Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅನ್ನದ ಜೊತೆ ಸವಿಯಲು ಈರುಳ್ಳಿ ಚಟ್ನಿ ಈ ರೀತಿ ಮಾಡಿ ನೋಡಿ ಸೂಪರ್ ಆಗಿರುತ್ತೆ
ನೀವು ಇವತ್ತು ಬಾಯಿಗೆ ರುಚಿಯಾಗಿ ಏನು ಸೈಡ್ ಐಟಂ ಮಾಡುವುದು ಎಂದು ಯೋಚಿಸಿದರೆ ಒಂದುಕ್ಷಣ ಯೋಚಿಸಿದೆ ಈ ಈರುಳ್ಳು ಚಟ್ನಿ ಮಾಡಿ ನೋಡಿ, ಊಟದ ರುಚಿ ಒಂದು ಪಟ್ಟು ಹೆಚ್ಚುವುದು, ಈ ಚಟ್ನಿಯಿದ್ದರೆ ಸಾರಿ ಇದ್ದರೂ ಆಗುತ್ತೆ, ಇರದಿದ್ದರೂ ಆಗುತ್ತೆ, ಈ ಚಟ್ನಿ ಒಂದಿದ್ದರೆ ಅನ್ನ ಅಥವಾ ಗಂಜಿ ಅಷ್ಟೊಂದು ರುಚಿಯಾಗಿರುತ್ತದೆ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

ಬೇಕಾಗುವ ಸಾಮಗ್ರಿ
1 ಚಮಚ ಎಣ್ಣೆ
ಸ್ವಲ್ಪ ಸಾಸಿವೆ
1/2 ಚಮಚ ಜೀರಿಗೆ
4-5 ಎಸಳು
ಸ್ವಲ್ಪ ಹುಣಸೆಹಣ್ಣು
2 ಈರುಳ್ಳಿ
4-5 ಎಸಳು
ರುಚಿಗೆ ತಕ್ಕ ಉಪ್ಪು
ಸ್ವಲ್ಪ ಇಂಗು
ಸ್ವಲ್ಪ ಕೊತ್ತಂಬರಿ ಸೊಪ್ಪು
ಸ್ವಲ್ಪ ಕರಿಬೇವು
1 ಚಮಚ ತೆಂಗಿನೆಣ್ಣೆ
ಮಾಡುವ ವಿಧಾನ:
ಬಾಣಲೆ ಬಿಸಿ ಮಾಡಿ ಒಂದು ಚಮಚ ಎಣ್ಣೆ ಹಾಕಿ
ಎಣ್ಣೆ ಬಿಸಿಯಾದಾಗ ಸ್ವಲ್ಪ ಸಾಸಿವೆ ಹಾಕಿ, ಸಾಸಿವೆ ಚಟ್‌ಪಟ್ ಶಬ್ದ
ಮಾಡುವಾಗ
ಸ್ವಲ್ಪ ಜೀರಿಗೆ ಹಾಕಿ, ಜೀರಿಗೆ ಚಟ್‌ಪಟ್ ಶಬ್ದ ಮಾಡುವಾಗ 4-5 ಎಸಳು
ಬೆಳ್ಳುಳ್ಳಿ ಹಾಕಿ
ನಂತರ ಸ್ವಲ್ಪ ಹುಣಸೆಹಣ್ಣು, 4-5 ಒಣ ಮೆಣಸು ಹಾಕಿ (ಖಾರ ಕಡಿಮೆ ಬೇಕೆಂದರೆ ಕಡಿಮೆ
ಮೆಣಸು ಹಾಕಬಹುದು)
ಸ್ವಲ್ಪ ಕರಿಬೇವು ಹಾಕಿ
ನಂತರ 2 ಈರುಳ್ಳಿ ಹಾಕಿ, ಈರುಳ್ಳಿ ಸ್ವಲ್ಪ ಕಂದು ಬಣ್ಣಕ್ಕೆ ಬರುವವರೆಗೆ ಫ್ರೈ
ಮಾಡಿ
ನಂತರ ರುಚಿಗೆ ತಕ್ಕ ಉಪ್ಪು ಹಾಕಿ
ಸ್ವಲ್ಪ ಇಂಗು ಸೇರಿಸಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಿ 2 ನಿಮಿಷ ಫ್ರೈ
ಮಾಡಿ ನಂತರ ಸ್ಟೌವ್ ಆಫ್ ಮಾಡಿ
ನಂತರ ತರಿತರಿಯಾಗಿ ರುಬ್ಬಿ
ನಂತರ 1 ಚಮಚ ತೆಂಗಿನೆಣ್ಣೆ ಹಾಕಿ ಮಿಕ್ಸ್ ಮಾಡಿ ಸವಿದು ನೋಡಿ, ಆಹಾ ಊಟ ಎಷ್ಟೊಂದು
ರುಚಿಯಾಗಿದೆ ಎಂದು ಒಂದು ಎರಡು ತುತ್ತು ಹೆಚ್ಚೇ ತಿನ್ನುವಿರಿ.



Click it and Unblock the Notifications