For Quick Alerts
ALLOW NOTIFICATIONS  
For Daily Alerts

ಸ್ವಾತಂತ್ರ್ಯದ ಅಮೃತ ಮಹೋತ್ಸಕ್ಕೆ ಸ್ಪೆಷಲ್ ರೆಸಿಪಿ: ತಿರಂಗಾ ಹಲ್ವಾ

Posted By:
|

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಡಗರ ಸಂಭ್ರಮದಲ್ಲಿ ನಾವೆಲ್ಲಾ ಇದ್ದೇವೆ, ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯ ಮತ್ತೊಂದು ವಿಶೇಷತೆ ಎಂದರೆ ಹರ್ ಘರ್‌ ತಿರಂಗಾ... ಮನೆ-ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸಿ ಸಂಭ್ರಮಿಸಲಾಗುತ್ತಿದೆ, ಈ ವಿಶೇಷ ದಿನದಂದು ವಿಶೇಷ ಅಡುಗೆ ಮಾಡದಿದ್ದರೆ ಹೇಗೆ ಅಲ್ವಾ? ನೀವು ಈ ದಿನ ತಿರಂಗಾ ಬಣ್ಣದಲ್ಲಿ ಸ್ವೀಟ್, ಜ್ಯೂಸ್, ಮತ್ತಿತರ ಆಹಾರ ಮಾಡಿದರೆ ಮಕ್ಕಳಿಗೆ ಈ ದಿನ ಮತ್ತಷ್ಟು ವಿಶೇಷವಾಗಿರುತ್ತೆ.

Tri Color Halwa

ಇಲ್ಲಿ ತಿರಂಗಾ ಬಣ್ಣದಲ್ಲಿ ಹಲ್ವಾ ಮಾಡುವ ರೆಸಿಪಿ ನೀಡಲಾಗಿದೆ, ಇದು ತುಂಬಾ ಸರಳವಾಗಿದ್ದು ತಿರಂಗಾ ಹಲ್ವಾ ಮಾಡುವುದು ಹೇಗೆ ಎಂದು ನೋಡೋಣ:

Tri Color Halwa, ತಿರಂಗಾ ಹಲ್ವಾ
Tri Color Halwa, ತಿರಂಗಾ ಹಲ್ವಾ
Prep Time
30 Mins
Cook Time
30M
Total Time
30 Mins

Recipe By: Reena TK

Recipe Type: sweet

Serves: 3

Ingredients
  • ಬೇಕಾಗುವ ಸಾಮಗ್ರಿ

    3 ಚಮಚ ಶುದ್ಧ ಹಸುವಿನ ತುಪ್ಪ

    6 ಚಮಚ ಸುಜಿ ರವೆ

    3 ಚಮಚ ಸಕ್ಕರೆ

    1 ಚಮಚ ಆರೇಂಜ್ ಸ್ಕಾಷ್'

    1 ಚಮಚ ವೆನಿಲ್ಲಾ ಎಸೆನ್ಸ್

    1 ಚಮಚ ಕುಷ್ ಸಿರಪ್

    3/4 ಕಪ್‌ ಹಾಲು

    ಡ್ರೈ ಫ್ರೂಟ್ಸ್

Red Rice Kanda Poha
How to Prepare
  • ಮಾಡುವ ವಿಧಾನ

    * ಮೊದಲಿಗೆ ರವೆಯನ್ನು ತುಪ್ಪದಲ್ಲಿ ಚೆನ್ನಾಗಿ ಹುರಿದು ಇಡಿ.

    ಕೇಸರಿ ಬಣ್ಣಕ್ಕೆ

    ಸ್ವಲ್ಪ 1/4 ಲೋಟ ಹಾಲು ಹಾಕಿ ಕುದಿಸಿ, ಸಕ್ಕರೆ ಸೇರಿಸಿ, ಅದಕ್ಕೆ ಆರೇಂಜ್‌ ಸ್ಕ್ವಾಷ್‌ ಸೇರಿಸಿ, ನಂತರ 2 ಚಮಚ ರವೆ ಹಾಕಿ ಮಿಕ್ಸ್ ಮಾಡಿದರೆ ಕೇಸರಿ ಹಲ್ವಾ ರೆಡಿ.

    * ಅದೇ ರೀತಿ ಬಿಳಿ ಬಣ್ಣಕ್ಕೆ ಆರೇಂಜ್‌ ಸ್ಕ್ವಾಷ್ ಬದಲಿಗೆ ವೆನಿಲ್ಲಾ ಸೇರಿಸಿ

    * ಅದೇ ರೀತಿ ಕೇಸರಿ ಬಣ್ಣಕ್ಕೆ ಕುಷ್ ಸಿರಪ್ ಸೇರಿಸಿ ಮಾಡಿ.

    ಈಗ ಇವುಗಳನ್ನು ನೀಟಾಗಿ ತಟ್ಟೆಯಲ್ಲಿ ನಿಮಗೆ ಬೇಕಾದ ಆಕಾರಕ್ಕೆ ಹಾಕಿ ಡ್ರೈ ಫ್ರೂಟ್ಸ್‌ನಿಂದ ಅಲಂಕರಿಸಿದರೆ ಟ್ರೈ ಕಲರ್ ಹಲ್ವಾ ರೆಡಿ.

Instructions
  • ನೀವು ಹೆಚ್ಚಿನ ಜನರಿಗೆ ಮಾಡುವುದಾದರೆ ಸಾಮಗ್ರಿ ಹೆಚ್ಚು ಬಳಸಿ
Nutritional Information
[ 5 of 5 - 15 Users]
Story first published: Saturday, August 13, 2022, 20:33 [IST]
X
Desktop Bottom Promotion