Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತಿಂಡಿ ಮಾಡಲು ಬಳಸಿದ ಎಣ್ಣೆಯನ್ನು ಮರು ಬಳಕೆ ಮಾಡುತ್ತೀರಾ? ಆರೋಗ್ಯಕ್ಕಾಗಿ ಈ ಟಿಪ್ಸ್ ಅನುಸರಿಸಿ
ಕರಿದ ಎಣ್ಣೆಯನ್ನು ಮತ್ತೆ ಬಳಸಬಾರದು, ಅದು ಆರೋಗ್ಯ ಒಳ್ಳೆಯದಲ್ಲ ಅಂತ ನಮಗೆಲ್ಲಾ ಗೊತ್ತು, ಆದರೂ ಈಗೀನ ಎಣ್ಣೆಯ ರೇಟಿಗೆ ಎಷ್ಟೊಂದು ಎಣ್ಣೆ ಬಿಸಾಡಲು ಸಾಧ್ಯವೇ ಎಂದು ಬಜ್ಜಿ, ಬೋಂಡಾ ಮಾಡಿದ ಎಣ್ಣೆಯನ್ನು ಪಲ್ಯ ಮಾಡುವಾಗ , ಹಪ್ಪಳ ಕರಿಯುವಾಗ ಬಳಸುತ್ತೇವೆ.
ನೀವು ಕರಿದ ಎಣ್ಣೆಯನ್ನು ಬಳಸಲೇಬಾರದು ಅಂತಲ್ಲ, ಕೆಲವೊಂದು ಎಣ್ಣೆ ಬಳಸಬಹುದು, ನೀವು ಕರಿದ ಎಣ್ಣೆ ಮರು ಬಳಕೆ ಮಾಡಲು ಬಯಸುವುದಾದರೆ ಈ ಟಿಪ್ಸ್ ಪಾಲಿಸಿದರೆ ಇನ್ನೂ ಒಳ್ಳೆಯದು, ಖರ್ಚು ಮಿಕ್ಕುತ್ತೆ, ಆರೋಗ್ಯ ಉಳಿಯುತ್ತೆ:

ಎಣ್ಣೆಯನ್ನು ಕಾಯಿಸಿದಾಗ ಏನಾಗುತ್ತದೆ?
ಬೆಣ್ಣೆ, ತುಪ್ಪ, ತೆಂಗಿನೆಣ್ಣೆ ಈ ಬಗೆಯ ಎಣ್ಣೆಯನ್ನು ಕಾಯಿಸಿದಾಗ ಅಂದರೆ 170 ಡಿಗ್ರಿಗಿಂತಲೂ ಹೆಚ್ಚು ಉಷ್ಣತೆಗೆ ಕಾಯಿಸಿದಾಗ ಅದರಲ್ಲಿರುವ ಡಬಲ್ ಬಾಂಡ್ ಬ್ರೇಕ್ ಆಗಿ, ಹೈಡ್ರೋಜನ್ ಹಾಗೂ ಆಕ್ಸಿಜನ್ ಅನ್ನು ಗಾಳಿಯಿಂದ ತೆಗೆದುಕೊಂಡು ಆ ಎಣ್ಣೆಯ ಗುಣ ಬದಲಾಗುವುದು, ಇದರಿಂದಾಗಿ ಕೊಬ್ಬಿನ ಆಮ್ಲ ಹಾಗೂ ಟ್ರ್ಯಾನ್ಸ್ ಫ್ಯಾಟ್ ಉತ್ಪತ್ತಿ ಮಾಡುತ್ತದೆ, ಹಾಗಾಗಿ ಫ್ರೈ ಮಾಡಿದ ಎಣ್ಣೆ ಆರೋಗ್ಯಕ್ಕೆ ಒಳ್ಳೆಯದಲ್ಲ, ಅದರಲ್ಲೂ ಹೃದಯ ಆರೋಗ್ಯಕ್ಕೆ ಒಳ್ಳೆಯದಲ್ಲ. ಇಂಥ ಎಣ್ಣೆ ಸೇವನೆಯಿಂದ ಪಾರ್ಶ್ವವಾಯು ಕೂಡ ಉಂಟಾಗುವುದು.
ನೀವು ಎಣ್ಣೆಯನ್ನು ಮರು ಬಳಕೆ ಮಾಡಲು ಬಯಸುವುದಾದರೆ
ನೀವು ಎಣ್ಣೆಯನ್ನು ಮರು ಬಳಕೆ ಮಾಡಬಯಸುವುದಾದರೆ ರೈಸ್ ಬ್ರ್ಯಾನ್ ಎಣ್ಣೆ ಒಳ್ಳೆಯದು, ಇದನ್ನು ಕಾಯಿಸಿ ಮರು ಬಳಕೆ ಮಾಡಬಹುದು.
ಇನ್ನು ಎಣ್ಣೆಯನ್ನು ಕಾಯಿಸುವಾಗ ಈ ಬಗ್ಗೆ ಜಾಗ್ರತೆವಹಿಸಿ
ಎಣ್ಣೆಯನ್ನು ತುಂಬಾನೇ ಕಾಯಿಸಬೇಡಿ, ನೀವು ಮನೆಯಲ್ಲಿ ಪೂರಿ ಅತವಾ ಇತರ ತಿಂಡಿ ಮಾಡುವುದಾದರೆ ಮೊದಲು ಎಲ್ಲಾ ತಟ್ಟಿ ಇಟ್ಟು ನಂತರ ಎಣ್ಣೆ ಕಾಯಿಸಿ ಹಾಕಿ, ನೀವು ಒಂದೊಂದೇ ರೆಡಿ ಮಾಡಿ ಹಾಕುವಾಗ ಎಣ್ಣೆ ತುಂಬಾ ಕಾಯುವುದು, ಹಾಗಾಗಿ ಮೊದಲೇ ರೆಡಿ ಮಾಡಿಟ್ಟು ಫ್ರಯ ಮಾಡುವುದು ಒಳ್ಳೆಯದು. ಈ ಎಣ್ಣೆಯನ್ನು ಪಲ್ಯ, ಸಾರಿಗೆ ಒಗ್ಗರೆ ಅಂತ ಬಳಸಬಹುದು. ಆದರೆ ತುಂಬಾ ದಿನ ಇಟ್ಟು ಬಳಸಬೇಡಿ.
ನಾನ್‌ವೆಜ್ ಮಾಡಿದ ಎಣ್ಣೆ ಬಳಸಬೇಡಿ
ಕಬಾಬ್, ಮೀನು ಫ್ರೈ ಮಾಡಿರುವ ಎಣ್ಣೆಯನ್ನು ಮರು ಬಳಕೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ, ಅದರಲ್ಲೂ ಇಂಥ ಎಣ್ಣೆ ಹೆಚ್ಚು ಸಮಯ ಇಟ್ಟು ಬಳಸುವುದು ತೀರಾ ಒಳ್ಳೆಯದಲ್ಲ. ಆದ್ದರಿಂದ ನೀವು ನಾನ್‌ವೆಜ್‌ಫ್ರೈ ಮಾಡುವಾಗ ಚಿಕ್ಕ ಕಡಾಯಿ ಒಳ್ಳೆಯದು.
ದೊಡ್ಡ ಕಡಾಯಿ ಬಳಸುವುದಾದರೆ ಎಣ್ಣೆ ಹಚ್ಚು ಬಳಸಬೇಕು, ಇಲ್ಲದಿದ್ದರೆ ಎಣ್ಣೆಯಲ್ಲಿ ಹಾಕಿದಾಗ ನಾವು ಹಾಕಿದ ತಿಂಡಿ ಮುಳುಗಲ್ಲ, ನಾವು ಮಾಡುವ ತಿಂಡಿ, ಸ್ನ್ಯಾಕ್ಸ್ ಎಣ್ಣೆಯಲ್ಲಿ ಮುಳುಗಬೇಕು. ನೀವು ಚಿಕ್ಕ ಕಡಾಯಿ ಬಳಸಿದರೆ ಸ್ವಲ್ಪ ಎಣ್ಣೆ ಹಾಕಿದಾಗ ಮೇಲ್ಭಾಗಕ್ಕೆ ಬರುತ್ತದೆ, ಆವಾಗ ಎಣ್ಣೆಯಲ್ಲಿ ನೀವು ಬಜ್ಜಿ-ಬೋಂಡಾ, ಕಬಾಬ್ ಅಂತ ಮಾಡಿಕೊಳ್ಳಬಹುದು. ಹೀಗೆ ಮಾಡಿದರೆ ಗ್ಯಾಸ್ ಸ್ವಲ್ಪ ಹೆಚ್ಚು ಎಣ್ಣೆ ಬೇಕಾಗಿಲ್ಲ, ಗ್ಯಾಸ್‌ಗೆ ಹೋಲಿಸಿದರೆ ಎಣ್ಣೆ ಖರ್ಚು ದುಬಾರಿಯಾಗುವುದು, ಆದ್ದರಿಂದ ಮನೆಯಲ್ಲಿ ಮಾಡುವಾಗ ನಾವು ಈ ಟಿಪ್ಸ್ ಅನುಸರಿಸುವುದು ಒಳ್ಳೆಯದು.
ಯಾವ ಎಣ್ಣೆ ಡೀಪ್ ಫ್ರೈಗೆ ಒಳ್ಳೆಯದಲ್ಲ?
ತುಪ್ಪ, ವನಸ್ಪತಿ, ಮೈಗ್ರೇನ್, ತೆಂಗಿನೆಣ್ಣೆ , ಪಾಮ್ ಆಯಿಲ್ ಇವುಗಳನ್ನು ಮರು ಬಳಕೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇವುಗಳನ್ನು ಹೆಚ್ಚು ಉಷ್ಣಾಂಶಕ್ಕೆ ಕಾಯಿಸಿದಾಗಾ ಅದರ ಸ್ಟ್ರೆಕ್ಚರ್ ಬದಲಾಗುವುದು, ಆದ್ದರಿಂದ ನೀವು ಈ ಬಗೆಯ ಎಣ್ಣೆ ಬಳಸುವುದಾದರೆ ಹೆಚ್ಚು ಕಾಯಿಸಬೇಡಿ, ಮರು ಬಳಕೆ ಮಾಡಬೇಡಿ.



Click it and Unblock the Notifications