Latest Updates
-
ದೇಹದಲ್ಲಿ ರಕ್ತ ಕಡಿಮೆ ಆಗಿದ್ರೆ ಈ ಎಳ್ಳುಂಡೆ ಮಾಡಿ: ತಿಂಗಳ ಕಾಲ ಇಟ್ಟು ಸವಿಯಬಹುದು! -
ಕರ್ನಾಟಕ ಬಜೆಟ್ 2026: ಆರೋಗ್ಯ ವಲಯಕ್ಕೆ ಬಂಪರ್, ಹೊಸ ಯೋಜನೆಗಳೇನು ನೋಡಿ! -
ನಾಳೆ ಸೂರ್ಯ-ಬುಧ ಸಂಯೋಗ: ಬುಧಾದಿತ್ಯ ಯೋಗದಿಂದ ಈ ರಾಶಿಯವರ ಬದುಕಲ್ಲಿ ಬೆಳಕು! -
ತೂಕ ಇಳಿಸಲು ಪೇಪರ್ ಅಷ್ಟು ತೆಳುವಾದ ರಾಗಿ ದೋಸೆ ಮಾಡಿ! -
ಜೀವನದಲ್ಲಿ ಮಹತ್ವದ ಬದಲಾವಣೆ, ವೈವಾಹಿಕ ಯೋಗ! ಕೊಂಚ ಒತ್ತಡ, ತಾಳ್ಮೆ ಇರಲಿ -
March 06 Horoscope: ಸಾಲ ನೀಡುವಾಗ ಹತ್ತು ಬಾರಿ ಆಲೋಚಿಸಿ! -
ಮೈದಾ, ಮೊಟ್ಟೆ ಎರಡೂ ಬೇಡ! ಈ ಹೊಸ ರುಚಿಯ ಕೇಕ್ ಮಾಡಿ ನೋಡಿ.. ಶುಗರ್ ಇರುವವರು ತಿನ್ನಬಹುದು -
ಉದ್ದು ಬೇಡ 1 ಕಪ್ ರವೆ ಇದ್ರೆ ಥಟ್ ಅಂತ ವಡೆ ಮಾಡಿಕೊಳ್ಳಿ: ಬ್ರೇಕ್ಫಾಸ್ಟ್ಗೆ ಇದು ಬೆಸ್ಟ್ ರೆಸಿಪಿ! -
ಕೊನೆಗೂ ಕಣ್ಣು ಬಿಟ್ಟ ಶುಕ್ರ-ಶನಿ: ಈ ರಾಶಿಯವರ ಜೀವನದಲ್ಲಿ ಭೌತಿಕ ಸುಖ! ಸಂಪತ್ತು ತುಂಬಿ ತುಳುಕಲಿದೆ -
ಬದನೆಕಾಯಿ ಕಹಿ ತೆಗೆಯೋದು ಹೇಗೆ? ಈ ಸಿಂಪಲ್ ಟ್ರಿಕ್ ಬಳಸಿ.. ಬಲು ರುಚಿ! ಕಹಿ ಅನ್ನೋದೇ ಇರಲ್ಲ
ಬೇಸಿಗೆಯಲ್ಲಿ ಊಟ ತೃಪ್ತಿ ಆಗಬೇಕೆಂದರೆ ಇಂಥ ಹಸಿ ಮಜ್ಜಿಗೆ ಹುಳಿ ಇರಬೇಕು, ಮಾಡುವುದು ಹೇಗೆ?
ಹಸಿ ಮಜ್ಜಿಗೆ ಹುಳಿ ಇದ್ದರೆ ಅದರಲ್ಲಿಯೂ ಈ ಬೇಸಿಗೆಯಲ್ಲಿ ಊಟದ ಜೊತೆ ಇದ್ದರೆ ಊಟದ ರುಚಿ ಸೂಪರ್ ಆಗಿರುತ್ತದೆ, ಅಲ್ಲದೆ ಆಹಾರ ತಿಂದಾಗ ತುಂಬಾನೇ ತೃಪ್ತಿ ಅನಿಸುವುದು. ಈ ಹಸಿ ಮಜ್ಜಿಗೆ ಹುಳಿ ಮಾಡುವ ವಿಧಾನ ಸರಳವಾಗಿದೆ. ಕೆಲವರು ಮಜ್ಜಿಗೆ ಹುಳಿಮಾಡುವಾಗ ಅದು ಅಷ್ಟೊಂದು ಪರ್ಫೆಕ್ಟ್ ಆಗಿ ಬರುವುದಿಲ್ಲ, ಆದರೆ ಈ ರೀತಿ ಮಾಡಿ ನೋಡಿ ಹಸಿ ಮಜ್ಜಿಗೆ ಹುಳಿ ತುಂಬಾನೇ ರುಚಿಯಾಗಿರುತ್ತದೆ.

ಬೇಕಾಗುವ ಸಾಮಗ್ರಿ
ಅರ್ಧ ಲೀಟರ್ ಹುಳಿ ಮೊಸರು
1 ಕಪ್ ನೀರು
1 ಚಮಚ ಎಣ್ಣೆ
5-6 ಎಸಳು ಬೆಳ್ಳುಳ್ಳಿ
ಒಂದು ಚಿಕ್ಕ ತುಂಡು ಶುಂಠಿ
4-5 ಹಸಿ ಮೆಣಸು(ಖಾರಕ್ಕೆ ತಕ್ಕಂತೆ ಹಸಿ ಮೆಣಸು ಇನ್ನೂ ಹೆಚ್ಚು ಬಳಸಬಹುದು ಅಥವಾ
ಕಡಿಮೆಯೂ ಬಳಸಬಹುದು)
ಅರ್ಧ ಚಮಚ ಕಾಳು ಮೆಣಸು
1 ಕಪ್ ತೆಂಗಿನತುರಿ ( ಫ್ರೆಷ್, ಫ್ರಿಡ್ಜ್‌ನಲ್ಲಿಟ್ಟದ್ದು ಬಳಸಬೇಡಿ)
ಒಂದು ಮುಷ್ಠಿಯಷ್ಟು ಕೊತ್ತಂಬರಿ ಸೊಪ್ಪು
1 ಚಮಚ ಜೀರಿಗೆ
ಒಗ್ಗರಣೆಗೆ
1 ಚಮಚ ಎಣ್ಣೆ
ಸ್ವಲ್ಪ ಸಾಸಿವೆ
ಸ್ವಲ್ಪ ಜೀರಿಗೆ
1 ಚಿಕ್ಕ ಈರುಳ್ಳಿ
2 ಒಣ ಮೆಣಸು
ಸ್ವಲ್ಪ ಕರಿಬೇವು
ಚಿಟಿಕೆಯಷ್ಟು ಇಂಗು
ರುಚಿಗೆ ತಕ್ಕ ಉಪ್ಪು
ಮಾಡುವ ವಿಧಾನ
- ಅರ್ಧ ಲೀಟರ್ ಮೊಸರಿಗೆ ಒಂದು ಕಪ್ ನೀರು ಹಾಕಿ ಮಿಕ್ಸ್ ಮಾಡಿ ಮಜ್ಜಿಗೆ ಮಾಡಿ
- ನೀವು ತೆಂಗಿನ ತುರಿಗೆ ಬೆಳ್ಳುಳ್ಳಿ, ಶುಂಠಿ, ಹಸಿ ಮೆಣಸು, ಕೊತ್ತಂಬರಿ ಸೊಪ್ಪು ಹಾಕಿ ಪೇಸ್ಟ್ ಮಾಡಿ, ಪೇಸ್ಟ್ ನುಣ್ಣನೆ ಬೇಕಾದರೆ ಮಾಡಬಹುದು, ಸ್ವಲ್ಪ ತರಿತರಿ ಬೇಕೆಂದರೆ ಹಾಗೆಯೂ ಮಾಡಬಹುದು.
- ಈಗ ಪಾತ್ರೆ ಬಿಸಿ ಮಾಡಿ ಅದಕ್ಕೆ ಒಂದು ಚಮಚ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಸ್ವಲ್ಪ ಜೀರಿಗೆ ಹಾಕಿ, ಜೀರಿಗೆ ಚಟ್‌ಪಟ ಶಬ್ದ ಮಾಡುವಾಗ ರುಬ್ಬದ ಮಸಾಲೆ ಹಾಕಿ ರುಚಿಗೆ ತಕ್ಕ ಉಪ್ಪು ಹಾಕಿ ಕುದಿಸಿ, ನಂತರ ಉರಿಯಿಂದ ಇಳಿಸಿ.
- ಬಿಸಿ ಸ್ವಲ್ಪ ಕಡಿಮೆಯಾದ ಮೇಲೆ (ಸಂಪೂರ್ಣ ತಣ್ಣಗಾಗಬಾರದು, ಸ್ವಲ್ಪ ಬಿಸಿ ಇರಬೇಕು), ಆವಾಗ ಮಜ್ಜಿಗೆ ಸೇರಿಸಿ ಮಿಕ್ಸ್ ಮಾಡಿ
- ಈ ಒಗ್ಗರಣೆ ಹಾಕಿ
- ಈಗ ಒಗ್ಗರಣೆ ಪಾತ್ರೆಗೆ ನೀವು 1 ಚಮಚ ಎಣ್ಣೆ ಹಾಕಿ, ನಂತರ ಸ್ವಲ್ಪ ಸಾಸಿವೆ ಹಾಕಿ, ಸಾಸಿವೆ ಚಟ್‌ಪಟ್ ಶಬ್ದ ಮಾಡುವಾಗ, ಸ್ವಲ್ಪ ಕರಿಬೇವು ಹಾಕಿ, ಸ್ವಲ್ಪ ಇಂಗು ಹಾಕಿ, ಒಣ ಮೆಣಸು ಮುರಿದು ಹಾಕಿ ನಂತರ ಹಸಿ ಮಜ್ಜಿಗೆ ಹುಳಿಗೆ ಸೇರಿಸಿದರೆ ಅನ್ನದ ಜೊತೆ ತಿನ್ನಲು ತುಂಬಾನೇ ಚೆನ್ನಾಗಿರುತ್ತದೆ.



Click it and Unblock the Notifications