ಮಾವಿನಕಾಯಿ ಉಪ್ಪಿನಕಾಯಿ ಹೀಗೆ ಹಾಕಿದರೆ ಒಂದು ವರ್ಷ ಇಟ್ಟರೂ ಹಾಳಾಗಲ್ಲ

Posted By:

ಈಗ ಮಾವಿನಕಾಯಿ ಸಮಯ, ಈ ಸಮಯದಲ್ಲಿ ಉಪ್ಪಿನಕಾಯಿ ರೆಡಿ ಮಾಡಿಟ್ಟರೆ ನೀವು ವರ್ಷದವರೆಗೆ ಇಟ್ಟು ಬಳಸಬಹುದು. ಈ ಮಾವಿನಕಾಯಿ ಉಪ್ಪಿನಕಾಯಿ ಊಟದ ಜೊತೆಗಿದ್ದರೆ ಊಟದ ರುಚಿ ಮತ್ತಷ್ಟು ಸೂಪರ್ ಆಗಿರುತ್ತದೆ. ಕೆಲವರು ಮಾವಿನಕಾಯಿ ಉಪ್ಪಿನಕಾಯಿ ದೂರ್ಘ ಸಮಯ ಇಟ್ಟಾಗ ಹಾಳಾಗುತ್ತದೆ , ತುಂಬಾ ಸಮಯ ಬಾಳಿಕೆ ಬರಲು ಏನು ಮಾಡಬೇಕೆಂದು ಕೇಳುತ್ತಾರೆ, ನೀವು ಹೀಗೊಮ್ಮೆ ಉಪ್ಪಿನಕಾಯಿ ಹಾಕಿಟ್ಟರೆ ಮುಂದಿನ ವರ್ಷ ಮಾವಿನಕಾಯಿ ಸೀಸನ್‌ ಬರುವವರೆಗೆ ಇಟ್ಟರೂ ಹಾಳಾಗಲ್ಲ ನೋಡಿ:

mango pickle

ಬೇಕಾಗುವ ಸಾಮಗ್ರಿ
ಮಾವಿನಕಾಯಿ 4-5 ಕೆಜಿ
2 ಚಮಚ ಮೆಂತೆ, 3 ಚಮಚ ಸಾಸಿವೆ, 8-10 ಒಣ ಮೆಣಸು
ಅರ್ಧ ಲೀಟರ್ ಸಾಸಿವೆಯೆಣ್ಣೆ
ಸ್ವಲ್ಪ ಸಾಸಿವೆ
ಸ್ವಲ್ಪ ಬೆಳ್ಳುಳ್ಳಿ
ಸ್ವಲ್ಪ ಕರಿಬೇವು
ಖಾರದ ಪುಡಿ 7-8 ಚಮಚ
2-3 ಚಮಚ ಅರಿಶಿಣ ಪುಡಿ
4 ಚಮಚ ವಿನೆಗರ್
2 ಚಮಚ ಇಂಗು ಪುಡಿ
ರುಚಿ ತಕ್ಕ ಉಪ್ಪು

ಮಾಡುವ ವಿಧಾನ

  • ನೀವು ಮಾವಿನಕಾಯಿಯ ತೊಟ್ಟು ಭಾಗ ಕೆತ್ತಿ, ನಂತರ ನೀರಿನಲ್ಲಿ ಹಾಕಿ ತೊಳೆಯಿರಿ, ನಂತರ ಅದರ ನೀರಿನಂಶ ಹೋಗಲು ಬಟ್ಟೆ ಮೇಲೆ ಹರಡಿ ಇಡಿ.
  • ಸ್ಟೆಪ್ 1
  • ನಂತರ ಮಾವಿನಕಾಯಿ ಕತ್ತರಿಸಿ
  • ನಂತರ ಚಿಕ್ಕದಾಗಿ ಕತ್ತರಿಸಿ
  • ನಂತರ ಒಂದು ಚಮಚ ಉಪ್ಪು ಹಾಕಿ ಮಿಕ್ಸ್‌ ಮಾಡಿ (ತುಂಬಾ ಉಪ್ಪು ಹಾಕಬೇಡಿ)
  • ನಂತರ ಚೆನ್ನಾಗಿ ಮಿಕ್ಸ್‌ ಮಾಡಿ
  • ನಂತರ ಬಿಸಿಲಿನಲ್ಲಿ ಬಟ್ಟೆ ಅಥವಾ ಚಾಪೆ ಮೆಲೆ ಹರಡಿ ಬಿಸಿಲಿನಲ್ಲಿ ಒಣಗಿಸಿ, ಈ ರೀತಿ 3-4 ದಿನ ಒಣಗಿಸಿ.

ಸ್ಟೆಪ್ 2

ಈಗ ಪ್ಯಾನ್‌ಗೆ 3 ಚಮಚ ಮೆಂತೆ ಹಾಕಿ, 3 ಚಮಚ ಸಾಸಿವೆ ಹಾಕಿ ರೋಸ್ಟ್‌ ಮಾಡಿ
8-10 ಒಣ ಮೆಣಸು ಹಾಕಿ ಸ್ವಲ್ಪ ರೋಸ್ಟ್‌ ಮಾಡಿ ತಟ್ಟೆಗೆ ಹಾಕಿ ಅದರ ಬಿಸಿ ಸ್ವಲ್ಪ ಆರಿದಾಗ ಪುಡಿ ಮಾಡಿ (ಪುಡಿ ಮಾಡುವಾಗ ಸ್ವಲ್ಪ ಬಿಸಿ ಇರಬೇಕು)

ಸ್ಟೆಪ್ 3

  • ಈಗ ನೀವು ದಪ್ಪ ತಳವಿರುವ ಪಾತ್ರೆಗೆ ಅರ್ಧ ಲೀಟರ್ ಎಣ್ಣೆ ಹಾಕಿ
  • ನಂತರ ಸಾಸಿವೆ ಹಾಕಿ, ಸಾಸಿವೆ ಚಟ್‌ಪಟ್ ಶಬ್ದ ಮಾಡುವಾಗ ಬೆಳ್ಳುಳ್ಳಿ ಎಸಳು ಹಾಕಿ, ನಂತರ ಸ್ವಲ್ಪ ಕರಿಬೇವು ಹಾಕಿ, ನಂತರ ಉರಿ ಆಫ್‌ ಮಾಡಿ ಮಾಡಿಟ್ಟ ಪುಡಿಯನ್ನು ಹಾಕಿ. ನಂತರ 8 ಚಮಚ ಹೆಚ್ಚು ಖಾರವಿಲ್ಲದ ಮೆಣಸಿನ ಪುಡಿ, 2 ಚಮಚ ಅರಿಶಿಣ ಪುಡಿ ಸೇರಿಸಿ ನಂತರ ಚೆನ್ನಾಗಿ ಮಿಕ್ಸ್‌ ಮಾಡಿ
  • ನಂತರ ಕುದಿಸಿ ಆರಿದ ನೀರು 4 ಚಮಚ ವಿನೆಗರ್ ಸೇರಿಸಿ ಸ್ಟೌವ್‌ ಮತ್ತೆ ಆನ್‌ ಮಾಡಿ, 2 ಚಮಚ ಇಂಗು ಪುಡಿ ಸೇರಿಸಿ, ನಂತರ ರುಚಿಗೆ ತಕ್ಕ ಉಪ್ಪು ಸೇರಿಸಿ
  • ನಂತರ ಬಿಸಿಲಿನಲ್ಲಿ ಸ್ವಲ್ಪ ಒಣಗಿಸಿದ ಮಾವಿನಕಾಯಿ ಸೇರಿಸಿ ಮಿಕ್ಸ್ ಮಾಡಿ, ಸ್ಟೌವ್‌ ಆಫ್‌ ಮಾಡಿ, ಈ ಸೂಪರ್‌ ರುಚಿಯ ಮಾವಿನಕಾಯಿ ಉಪ್ಪಿನಕಾಯಿ ರೆಡಿ, ಅಲ್ಲದೆ ಈ ಉಪ್ಪಿನಕಾಯಿ ದೀರ್ಘ ಸಮಯದವರೆಗೆ ಇಡಬಹುದು ಕೂಡ.
[ of 5 - Users]
Story first published: Sunday, March 2, 2025, 23:12 [IST]
X
Desktop Bottom Promotion