Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬ್ರೇಕ್‌ಫಾಸ್ಟ್ ರೆಸಿಪಿ: ದಿಡೀರ್ ಅಂತ ಮಾಡಬಹುದು ಈ ಪಡ್ಡು ರೆಸಿಪಿ
ಪ್ರತಿದಿನ ಬೆಳಗ್ಗೆ ಬ್ರೇಕ್ ಫಾಸ್ಟ್ ಗೆ ದೋಸೆ ಇಡ್ಲಿ ಮಾಡಿ ಬೇಜಾರಾಗಿದೆಯಾ? ಇವತ್ತು ಎದ್ದಿದ್ದು ತಡವಾಯಿತು ಬೇಗ ಮಕ್ಕಳ ಲಂಚ್ ಬಾಕ್ಸ್ ಗೆ ಏನಾದ್ರೂ ರೆಡಿ ಮಾಡಬೇಕು ಏನು ಮಾಡಲಿ ಅಂತ ಯೋಚನೆನಾ? ಅಥವಾ ನೀವು ಬ್ಯಾಚುಲರ್ ಆಗಿದ್ದು, ದಿಡೀರ್ ಆಗಿ ಬ್ರೇಕ್ ಫಾಸ್ಟ್ ರೆಡಿ ಮಾಡ್ಕೋಬೇಕಾ? ಹಾಗಾದ್ರೆ ಟೆನ್ಶನ್ ಬೇಡ.
ನಾವು ಈಗ ಹೇಳುವ ಒಂದು ರೆಸಿಪಿ ಟ್ರೈ ಮಾಡಿ. ಕೇವಲ ಹತ್ತು ನಿಮಿಷದಲ್ಲಿ ರೆಡಿಯಾಗುತ್ತೆ. ಅಷ್ಟೇ ರುಚಿ ಕೂಡ. ಆರೋಗ್ಯಕ್ಕೂ ಒಳ್ಳೆಯದು. ಅದೇ ದಿಡೀರ್ ಅಂತ ಮಾಡುವ ಪಡ್ಡು. ಹಾಗಾದ್ರೆ ದಿಡೀರ್ ಅಂತ ಮಾಡುವ ಈ ರೆಸಿಪಿ ಬಗ್ಗೆ ಈಗ ತಿಳಿದುಕೊಳ್ಳೋಣ.

ಪಡ್ಡು ಮಾಡಲು ಬೇಕಾಗುವ ಸಾಮಗ್ರಿಗಳು!
ಮದ್ಯಮ ಗಾತ್ರದ ರವಾ - ಒಂದು ದೊಡ್ಡ ಕಪ್
ಮೊಸರು - ಒಂದು ಕಪ್
ಈರುಳ್ಳಿ - ಒಂದು ದೊಡ್ಡ ಗಾತ್ರದ್ದು (ಚಿಕ್ಕದಾಗಿ ಹೆಚ್ಚಿಕೊಳ್ಳಿ)
ತರಕಾರಿ - ನಿಮಗೆ ಬೇಕಿರುವ ಯಾವುದೇ ತರಕಾರಿ ಬಳಸಬಹುದು.
ಅಡುಗೆ ಸೋಡಾ - ಚಿಟಿಕೆ
ಉಪ್ಪು - ರುಚಿಗೆ ತಕ್ಕಷ್ಟು
ಎಣ್ಣೆ - ನಾಲ್ಕರಿಂದ ಐದು ಸ್ಪೂನ್
ಕಾಯಿತುರಿ - ಕಾಲು ಕಪ್
ಉದ್ದಿನ ಬೇಳೆ - ಒಂದು ದೊಡ್ಡ ಚಮಚ
ಸಾಸಿವೆ - ಅರ್ಧ ಚಮಚ
ಜೀರಿಗೆ - ಅರ್ಧ ಚಮಚ
ಕೊತ್ತಂಬರಿ ಸೊಪ್ಪು - ಸ್ವಲ್ಪ
ಮಾಡುವ ವಿಧಾನ
- ಮೊದಲಿಗೆ ಒಂದು ಪಾತ್ರೆಯಲ್ಲಿ ಒಂದು ಕಪ್ ರವಾ ತೆಗೆದುಕೊಂಡು ಅದಕ್ಕೆ ಒಂದು ಕಪ್ ಮೊಸರು ಹಾಕಿ.(ನಿಮ್ಮ ಅಳತೆಗೆ ತಕ್ಕಂತೆ ರವೆ ಮತ್ತು ಮೊಸರನ್ನು ಸೇರಿಸಿ ಜಾಸ್ತಿ ಜನ ಇದ್ದರೆ ಜಾಸ್ತಿ ಕ್ವಾಂಟಿಟಿ ಬಳಸಿ) ನಂತರ ಒಂದು ಕಪ್ ನೀರು ಸೇರಿಸಿ. ಈಗ ಚಿಟಿಕೆ ಸೋಡಾ ಸೇರಿಸಿ ಚೆನ್ನಾಗಿ ಕಲಸಿ. ಬಳಿಕ 10 ನಿಮಿಷ ಮುಚ್ಚಿ ಇಡಬೇಕು. ಆಗ ರವೆ ಚೆನ್ನಾಗಿ ನೆನೆಯುತ್ತದೆ.
- ಈಗ ಒಂದು ಬಾಣಲೆಯನ್ನು ಬಿಸಿ ಮಾಡಲು ಇಟ್ಟು ಅದಕ್ಕೆ ಎಣ್ಣೆ ಹಾಕಿ. ಎಣ್ಣೆ ಬಿಸಿ ಆದನಂತರ ಉದ್ದಿನ ಬೇಳೆ, ಜೀರಿಗೆ, ಸಾಸಿವೆ ಹಾಕಿ ಒಗ್ಗರಣೆ ಸಿಡಿಸಿ.
- ಬಳಿಕ ಹೆಚ್ಚಿಟ್ಟ ಈರುಳ್ಳಿ , ಹಸಿಮೆಣಸು ಸೇರಿಸಿ ಬಾಡಿಸಿಕೊಳ್ಳಬೇಕು. ಇದನ್ನು ರೆಡಿಮಾಡಿದ ಮಿಶ್ರಣಕ್ಕೆ ಸೇರಿಸಿಕೊಳ್ಳಬೇಕು. ಇದಕ್ಕೆ ನಿಮ್ಮಿಷ್ಟದ ತರಕಾರಿಗಳನ್ನು ಸಣ್ಣಗೆ ಹೆಚ್ಚಿ ಸೇರಿಸಿ ಕೊಳ್ಳಬೇಕು .ಬಳಿಕ ತುರಿದಿಟ್ಟ ಕಾಯಿ ತುರಿಯನ್ನು ಸೇರಿಸಿಕೊಳ್ಳಿ. ಕಾಯಿತುರಿ ಹಾಕುವುದರಿಂದ ಪಡ್ಡಿನ ಟೇಸ್ಟ್ ತುಂಬಾ ಚೆನ್ನಾಗಿರುತ್ತೆ. ನಂತರ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಕೊಳ್ಳಬೇಕು.
- ಹಿಟ್ಟು ಗಟ್ಟಿ ಎನಿಸಿದರೆ ಸ್ವಲ್ಪ ನೀರನ್ನು ಹಾಕಬಹುದು.
- ಈಗ ಪಡ್ಡು ಮಾಡುವ ಕಾವಲಿಯನ್ನು ಬಿಸಿಗಿಟ್ಟು, ಕಾವಲಿ ಬಿಸಿಯಾದಾಗ ಅದಕ್ಕೆ ಎಣ್ಣೆ ಸವರಿ ಹಿಟ್ಟನ್ನು ಹಾಕಬೇಕು. ಮೇಲಿಂದ ಸ್ವಲ್ಪ ಎಣ್ಣೆ ಹಾಕಿ ಬೇಯಿಸಿಕೊಳ್ಳಬೇಕು. ಮದ್ಯಮ ಉರಿಯಲ್ಲಿ ಎರಡು ಕಡೆ ಚೆನ್ನಾಗಿ ಬೇಯಿಸಿ ತೆಗೆಯಬೇಕು . ಬಿಸಿ ಇರುವಾಗಲೇ ನಿಮ್ಮಿಷ್ಟದ ಚಟ್ನಿ ಯೊಂದಿಗೆ ಸವಿಯಿರಿ. ದಿಡೀರ್ ಅಂತ ಮಾಡಿಕೊಳ್ಳಬಹುದಾದ ಬ್ರೇಕ್ ಫಾಸ್ಟ್ ಇದು ನೀವು ಟ್ರೈ ಮಾಡಿ.



Click it and Unblock the Notifications