Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತೊಂಡೆಕಾಯಿ ಹೀಗೆ ಮಾಡಿದರೆ ಅಬ್ಬಾಬ್ಬ! ಎಷ್ಟೊಂದು ರುಚಿ ಗೊತ್ತಾ?
ನೀವು ತೊಂಡೆಕಾಯಿಯಿಂದ ಹಲವಾರು ಬಗೆಯ ಖಾದ್ಯ ಮಾಡಿರಬಹುದು, ಆದರೆ ಅದರಿಂದ ಒಂದು ಸ್ಪೆಷಲ್ ಫ್ರೈ ಮಾಡಿದ್ದೀರಾ? ತೊಂಡೆಕಾಯಿ ತರಕಾರಿ ಕೆಲವರಿಗೆ ಪೇವರೆಟ್ ಆದರೆ ಇನ್ನು ಕೆಲವರು ಇಷ್ಟಡಲ್ಲ, ಆದರೆ ಅದನ್ನು ಈ ರಿತಿ ಮಾಡಿದ್ದೇ ಆದರೆ ಇಷ್ಟ ಆಗಿಲ್ಲ ಅಂತ ಯಾರು ಹೇಳುವುದಕ್ಕೆ ಚಾನ್ಸೇ ಅಲ್ಲ, ಅಲ್ಲದೆ ಈಗ ಸುಡು ಬಿಸಿಲಿನ ಸಮಯ , ಈ ಸಮಯದಲ್ಲಿ ಮಾಡಲು ಹೇಳಿ ಮಾಡಿಸಿದ ರೆಸಿಪಿ ಇದಾಗಿದೆ.
ತೊಂಡೆಕಾಯಿ ಪಲ್ಯ ಅಂತ ಹೇಳಲು ಸಾಧ್ಯವಿಲ್ಲ, ಇದು ಅತ್ತ ಪಲ್ಯನೂ ಅಲ್ಲ, ಇತ್ತ ಡ್ರೈ ಕೂಡ ಅಲ್ಲದ ಒಂದು ಸ್ಪೆಷಲ್ ರೆಸಿಪಿ ಇದಾಗಿದೆ. ಬಿಸಿಲಿನಲ್ಲಿ ಒಣಗಿಸಿ ಮಾಡುವಂಥ ಈ ತೊಂಡೆಕಾಯಿಡ್ರೈ ಒಮ್ಮೆ ಟ್ರೈ ಮಾಡಿದರೆ ಮತ್ತೆ ಮಾರ್ಕೆಟ್‌ಗೆ ಹೋದಾಗ ತೊಂಡೆಕಾಯಿ ಖರೀದಿಸದೇ ಬರುವುದೇ ಅಲ್ಲ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
1 ಕೆಜಿ ತೊಂಡೆಕಾಯಿ
1 ಚಮಚ ಅರಿಶಿಣ ಪುಡಿ
ಅರ್ಧ ಚಮಚ ಖಾರದ ಪುಡಿ
1/2 ಚಮಚ ಗರಂ ಮಸಾಲ ಪುಡಿ
ಚಿಟಿಕೆಯಷ್ಟು ಇಂಗು ಪುಡಿ
ಚಿಟಿಕೆಯಷ್ಟು ಮೆಂತೆ ಪುಡಿ
ರುಚಿಗೆ ತಕ್ಕ ಉಪ್ಪು
2-3 ಚಮಚ ತೆಂಗಿನೆಣ್ಣೆ
ಮಾಡುವ ವಿಧಾನ
- ತೊಂಡೆಕಾಯಿ ತಂದುಅದನ್ನು ತೊಳೆದು ನಾಲ್ಕು ಭಾಗವಾಗಿ ಸೀಳಿ
- ನಂತರ ಇದನ್ನು ಇದನ್ನು ಇಡ್ಲಿ ಪಾತ್ರೆಗೆ ಹಾಕಿ 3 ನಿಮಿಷ ಆವಿಯಲ್ಲಿ ಬೇಯಿಸಿ, ತುಂಬಾ ಬೇಯಿಸಬೇಡಿ, ಸ್ವಲ್ಪ ಬೆಂದರಷ್ಟೇ ಸಾಕಾಗುತ್ತೆ.
- ನಂತರ ಇದನ್ನು ತಟ್ಟೆಗೆ ಹಾಕಿ 1 ಚಮಚ ಅರಿಶಿಣ ಪುಡಿ, ಅರ್ಧ ಚಮಚ ಖಾರದ ಪುಡಿ, ರುಚಿಗೆ ತಕ್ಕ ಉಪ್ಪು, 1/2 ಚಮಚ ಗರಂ ಮಸಾಲ ಪುಡಿ, ಚಿಟಿಕೆಯಷ್ಟು ಇಂಗು ಪುಡಿ ಹಾಕಿ ಮಿಕ್ಸ್ ಮಾಡಿ. ಈ ಮಸಾಲೆ ಜೊತೆಗೆ ಚಿಟಿಕೆಯಷ್ಟು ಇಂಗು ಪುಡಿ ಕೂಡ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ತೆಗಿಯಬೇಕು.
- ನಂತರ ಇದನ್ನು ಒಂದು ದಿನ ಪೂರ್ತಿ ಬಿಸಿಲಿನಲ್ಲಿ ದೊಡ್ಡ ತಟ್ಟೆ ಮೇಲೆ ಹರಡಿ ಒಣಗಿಸಿ, ಅದರ ಸಿಪ್ಪೆ ಭಾಗ ಒಣಗಿರುತ್ತದೆ, ಆದರೆ ಓಳಭಾಗ ಮೃದುವಾಗಿರುತ್ತದೆ.
- ಬೆಳಗ್ಗೆ 9 ಸಂಜೆ 4 ಗಂಟೆಯವರೆಗೆ ಬಿಸಿಲಿನಲ್ಲಿ ಹಾಕಿ , ಬಿಸಿಲು ಕಡಿಮೆಯಾಗುತ್ತಿದ್ದಂತೆ ತೆಗಯಿರಿ.
- ನಂತರ ರಾತ್ರಿ 2 ಚಮಚ ತೆಂಗಿನೆಣ್ಣೆ ಹಾಕಿ ಅದರಲ್ಲಿ ಈ ತೊಂಡೆಕಾಯಿ ಹಾಕಿ ಫ್ರೈ ಮಾಡಿ ತೆಗೆದರೆ ಸೂಪರ್ ರುಚಿಯ ತೊಂಡೆಕಾಯಿ ಡ್ರೈ ರೆಡಿ.
ಇತರ ಸಲಹೆ
ನೀವು ಬೇಕಿದ್ದರೆ ಎಣ್ಣೆಯಲ್ಲಿ ಕರಿದು ಕೂಡ ತಿನ್ನಬಹುದು, ಅನ್ನದ ಜೊತೆಗೆ ಇದು
ಸೈಡ್‌ನಲ್ಲಿದ್ದರೆ ಆಹಾ ಎಂಥ ರುಚಿಯ ಭೋಜನ.
ಹೆಚ್ಚೇನು ಶ್ರಮವಿಲ್ಲ ಈ ರೆಸಿಪಿ ಟ್ರೈ ಮಾಡಿ ನೋಡಿ ಮನೆಮಂದಿಗೆಲ್ಲಾ
ತುಂಬಾನೇಇಷ್ಟವಾಗಬಹುದು.
ನೀವು ಖಾರ ಪ್ರಿಯರಾಗಿದ್ದರೆ ಒಂದು ಚಮಚ ಖಾರದ ಪುಡಿ ಬಳಸಬಹುದು
ಇದಕ್ಕೆ ಹಣ್ಣಾದ ತೊಂಡೆಕಾಯಿ ಬಳಸಬೇಡಿ, ಹಸಿ ತೊಂಡೆಕಾಯಿ ಮಾತ್ರ ಬಳಸಿ.



Click it and Unblock the Notifications