Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಲೆಮನ್ ಸೋಡಾ ಮಾಡುವ ಸಮಯದಲ್ಲಿಯೇ ಮಡ್ಕಾ ಸೋಡಾ ಮಾಡಬಹುದು ನೋಡಿ
ಈ ಮಡ್ಕಾ ಸೋಡಾ ಸಿಕ್ಕೆ ಅದನ್ನು ಕುಡಿಯದೆ ಮುಂದೆ ಹೋಗಲು ಮನಸ್ಸಾಗಲ್ಲ, ಏಕೆಂದರೆ ಮಡ್ಕಾ ಸೋಡಾ ರುಚಿ ಹಾಗಿರುತ್ತದೆ. ಮಡ್ಕಾ ಸೋಡಾ ನೀವು ಬೇಕಾದರೂ ಮನೆಯಲ್ಲಿ ಸುಲಭವಾಗಿ ಮಾಡಿ ಸವಿಯಬಹುದು, ಈಗ ಬೇಸಿಗೆ ರಜೆ, ಮಕ್ಕಳಿಗೆ ಹೀಗೆ ಮಾಡಿ ಕೊಟ್ಟರೆ ತುಂಬ ನೇ ಇಷ್ಟವಾಗುವುದು.
ಅಲ್ಲದೆ ಮದುವೆ-ಫಂಕ್ಷನ್‌ಗಳಿಗೆ ಹೋಗಿ ಬಾಡೂಟ ಸವಿದು ಬಂದಾಗ ಈ ಬಗೆಯ ಮಡ್ಕಾ ಸೋಡಾ ಕುಡಿದರೆ ತಿಂದ ಆಹಾರ ಜೀರ್ಣವಾಗಲು ಸಹಕಾರಿ, ಅಲ್ಲದೆ ಮಡ್ಕಾ ಸೋಡಾ ಒಂದು ಬಗೆಯ ರಿಫ್ರೆಷ್ ಅನುಭವ ನೀಡುವುದು.
ನೀವು ಬೇಕಿದ್ದರೆ ಹಸಿ ಮೆಣಸು ಸೇರಿಸದೆ ಕೂಡ ಮಾಡಬಹುದು, ಆದರೆ ಸ್ವಲ್ಪ ಖಡಕ್ ಸೋಡಾ ಇಷ್ಟಪಡುವವರಾದರೆ ಹಸಿ ಮೆಣಸು ಸೇರಿಸಿ ಕುಡಿಯಿರಿ.

ಈ ಮಡ್ಕಾ ಸೋಡಾ ಮನೆಗೆ ನೆಂಟರಿಷ್ಟರು ಬಂದಾಗಲು ನೀಡಿದರೆ ಬಾಯಾರಿಕೆ ನೀಗುವುದು, ಏಕೆಂದರೆ ಈ ಬಿಸಿಲಿನಲ್ಲಿ ಯಾರೂ ಟೀ, ಕಾಫಿ ಅಂತ ಕುಡಿಯಲು ಇಷ್ಟಪಡಲ್ಲ, ಅದರ ಬದಲಿಗೆ ಹೀಗೆ ತಂಪಾದ ಪಾನೀಯ ಕುಡಿಯಲು ಬಯಸುತ್ತಾರೆ. ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:
ಬೇಕಾಗುವ ಸಾಮಗ್ರಿ
ಸ್ವಲ್ಪ ಕಾಮ ಕಸ್ತೂರಿ 2-3 ಚಮಚ
ನಿಂಬೆಹಣ್ಣು 1
1 ಹಸಿ ಮೆಣಸು
ಸಕ್ಕರೆ
ಉಪ್ಪು
ಮಣ್ಣಿನ ಮಡಿಕೆ(ಚಿಕ್ಕ ಗಾತ್ರದ್ದು)
ಐಸ್‌ಕ್ಯೂಬ್ಸ್
ಮಾಡುವ ವಿಧಾನ
- ನೀವು ಕಾಮ ಕಸ್ತೂರಿಗೆ ನೀರು ಹಾಕಿ ನೆನೆಸಿಡಿ, 5-10 ನಿಮಿಷ ನೆನೆಸಿದರೆ ಸಾಕಾಗುತ್ತೆ
- ನೀವು ಮಣ್ಣಿನ ಮಡಿಕೆಗೆ 2 ಚಮಚ ಕಾಮ ಕಸ್ತೂರಿ ಹಾಕಿ, ಅದಕ್ಕೆ 3-4 ಚಮಚ ಸಕ್ಕರೆ ಸೇರಿಸಿ, ಒಂದು ನಿಂಬೆಹಣ್ಣು, 1 ಹಸಿಮೆಣಸು, ಐಸ್‌ಕ್ಯೂಬ್ಸ್, ರುಚಿಗೆ ತಕ್ಕ ಉಪ್ಪು ಹಾಕಿ ಮಿಕ್ಸ್ ಮಾಡಿ
- ಈಗ ಸೋಡಾವನ್ನು ಸೇರಿಸಿ, ಇಷ್ಟು ಮಾಡಿದರೆ ಸಾಕು ಬಿಸಿಲಿನಲ್ಲಿ ಸವಿಯಲು ರುಚಿ-ರುಚಿಯಾದ ಮಡ್ಕಾ ಸೋಡಾ ರೆಡಿ.
- ಸಲಹೆ: ನೀವು ಸಕ್ಕರೆ ಹಾಗೇ ಬಳಸುವುದಕ್ಕಿಂತ ಪುಡಿ ಮಾಡಿಟ್ಟು ಬಳಸಿದರೆ ಬೇಗನೆ ಕರಗುವುದು, ಅಲ್ಲದೆ ಪುಡಿ ಮಾಡಿ ಡಬ್ಬದಲ್ಲಿ ಹಾಕಿಟ್ಟರೆ ಬೇಕಾದಾಗ ಬಳಸಬಹುದು.
- ಈ ಮಡ್ಕಾ ಸೋಡಾದಲ್ಲಿ ಕಾಮ ಕಸ್ತೂರಿ ಬಳಸುವುದರಿಂದ ದೇಹಕ್ಕೆ ತುಂಬಾನೇ ತಂಪು
- ಈ ಕಾಮ ಕಸ್ತೂರಿ ಪ್ರಯೋಜನವೆಂದರೆ:
- ಕಾಮ ಕಸ್ತೂರಿಯಲ್ಲಿ ಒಮೆಗಾ 3 ಕೊಬ್ಬಿನಂಶ ಅಧಿಕವಿದೆ, ಇದು ಒಟ್ಟು ಮೊತ್ತ ಆರೋಗ್ಯಕ್ಕೆ ಒಳ್ಳೆಯದು, ಯಾವುದೇ ಜ್ಯೂಸ್ ಜೊತೆ ಹಾಕಿ ಬೇಕಾದರೆ ಬಳಸಬಹುದು.
- ಇದರಲ್ಲಿ ನಾರಿನಂಶ ಅಧಿಕವಿದೆ
- ಕಾಮ ಕಸ್ತೂರಿಯಲ್ಲಿ ನಾರಿನಂಶ ಅಧಿಕವಿರುವುದರಿಂದ ಬೇಸಿಗೆಯಲ್ಲಿ ಕೆಲವರಿಗೆ ಮಲಬದ್ಧತೆ ಸಮಸ್ಯೆ ಕಾಡುವುದು ಅದನ್ನು ತಡೆಗಟ್ಟಲು ಸಹಕಾರಿಯಾಗಿದೆ.
- ತೂಕ ಇಳಿಕೆಗೆ ಸಹಾಯ ಮಾಡುತ್ತದೆ: ಈ ಬೀಜ ಹೊಟ್ಟೆಯನ್ನು ಸೇರಿದಾಗ ದಣಿವು ಕಡಿಮೆಯಾಗುವುದು, ಹಸಿವು ಕಡಿಮೆಯಾಗುವುದರಿಂದ ಇದರಿಂದ ತೂಕ ನಿಯಂತ್ರಣಕ್ಕೆ ಸಹಕಾರಿಯಾಗಿದೆ.
- ದೇಹದ ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ
- ಇದು ಕಾರ್ಬ್ಸ್ ಬೇಗನೆ ಸಕ್ಕರೆಯಂಶವಾಗಿ ಪರಿವರ್ತನೆಯಾಗುವುದನ್ನು ನಿಧಾನ ಮಾಡುವುದರಿಂದ ಮಧುಮೇಹವನ್ನು ನಿಯಂತ್ರಿಸಲು ಸಹಕಾರಿಯಾಗಿದೆ.
- ಹೃದಯದ ಆರೋಗ್ಯಕ್ಕೆ ಒಳ್ಳೆಯದು
- ಇದರಲ್ಲಿ ಒಮೆಗಾ 3 ಕೊಬ್ಬಿನಂಶ ಇರುವುದರಿಂದ ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ಇದು ಅತ್ಯಧಿಕ ರಕ್ತದೊತ್ತಡ ಕಡಿಮೆ ಮಾಡಲು ಕೂಡ ಸಹಕಾರಿಯಾಗಿದೆ.
- ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು: ಕಾಮ ಕಸ್ತೂರಿ ಮೂಳೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಅಲ್ಲದೆ ಚಯಪಚಯ ಕ್ರಿಯೆ ಉತ್ತಮವಾಗಿ ನಡೆಯಲು ಸಹಕಾರಿಯಾಗಿದೆ.
- ತ್ವಚೆಯ ಆರೋಗ್ಯಕ್ಕೆ ಒಳ್ಳೆಯದು
- ಕಾಮ ಕಸ್ತೂರಿ ತ್ವಚೆಯನ್ನು ಆಂತರಿಕವಾಗಿ ಪೋಷಣೆ ಮಾಡುತ್ತದೆ ಹಾಗಾಗಿ ತ್ವಚೆ ಆರೈಕೆಗೆ ತುಂಬಾನೇ ಒಳ್ಳೆಯದು.



Click it and Unblock the Notifications