Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹುರಿಗಡಲೆ ಚಟ್ನಿ ಹೀಗೆ ತಯಾರಿಸಿದರೆ ಇವೆಯಲ್ಲಾ ಅಷ್ಟೊಂದು ರುಚಿಯಾಗಿರುತ್ತೆ
ಹುರಿಗಡಲೆಯ ಚಟ್ನಿ ಬೆಳಗ್ಗಿನ ಬ್ರೇಕ್‌ಫಾಸ್ಟ್ ಆದ ಇಡ್ಲಿ, ದೋಸೆ, ಚಿತ್ರಾನ್ನ ಇವುಗಳಿಗೆ ಸೂಪರ್ ಕಾಂಬಿನೇಷನ್, ಅದರಲ್ಲಿಯೂ ಹುರಿಗಡಲೆ ಚಟ್ನಿಯನ್ನು ನೀವು ಹೀಗೆ ಮಾಡಿದರೆ ಇದೆಯಲ್ಲಾ ಚಟ್ನಿ ಸೂಪರ್ ರುಚಿಯಾಗಿರುತ್ತೆ, ಇನ್ನು ಬೇಕೆಂದು ಕೇಳಿ ಪಡೆಯುತ್ತೀರಿ, ಬನ್ನಿ ಹುರಿಗಡಲೆ ಚಟ್ನಿ ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ:
ಹುರಿಗಡಲೆ ಒಂದುಕಪ್
ಈರುಳ್ಳಿ 2 (ಸಾಧಾರಣಗಾತ್ರದ್ದು)
5-6 ಒಣಮೆಣಸು (ಸ್ವಲ್ಪ ರೋಸ್ಟ್ ಮಾಡಿದ್ದು)
ಜೀರಿಗೆ 1 ಚಮಚ
ಸ್ವಲ್ಪ ಸಾಸಿವೆ
ಚಿಟಿಕೆಯಷ್ಟು ಅರಿಶಿಣ ಪುಡಿ
ರುಚಿಗೆ ತಕ್ಕ ಉಪ್ಪು
ಅರ್ಧ ನಿಂಬೆಹಣ್ಣು
ಸ್ವಲ್ಪ ಕೊತ್ತಂಬರಿ ಸೊಪ್ಪು
ಮಾಡುವುದು ಹೇಗೆ?
ಹುರಿಗಡಲೆಯನ್ನು ಮಿಕ್ಸಿ ಜಾರ್‌ಗೆ ಹಾಕಿ ನುಣ್ಣನೆ ಪುಡಿ ಮಾಡಿ ಒಂದು ಬೌಲ್‌ಗೆ
ಹಾಕಿ
ಈಗ ಒಣ ಮೆಣಸು ಕೂಡ ಪುಡಿ ಹುರಿಗಡಲೆ ಮಿಶ್ರಣ ಹಾಕಿ
ನಂತರ ಈ ಮಿಶ್ರಣಕ್ಕೆ ಹುರಿಗಡಲೆ 1 ಕಪ್ ಹಾಕಿದ್ದರೆ 2 ಕಪ್ ಈರು ಹಾಕಿ ಮಿಕ್ಸ್
ಮಾಡಿ
ಸ್ಟೆಪ್ 2
- ಈಗ ಬಾಣಲೆಗೆ ಎಣ್ಣೆ ಹಾಕಿ ಕಾಯಿಸಿ, ಎಣ್ಣೆ ಕಾದಾಗ ಜೀರಿಗೆ ಮತ್ತು ಸಾಸಿವೆ ಹಾಕಿ(ನೀವು ಬೇಕಿದ್ದರೆ ಜೀರಿಗೆ ಬಳಸದೆಯೂ ಇರಬಹುದು)
- ಈಗನೀಉ ಈರುಳ್ಳಿ ಸೇರಿಸಿ
- ಈರುಳ್ಳಿ ಸ್ವಲ್ಪ ಮೆತ್ತಗಾದಾಗ ರುಬ್ಬಿದ ಹುರಿಗಡಲೆ ಪುಡಿಯ ಪೇಸ್ಟ್ ಹಾಕಿ,ಚಿಟಿಕೆಯಷ್ಟು ಅರಿಶಿಣ ಸೇರಿಸಿ.
- ಉಪ್ಪು-ಖಾರ ಸರಿಯಾಗಿದೆಯೇ ನೋಡಿ. ನಂತರ ಉರಿ ಆಫ್ ಮಾಡಿ
- ರೆಡಿಯಾದ ಚಟ್ನಿಗೆ ನೀವು ಸ್ವಲ್ಪ ಕೊತ್ತಂಬರಿ ಸೊಪ್ಪು ಕೊಡಬಹುದು, ಕೊಡದೆಯೂ ಇರಬಹುದು.
ಹುರಿಗಡಲೆ ಚಟ್ನಿ ತೆಂಗಿನಕಾಯಿ ಹಾಕಿ ಮಾಡುವುದಾದರೆ
ಅರ್ಧ ಕಪ್ ಹುರಿಗಡಲೆ
1 ಈರುಳ್ಳಿ
3-4 ಹಸಿಮೆಣಸು
ಸ್ವಲ್ಪ ಹುಣಸೆಹಣ್ಣು
ರುಚಿಗೆ ತಕ್ಕ ಉಪ್ಪು
ಅರ್ಧ ಕಪ್ ತೆಂಗಿನ ತುರಿ
ಒಗ್ಗರಣೆಗೆ
1 ಚಮಚ ಎಣ್ಣೆ
ಸ್ವಲ್ಪ ಸಾಸಿವೆ, ಸ್ವಲ್ಪ ಕರಿಬೇವು
ಮಾಡುವ ವಿಧಾನ
ನೀವು ಎಲ್ಲಾ ಸಾಮಗ್ರಿ ಜೊತೆಗೆ ಹಾಕಿ ನುಣ್ಣನೆ ರುಬ್ಬಿಕೊಳ್ಳಿ, ನೀರು ನೀರಾಗಿ ಬೇಕೆಂದರೆ ಇನ್ನೂ ಸ್ವಲ್ಪ ನೀರು ಹಾಕಿ ರುಬ್ಬಿ, ನಂತರ ನೀವು ಒಗ್ಗರಣೆ ಹಾಕಿದರೆ ರುಚಿಯಾದ ಚಟ್ನಿ ರೆಡಿ.
ಈ ಚಟ್ನಿ ದೋಸೆ ಮತ್ತು ಇಡ್ಲಿ ಜೊತೆ ತಿನ್ನಲು ತುಂಬಾನೇ ರುಚಿಯಾಗಿರುತ್ತೆ.



Click it and Unblock the Notifications