Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೆಣ್ಣೆಹಣ್ಣಿನ ಐಸ್ ಕ್ರೀಂ ಮಾಡಲು ಈ 5 ಸಾಮಗ್ರಿ ಸಾಕು, ಮಕ್ಕಳಿಗೆ ನೀಡಲು ಈ ಐಸ್‌ಕ್ರೀಮ್ ಸುರಕ್ಷಿತ
ಐಸ್‌ಕ್ರೀಮ್ ಡಬ್ಬ ಕಣ್ಣಿಗೆ ಬಿದ್ದರೆ ಸಾಕು ಮಕ್ಕಳು ಐಸ್‌ಕ್ರೀಮ್ ಬೇಕೆಂದು ಹಠ ಮಾಡುತ್ತಾರೆ, ಅದರಲ್ಲಿ ಯಾವ ಕೃತಕ ಬಣ್ಣ ಹಾಕಿರುತ್ತಾರೋ, ಯಾವ ನೀರು ಬಳಸಿರುತ್ತಾರೋ ಎಂಬ ಭಯ ನಮ್ಮಲ್ಲಿ ಇರುತ್ತದೆ, ಏಕೆಂದರೆ ಸಾಕಷ್ಟು ಬಾರಿ ಮಕ್ಕಳಿಗೆ ಐಸ್‌ಕ್ರೀಮ್ ಕೊಡಿಸಿದರೆ ಸಾಕು, ಶೀತ , ಕೆಮ್ಮು ಅಂತ ಕಾಯಿಲೆ ಬೀಳ್ತಾರೆ. ನೀವು ಆರೋಗ್ಯಕರ ಸಾಮಗ್ರಿ ಬಳಸಿ ಐಸ್‌ಕ್ರೀಮ್ ಮಾಡುವ ರೆಸಿಪಿ ಇಲ್ಲಿದೆ ನೋಡಿ:

ಬೇಕಾಗುವ ಸಾಮಗ್ರಿ
2 ಬೆಣ್ಣೆಹಣ್ಣು, ಅವಕಾಡೋ
1 ಚಮಚ ನಿಂಬೆರಸ
400 ಗ್ರಾಂ ಕಂಡೆನ್ಸಡ್ ಹಾಲು (ಒಂದು ಲೀಟರ್ ಹಾಲನ್ನು ಕುದಿಸಿ ಅರ್ಧ
ಲೀಟರ್‌ಗಿಂತ ಸ್ವಲ್ಪ ಕಡಿಮೆಯಾದಾಗ ಉರಿ ಆಫ್ ಮಾಡಿ ಆ ಹಾಲು ಬಳಸಬಹುದು. ಸಕ್ಕರೆ
ಸೇರಿಸಿ ಕುದಿಸಿ)
ಚಿಟಿಕೆಯಷ್ಟು ಉಪ್ಪು
600ml ಡಬಲ್ ಕ್ರೀಮ್ (ಸೂಪರ್ ಮಾರ್ಕೆಟ್, ಮಾಲ್‌ಗಳಲ್ಲಿ ಸಿಗುತ್ತದೆ)
ಮಾಡುವ ವಿಧಾನ:
- ಅವಕಾಡೋ ಅಥವಾ ಬೆಣ್ಣೆ ಹಣ್ಣು ತುಂಬಾನೇ ಹಣ್ಣಾಗಿರಬೇಕು, ಅದರ ಸಿಪ್ಪೆ ಸುಲಿದು ತೆಗೆಯಿರಿ. ಅದಕ್ಕೆ 1 ಚಮಚ ನಿಂಬೆರಸ, 400 ಗ್ರಾಂ ಸಿಹಿಯಾದ ಕಂಡೆನ್ಸ್ಡ್ ಹಾಲು, ಚಿಟಿಕೆಯಷ್ಟು ಉಪ್ಪು ಹಾಕಿ.
- ನಂತರ ಚೆನ್ನಾಗಿ ಬ್ಲೆಂಡ್ ಮಾಡಿ
- ಅದಾದ ಬಳಿಕ ಕ್ರೀಮ್ ಬಳಸಿ, ನಂತರ ಚೆನ್ನಾಗಿ ಮಿಶ್ರ ಮಾಡಿ
- ನಂತರ ಅದನ್ನು ಪ್ಲಾಸ್ಟಿಕ್ ಅಥವಾ ಸ್ಟೀಲ್ ಡಬ್ಬದಲ್ಲಿ ಸುರಿದು ಫ್ರೀಝರ್‌ನಲ್ಲಿಡಿ. ನಂತರ ಅದರ ಮೇಲೆ ಕವರ್‌ನಿಂದ ಮುಚ್ಚಿ ನಂತರ ಡಬ್ಬದ ಮುಚ್ಚಳ ಮುಚ್ಚಿ ಇಡಿ.
- ಈ ರೀತಿ 8 ಗಂಟೆಯವರೆಗೆ ಇಟ್ಟರೆ ಐಸ್‌ಕ್ರೀಮ್ ರೆಡಿ, ಫ್ರೀಝರ್‌ನಿಂದ ಹೊರ ತೆಗೆದು 20 ನಿಮಿಷ ಹೊರಗಿಟ್ಟು ನಂತರ ಸರ್ವ್ ಮಾಡಬಹುದು. ಇದನ್ನು ಮಾಡಿದರೆ ಫ್ರೀಝರ್‌ನಲ್ಲಿ 3 ತಿಂಗಖವರೆಗೆ ಇಟ್ಟು ಪಾಲಿಸಬಹುದು.
- ನೀವು ಈ ಐಸ್‌ಕ್ರೀಮ್ ಅನ್ನು ತಯಾರಿಸಿ ಮಕ್ಕಳಿಗೆ ಸರ್ವ್ ಮಾಡಿದರೆ ಅದರಲ್ಲಿ ಕೃತಕ ಬಣ್ಣವಿರುತ್ತದೆ ಎಂಬ ಭಯ ಇರಲ್ಲ, ಏಕೆಂದರೆ ಮಕ್ಕಳಿಗೆ ಐಸ್‌ಕ್ರೀಮ್ ಎಂದರೆ ತುಂಬಾನೇ ಇಷ್ಟ, ಆದರೆ ಹೊರಗಡೆಯಿಂದ ತೆಗೆದುಕೊಡುವಾಗ ಇದು ಮಕ್ಕಳ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಭಯವಿರುತ್ತದೆ, ಆದರೆ ನೀವೇ ತಯಾರಿಸಿ ನೀಡಿದರೆ ಆ ಭಯವಿರಲ್ಲ. ಮಕ್ಕಳಿಗೆ ಧೈರ್ಯವಾಗಿ ಈ ಐಸ್‌ಕ್ರೀಮ್ ಎಂಜಾಯ್ ಮಾಡಲು ನೀಡಿ.
ಬೆಣ್ಣೆಹಣ್ಣು ತಿನ್ನುವುದರಿಂದ ದೊರೆಯುವ ಪ್ರಯೋಜನಗಳು
ಒಮೆಗಾ 3 ಕೊಬ್ಬಿನಂಶ ದೊರೆಯುವುದು
ಒಮೆಗಾ 3 ಕೊಬ್ಬಿನಂಶ ದೇಹಕ್ಕೆ ತುಂಬಾನೇ ಅವಶ್ಯಕ. ಇದು ಹೆಚ್ಚಾಗಿ ಮೀನಿನಲ್ಲಿ
ಇರುತ್ತದೆ, ಆದರೆ ಮೀನು ತಿನ್ನದವರಿಗೆ ಈ ಬೆಣ್ಣೆಹಣ್ಣ ಸವಿಯುವುದರ ಮೂಲಕ ಒಮೆಗಾ 3
ಕೊಬ್ಬಿನಂಶ ದೊರೆಯುವುದು. ಮಕ್ಕಳ ಬೆಳವಣಿಗೆಗೆ ಈ ಬೆಣ್ಣೆಹಣ್ಣು ತುಂಬಾ
ಒಳ್ಳೆಯದು.
ಹೃದಯದ ಆರೋಗ್ಯಕ್ಕೆ ಒಳ್ಳೆಯದು
ಈ ಬೆಣ್ಣೆ ಹಣ್ಣು ಸವಿಯುವುದರಿಂದ ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಹೃದಯದ ನರಗಳಲ್ಲಿ ರಕ್ತ ಸಂಚಾರ ಉತ್ತಮವಾಗಿ ನಡೆಯಲು ಈ ಬೆಣ್ಣೆ ಸಹಾಯ
ಮಾಡುತ್ತದೆ.
ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತದೆ
ಬೆಣ್ಣೆಹಣ್ಣು ಸೇವನೆಯಿಂದ ರಕ್ತದೊತ್ತಡ ನಿಯಂತ್ರಣದಲ್ಲಿಡಲು ಸಹಕಾರಿ. ಆದರೆ ನೀವು
ಬೆಣ್ಣೆಹಣ್ಣಿನ ಐಸ್‌ಕ್ರೀಮ್ ಬದಲಿಗೆ ಬರೀ ಬೆಣ್ಣೆಹಣ್ಣು ಸೇವಿಸಿ
ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು
ಬೆಣ್ಣೆಹಣ್ಣು ಸೇವನೆ ಮಾಡುವುದರಿಂದ ಕಣ್ಣಿನ ದೃಷ್ಟಿಗೆ ತುಂಬಾ ಒಳ್ಳೆಯದು.
ಏಕೆಂದರೆ ಇದರಲ್ಲಿ ವಿಟಮಿನ್ ಎ ಅಧಿಕವಿರಲಿದೆ.
ಜೀರ್ಣಕ್ರಿಯೆಗೆ ಒಳ್ಳೆಯದು
ಬೆಣ್ಣೆಹಣ್ಣು ತಿನ್ನುವುದರಿಂದ ಜೀರ್ಣಕ್ರಿಯೆಗೆ ಒಳ್ಳೆಯದು, ಮಲಬದ್ಧತೆ ಸಮಸ್ಯೆ
ತಡೆಗಟ್ಟಲು ಸಹಕಾರಿ.
ಗರ್ಭಿಣಿಯರಿಗೆ ಒಳ್ಳೆಯದು
ಗರ್ಭಿಣಿ ಬೆಣ್ಣೆಹಣ್ಣು ತಿನ್ನುವುದರಿಂದ ತಾಯಿ ಹಾಗೂ ಮಗುವಿನ ಆರೋಗ್ಯಕ್ಕೆ
ಒಳ್ಳೆಯದು. ಇದರಲ್ಲಿ ಫೋಲೆಟ್ ಅಂಶ ಇರುವುದರಿಂದ ಭ್ರೂಣದ ಬೆಳವಣಿಗೆಗೆ
ಒಳ್ಳೆಯದು.



Click it and Unblock the Notifications