Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ ಒಂದು ಬೆಳ್ಳುಳ್ಳಿ ಚಟ್ನಿಯಿದ್ದರೆ ಊಟದ ರುಚಿಯೇ ಬೇರೆ ಲೆವಲ್ ನೋಡಿ
ಅನ್ನ ತಿನ್ನುವಾಗ ಈ ಬಾಯಿ ರುಚಿ ಹೆಚ್ಚಿಸುವ ಸೈಡ್ ಐಟಂ ಇದ್ದರೆ ಖುಷಿಯಾಗುವುದು, ಅದಕ್ಕೆ ಬೆಸ್ಟ್ ಈ ಬೆಳ್ಳುಳ್ಳಿ ಚಟ್ನಿ. ನೀವು ಸಿಂಪಲ್ ಆಗಿ ಬೇಳೆ ರಸಂ ಮಾಡಿ ಈ ಒಂದು ಚಟ್ನಿ ತಯಾರಿಸಿದರೆ ಸಾಕು ಊಟ ತುಂಬಾ ರುಚಿ ಅನಿಸುವುದು. ಇನ್ನು ಚಳಿಗಾಲಕ್ಕೆ ಈ ಚಟ್ನಿ ತುಂಬಾನೇ ಒಳ್ಳೆಯದು, ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ಈ ಜ್ವರವೆಲ್ಲಾ ಬಂದಾಗ ಬೇರೆ ಆಹಾರ ಬಾಯಿಗೆ ಹಿಡಿಸಲ್ಲ, ಆವಾಗ ಕೂಡ ಇದನ್ನು ಮಾಡಿದರೆ ನಾಲಗೆಗೆ ರುಚಿ ಅನಿಸುವುದು. ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
ಬೆಳ್ಳುಳ್ಳಿ 4-5 (20-25 ಎಸಳು)
3-4 ಚಮಚ ಎಣ್ಣೆ
ಒಂದು ಈರುಳ್ಳಿ
ಬ್ಯಾಡಗಿ ಮೆಣಸು8-10
ಒಣ ಮೆಣಸು 6-8
ನೆಲ್ಲಿಕಾಯಿ ಗಾತ್ರದಷ್ಟು ಹುಣಸೆಹಣ್ಣು
ಸಕ್ಕರೆ 1 ಚಮಚ
ರುಚಿಗೆ ತಕ್ಕ ಉಪ್ಪು
ಒಗ್ಗರಣೆಗೆ
1 ಚಮಚ ಎಣ್ಣೆ
ಚಿಟಿಕೆಯಷ್ಟು ಇಂಗು
ಸ್ವಲ್ಪ ಸಾಸಿವೆ
ಸ್ವಲ್ಪ ಕರಿಬೇವು
3-4 ಎಸಳು ಬೆಳ್ಳುಳ್ಳಿ
ಮಾಡುವ ವಿಧಾನ
- ನೀವು ಪಾತ್ರೆಗೆ ಎಣ್ಣೆ ಹಾಕಿ ಅದರಲ್ಲಿ ಬೆಳ್ಳುಳ್ಳಿ ಎಸಳುಗಳ್ನು ಫ್ರೈ ಮಾಡಿ ತೆಗೆದು ತಟ್ಟೆಗೆ ಹಾಕಿಡಿ
- ಈಗ ಅದೇ ಎಣ್ಣೆಗೆ ನೀವು ಮೆಣಸು ಹಾಕಿ ಹುರಿದು ತಟ್ಟೆಗೆ ಹಾಕಿ
- ಈಗ ಬೆಳ್ಳುಳ್ಳಿ, ಒಣ ಮೆಣಸು ಮಿಕ್ಸಿ ಜಾರ್ಗೆ ಹಾಕಿ, ಈರುಳ್ಳಿ ಸೇರಿಸಿ, ಹುಣಸೆ ಹಣ್ಣು ಹಾಕಿ, 1 ಚಮಚ ಸಕ್ಕರೆ ಸೇರಿಸಿ, ರುಚಿಗೆ ತಕ್ಕ ಉಪ್ಪು ಸೇರಿಸಿ
- ನಂತರ ನುಣ್ಣನೆ ಗ್ರೈಂಡ್ ಮಾಡಿ.
ಈಗ ಒಗ್ಗರಣೆ ಹಾಕಿ
ಒಗ್ಗರಣೆ ಪಾತ್ರೆಗೆ 1 ಚಮಚ ಎಣ್ಣೆ ಹಾಕಿ (ತೆಂಗಿನೆಣ್ಣೆ ಆದರೆ ಇನ್ನೂ
ಒಳ್ಳೆಯದು)
ಚಿಟಿಕೆಯಷ್ಟು ಇಂಗು ಹಾಕಿ
ಸಾಸಿವೆ ಹಾಕಿ, ಸಾಸಿವೆ ಚಟ್ಪಟ್ ಶಬ್ದ ಮಾಡುವಾಗ, ಬೆಳ್ಳುಳ್ಳಿ ಹಾಕಿ, ಸಾಸಿವೆ
ಹಾಕಿ, ಇದನ್ನು ರುಬ್ಬಿದ ಚಟ್ನಿಗೆ ಸೇರಿಸಿ, ಸೂಪರ್ ರುಚಿಯ ಚಟ್ನಿ ರೆಡಿ.
ನೀವು ಒಗ್ಗರಣೆ ಹಾಕದೆ ಚಟ್ನಿ ರುಬ್ಬಿದ ಮೇಲೆ ಒಂದು ಅಥವಾ 2 ಚಮಚ ತೆಂಗಿನೆಣ್ಣೆ ಹಾಕಿ ಮಿಕ್ಸ್ ಮಾಡಿದರೂ ಸೂಪರ್ ಆಗಿರುತ್ತದೆ.
ಇತರ ಸಲಹೆ
ಈ ಚಟ್ನಿ ಮಾಡಿ ನೀವು ವಾರದವರೆಗೆ ಇಟ್ಟರೂ ಹಾಳಾಗಲ್ಲ
ಈರುಳ್ಳಿ ಹಸಿ ಹಾಕಬಹುದು ಅಥವಾ ಮೆಣಸು ಬಾಡಿಸಿದ ಎಣ್ಣೆಯಲ್ಲಿ ಸ್ವಲ್ಪ ಬಾಡಿಸಿ
ಹಾಕಬಹುದು.
ಖಾರ ಇಷ್ಟಪಡುವವರು ಬ್ಯಾಡಗಿ ಮೆಣಸು ಹಾಗೂ ಗಾಂಧಾರಿ ಮೆಣಸು ಅಥವಾ ಜೀರಿಗೆ ಮೆಣಸು
ಸೇರಿಸಿ ರುಬ್ಬಬಹುದು.
ಒಲೆಯಿದ್ದರೆ ಮೆಣಸನ್ನು ರೋಸ್ಟ್ ಮಾಡುವ ಬದಲಿಗೆ ಸುಟ್ಟು ಬಳಸಿ, ಬೆಳ್ಳುಳ್ಳಿ ಕೂಡ
ಸುಟ್ಟು ಚಟ್ನಿ ಮಾಡಿದರೆ ತುಂಬಾನೇ ರುಚಿಯಾಗಿರುತ್ತದೆ.
ನೀವು ಒಂದು ತಿಂಗಳವರೆಗೆ ಇಟ್ಟು ಬಳಸಬೇಕೆಂದಿದ್ದರೆ ಈರುಳ್ಳಿ ಹಾಕಬೇಡಿ, ಬಾಕಿ ಉಳಿದ ಸಾಮಗ್ರಿ ಹಾಕಿ ಗಾಳಿಯಾದ ಡಬ್ಬದಲ್ಲಿ ಹಾಕಿ ಫ್ರಿಡ್ಜ್ನಲ್ಲಿಟ್ಟು ಬಳಸಬಹುದು.
ಗಂಜಿಯಾಗಲಿ, ಕುಚಲಕ್ಕಿಯಿಂದ ಮಾಡಿದ ಅನ್ನವಾಗಲಿ, ಬೆಳ್ತಕ್ಕಿ ಅನ್ನವಾಗಲಿ ಎಲ್ಲದಕ್ಕೂ ಈ ಚಟ್ನಿ ತುಂಬಾನೇ ರುಚಿಯಾಗಿರುತ್ತದೆ.



Click it and Unblock the Notifications