Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತಂಪಾದ ಮಸಾಲೆ ಮಜ್ಜಿಗೆ ಮಾಡುವುದು ಹೇಗೆ? ಅಂಗಡಿಯಲ್ಲಿ ಸಿಗುವ ಮಜ್ಜಿಗೆಗೆ ಇಷ್ಟು ರುಚಿ ಸಿಗಲ್ಲ
ಬೇಸಿಗೆಯಲ್ಲಿ ಎಷ್ಟೇ ಬಾಯಾರಿಕೆಯಾಗಿರಲಿ ಒಂದು ಲೋಟ ತಣ್ಣನೆಯ ಮಜ್ಜಿಗೆ ಫ್ರಿಡ್ಜ್‌ನಲ್ಲಿ ಇಟ್ಟಿದ್ದಲ್ಲ, ಮಣ್ಣಿನ ಮಡಿಕೆಯಲ್ಲಿ ಇಟ್ಟದ್ದು ಕುಡಿದರೆ ಬಾಯಾರಿಕೆ ದೂರಾಗುವುದು,ಸುಸ್ತು ಇರಲ್ಲ, ದೇಹಕ್ಕೆ ಕೂಡ ತಂಪು. ಮಜ್ಜಿಗೆಯಲ್ಲಿ ಮಸಾಲೆ ಮಜ್ಜಿಗೆ ತುಂಬಾನೇ ಒಳ್ಳೆಯದು. ನೀವು ಮಸಾಲೆ ಮಜ್ಜಿಗೆ ಮಾಡುವುದಾದರೆ ಇಷ್ಟು ಸಾಮಗ್ರಿ ಹಾಕಿ ಹೀಗೆ ಮಾಡಿ ನೋಡಿ ಮಸಾಲೆ ಮಜ್ಜಿಗೆ ಸೂಪರ್ ಆಗಿರುತ್ತದೆ:

ಬೇಕಾಗುವ ಸಾಮಗ್ರಿ
ಅರ್ಧ ಲೀಟರ್ ಮೊಸರು
ಸ್ವಲ್ಪ ಕೊತ್ತಂಬರಿಸೊಪ್ಪು(ಚಿಕ್ಕ ಕಟ್ಟಿನಲ್ಲಿ ಅರ್ಧ ಕಟ್ಟು)
ಸ್ವಲ್ಪ ಕರಿಬೇವು
ಹಸಿಮೆಣಸು 2-3
ಸ್ವಲ್ಪ ಶುಂಠಿ
ಕಲ್ಲುಪ್ಪು
ಮಾಡುವ ವಿಧಾನ
ಅರ್ಧ ಲೀಟರ್ ಮೊಸರಿಗೆ ಅರ್ಧ ಲೀಟರ್ ನೀರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ,
ಸೌಟ್‌ನಿಂದ ಮಾಡಬಹುದು.
ಈಗ ನೀವು ಕಲ್ಲಿನಲ್ಲಿ ಹಸಿ ಮೆಣಸು, ಶುಂಠಿ, ಕರಿ ಬೇವು ಇವೆಲ್ಲಾ ಕುಟ್ಟಿ ಪುಡಿ
ಮಾಡಿ ಮಜ್ಜಿಗೆಗೆ ಹಾಕಿ
ಕರಿಬೇವು ಚಿಕ್ಕದಾಗಿ ಕತ್ತರಿಸಿ ಹಾಕಿ
ರುಚಿಗೆ ತಕ್ಕ ಕಲ್ಲುಪ್ಪು ಕುಟ್ಟಿ ಪುಡಿ ಮಾಡಿ ಸೇರಿಸಿ ಮಿಕ್ಸ್ ಮಾಡಿ
ಈಗ ಮೊಸರಿಗೆ ಹಾಕಿ ಚೆನ್ನಾಗಿ ಕಲೆಸಿ
ನಂತರ ಮಣ್ಣಿನ ಮಡಿಕೆಯಲ್ಲಿ ಹಾಕಿಡಿ, 2-3 ಗಂಟೆ ಬಿಟ್ಟರೆ ಮೊಸರು ತುಂಬಾ ತಣ್ಣನೆ
ಇರುತ್ತದೆ, ಕುಡಿಯಲು ತುಂಬಾನೇ ರುಚಿಯಾಗಿರುತ್ತದೆ.
ಮಿಕ್ಸಿಯಲ್ಲಿ ನೀವು ಮಸಾಲೆ ಮಜ್ಜಿಗೆ ಮಾಡುವುದಾದರೆ
ನೀವು ಹಸಿ ಮೆಣಸು, ಶುಂಠಿ, ಕೊತ್ತಂಬರಿ ಸೊಪ್ಪು, ಕರಿಬೇವು ಇವುಗಳನ್ನು
ಮಿಕ್ಸಿ ಜಾರ್‌ಗೆ ಹಾಕಿ ಮೊದಲಿಗೆ ಸ್ವಲ್ಪವೇ ಸ್ವಲ್ಪ ಮೊಸರು ಹಾಕಿ 2-3 ರೌಂಡ್
ತಿರುಗಿಸಿ
ನಂತರ ಮೊಸರು ಹಾಕಿ, ಉಪ್ಪು ಪುಡಿ ಸೇರಿಸಿ, ನೀರು ಸೇರಿಸಿ ಎರಡು ರೌಂಡ್
ತಿರುಗಿಸಿದರೆ ಮಸಾಲೆ ಮಜ್ಜಿಗೆ ರೆಡಿ, ಇದನ್ನು ಹಾಗೆಯೇ ಸರ್ವ್ ಮಾಡಬಹುದು ಅಥವಾ
ಮಣ್ಣಿನ ಮಡಿಕೆಯಲ್ಲಿ ಹಾಕಿಟ್ಟರೆ ಮತ್ತಷ್ಟು ರುಚಿಯಾಗಿರುತ್ತದೆ.
ಮಣ್ಣಿನ ಮಡಿಕೆಯಲ್ಲಿ ಮಜ್ಜಿಗೆ ಹಾಕಿಡುವುದರಿಂದ
ಪ್ರಯೋಜನಗಳೆಂದರೆ
ಮಜ್ಜಿಗೆಗೆ ಮತ್ತಷ್ಟು ಖನಿಜಾಂಶಗಳು ಸೇರಿಕೊಳ್ಳುವುದು
ಫ್ರಿಡ್ಜ್‌ನಲ್ಲಿ ಇಟ್ಟಷ್ಟೇ ತಣ್ಣಗಾಗಿರುತ್ತದೆ, ಅಲ್ಲದೆ ಅಷ್ಟೇ
ರುಚಿಯಾಗಿರುತ್ತದೆ.
ಇನ್ನು ಮಣ್ಣಿನ ಮಡಿಕೆಯಲ್ಲಿ ಮಜ್ಜಿಗೆ ಹಾಕಿಟ್ಟರೆ ಮಜ್ಜಿಗೆ ಬೇಗನೆ
ಹುಳಿಯಾಗಲ್ಲ.
ಮಜ್ಜಿಗೆಯಿಂದ ದೊರೆಯುವ ಪ್ರಯೋಜನಗಳು
ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡುತ್ತದೆ
ದೇಹದಲ್ಲಿ ನಿರ್ಜಲೀಕರಣ ಉಂಟಾಗುವುದನ್ನು ತಡೆಗಟ್ಟುತ್ತದೆ
ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು
ಮಜ್ಜಿಗೆ ಕುಡಿಯುವುದರಿಂದ ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು
ದೇಹಕ್ಕೆ ಬೇಕಾದ ಪೋಷಕಾಂಶ ದೊರೆಯುತ್ತದೆ
ಮೂಳೆಯ ಆರೋಗ್ಯಕ್ಕೆ, ಹಲ್ಲುಗಳ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ತ್ವಚೆಯ ಹೊಳಪು ಹೆಚ್ಚಿಸುತ್ತದೆ
ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡುವಲ್ಲಿ ಸಹಕರಿ
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಹೊಟ್ಟೆಯ ಆರೋಗ್ಯಕ್ಕೆ ಒಳ್ಳೆಯದು
ಅಸಿಡಿಟಿ ಸಮಸ್ಯೆ ನಿಯಂತ್ರಣದಲ್ಲಿಡುತ್ತದೆ



Click it and Unblock the Notifications