Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಕ್ಕಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸೂಪ್ ರೆಸಿಪಿ
ಮಕ್ಕಳು ಶಾಲೆಗೆ ಹೋಗಿ ಮನೆಗೆ ಬರುವಾಗ ನೀವು ಅವರಿಗೆ ಯಾವ ರೀತಿಯ ತಿಂಡಿ ನೀಡಬೇಕು ಎಂದು ಯೋಚಿಸುತ್ತೀರಿ, ಚಿಪ್ಸ್, ಬೇಕರಿ ಐಟಂಗಿಂತ ನೀವು ಆರೋಗ್ಯಕರ ಆಹಾರದ ಕಡೆಗೆ ಗಮನಹರಿಸುವುದಾದರೆ ಮಕ್ಕಳ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ, ಅವರು ಆಗಾಗ ಕಾಯಿಲೆ ಬೀಳುವುದನ್ನು ತಪ್ಪಿಸಬಹುದು.
ನಾವಿಲ್ಲಿ ಕೆಲ ಸೂಪ್ ರೆಸಿಪಿ ನೀಡಿದ್ದೇವೆ, ಇದು ತುಂಬಾ ಸಿಂಪಲ್ ಸೂಪ್ ಆಗಿದೆ, ಆದರೆ ಮಕ್ಕಳ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ನೋಡಿ:

ಚಿಕನ್ ಸೂಪ್
ಬೇಕಾಗುವ ಸಾಮಗ್ರಿ
ಬೆಣ್ಣೆ
ಹಾಲು
ಚೀಸ್
ಚಿಕನ್
ಕಾಳುಮೆಣಸಿನ ಪುಡಿ
ಎಣ್ಣೆ (ತೆಂಗಿನೆಣ್ಣೆ, ಆಲೀವ್ ಎಣ್ಣೆ)
ಟೊಮೆಟೊ
ಉಪ್ಪು'
ಸ್ವಲ್ಪ ಕೊತ್ತಂಬರಿಸೊಪ್ಪು ಅಥವಾ ಸೆಲರಿ
ಮಾಡುವ ವಿಧಾನ
ನೀವು ಈ ಎಲ್ಲಾ ಸಾಮಗ್ರಿ ಕುಕ್ಕರ್ನಲ್ಲಿ ಹಾಕಿ ಒಂದೂವರೆ ಕಪ್ ನೀರು ಸೇರಿಸಿ
ಬೇಯಿಸಿ, ನಂತರ ಮ್ಯಾಶ್ ಮಾಡಿ, ಸ್ವಲ್ಪ ನಿಂಬೆರಸ ಹಿಂಡಿ ಸವಿಯಲು ನೀಡಿ.
ಈ ಸೂಪ್ ನಿಡುವುದರಿಂದ ಮಕ್ಕಳಿಗೆ ಕಾಡುವ ಶೀತ-ಕೆಮ್ಮು ಈ ಬಗೆಯ ಸಮಸ್ಯೆ
ತಡೆಗಟ್ಟಲು ತುಂಬಾನೇ ಸಹಕಾರಿ.
ವೆಜೆಟೇಬಲ್ ಸೂಪ್
ಕ್ಯಾರೆಟ್ ಸಿಪ್ಪೆ ಸುಲಿದು ಚಿಕ್ಕದಾಗಿ ಕತ್ತರಿಸಿ
ಸೋರೆಕಾಯಿ ಸಿಪ್ಪೆ ಸುಲಿದು ಚಿಕ್ಕದಾಗಿ ಕತ್ತರಿಸಿ
ಒಂದು ಆಲೂಗಡ್ಡೆ, ಸಿಪ್ಪೆ ಸುಲಿದು ಚಿಕ್ಕದಾಗಿ ಕತ್ತರಿಸಿ
ಸ್ವಲ್ಪ ಕ್ಯಾಬೇಜ್
ಸ್ವಲ್ಪ ಪಾಲಾಕ್
ಸ್ವಲ್ಪ ಉಪ್ಪು
ಇವುಗಳನ್ನು ಒಂದು ಪಾತ್ರೆಗೆ ಹಾಕಿ 2 ಕಪ್ ನೀರು ಸೇರಿಸಿ ಬೇಯಿಸಿ ಸೂಪ್ ಮಾಡಿ, ನಂತರ ಸವಿಯಲು ನೀಡಿ.
ಸಿಹಿ ಗೆಣಸಿನ ಸೂಪು
ಸಿಹಿ ಗೆಣಸು
ಗಂಜಿ
ಸ್ವಲ್ಪ ಪಾಲಾಕ್
ಚಿಟಿಕೆಯಷ್ಟು ಚಕ್ಕೆ ಪುಡಿ
ನಟ್ಮಗ್ ಪುಡಿ
ಸ್ವಲ್ಪ ಕಾಳುಮೆಣಸಿನ ಪುಡಿ
ಉಪ್ಪು
ಮೊದಲಿಗೆ ಸಿಹಿ ಗೆಣಸು ಬೇಯಿಸಿ ಸಿಪ್ಪೆ ಸುಲಿದು ನಂತರ ಬೇಯಿಸಿದ ಸಿಹಿ ಗೆಣಸು
ಜೊತೆ ಈ ಸಾಮಗ್ರಿಗಳನ್ನು ಹಾಕಿ ಬೇಯಿಸಿ ನಂತರ ಸೂಪ್ ಸರ್ವ್ ಮಾಡಿ.
ಮಕ್ಕಳಿಗೆ ಸಿಹಿ ಗೆಣಸು ನೀಡುವುದರಿಂದ ಅವರಿಗೆ ಈ ಪ್ರಯೋಜನಗಳು
ದೊರೆಯಲಿದೆ:
ವಿಟಮಿನ್ ಎ: ಇದರಲ್ಲಿ ವಿಟಮಿನ್ ಎ ಇರುವುದರಿಂದ ಕಣ್ಣುನ
ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದನ್ನು ತ್ವಚೆ ಆರೈಕೆಗೆ ತುಂಬಾ
ಒಳ್ಳೆಯದು.
ವಿಟಮಿನ್ ಸಿ: ಸಿಹಿ ಗೆಣಸಿನಲ್ಲಿ ವಿಟಮಿನ್ ಸಿ ಇರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು.
ನಾರಿನಂಶ: ಸಿಹಿ ಗೆಣಸಿನಲ್ಲಿ ನಾರಿನಂಶ ಅಧಿಕವಿರಲಿದೆ, ಇದರಿಂದ ಸಿಹಿಗೆಣಸು ಸೇವನೆಯಿಂದ ಮಲಬದ್ಧತೆ ಸಮಸ್ಯೆ ತಡೆಗಟ್ಟುತ್ತದೆ.
ಪೊಟಾಷ್ಯಿಯಂ: ಇದರಲ್ಲಿ ಪೊಟಾಷ್ಯಿಯಂ ಇರುವುದರಿಂದ ರಕ್ತ ಸಂಚಾರ ಸರಾಗವಾಗಿ ನಡೆಯಲು ಸಹಕಾರಿ.
ವಿಟಮಿನ್ ಬಿ8: ವಿಟಮಿನ್ ಬಿ6ನಿಂದ ಮೆದುಳಿನ ಆರೋಗ್ಯಕ್ಕೆ
ತುಂಬಾನೇ ಒಳ್ಳೆಯದು.
ವಿಟಮಿನ್ ಇ: ವಿಟಮಿನ್ ಇ ಇರುವುದರಿಂದ ತ್ವಚೆಗೆ ಕೂದಲಿನ
ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಫೋಲೆಟ್: ಫೋಲೆಟ್
ಮಕ್ಕಳ ಬೆಳವಣಿಗೆಗೆ ಸಹಕಾರಿ.



Click it and Unblock the Notifications