂ ಸೂಪರ್ ಅನಿಸುವುದು, ಹೌದು ಬಾಳೆಹಣ್ಣು-ಹಲಸಿನ ಹಣ್ಣಿನ ಪಡ್ಡು ರೆಸಿಪಿ ಮಾಡುವುದು ಹೇಗೆ ಎಂದು ನೋಡೋಣ:
ಬೇಕಾಗುವ ಸಾಮಗ್ರಿ
ಒಂದೂವರೆ ಕಪ್ ಅಕ್ಕಿ
ಬಾಳೆಹಣ್ಣು 1 (ಪಚ್ಚೆ ಬಾಳೆಹಣ್ಣು)
ಹಲಸಿನ ಹಣ್ಣು 5-6
ಏಲಕ್ಕಿ
ಬೆಲ್ಲ
ತೆಂಗಿನ ತುರಿ
ಸ್ವಲ್ಪ ಶುಂಠಿ ಪುಡಿ
ತುಪ್ಪ
ರುಚಿಗೆ ತಕ್ಕ ಉಪ್ಪು
ಮಾಡುವ ವಿಧಾನ
- ನೀವು ಅಕ್ಕಿಯನ್ನು 3-4 ತಾಸು ನೆನೆ ಹಾಕಿರಬೇಕು
- ನಂತರ ನೀರನ್ನು ಸೋಸಿ ಅಕ್ಕಿಗೆ ಬಾಳೆಹಣ್ಣು, ಹಲಸಿನ ಹಣ್ಣು, ಏಲಕ್ಕಿ, ಬೆಲ್ಲ, ಹಾಕಿ ನುಣ್ಣನೆ ರುಬ್ಬಿ
- ನಂತರ ಹಿಟ್ಟಿಗೆ ತೆಂಗಿನ ತುರಿ ಅಥವಾ ತೆಂಗಿನಕಾಯಿಯನ್ನು ಚಿಕ್ಕ-ಚಿಕ್ಕ ಹೋಳಾಗಿ ಮಾಡಿ ಹಾಕಬಹುದು, ಚಿಕ್ಕ-ಚಿಕ್ಕ ಹೋಳಾಗಿದ್ದರೆ ತಿನ್ನುವ ಬಾಯಿಗೆ ಸಿಕ್ಕುತ್ತೆ, ರುಚಿ ಸೂಪರ್ ಅನಿಸುತ್ತೆ. ಶುಂಠಿ, ಸ್ವಲ್ಪ ಉಪ್ಪು, ಅಡುಗೆ ಸೋಡಾ ಸೇರಿಸಿ ಮಿಕ್ಸ್ ಮಾಡಿ
- ನಂತರ ಪಡ್ಡು ಪಾತ್ರೆಗೆ ತುಪ್ಪ ಸವರಿ ಹಾಕಿ ಅದರಲ್ಲಿ ಹಿಟ್ಟು ಹಾಕಿ ಅದರ ಎರಡೂ ಬದಿ ಬೇಯಿಸಿದರೆ ಸೂಪರ್ ರುಚಿಯ ಪಡ್ಡು ಸವಿಯಲು ರೆಡಿ.
Comments
[ of 5 - Users]



Click it and Unblock the Notifications