Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ ಜೀನಿ ದೋಸೆ ಮಾಡಿದರೆ ಮಕ್ಕಳು ಇಷ್ಟಪಟ್ಟು ತಿಂತಾರೆ, ಒಂದು ದೋಸೆ ಸಾಕು ಹೊಟ್ಟೆ ತುಂಬಲು
ಜೀನಿ ದೋಸೆ ನೀವು ಮಾಡಿದ್ದೇ ಆದರೆ ಮಕ್ಕಳು ಅಮ್ಮಾ ಥೇಟ್ ರೆಸ್ಟೋರೆಂಟ್‌ನಲ್ಲಿ ಸಿಗುವ ದೋಸೆಯಂತಿದೆ ಎಂದು ಹೇಳುತ್ತಾರೆ, ಅಷ್ಟೊಂದು ಸ್ಪೆಷಲ್ ಆಗಿದೆ ಈ ದೋಸೆ, ಅಲ್ಲದೆ ಈ ದೋಸೆ ತಿಂದರೆ ಮಕ್ಕಳು ತರಕಾರಿ ತಿನ್ನಲ್ಲ ಎಂಬ ಕಂಪ್ಲೇಂಟ್ ಕೂಡ ನೀವು ಮಾಡಲ್ಲ, ಏಕೆಂದರೆ ಇದರಲ್ಲಿ ನಾರಿನಂಶವಿದೆ, ಕೊಬ್ಬಿನಂಶವಿದೆ, ಕ್ಯಾಲ್ಸಿಯಂ ಅಂಶವಿದೆ ಹೀಗೆ ಪೌಷ್ಠಿಕಾಂಶದ ದೊಸೆ ಇದಾಗಿದೆ. ಒಂದು ದೋಸೆ ಮಾಡಿ ಕೊಟ್ಟರೆ ಮುಗೀತು ಹೊಟ್ಟೆ ಕೂಡ ತುಂಬುವುದು, ಬನ್ನಿ ಈ ದೋಸೆ ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗಿರುವ ಸಾಮಗ್ರಿ
ದೋಸೆ ಹಿಟ್ಟು
ಈರುಳ್ಳಿ
ಕ್ಯಾಪ್ಸಿಕಂ
ಸ್ವಲ್ಪ ಕ್ಯಾಬೇಜ್
ಅರ್ಧ ಕಪ್ ಟೊಮೆಟೊ
ಕೊತ್ತಂಬರಿ ಸೊಪ್ಪು
1/4 ಕಪ್ ಟೊಮೆಟೊ ಕೆಚಪ್
ರೆಡ್ ಚಿಲ್ಲಿ ಸಾಸ್
1.5 ಚಮಚ ಪಾವ್‌ಬಾಜಿ ಮಸಾಲ ಪುಡಿ
ಸ್ವಲ್ಪ ಮಸಾಲ ಪುಡಿ
ಬೆಣ್ಣೆ
ಎಣ್ಣೆ
ತುರಿದ ಚೀಸ್
Schezwan Sauce (ಇದ್ದರೆ ಬಳಸಿ)
ಮಾಡುವ ವಿಧಾನ
ನೀವು ತರಕಾರಿಗಳನ್ನು ಕತ್ತರಿಸಿ ಇಡಿ
ಚೀಸ್ ತುರಿದು ಇಡಿ
ಮಸಾಲೆ ಪುಡಿ ಸೈಡ್‌ನಲ್ಲಿ ಹಾಕಿಡಿ
ದೋಸೆ ಕಲ್ಲು ಬಿಸಿ ಮಾಡಿ, ಎಣ್ಣೆ ಸವರಿ
ದೋಸೆ ಹುಟ್ಟು ಹಾಕಿ
ಅದರ ಮೇಲೆ ಚಿಲ್ಲಿ ಸಾಸ್ ಸವರಿ
ಟೊಮೆಟೊ ಸಾಸ್ ಸವರಿ
Schezwan Sauce ಸವರಿ
ಅದರ ಮೇಲೆ ಮಸಾಲ ಪುಡಿ ಉದುರಿಸಿ
ಟೊಮೆಟೊ ಉದುರಿಸಿ
ಕ್ಯಾಬೇಜ್ ಉದುರಿಸಿ
ಬಳಿಕ ಚೀಸ್ ಉದುರಿಸಿ
ಅದರ ಮೇಲೆ ಬೆಣ್ಣೆ ಇಟ್ಟು ಅದನ್ನು ರೋಲ್ ಮಾಡಿ ಸರ್ವ್ ಮಾಡಿ, ಮಕ್ಕಳು ಅಮ್ಮಾ
ಸೂಪರ್ ಹೀಗೆನೆ ಮಾಡು ಅಂತ ಸವಿಯುತ್ತಾರೆ.
ಇದನ್ನು ಮತ್ತೊಂದು ರೀತಿಯಲ್ಲಿಯೂ ಮಾಡಬಹುದು
ನೀವು ಒಂದು ಪ್ಯಾನ್‌ಗೆ 2 ಚಮಚ ಎಣ್ಣೆ ಹಾಕಿ ಅದರಲ್ಲಿ ಸ್ವಲ್ಪ ಉದ್ದು, ಸ್ವಲ್ಪ
ಕಡ್ಲೆಬೇಳೆ, ಸ್ವಲ್ಪ ಜೀರಿಗೆ ಹಾಕಿ, ಸ್ವಲ್ಪ ಕರಿಬೇವು ಸೇರಿಸಿ.
ಜೀರಿಗೆ ಚಟ್ ಪಟ್ ಶಬ್ದ ಮಾಡುವಾಗ ಈರುಳ್ಳಿ ಮತ್ತು ಹಸಿ ಮೆಣಸು ಸೇರಿಸಿ
ಈರುಳ್ಳಿ ಸ್ವಲ್ಪ ಮೆತ್ತಗಾಗುವವರೆಗೆ ಫ್ರೈ ಮಾಡಿ.
ನಂತರ ಆಲೂಗಡ್ಡೆಯನ್ನು ಮ್ಯಾಶ್ ಮಾಡಿ ಹಾಕಿ
ಸ್ವಲ್ಪ ಅರಿಶಿಣ ಸೇರಿಸಿ
ರುಚಿಗೆ ತಕ್ಕ ಉಪ್ಪು ಸೇರಿಸಿ
ಚೆನ್ನಾಗಿ ಮಿಕ್ಸ್ ಮಾಡಿ ಸ್ಟೌವ್‌ನಿಂದ ಇಳಿಸಿ ಇಡಿ
ಈಗ ನೀವು ದೋಸೆ ಹಿಟ್ಟನ್ನು ದೋಸೆ ಕಾವಲಿಗೆ ಹಾಕಿ, ನಂತರ ಅದರ ಮೇಲೆ ಚಿಲ್ಲಿ
ಸಾಸ್, ಟೊಮೆಟೊ ಸಾಸ್ ಸವರಿ, ಅದರ ಮೇಲೆ ಈ ಆಲೂ ಬಾಜಿ ಹರಡಿ, ನಂತರ ತುರಿದ ಚಿಸ್
ಹಾಕಿದರೆ ಚೀಸಿ ದೋಸೆ ರೆಡಿಯಾಗಿರುತ್ತದೆ.
ಎರಡೂ ದೋಸೆ ಕೂಡ ಮಾಡುವ ವಿಧಾನ ಒಂದೇ ರೀತಿ ಇದ್ದು ತುಂಬಾನೇ
ರುಚಿಯಾಗಿರುತ್ತದೆ.



Click it and Unblock the Notifications