Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಕಡಿಮೆ ಎಣ್ಣೆ, ಹೆಚ್ಚು ರುಚಿ.. ಓಟ್ಸ್ ಬಳಸಿ ಮಾಡಿ ಗರಿಗರಿಯಾದ ದೋಸೆ! ತೂಕವೂ ಇಳಿಯುತ್ತೆ
ಕಡಿಮೆ ಎಣ್ಣೆ, ಹೆಚ್ಚು ರುಚಿ.. ಹಿಟ್ಟು ಹುದುಗಿಸುವ ಅವಶ್ಯಕತೆಯೇ ಇಲ್ಲ! ಕೇವಲ 15 ನಿಮಿಷದಲ್ಲಿ ಮಾಡಿ ಗರಿಗರಿಯಾದ ಓಟ್ಸ್ ದೋಸೆ (Oats Dosa). ಹೌದು, ಇಂದಿನ ವೇಗದ ಜೀವನಶೈಲಿಯಲ್ಲಿ ಬೆಳಗಿನ ಉಪಾಹಾರ ತಯಾರಿಸುವುದು ಹಲವರಿಗೆ ದೊಡ್ಡ ಸವಾಲಾಗಿದೆ. ಸಮಯದ ಕೊರತೆಯಿಂದಾಗಿ ಅನೇಕರು ಆರೋಗ್ಯಕರ ಉಪಾಹಾರವನ್ನು ತ್ಯಜಿಸಿ, ಜಂಕ್ ಫುಡ್‌ಗಳತ್ತ ವಾಲುತ್ತಾರೆ.
ಆದರೆ, ಆರೋಗ್ಯ ಮತ್ತು ರುಚಿ ಎರಡನ್ನೂ ಬಯಸುವವರಿಗೆ ಓಟ್ಸ್ ಹಾಗೂ ಅಕ್ಕಿ ಹಿಟ್ಟಿನ ದೋಸೆ (Rice Flour Oats Dosa) ಉತ್ತಮ ಪರಿಹಾರ. ಕೇವಲ 15 ನಿಮಿಷಗಳಲ್ಲಿ ಸಿದ್ಧವಾಗುವ ಇದಕ್ಕೆ ಹಿಟ್ಟು ಹುದುಗಿಸುವ (Fermentation) ಅಗತ್ಯವಿಲ್ಲ. ಕಡಿಮೆ ಎಣ್ಣೆಯಲ್ಲಿ ತಯಾರಾಗುವ ಈ ದೋಸೆ ನಿಮ್ಮನ್ನು ದಿನವಿಡೀ ಚೈತನ್ಯದಿಂದ ಇಡಲು ಸಹಕಾರಿ.
ಈ ತ್ವರಿತ ಓಟ್ಸ್ ದೋಸೆಯು ರುಚಿಕರವಾಗಿದ್ದು, ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ. ಇದರ ಪ್ರಮುಖ ವಿಶೇಷತೆಗಳು, ಓಟ್ಸ್-ಅಕ್ಕಿ ಹಿಟ್ಟು ದೋಸೆಗೆ ಬೇಕಾಗುವ ಪದಾರ್ಥಗಳು ಮತ್ತು ತಯಾರಿಸುವ ವಿಧಾನ (Rice Flour Oats Dosa Recipe) ಇಲ್ಲಿದೆ.
ಹಸಿವಾಗದಂತೆ ತಡೆಯುತ್ತೆ
ಓಟ್ಸ್‌ನಲ್ಲಿರುವ ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳು ಮತ್ತು ನಾರಿನಂಶ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿರಿಸಿ, ದೀರ್ಘಕಾಲ ಹಸಿವಾಗದಂತೆ ತಡೆಯುತ್ತದೆ.
ಉತ್ತಮ ಜೀರ್ಣಕ್ರಿಯೆ
ಇದು ಹೊಟ್ಟೆಗೆ ಹಗುರವಾಗಿದ್ದು, ಸುಲಭವಾಗಿ ಜೀರ್ಣವಾಗುತ್ತದೆ. ಹಾಗಾಗಿ, ಇದು ಬೆಳಗಿನ ಉಪಾಹಾರ ಮಾತ್ರವಲ್ಲದೆ, ರಾತ್ರಿ ಲಘು ಭೋಜನಕ್ಕೂ ಸೂಕ್ತ.
ತೂಕ ಇಳಿಕೆಗೆ ಸಹಕಾರಿ
ಕಡಿಮೆ ಎಣ್ಣೆ ಬಳಸಿ ತಯಾರಿಸುವುದರಿಂದ, ತೂಕ ಇಳಿಕೆಯ ಗುರಿಯುಳ್ಳವರಿಗೆ ಇದು ಅತ್ಯುತ್ತಮ ಡಯಟ್ ಆಹಾರವಾಗಿದೆ.
ಓಟ್ಸ್-ಅಕ್ಕಿ ಹಿಟ್ಟು ದೋಸೆಗೆ ಬೇಕಾಗುವ ಪದಾರ್ಥಗಳು
• ಅಕ್ಕಿ ಹಿಟ್ಟು
• ಓಟ್ಸ್ (ತರಿತರಿಯಾಗಿ ಪುಡಿ ಮಾಡಿದ್ದು)
• ಮೊಸರು
• ಈರುಳ್ಳಿ
• ಹಸಿ ಮೆಣಸಿನಕಾಯಿ
• ಜೀರಿಗೆ
• ಕೊತ್ತಂಬರಿ ಸೊಪ್ಪು
• ರುಚಿಗೆ ತಕ್ಕಷ್ಟು ಉಪ್ಪು
• ನೀರು
• ಎಣ್ಣೆ (ದೋಸೆ ಸುಡಲು)
ಓಟ್ಸ್-ಅಕ್ಕಿ ಹಿಟ್ಟು ದೋಸೆ ತಯಾರಿಸುವ ವಿಧಾನ
- ಒಂದು ದೊಡ್ಡ ಪಾತ್ರೆಯಲ್ಲಿ ಅಕ್ಕಿ ಹಿಟ್ಟು, ಪುಡಿ ಮಾಡಿದ ಓಟ್ಸ್ ಮತ್ತು ಮೊಸರು ಸೇರಿಸಿ ಚೆನ್ನಾಗಿ ಬೆರೆಸಿ.
- ರುಚಿಗೆ ತಕ್ಕಷ್ಟು ಉಪ್ಪು ಹಾಗೂ ನೀರು ಹಾಕಿ, ರವಾ ದೋಸೆ ಹದಕ್ಕೆ ತೆಳು ಮಿಶ್ರಣ ಸಿದ್ಧಪಡಿಸಿ. ಹಿಟ್ಟು ತೆಳುವಾಗುತ್ತಾ ಹೋದಂತೆ ದೋಸೆ ಗರಿಗರಿಯಾಗಿ ಮೂಡಿಬರುತ್ತದೆ ಎಂಬುದನ್ನು ಗಮನಿಸಿ.
- ಈಗ ಸಿದ್ಧಪಡಿಸಿದ ಹಿಟ್ಟಿಗೆ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ, ಜೀರಿಗೆ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ ಚೆನ್ನಾಗಿ ಬೆರೆಸಿ.
- ಈ ಮಿಶ್ರಣವನ್ನು 10 ರಿಂದ 15 ನಿಮಿಷಗಳ ಕಾಲ ನೆನೆಯಲು ಬಿಡಿ. ಇದರಿಂದ ಓಟ್ಸ್ ನೀರನ್ನು ಹೀರಿಕೊಂಡು ಹಿಟ್ಟು ಸರಿಯಾದ ಹದಕ್ಕೆ ಬರುತ್ತದೆ.
- ಈಗ ಒಂದು ನಾನ್-ಸ್ಟಿಕ್ ತವಾವನ್ನು ಬಿಸಿ ಮಾಡಿ, ಅದಕ್ಕೆ ಸ್ವಲ್ಪ ಎಣ್ಣೆ ಸವರಿ. ಸಿದ್ಧಪಡಿಸಿದ ಹಿಟ್ಟನ್ನು ತವಾವಿನ ಅಂಚಿನಿಂದ ಸುರಿಯುತ್ತಾ ಮಧ್ಯಭಾಗಕ್ಕೆ ಹರಡಿ (ಇದನ್ನು ಸೌಟಿನಿಂದ ಹರಡುವ ಅಗತ್ಯವಿಲ್ಲ).
- ಮಧ್ಯಮ ಉರಿಯಲ್ಲಿ ದೋಸೆಯ ಅಂಚುಗಳು ಕೆಂಪಾಗುವವರೆಗೆ ಚೆನ್ನಾಗಿ ಬೇಯಿಸಿ.
- ದೋಸೆಯ ಅಂಚುಗಳು ತವಾವಿನಿಂದ ತಾವಾಗಿಯೇ ಬಿಟ್ಟುಕೊಳ್ಳಲು ಆರಂಭಿಸಿದಾಗ, ಅದನ್ನು ಮಗುಚಿ ಹಾಕಿ ಮತ್ತೊಂದು ಬದಿಯೂ ಸ್ವಲ್ಪ ಸಮಯ ಬೇಯಿಸಿ.
- ಇಷ್ಟು ಮಾಡಿದರೆ ಸಾಕು, ಈಗ ಬಿಸಿಬಿಸಿಯಾದ ಮತ್ತು ಗರಿಗರಿಯಾದ ಓಟ್ಸ್-ಅಕ್ಕಿ ಹಿಟ್ಟಿನ ದೋಸೆ ಸವಿಯಲು ಸಿದ್ಧ.
ಯಾವುದರ ಜೊತೆ ಸವಿಯಬಹುದು?
ಈ ತ್ವರಿತ ಓಟ್ಸ್ ದೋಸೆಯು ಕಾಯಿ ಚಟ್ನಿ (Coconut Chutney), ಕೆಂಪು ಚಟ್ನಿ ಅಥವಾ ಸಾಂಬಾರ್ ಜೊತೆ ಅತ್ಯಂತ ರುಚಿಕರವಾಗಿರುತ್ತದೆ. ಕಚೇರಿಗೆ ಹೋಗುವವರು ಅಥವಾ ಶಾಲಾ ಮಕ್ಕಳಿಗೆ ಲಂಚ್ ಬಾಕ್ಸ್‌ನಲ್ಲಿ ನೀಡಲು ಸಹ ಇದು ಅತ್ಯುತ್ತಮ ಆಯ್ಕೆಯಾಗಿದೆ.
ಪೌಷ್ಟಿಕಾಂಶಯುಕ್ತ ತಿಂಡಿಯು ಆರೋಗ್ಯಕರ ಜೀವನಶೈಲಿಯ ಅಡಿಪಾಯ. ಇನ್ಮುಂದೆ ಸಮಯದ ಕೊರತೆಯ ನೆಪದಲ್ಲಿ ಬೆಳಗಿನ ಉಪಾಹಾರವನ್ನು (Healthy Breakfast) ಎಂದಿಗೂ ತಪ್ಪಿಸಿಕೊಳ್ಳಬೇಡಿ. ಈ ಸರಳ ಓಟ್ಸ್ ದೋಸೆ ಮನೆಯಲ್ಲಿ ಸುಲಭವಾಗಿ ತಯಾರಿಸಿ, ದಿನವಿಡೀ ಚೈತನ್ಯದಿಂದ ಮತ್ತು ಲವಲವಿಕೆಯಿಂದ ಇರಿ.



Click it and Unblock the Notifications
