Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಿಕ್ಸರ್ ಯಾರಿಗೆ ತಾನೆ ಇಷ್ಟವಿಲ್ಲ? ಅರ್ಧ ಗಂಟೆಯೊಳಗಡೆ ಮಾಡಬಹುದು ಸವಿರುಚಿಯ ಮಿಕ್ಸರ್
ಸಂಜೆ ಟೀ ಜೊತೆ ಸವಿಯಲು, ಮನೆಗೆ ಯಾರಾದರೂ ಅತಿಥಿಗಳು ಬಂದರೆ ಅವರಿಗೆ ಟೀ ಕಾಫಿ ಜೊತೆ ಸರ್ವ್ ಮಾಡಲು, ಸಂಜೆ ಸ್ನ್ಯಾಕ್ಸ್‌ಗೆ ಅವಲಕ್ಕಿ ಮಾಡುವಾಗ ಅದರ ಜೊತೆ ಮಿಕ್ಸ್ ಮಾಡಲು ಎಲ್ಲದಕ್ಕೂ ಮಿಚ್ಚರ್/ಮಿಕ್ಸರ್/ಮಿಕ್ಚರ್(ಒಂದೊಂದು ಕಡೆ ಒಂದೊಂದು ಹೇಳ್ತಾರೆ) ಇದ್ದರೆ ಸೂಪರ್. ಈ ಮಿಚ್ಚರ್ ತುಂಬಾ ಸುಲಭವಾಗಿ ಮಾಡಬಹುದು. ಅಲ್ಲದೆ ಮಿಚ್ಚರ್ ಮಾಡಿಟ್ಟರೆ ನೀವು ತಿಂಗಳುಗಟ್ಟಲೆ ಇಟ್ಟು ಬಳಸಬಹುದು, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

ಮಾಡುವ ವಿಧಾನ
ಅರ್ಧ ಕೆಜಿ ಕಡ್ಲೆಹಿಟ್ಟು
250 ಗ್ರಾಂ ಅಕ್ಕಿ ಹುಡಿ
1 ಚಮಚ ಮೆಣಸಿನ ಪುಡಿ
1/4 ಚಮಚ ಇಂಗು
ಅರ್ಧ ಚಮಚ ಕೊತ್ತಂಬರಿ ಪುಡಿ
ಉಪ್ಪು
ಮಾಡುವ ವಿಧಾನ
ಈಗ ನೀವು ಈ ಎಲ್ಲಾ ಮಿಶ್ರಣ ಮಿಕ್ಸ್ ಮಾಡಿ, ನಂತರ ಸ್ವಲ್ಪ ನೀರು ಹಾಕಿ ಮಿಕ್ಸ್
ಮಾಡಿ
ಹಿಟ್ಟು ಕಲೆಸಿ ಇಡಿ
ಈಗ ಬಾಣಲೆ ಅರ್ಧ ಲೀಟರ್ ಎಣ್ಣೆ ಹಾಕಿ ಕಾಯಿಸಿ
ಎಣ್ಣೆ ಕಾದಾಗ ನೀವು ಒತ್ತು ಶ್ಯಾವಿಗೆ ಅಚ್ಚು ಒಳಗಡೆ ಮಿಶ್ರಣ ತುಂಬಿ
ಕುದಿಯುತ್ತಿರುವ ಎಣ್ಣೆ ಅಚ್ಚು ಹಿಡಿದು ಪ್ರೆಸ್ ಮಾಡಿದರೆ ಸೇವ್ ಅಥವಾ ಮಿಚ್ಚರ್
ರೆಡಿ.
ಇನ್ನು ನೀವು ಇದೇ ಮಿಶ್ರಣಕ್ಕೆ ಇನ್ನೂ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿ ಅದನ್ನು
ರಂಧ್ರ-ರಂಧ್ರವಿರುವ ಸೌಟು ಇದೆಯಲ್ಲಾ ಅದರ ಮೇಲೆ ಸುರಿದರೆ ಚಿಕ್ಕ-ಚಿಕ್ಕ ಬೂಂದಿ
ರೆಡಿಯಾಗುತ್ತೆ.
ಈಗ ಮಿಚ್ಚರ್ ಹಾಗೂ ಬೂಂದಿ ರೆಡಿ, ಇದನ್ನು ನೀವು ಒಂದು ಪಾತ್ರೆಯಲ್ಲಿ ಹಾಕಿಡಿ
ಈಗ ಅದೇ ಎಣ್ಣೆ ಒಂದು ಕಪ್ ನೆಲಗಡಲೆ ಹಾಕಿ ಫ್ರೈ ಮಾಡಿ ತೆಗಿಯಿರಿ
ಅದೇ ರೀತಿ ಸ್ವಲ್ಪ ಬೆಳ್ಳುಳ್ಳಿ, ಕರಿಬೇವು ಫ್ರೈ ಮಾಡಿ ತೆಗಿಯಿರಿ
ಇದನ್ನು ಕೂಡ ಮಿಚ್ಚರ್ ಜೊತೆ ಸೇರಿಸಿ
ನಂತರ ಖಾರ ಬೇಕಿದ್ದರೆ ಸ್ವಲ್ಪ ಖಾರದ ಪುಡಿ, ಉಪ್ಪು ಕಡಿಮೆಯಾಗಿದ್ದರೆ ಸ್ವಲ್ಪ
ಉಪ್ಪು ಪುಡಿ ಹಾಕಿ ಮಿಕ್ಸ್ ಮಾಡಿದರೆ ಮಿಚ್ಚರ್ ರೆಡಿ. ಇದನ್ನು ಡಬ್ಬದಲ್ಲಿ
ಹಾಕಿಟ್ಟರೆ ನಿಮಗೆ ಬೇಕಾದಾಗ ಟೀ ಜೊತೆ ಸರ್ವ್ ಮಾಡಬಹುದು.
ಇದರಿಂದ ನೀವು ದಪ್ಪ ಮಿಚ್ಚರ್ ಕೂಡ ತಯಾರಿಸಬಹುದು, ಅದಕ್ಕೆ ಅಚ್ಚು ಬೇರೆ ಬಳಸಬೇಕು.
ಖಾರ ಬೂಂದಿಗೆ ಇದೇ ಮಿಶ್ರಣ ಸಾಕು
ನೀರು ಸ್ವಲ್ಪ ಜಾಸ್ತಿ ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಮಾಡಿದರೆ ಬೂಂದಿ
ಮಾಡಬಹುದು.



Click it and Unblock the Notifications