Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮುದ್ದೆ, ಅನ್ನಕ್ಕೆ ಈ ಹಸಿಗೊಜ್ಜು ಇದ್ದರೆ ಇನ್ನೇನು ಬೇಕು? ಪಟ್ ಅಂತ ಮಾಡಬಹುದು
ಅನ್ನಕ್ಕೆ ಸಾರು ಸ್ವಲ್ಪ ಆಚೆ-ಈಚೆಯಾದರು ನಡೆಯುತ್ತೆ ಆದರೆ ಮುದ್ದೆಗೆ ಆಗಲ್ಲ, ಮುದ್ದೆ ಮಾಡಿದರೆ ಅದಕ್ಕೆ ತಕ್ಕದಾದ ಸಾರು ಮಾಡಲೇಬೇಕು, ಆವಾಗ ಮಾತ್ರ ಮುದ್ದೆ ರುಚಿ ಅನಿಸುವುದು ಅಲ್ವಾ? ಮುದ್ದೆಗೆ ಹಲವು ಬಗೆಯ ಸಾರು ಮಾಡುತ್ತಾರೆ ಅದರಲ್ಲೊಂದು ತುಂಬಾ ಸರಳವಾದ ರೆಸಿಪಿಯೆಂದರೆ ಹಸಿ ಕೈ ಗೊಜ್ಜು. ಬದನೆಕಾಯಿ ಸುಟ್ಟು ಮಾಡುವ ಈ ಗೊಜ್ಜು ಇದ್ದರೆ ಮುದ್ದೆ ಮಾತ್ರವಲ್ಲ, ರೊಟ್ಟಿ, ಜೋಳದ ರೊಟ್ಟಿ, ಚಪಾತಿ, ಅನ್ನ ಎಲ್ಲಕ್ಕೂ ಒಳ್ಳೆಯ ಕಾಂಬಿನೇಷನ್.
ಈ ಗೊಜ್ಜು ಸುಲಭವಾಗಿ ಮಾಡಬಹುದು, ಬದನೆಕಾಯಿ ಸುಟ್ಟು ಮಾಡುವ ರೆಸಿಪಿ ಇದಾಗಿದ್ದು, ಬನ್ನಿ ಈ ಸುಲಭದ ಗೊಜ್ಜು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
ಬದನೆಕಾಯಿ 1
ಈರುಳ್ಳಿ 1-2
ಹಸಿ ಮೆಣಸು 5-6
ಒಂದು ನಿಂಬೆಗಾತ್ರದಷ್ಟು ಹುಣಸೆ ಹಣ್ಣು
ಜೀರಿಗೆ ಪುಡಿ(1/4 ಚಮಚ. ರೋಸ್ಟ್ ಮಾಡಿ ಪುಡಿ ಮಾಡಿದ ಜೀರಿಗೆ ಪುಡಿ)
ರುಚಿಗೆ ತಕ್ಕ ಉಪ್ಪು
ಸುಟ್ಟ ಬೆಳ್ಳುಳ್ಳಿ 2-3 ಎಸಳು
ಮಾಡುವ ವಿಧಾನ
- ದಪ್ಪ ಬದನೆಕಾಯಿ (ಹಸಿರು ಬಣ್ಣದ್ದು ಆಗಿರಬಹುದು ಅಥವಾ ನೀಲಿ ಬಣ್ಣದ್ದುಬಳಸಬಹುದು) ಸುಡಿ
- ಬದನೆಕಾಯಿ ಸುಡಲು ಗ್ರಿಲ್ಡ್ ತಂತಿ ಇಲ್ಲದಿದ್ದರೆ ಚಾಕುವಿನಲ್ಲಿ ಬದನೆಕಾಯಿ ಚುಚ್ಚಿ ನಂತರ ಗ್ಯಾಸ್‌ಗೆ ಸುಡಿ. ಎಲ್ಲಾ ಬದಿ ಚೆನ್ನಾಗಿ ಬೇಯುವಂತೆ ತಿರುಗಿಸುತ್ತಾ ಸುಡಿ, ನಂತರ ಸಿಪ್ಪೆ ಸುಲಿಯಿರ
- ಹುಣಸೆಹಣ್ಣನ್ನು ಸ್ವಲ್ಪ ಬಿಸಿ ನೀರಿನಲ್ಲಿ ನೆನೆ ಹಾಕಿ
- ಈಗ ಬಾಣಲೆಗೆ ಎಣ್ಣೆ ಹಾಕಿ ಅದಕ್ಕೆ ಜೀರಿಗೆ ಪುಡಿ , ಹಸಿ ಮೆಣಸಿನಕಾಯಿ ಹಾಕಿ ಫ್ರೈ ಮಾಡಿ, ಬದನೆಕಾಯಿ ಹಾಕಿ ಮ್ಯಾಶ್ ಮಾಡಿ, ಹುಣಸೆ ರಸ ಸೇರಿಸಿ, ರುಚಿಗೆ ತಕ್ಕ ಉಪ್ಪು ಸೇರಿಸಿ ಮಿಕ್ಸ್ ಮಾಡಿ, ನಂತರ ಗ್ಯಾಸ್‌ಸ್ಟೌವ್ ಆಫ್ ಮಾಡಿ ಕತ್ತರಿಸಿಟ್ಟ ಈರುಳ್ಳಿ ಹಾಗೂ ಸುಟ್ಟ ಬೆಳ್ಳುಳ್ಳಿ ಸೇರಿಸಿ ಮಿಕ್ಸ್ ಮಾಡಿದರೆ ಆಗುತ್ತೆ.
ಮಾಡುವ ಮತ್ತೊಂದು ವಿಧಾನ
ನೀವು ಸುಟ್ಟ ಬದನೆಕಾಯಿಯ ಸಿಪ್ಪೆ ಸುಲಿದು ಬೌಲ್‌ನಲ್ಲಿ ಹಾಕಿ ಮ್ಯಾಶ್ ಮಾಡಿ,
ನಂತರ ಈರುಳ್ಳಿ, ಹಸಿ ಮೆಣಸು, ಸುಟ್ಟ ಬೆಳ್ಳುಳ್ಳಿ, ಹುಣಸೆ ರಸ, ಉಪ್ಪು ಸೇರಿಸಿ
ಮಿಕ್ಸ್ ಮಾಡಿ, 1 ಚಮಚ ಎಣ್ಣೆ ಸೇರಿಸಿ ಮಿಕ್ಸ್ ಮಾಡಿದರೆ ಅನ್ನ ಅಥವಾ ಮುದ್ದೆ
ಜೊತೆ ತಿನ್ನಲು ತುಂಬಾನೇ ಚೆನ್ನಾಗಿರುತ್ತದೆ.
ಇತರ ಸಲಹೆ
- ಈ ಹಸಿ ಗೊಜ್ಜು ಮಾಡಿದಾಗ ತೆಂಗಿನೆಣ್ಣೆ ಹಾಕಿದರೆ ತುಂಬಾ ಚೆನ್ನಾಗಿರುತ್ತದೆ, ಆದರೆ ಕೆಲವರು ತೆಂಗಿನೆಣ್ಣೆ ಬಳಸಲ್ಲ ಅಂಥವರು ನೀವು ಅಡುಗೆಗೆ ಬಳಸುವ ಎಣ್ಣೆ ಬಳಸಬಹುದು.
- ಬದನೆಕಾಯಿ ಒಳಗಡೆ ಚೆನ್ನಾಗಿ ಬೇಯುವಂತೆ ಸುಡಬೇಕು
- ಒಲೆಯಿದ್ದರೆ ಕೆಂಡದಲ್ಲಿ ಸುಟ್ಟರೆ ಇನ್ನೂ ರುಚಿ



Click it and Unblock the Notifications