Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಆಲೂಗಡ್ಡೆಯಿಂದ ಮಾಡಿ ಈ ಸ್ನ್ಯಾಕ್ಸ್ : ಫಿಂಗರ್ ಚಿಪ್ಸ್‌ಗಿಂತಲೂ ಹತ್ತುಪಟ್ಟು ರುಚಿ ಗ್ಯಾರಂಟಿ
Recipes
oi-Reena TK
Posted By: Reena TK
ಆಲೂಗಡ್ಡೆಯಿಂದ ಮಾಡಬಹುದು ರೆಸ್ಟೋರೆಂಟ್‌ಗಳಲ್ಲಿ ಸಿಗುವಂಥ ಪೊಟೆಟೊ ಬಾಲ್, ಆಲೂಗಡ್ಡೆಯಿಂದ ಮಾಡುವ ಈ ಸ್ನ್ಯಾಕ್ಸ್‌ಗೆ ನೀವೇ ಬೇಕಿದ್ದರೆ ಒಂದು ಹೆಸರು ಹಾಕಿಕೊಳ್ಳಿ, ಅದನ್ನು ಯಾವ ಶೇಪ್‌ನಲ್ಲಿ ಮಾಡುತ್ತೀರೋ ಆ ಹೆಸರು ಕೊಡಬಹುದು, ನಾವಿಲ್ಲಿ ಅದರ ರೆಸಿಪಿ ನೀಡಿದ್ದೇವೆ.
ಈ ಸ್ನ್ಯಾಕ್ಸ್ ಮಾಡಿಕೊಟ್ಟರೆ ಮಕ್ಕಳು ಖುಷಿಯಾಗಿ ಸವಿಯುತ್ತಾರೆ, ರೆಸ್ಟೋರೆಂಟ್‌ಗಳಲ್ಲಿ ಇಂಥ ಸ್ನ್ಯಾಕ್ಸ್‌ಗೆ 300ರ ರುಪಾಯಿಯಿಂದ 400 ರುಪಾಯಿ ಚಾರ್ಜ್ ಮಾಡ್ತಾರೆ, ನೀವು ಬೇಕಿದ್ದರೆ ಸುಲಭದಲ್ಲಿ ಮಾಡಬಹುದು, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
ಆಲೂಗಡ್ಡೆ 4-5
1 ಚಮಚ ಚಿಲ್ಲಿಫ್ಲೇಕ್ಸ್
ಒಂದೂವರೆ ಚಮಚ ಅಕ್ಕಿ ಹಿಟ್ಟು
ಒಂದೂವರೆ ಚಮಚ ಜೋಳದ ಹಿಟ್ಟು (ಕಾರ್ನ್ ಫ್ಲೋರ್)
ರುಚಿಗೆ ತಕ್ಕ ಉಪ್ಪು
ಪನ್ನೀರ್
ಬ್ರೆಡ್ ಚೂರುಗಳು
ಎಣ್ಣೆ 1 ಕಪ್
ಮಾಡುವ ವಿಧಾನ
- 4-5 ಆಲೂಗಡ್ಡೆ ತೆಗೆದು ಬೇಯಿಸಿ ನಂತರ ಸಿಪ್ಪೆ ಸುಲಿದು ಮ್ಯಾಶ್ ಮಾಡಿ, ಮ್ಯಾಶ್ ಚೆನ್ನಾಗಿಮಾಡಿ
- ನಂತರ ಇದರ ಮೇಲೆ ಒಂದು ಚಮಚ ಚಿಲ್ಲಿ ಫ್ಲೇಕ್ಸ್ ಹಾಕಿ (ಇಲ್ಲಾಂದ್ರೆ ಸ್ವಲ್ಪ ಮೆಣಸಿನ ಪುಡಿ ಸೇರಿಸಬಹುದು, ಆದರೆ ಪ್ಲೇಕ್ಸ್ ಸೇರಿಸಿದರೆ ಮತ್ತಷ್ಟು ರುಚಿ ಅನಿಸುವುದು)
- ನಂತರ ಒಂದೂವರೆ ಚಮಚ ಅಕ್ಕಿ ಹಿಟ್ಟು
- ಒಂದೂವರೆ ಚಮಚ ಕಾರ್ನ್ ಫ್ಲೋರ್ ಸೇರಿಸಿ
- ನಂತರ ರುಚಿಗೆ ತಕ್ಕ ಸ್ವಲ್ಪ ಉಪ್ಪು ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ
- ನಂತರ ಇದಕ್ಕೆ 100 ಗ್ರಾಂ ಪನ್ನೀರ್ ಕೂಡ ಸೇರಿಸಿ (ಪನ್ನೀರ್ ಚಿಕ್ಕ-ಚಿಕ್ಕ ತುಂಡುಗಳಾಗಿ ಮಾಡಿ ಸೇರಿಸಿ.
- ನಂತರ ಉಂಡೆ ಕಟ್ಟಿ ನಿಮಗೆ ಬೇಕಾದ ಶೇಪ್‌ನಲ್ಲಿ ಮಾಡಿ ಎಣ್ಣೆಗೆ ಹಾಕಿ. ಬೇಕಿದ್ದರೆ ರೌಂಡ್ ಶೇಪ್ ಮಾಡಬಹುದು, ಕೋಡು ಬಳೆ ಶೇಪ್ ಚಿಕ್ಕ-ಚಿಕ್ಕ ರೋಲ್ ಹೀಗೆ ನಿಮಗೆ ಬೇಕಾದ ಶೇಪ್‌ನಲ್ಲಿ ಮಾಡಿ
- ನಂತರ ಒಂದು ಬೌಲ್‌ಗೆ ಬ್ರೆಡ್ ಹಾಕಿ ಬ್ರೆಡ್ ಚೂರುಗಳನ್ನು ಮಾಡಿ
- ಇದೇ ಸಮಯದಲ್ಲಿ ಎಣ್ಣೆ ಕಾಯಲು ಇಡಿ
- ಕಾದ ಎಣ್ಣೆಗೆ ಪೊಟೆಟೊ ಸ್ನ್ಯಾಕ್ಸ್ ಹಾಕಿ ಡೀಪ್ ಫ್ರೈ ಮಾಡಿದರೆ ಸೂಪರ್ ರುಚಿಯ ಪೊಟೆಟೊ ಸ್ನ್ಯಾಕ್ಸ್ ರೆಡಿ.
- ಇದನ್ನು ಟೊಮೆಟೊ ಸಾಸ್ ಜೊತೆ ಸರ್ವ್ ಮಾಡಿ.
- ನೆನಪಿಡಿ: ಇದನ್ನು ಬಿಸಿ ಬಿಸಿಯಾಗಿ ತಿಂದರೆ ಸೂಪರ್ ರುಚಿ.
Comments
[ of 5 - Users]
Story first published: Saturday, March 1, 2025, 12:39 [IST]
Other articles published on Mar 1, 2025



Click it and Unblock the Notifications