ಥಟ್ ಅಂತ ಮಾಡಬಹುದು ಸೋರೆಕಾಯಿ ಇಡ್ಲಿ..! ಹೇಗೆ ಗೊತ್ತಾ?

Posted By:

ಬೆಳಗ್ಗೆ ತಿಂಡಿ ಮಾಡುವುದು ದೊಡ್ಡ ಪ್ರಶ್ನೆಯಾಗಿರಬಹುದು. ಏನು ಮಾಡಬೇಕು? ಹೊಸ ತಿಂಡಿ ಯಾವುದನ್ನ ಪ್ರಯೋಗ ಮಾಡಬೇಕು? ಗಡಿಬಿಡಿಯಲ್ಲಿ ಇದ್ದಾಗ ಏನು ಮಾಡಬೇಕು ಎಂಬುದೇ ದೊಡ್ಡ ಪ್ರಶ್ನೆ. ಹೀಗಾಗಿ ಗೃಹಿಣಿಯರಿಗೆ ಒತ್ತಡದಲ್ಲಿದ್ದಾಗಲು ಏನಾದರು ಒಂದು ತಿಂಡಿ ಮಾಡುವುದು ಅನಿವಾರ್ಯ. ಅವರು ರುಚಿಯ ಬಗ್ಗೆ ಆಗ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ, ಒಟ್ಟಿನಲ್ಲಿ ಏನಾದರು ತಿಂಡಿ ರೆಡಿಯಾದರೆ ಸಾಕಾಗುತ್ತದೆ.

ಇನ್ನು ಹೊಸ ತಿಂಡಿ ಯಾವುದಾದರು ಮಾಡಬೇಕು ಅಂದ್ರೆ ಈ ಸೋರೆಕಾಯಿ ಇಡ್ಲಿ ಮಾಡಿ ನೋಡಿ. ಇದೇನು ಸೋರೆಕಾಯಿ ಇಡ್ಲಿ? ಕೇವಲ 5 ನಿಮಿಷದಲ್ಲಿಯೇ ಈ ಸೋರೆಕಾಯಿ ಇಡ್ಲಿ ಮಾಡಬಹುದು. ಇದರ ರುಚಿ ನೋಡಿದರೆ ನೀವು ಮತ್ತೆಂದು ಗಡಿಬಿಡಿಯಲ್ಲಿ ಬೇರೆ ತಿಂಡಿ ಮಾಡುವುದಿಲ್ಲ. ಸೋರೆಕಾಯಿ ಇಡ್ಲಿ ಎಂದ ಮಾತ್ರಕ್ಕೆ ಇದನ್ನು ಸ್ಟೀಮ್‌ನಲ್ಲಿ ಬೇಯಿಸುವ ಅಗತ್ಯವಿಲ್ಲ. ಹಾಗಾದ್ರೆ ಇಡ್ಲಿ ಮಾಡೋದು ಹೇಗೆ?

How To Prepare Sorekai Idli Recipe At Home In Kannada

ಹಾಗಾದ್ರೆ ಈ ಸೋರೆಕಾಯಿ ಇಡ್ಲಿ ಮಾಡುವುದು ಹೇಗೆ? ಸೋರೆಕಾಯಿ ಇಡ್ಲಿ ಮಾಡಲು ಬೇಕಾಗುವ ಪದಾರ್ಥಗಳೇನು? ಸೋರೆಕಾಯಿ ಇಡ್ಲಿ ಮಾಡಲು ಹಿಟ್ಟು ಹೇಗೆ ರೆಡಿ ಮಾಡಿಕೊಳ್ಳಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.

ಸೋರೆಕಾಯಿ ಇಡ್ಲಿಗೆ ಬೇಕಾಗುವ ಪದಾರ್ಥಗಳು

  • ರವೆ- 1 ಗ್ಲಾಸ್
  • ಕಡ್ಲೆ ಹಿಟ್ಟು
  • ಮೊಸರು ಅರ್ಧ ಗ್ಲಾಸ್
  • ಉಪ್ಪು
  • ತುರಿದ ಸೋರೆಕಾಯಿ
  • ತುರಿದ ಕ್ಯಾರೆಟ್
  • ಈರುಳ್ಳಿ
  • ಪಾಲಕ್ ಸೊಪ್ಪು
  • ಹಸಿ ಮೆಣಸು -2

ಸೋರೆಕಾಯಿ ಇಡ್ಲಿ ಮಾಡುವ ವಿಧಾನ

ಸೋರೆಕಾಯಿ ಇಡ್ಲಿ ಮಾಡಲು ಮೊದಲಿಗೆ ಒಂದು ಬೌಲ್‌ ತೆಗೆದುಕೊಂಡು ರವೆ, ಅರ್ಧ ಗ್ಲಾಸ್ ಕಡ್ಲೆ ಹಿಟ್ಟು, ಮೊಸರು, ಉಪ್ಪು ಹಾಕಿ ಮಿಕ್ಸ್ ಮಾಡಿ. ಈಗ ಸ್ವಲ್ಪ ಸ್ವಲ್ಪವೇ ನೀರು ಹಾಕಿಕೊಳ್ಳತ್ತಾ ಮಿಕ್ಸ್ ಮಾಡಿ. ಹಿಟ್ಟು ಸ್ವಲ್ಪ ದಪ್ಪವಾಗಿರಬೇಕು. ನಂತರ ಇದಕ್ಕೆ ತುರಿದುಕೊಂಡಿರುವ ಸೋರೆಕಾಯಿ, ಹಸಿ ಮೆಣಸು, ಈರುಳ್ಳಿ, ಕ್ಯಾರೆಟ್, ಪಾಲಕ್ ಸೊಪ್ಪು, ಅರಶಿನ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ಈ ಹಿಟ್ಟು ಗಟ್ಟಿಯಾಗಿರಬೇಕು. ವಡ ಮಾಡಲು ಇಡುವ ಹಿಟ್ಟಿನಂತೆಯೇ ಈ ಹಿಟ್ಟನ್ನು ಸಹ ರೆಡಿ ಮಾಡಿಕೊಳ್ಳಿ. ನಂತರ ಈ ಹಿಟ್ಟನ್ನು ಮುಚ್ಚಿ 10 ನಿಮಿಷ ಹಾಗೆಯೇ ಇಡಿ. ಬಳಿಕ ಒಲೆ ಮೇಲೆ ಚಿಕ್ಕ ಬಾಣಲೆ ಪಾತ್ರೆ ಇಟ್ಟು ನೀರು ಹಾಕಿಕೊಳ್ಳಿ. ಬಳಿಕ ಇದಕ್ಕೆ ಹಿಟ್ಟನ್ನು ಹಾಕಿಕೊಳ್ಳಿ. ತಟ್ಟೆ ಇಡ್ಲಿಯಂತೆ ಹೆಚ್ಚು ಪ್ರಮಾಣದ ಹಿಟ್ಟನ್ನು ಹಾಕಿ. ಒಂದು ಇಡ್ಲಿ ಒಬ್ಬರು ತಿನ್ನಲು ಬರುವಂತೆ ಗಾತ್ರ ಮಾಡಿಕೊಳ್ಳಿ. ಇಲ್ಲವೆ ಒಬ್ಬರು ಎರಡು ಇಡ್ಲಿ ಸವಿಯುವಷ್ಟು ದೊಡ್ಡದಾಗಿರಲಿ.

ಇದನ್ನು ಎರಡೂ ಕಡೆಗಳಲ್ಲಿ ತಲಾ 5ರಿಂದ 6 ನಿಮಿಷ ಬೇಯಿಸಿ. ಅದು ಕರಿದ ಬಳಿಕ ಬಣ್ಣ ಸ್ವಲ್ಪ ಕಂದು ಬಣ್ಣಕ್ಕೆ ತಿರುಗಿದಾಗ ಗರಿ ಗರಿಯ ಶಬ್ದ ಬಂದರೆ ಬೆಂದಿದೆ ಎಂದರ್ಥ. ಇದನ್ನು ಚಟ್ನಿ, ಸಾಂಬಾರ್ ಜೊತೆ ಸವಿಯಲು ಬಹಳ ರುಚಿಯಾಗಿರುತ್ತದೆ. ನೀವು ಸಹ ಒಮ್ಮೆ ಮನೆಯಲ್ಲಿ ಈ ತಿಂಡಿಯನ್ನು ಟ್ರೈ ಮಾಡಿ ನೋಡಿ.

[ of 5 - Users]
Story first published: Sunday, August 18, 2024, 20:12 [IST]
X
Desktop Bottom Promotion