ಟೊಮೆಟೊ ಕುರ್ಮಾ ರೆಸಿಪಿ: ಬ್ರೇಕ್‌ಫಾಸ್ಟ್‌ಗೂ ಸೈ, ಲಂಚ್‌ಗೂ ಸೈ

Posted By:

ಟೊಮೆಟೊ ಕುರ್ಮಾ ತುಂಬಾ ಸರಳವಾದ ರೆಸಿಪಿಯಾಗಿದ್ದು ರುಚಿ ಮಾತ್ರ ಸೂಪರ್ ಆಗಿರುತ್ತದೆ. ಬೆಳಗ್ಗೆ ಚಪಾತಿ, ರೊಟ್ಟಿ, ದೋಸೆ ಈ ಗಗೆಯ ತಿಂಡಿ ಮಾಡಿದಾಗ ಇದನ್ನು ನೆಚ್ಚಿಕೊಮಡು ತಿನ್ನಲು ರುಚಿಯಾಗಿರುತ್ತದೆ, ಅನ್ನಕ್ಕೂ ಸೈ.

ಆಫೀಸ್‌ಗೆ ಹೋಗುವವರು ಈ ಕುರ್ಮಾ ರೆಸಿಪಿ ಟ್ರೈ ಮಾಡಿದರೆ ನೀವು ಲಂಚ್‌ಗೂ ಇದನ್ನು ತಗೊಂಡು ಹೋಗಬಹುದು, ಬನ್ನಿ ಟೊಮೆಟೊ ಕುರ್ಮಾ ಮಾಡುವುದು ಹೇಗೆ ಎಂದು ನೋಡೋಣ:

tomato kurma,

ಬೇಕಾಗುವ ಸಾಮಗ್ರಿ

1/4 ಕಪ್‌ ತೆಂಗಿನತುರಿ
1 ಚಮಚ ಹುರಿಗಡಲೆ (ರೋಸ್ಟ್ ಮಾಡಿದ್ದು)
5 ಗೋಡಂಬಿ (ಅರ್ಧ ಭಾಗದ ಗೋಡಂಬಿಯಾದರೆ 10 ಗೋಡಂಬಿ)
1/2 ಚಮಚ ಸೋಂಪು
1 ಚಮಚ ಕೊತ್ತಂಬರಿ ಬೀಜ
2 ಹಸಿ ಮೆಣಸು
1/2 ಕಪ್ ನೀರು

ಇತರ ಸಾಮಗ್ರಿ

2 ಚಮಚ ಎಣ್ಣೆ
1 ಚಮಚ ಸಾಸಿವೆ
1/2 ಚಮಚ ಉದ್ದಿನ ಬೇಳೆ
1/2 ಇಂಚಿನಷ್ಟು ಚಕ್ಕೆ
ಸ್ವಲ್ಪ ಕರಿಬೇವು
1 ಈರುಳ್ಳಿ
3 ಟೊಮೆಟೊ
1/2 ಚಮಚ ಅರಿಶಿಣ ಪುಡಿ
1/2 ಚಮಚ ಕಾಶ್ಮೀರಿ ಕೆಂಪು ಮೆಣಸಿನ ಪುಡಿ
ರುಚಿಗೆ ತಕ್ಕ ಉಪ್ಪು
1/2 ಚಮಚ ಸಕ್ಕರೆ
ಸ್ವಲ್ಪ ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ:

* ಮೊದಲಿಗೆ ಮಸಾಲೆಯನ್ನು ರೆಡಿ ಮಾಡಿ.
* ನಂತರ ಪ್ಯಾನ್ ಬಿಸಿ ಮಾಡಿ ಒಂದು ಚಮಚ ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಿ, ನಂತರ 1/2 ಚಮಚ ಉದ್ದಿನ ಬೇಳೆ, 1/2 ಇಂಚು ಚಕ್ಕೆ, ಸ್ವಲ್ಪ ಕರಿಬೇವು ಹಾಕಿ
* ನಂತರ ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ ಹಾಕಿ
ನಂತರ ಟೊಮೆಟೊ ಹಾಕಿ ಮೆತ್ತಗಾಗುವವರೆಗೆ ಸೌಟ್‌ನಿಂದ ಆಡಿಸಿ
ನಂತರ 1/2 ಚಮಚ ಅರಿಶಿಣ ಪುಡಿ, 1/2 ಚಮಚ ಖಾರದ ಪುಡಿ, 1/2 ಚಮಚ ಸಕ್ಕರೆ ಮತ್ತು ರುಚಿಗೆ ತಕ್ಕ ಉಪ್ಪು ಸೇರಿಸಿ.
ಆ ಮಸಾಲೆಯ ಮೇಲೆ ಎಣ್ಣೆ ತೇಲುವಂತಿರಬೇಕು
ನಂತರ ಪೇಸ್ಟ್ ಮಾಡಿದ ಮಸಾಲೆ ಹಾಕಿ 1 ಕಪ್‌ ನೀರು ಸೇರಿಸಿ.
ಸಾರು ಎಷ್ಟು ಮಂದ ಬೇಕೋ ಅಷ್ಟು ನೀರು ಸೇರಿಸಿ

ಈಗ ಕಡಿಮೆ ಉರಿಯಲ್ಲಿ 10-15 ನಿಮಿಷಿ ಕುದಿಸಿ
ನಂತರ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ

ಇತರ ಸಲಹೆ: ನೀವು ಬೇಕಿದ್ದರೆ ಒಗ್ಗರಣೆ ಹಾಕಿ ಇತರ ತರಕಾರಿ ಹೂ ಕೋಸು ಅಥವಾ ಆಲೂಗಡ್ಡೆ ಸೇರಿಸಿ ಬೇಯಿಸಿ ನಂತರ ಮಸಾಲೆ ಸೇರಿಸಿದರೂ ಸೂಪರ್ ಆಗಿರುತ್ತದೆ.

[ of 5 - Users]
Story first published: Monday, February 5, 2024, 16:55 [IST]
X
Desktop Bottom Promotion