Latest Updates
-
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ -
ಮಾರ್ಚ್ನಲ್ಲಿ ಕಾಳಸರ್ಪ ಯೋಗ: ಈ ರಾಶಿಯವರಿಗೆ ಯೋಗದಿಂದ ಇದೆ ದೊಡ್ಡ ಲಾಭ! -
ದೇಹದಲ್ಲಿ ರಕ್ತ ಕಡಿಮೆ ಆಗಿದ್ರೆ ಈ ಎಳ್ಳುಂಡೆ ಮಾಡಿ: ತಿಂಗಳ ಕಾಲ ಇಟ್ಟು ಸವಿಯಬಹುದು! -
ಕರ್ನಾಟಕ ಬಜೆಟ್ 2026: ಆರೋಗ್ಯ ವಲಯಕ್ಕೆ ಬಂಪರ್, ಹೊಸ ಯೋಜನೆಗಳೇನು ನೋಡಿ! -
ನಾಳೆ ಸೂರ್ಯ-ಬುಧ ಸಂಯೋಗ: ಬುಧಾದಿತ್ಯ ಯೋಗದಿಂದ ಈ ರಾಶಿಯವರ ಬದುಕಲ್ಲಿ ಬೆಳಕು! -
ತೂಕ ಇಳಿಸಲು ಪೇಪರ್ ಅಷ್ಟು ತೆಳುವಾದ ರಾಗಿ ದೋಸೆ ಮಾಡಿ! -
ಜೀವನದಲ್ಲಿ ಮಹತ್ವದ ಬದಲಾವಣೆ, ವೈವಾಹಿಕ ಯೋಗ! ಕೊಂಚ ಒತ್ತಡ, ತಾಳ್ಮೆ ಇರಲಿ -
March 06 Horoscope: ಸಾಲ ನೀಡುವಾಗ ಹತ್ತು ಬಾರಿ ಆಲೋಚಿಸಿ! -
ಮೈದಾ, ಮೊಟ್ಟೆ ಎರಡೂ ಬೇಡ! ಈ ಹೊಸ ರುಚಿಯ ಕೇಕ್ ಮಾಡಿ ನೋಡಿ.. ಶುಗರ್ ಇರುವವರು ತಿನ್ನಬಹುದು -
ಉದ್ದು ಬೇಡ 1 ಕಪ್ ರವೆ ಇದ್ರೆ ಥಟ್ ಅಂತ ವಡೆ ಮಾಡಿಕೊಳ್ಳಿ: ಬ್ರೇಕ್ಫಾಸ್ಟ್ಗೆ ಇದು ಬೆಸ್ಟ್ ರೆಸಿಪಿ!
ನೆನೆಸುವಂತಿಲ್ಲ, ರುಬ್ಬಂಗಿಲ್ಲ.. ರಾತ್ರಿಯಿಡೀ ಕಾಯುವ ಅಗತ್ಯವಿಲ್ಲ! ಮಲ್ಲಿಗೆಯಂತಹ ಮೃದು ಇಡ್ಲಿ.. ಬ್ಯಾಟರ್ ಟ್ರಿಕ್ ಇದು
ಹಿಟ್ಟು ಹುದುಗಿಸುವ ಅವಶ್ಯಕತೆಯೇ ಇಲ್ಲ! ಕೇವಲ 15 ನಿಮಿಷದಲ್ಲಿ ಮಲ್ಲಿಗೆಯಂತಹ ಸಾಫ್ಟ್ ಇಡ್ಲಿ ರೆಡಿ. ಹೌದು, ದಕ್ಷಿಣ ಭಾರತದ ಜನಪ್ರಿಯ ಮತ್ತು ಆರೋಗ್ಯಕರ ತಿಂಡಿ ಅಂದರೆ ಇಡ್ಲಿ (Idli Recipe). ಮೃದುವಾದ, ಬಿಸಿಬಿಸಿ ಇಡ್ಲಿಯನ್ನು ಕಾಯಿ ಚಟ್ನಿ ಮತ್ತು ಸಾಂಬಾರ್‌ನೊಂದಿಗೆ ಸವಿಯುವ ಮಜವೇ ಬೇರೆ. ಆದರೆ, ಸಾಂಪ್ರದಾಯಿಕ ಇಡ್ಲಿ ತಯಾರಿಕೆಗೆ ಸಮಯ ಹೆಚ್ಚು. ಅಕ್ಕಿ-ಬೇಳೆ ನೆನೆಸಿ, ರುಬ್ಬಿ, ರಾತ್ರಿಯಿಡೀ ಹಿಟ್ಟು ಹುದುಗಲು (Fermentation) ಕಾಯುವುದು ಇಂದಿನ ಜೀವನಶೈಲಿಗೆ ಸವಾಲು.
ಒತ್ತಡ ಅಥವಾ ಧಾವಂತದ ದಿನಗಳಲ್ಲಿ, ಅನಿರೀಕ್ಷಿತ ಅತಿಥಿಗಳು ಬಂದಾಗ ಈ ತ್ವರಿತ ಇಡ್ಲಿ ರೆಸಿಪಿ (Instant Idli Batter Recipe) ಸಂಜೀವಿನಿಯೇ ಸರಿ. ನೆನೆಸುವ ಅಥವಾ ಹುದುಗಿಸುವ ಅಗತ್ಯವಿಲ್ಲದೆ, ಕೆಲವೇ ನಿಮಿಷಗಳಲ್ಲಿ ಹೋಟೆಲ್ ಶೈಲಿಯ ಮೃದು ಇಡ್ಲಿಗಳನ್ನು ತಯಾರಿಸಲು ಇದು ಸಹಕಾರಿ. ರವೆ ಮತ್ತು ಮೊಸರಿನಿಂದ ಸಿದ್ಧಪಡಿಸಬಹುದಾದ ಈ ಇಡ್ಲಿ, ಮಕ್ಕಳ ಟಿಫಿನ್ ಬಾಕ್ಸ್‌ಗೆ ಅಥವಾ ರಾತ್ರಿಯ ಹಗುರವಾದ ಊಟಕ್ಕೆ ಸೂಕ್ತ ಆಯ್ಕೆ. ಈ ಇಡ್ಲಿಗಾಗಿ ಬೇಕಾಗುವ ಸಾಮಗ್ರಿಗಳು ಮತ್ತು ತಯಾರಿಸುವ ವಿಧಾನ (Idli Batter Recipe) ಇಲ್ಲಿದೆ.

ಈ ಇಡ್ಲಿ ತಯಾರಿಸಲು ಬೇಕಾಗುವ ಸಾಮಗ್ರಿಗಳು
• ಸೂಜಿ / ಚಿರೋಟಿ ರವೆ - 1 ಕಪ್
• ಮೊಸರು - 1 ಕಪ್ (ಸ್ವಲ್ಪ ಹುಳಿ ಇದ್ದರೆ ರುಚಿ ಉತ್ತಮ)
• ನೀರು - ಬ್ಯಾಟರ್ ಹದಕ್ಕೆ
• ಈನೋ ಫ್ರೂಟ್ ಸಾಲ್ಟ್ - 1 ಚಮಚ
• ಉಪ್ಪು - ರುಚಿಗೆ ತಕ್ಕಷ್ಟು
• ಎಣ್ಣೆ - 1 ಚಮಚ
• ಸಾಸಿವೆ - ಅರ್ಧ ಚಮಚ
• ಕರಿಬೇವು ಎಲೆಗಳು - 6 ರಿಂದ 7
• ಹಸಿ ಮೆಣಸಿನಕಾಯಿ - 2 (ಸಣ್ಣಗೆ ಹೆಚ್ಚಿದ)
ಈ ಇಡ್ಲಿ ತಯಾರಿ ತಯಾರಿಸುವ ವಿಧಾನ
- ಮೊದಲಿಗೆ, ಒಂದು ಬಾಣಲೆಗೆ ಒಂದು ಚಮಚ ಎಣ್ಣೆ ಹಾಕಿ ಕಾಯಿಸಿ.
- ಎಣ್ಣೆ ಬಿಸಿಯಾದ ನಂತರ ಸಾಸಿವೆ, ಕರಿಬೇವು, ಮತ್ತು ಹಸಿ ಮೆಣಸಿನಕಾಯಿ ಚೂರುಗಳನ್ನು ಹಾಕಿ ಸಿಡಿಸಿ.
- ಬಳಿಕ ಒಂದು ಕಪ್ ರವೆಯನ್ನು ಸೇರಿಸಿ, ಸಣ್ಣ ಉರಿಯಲ್ಲಿ 2-3 ನಿಮಿಷಗಳ ಕಾಲ ಬಣ್ಣ ಬದಲಾಗದಂತೆ ಹುರಿಯಿರಿ. ಹಸಿ ವಾಸನೆ ಹೋಗಿ ಸುವಾಸನೆ ಬಂದ ನಂತರ ತಣ್ಣಗಾಗಲು ಬಿಡಿ.
- ಸಂಪೂರ್ಣ ತಣ್ಣಗಾದ ಹುರಿದ ರವೆಯನ್ನು ಅಗಲವಾದ ಪಾತ್ರೆಗೆ ಹಾಕಿ. ಒಂದು ಕಪ್ ಮೊಸರು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
- ಈಗ ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ, ಗಟ್ಟಿಯಾದ ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿ. ಈ ಮಿಶ್ರಣವನ್ನು 15 ನಿಮಿಷಗಳ ಕಾಲ ಮುಚ್ಚಿಡಿ. ರವೆ ನೀರನ್ನು ಹೀರಿಕೊಂಡು ಉಬ್ಬಲು ಇದು ಕಡ್ಡಾಯ.
- 15 ನಿಮಿಷದ ನಂತರ ಹಿಟ್ಟನ್ನು ಪರೀಕ್ಷಿಸಿ. ಗಟ್ಟಿಯಿದ್ದರೆ ನೀರು ಸೇರಿಸಿ ಸರಿಪಡಿಸಿ.
- ಈಗ ಇಡ್ಲಿ ಪಾತ್ರೆಯಲ್ಲಿ ನೀರನ್ನು ಕಾಯಲು ಇಡಿ. ಇಡ್ಲಿ ಬೇಯಿಸುವ ಮೊದಲು, ಹಿಟ್ಟಿಗೆ 1 ಚಮಚ 'ಈನೋ' ಪುಡಿ ಸೇರಿಸಿ. ಇದರ ಮೇಲೆ ಸ್ವಲ್ಪ ನೀರು ಹಾಕಿದಾಗ ನೊರೆ ಬರುತ್ತದೆ. ಆಗ ಲಘುವಾಗಿ ಮಿಶ್ರಣ ಮಾಡಿ.
- ಇಡ್ಲಿ ಮೃದುವಾಗಲು ಇದು ಪ್ರಮುಖ ಹಂತ. ನೆನಪಿಡಿ ಈನೋ ಸೇರಿಸಿದ ಮೇಲೆ ಅತಿಯಾಗಿ ಕಲಸಬೇಡಿ.
- ಇಡ್ಲಿ ತಟ್ಟೆಗಳಿಗೆ ಸ್ವಲ್ಪ ಎಣ್ಣೆ ಸವರಿ, ಸಿದ್ಧಪಡಿಸಿದ ಹಿಟ್ಟನ್ನು ತುಂಬಿಸಿ. ಇಡ್ಲಿ ಪಾತ್ರೆಯಲ್ಲಿ 10 ರಿಂದ 12 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಹಬೆಯಲ್ಲಿ ಬೇಯಿಸಿ.
- ಇಡ್ಲಿ ಬೆಂದ ನಂತರ, ಬಿಸಿ ಹಬೆ ಕಡಿಮೆಯಾದ ಮೇಲೆ ಇಡ್ಲಿಗಳನ್ನು ಹೊರತೆಗೆಯಿರಿ.
ಈ ವಿಧಾನದಲ್ಲಿ ತಯಾರಿಸಿದ ಇಡ್ಲಿಗಳು ಸಾಮಾನ್ಯ ಇಡ್ಲಿಗಿಂತಲೂ ಹೆಚ್ಚು ಮೃದುವಾಗಿರುತ್ತವೆ. ಬಿಸಿಬಿಸಿ ಇಡ್ಲಿಗಳನ್ನು ಕಾಯಿ ಚಟ್ನಿ, ಸಾಂಬಾರ್‌ನೊಂದಿಗೆ ಸವಿಯಿರಿ. ಇನ್ನು ಮುಂದೆ ಇಡ್ಲಿಗಾಗಿ ರಾತ್ರಿಯಿಡೀ ಕಾಯುವ ಅಗತ್ಯವಿಲ್ಲ. ಈ ಸರಳ ವಿಧಾನ ಬಳಸಿ, ಕೆಲವೇ ನಿಮಿಷಗಳಲ್ಲಿ ಆರೋಗ್ಯಕರ ಮತ್ತು ರುಚಿಕರ ತಿಂಡಿಯನ್ನು ಸಿದ್ಧಪಡಿಸಿ.



Click it and Unblock the Notifications