Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗೋಧಿ ಹಲ್ವಾ ಮಾಡಿದ್ದೀರಾ? ಶೀರಾದಂತೆಯೇ ಟೇಸ್ಟಿ, ದೇವರಿಗೆ ನೈವೇದ್ಯವಾಗಿಯೂ ಇಡಬಹುದು
ನೀವು ಶೀರಾ ಮಾಡಿದಂತೆ ಗೋಧಿ ಹಿಟ್ಟಿನಿಂದ ರುಚಿಯಾದ ಗೋಧಿ ಹಲ್ವಾ ಮಾಡಬಹುದು, ಇದನ್ನು ಮಾಡುವ ವಿಧಾನವಂತೂ ತುಂಬಾನೇ ಸರಳವಾಗಿದೆ, ಈ ಹಲ್ವಾ ಮಾಡಲು ಪ್ರಮುಖವಾಗಿ ಮೂರೇ ಸಾಮಗ್ರಿ ಸಾಕಾಗುತ್ತೆ, ಡ್ರೈ ಫ್ರೂಟ್ಸ್ ಹಲ್ವಾಗೆ ಮತ್ತಷ್ಟು ರುಚಿ ನೀಡುತ್ತೆ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
1 ಕಪ್ ಗೋಧಿ ಹಿಟ್ಟು
1 ಕಪ್ ಸಕ್ಕರೆ
1 ಕಪ್ ನೀರು
3 ಚಮಚ ತುಪ್ಪ, ನಂತರ ಹಲ್ವಾ ರೆಡಿಯಾದ ಮೇಲೆ ಮತ್ತೆ 2 ಚಮಚ ತುಪ್ಪ ಸೇರಿಸಿ
ಸ್ವಲ್ಪ ಗೋಡಂಬಿ
ಸ್ವಲ್ಪ ಬಾದಾಮಿ
ಮಾಡುವ ವಿಧಾನ
- ಬಾಣಲೆಗೆ ಒಂದು ಕಪ್ ಸಕ್ಕರೆ ಹಾಕ ಒಂದು ಕಪ್ ನೀರು ಹಾಕಿ ಕರಗಿಸಿ.
- ಈಗ ನೀವು ಮತ್ತೊಂದು ಪ್ಯಾನ್‌ನಲ್ಲಿ ಒಂದು ಕಪ್ ಗೋಧಿ ಹಿಟ್ಟು ತೆಗೆದು ಅದನ್ನು ಸ್ವಲ್ಪ ಬಿಸಿ (ಉಪ್ಇಟ್ಟಿಗೆ ರವೆ ಉರಿದ ರೀತಿಯಲ್ಲಿ) ಮಾಡಿ ಒಂದು ತಟ್ಟೆಗೆ ಹಾಕಿಡಿ.
- ಈಗ ನೀವು ಗೋಧಿ ಹಿಟ್ಟು ರೋಸ್ಟ್ ಮಾಡಿದ ಬಾಣಲೆಗೆ 3 ಚಮಚ ತುಪ್ಪ ಹಾಕಿ.
- ತುಪ್ಪ ಬಿಸಿಯಾದಾಗ ಬಾದಾಮಿ, ಗೋಡಂಬಿ ಸೇರಿಸಿ
- ಬಾದಾಮಿ ಗೋಡಂಬಿಯನ್ನು ತುಪ್ಪದ ಲ್ಲಿ ಹುರಿದು ಒಂದು ಬೌಲ್‌ನಲ್ಲಿ ಹಾಕಿಡಿ
- ಈಗ ಆ ತುಪ್ಪಕ್ಕೆ ಗೋಧಿ ಹಿಟ್ಟು ಮೆಲ್ಲನೆ ಸುರಿದು ಕಡಿಮೆ ಉರಿಯಲ್ಲಿ ಫ್ರೈ ಮಾಡಿ
- ಈಗ ಸಕ್ಕರೆ ಪಾಕ ಹಾಕಿ ಮಿಕ್ಸ್ ಮಾಡಿ, ನೀರನ್ನು ಮೆಲ್ಲ-ಮೆಲ್ಲನೆ ಹಾಕಿ, ಹಿಟ್ಟು ಗಟ್ಟಿಯಾಗುವರೆಗೆ ಮಿಕ್ಸ್ ಮಾಡುತ್ತಾ ಬೇಯಿಸಿ, ನಂತರ ಮತ್ಎ 2 ಚಮಚ ತುಪ್ಪ ಹಾಕಿ ಮಿಕ್ಸ್ ಮಾಡಿ, ಈಗ ನೀವು ರೋಸ್ಟ್ ಮಾಡಿಟ್ಟ ಬಾದಾಮಿ-ಗೋಡಂಬಿ ಸೇರಿಸಿ ಮಿಕ್ಸ್ ಮಾಡಿದರೆ ಸೂಪರ್ ರುಚಿಯ ಗೋಧಿ ಹಲ್ವಾ ರೆಡಿ.
ನೀವು ಶೀರಾ ಮಾಡಿದಷ್ಟೇ ತುಂಬಾ ರುಚಿಯಾಗಿರುತ್ತದೆ ಈ ಗೋಧಿ ಹಲ್ವಾ, ಇನ್ನು ಹಬ್ಬಗಳು, ವ್ರತಗಳು ಈ ಸಂದರ್ಭದಲ್ಲಿ ದೇವರಿಗೆ ನೈವೇದ್ಯ ಅರ್ಪಿಸಲು ಕೂಡ ನೀವು ಈ ಗೋಧಿ ಹಲ್ವಾ ರೆಡಿ ಮಾಡಬಹುದು.
ಸಲಹೆ: ಯಾವ ಗೋಧಿ ಹಿಟ್ಟು ಬಳಸಬೇಕು?
ನೀವೇ ಮಾಡಿದ ಗೋಧಿಹಿಟ್ಟು ಆದರೂ ಸರಿ, ಯಾವುದೇ ಬ್ರ್ಯಾಂಡ್‌ನ ಗೋಧಿ ಹಿಟ್ಟು ಆದರೂ
ಸರಿ ನೀವು ಬಳಸಬಹುದು.
ಒಂದು ಕಪ್ ಗೋಧಿ ಹುಟ್ಟು ಬಳಸುವುದಾದರೆ ನೀವು ಒಂದು ಕಪ್ ಸಕ್ಕರೆ , ಒಂದು ಕಪ್
ನೀರು ಬಳಸಿ ಮಾಡುವ ಸಕ್ಕರೆ ಪಾಕದ ಮಿಶ್ರಣದ ಅಳತೆ ಹಲ್ವಾ ಮಾಡಲು
ಸರಿಯಾಗಿರುತ್ತದೆ.
ನವು ಈ ಹಲ್ವಾವನ್ನು 10-15 ನಿಮಿಷದಲ್ಲಿ ಮಾಡಬಹುದು
ಈಗ ಶಿವರಾತ್ರಿ ಹಬ್ಬ ಬರುತ್ತಿದೆ, ನೀವು ಹಬ್ಬದಲ್ಲಿ ಶಿವನಿಗೆ ನೈವೇದ್ಯ
ತಯಾರಿಸುವಾಗ ಈ ಹಲ್ವಾ ಕೂಡ ತಯಾರಿಸಬಹುದು.
ದೊಡ್ಡ ಕಾರ್ಯಕ್ರಮಗಳಲ್ಲಿಯೂ ಕೇಸರಿಬಾತ್ ಬದಲಿಗೆ ಈ ಗೋಧಿಹಲ್ವಾ ಟ್ರೈ
ಮಾಡಬಹುದು
ಇನ್ನು ಗೋಧಿ ಹಲ್ವಾ ರೆಡಿ ಮಾಡಿದರೆ ವಾರದವರೆಗೆ ಇಟ್ಟರೂ ಹಾಳಾಗುವುದಿಲ್ಲ. ಗೋಧಿ
ಎಣ್ಣೆಯಲ್ಲಿ ರೋಸ್ಟ್ ಆಗುವುದರಿಂದ ರುಚಿ ತುಂಬಾನೇ ಖುಷಿಯಾಗುವುದು.
ಅಲ್ಲದೆ ಗೋದಿ ಹಲ್ವಾ ಮಾಡಲು ಯಾವುದೇ ಫುಡ್ ಕಲರ್ ಆಗಲಿ, ಎಸೆನ್ಸ್ ಆಗಲಿ
ಬೇಕಾಗಿಲ್ಲ.



Click it and Unblock the Notifications