Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಕ್ಕಳ ಬಾಯಲ್ಲಿ ನೀರು ತರಿಸುವ ಹಾಲ್ಕೋವ..! ಮಾಡೋದು ತುಂಬಾನೆ ಸುಲಭ
ಬಾಲ್ಯದಲ್ಲಿ ನಾವು ಎಷ್ಟು ರೀತಿಯ ಸಿಹಿ ತಿಂಡಿಗಳ ಸವಿಯುತ್ತಿದ್ದೆವು. ಒಂದಕ್ಕಿಂತ ಒಂದು ರುಚಿಯಲ್ಲಿ ಪೈಪೋಟಿ ನೀಡುತ್ತಿದ್ದವು. ನಾವು ಸಹ ಏನನ್ನೂ ಬಿಡದೆ ಬಾಯಿ ಚಪ್ಪರಿಸಿ ಸವಿಯುತ್ತಿದ್ದೆವು. ಅದ್ರಲ್ಲೂ ಚಿಕ್ಕವರಿದ್ದಾಗ ಒಂದು ರೂಪಾಯಿ ಎರಡು ರೂಪಾಯಿಗೆಲ್ಲ ಸಿಹಿ ತಿಂಡಿ ಸಿಗುತ್ತದ್ದವು. ಅದ್ರಲ್ಲಿ ಮುಖ್ಯವಾಗಿ ಹಾಲ್ಕೋವಾ ಎಲ್ಲರ ನೆಚ್ಚಿನ ತಿಂಡಿಯಾಗಿತ್ತು.
ಶಾಲೆಗ ಹೋಗುವಾಗ ನೀವು ಸಹ ಇದರ ರುಚಿ ನೋಡಿದರಬಹುದು. ಅಷ್ಟೊಂದು ರುಚಿಕರ ತಿಂಡಿ, ಬಾಯಲ್ಲಿ ಇಟ್ಟರೆ ಕರಗಿ ಹೋಗುವಂತೆ ತಿಂಡಿ ಇದಾಗಿತ್ತು. ಹೀಗಾಗಿ ಎಲ್ಲರು ಇದನ್ನು ಸವಿಯುತ್ತಿದ್ದರು. ಮತ್ತೊಂದೆಡೆ ಇದು ಬಾಲ್ಯದ ಮನೆಯ ನಂಟರಾಗಿತ್ತು, ಆಗಾಗ ಅಂಗಡಿಯಿಂದ ಮನೆಗೆ ಇದನ್ನು ತರುತ್ತಿದ್ದರು.

ಈ ಹಾಲ್ಕೋವಾ ಈಗ ಕಡಿಮೆಯಾಗಿದೆ. ಎಲ್ಲಿಯೂ ನೋಡಲು ಸಿಗುವುದಿಲ್ಲ. ಕೆಲವು ಅಂಗಡಿಗಳಲ್ಲಿ ಮಾತ್ರ ಸವಿಯಬಹುದಷ್ಟೇ. ಆದರೆ ಇದನ್ನು ಮನೆಯಲ್ಲೇ ಸುಲಭವಾಗಿ ಮಾಡಬಹುದು. ಹೌದು ನಿಮ್ಮ ಮನೆಯಲ್ಲಿ ಕೆಲವೇ ವಸ್ತುಗಳ ಬಳಸಿ ಈ ಸಿಹಿ ತಿಂಡಿ ಮಾಡಬಹುದು. ಹಾಗಾದ್ರೆ ನಾವಿಂದು ಈ ಸಿಹಿ ತಿಂಡಿ ಮಾಡುವುದು ಹೇಗೆ ನೋಡೋಣ.
ಮನೆಯಲ್ಲಿ ಹಾಲ್ಕೋವಾ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಹಾಲ್ಕೋವಾ ಮಾಡುವ ವಿಧಾನವೇನು? ಮಾಡುವುದು ಹೇಗೆ ಎಂಬುದನ್ನ ನಾವಿಂದು ತಿಳಿದುಕೊಂಡು. ಮನೆಯಲ್ಲಿ ಒಮ್ಮೆ ಮಾಡಲು ಟ್ರೈ ಮಾಡೋಣ.
ಹಾಲ್ಕೋವಾ ಮಾಡಲು ಬೇಕಾಗುವ ಪದಾರ್ಥಗಳು
- ತುಪ್ಪ- 1/2 ಕಪ್
- ಮೈದಾ- 1 ಕಪ್
- ಏಲಕ್ಕಿ ಪುಡಿ- 2 ಸ್ಪೂನ್
- ಸಕ್ಕರೆ - 1 ಕಪ್
ಹಾಲ್ಕೋವಾ ಸಿಹಿ ತಿಂಡಿ ಮಾಡುವುದು ಹೇಗೆ?
ಒಂದು ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ ತುಪ್ಪು ಹಾಕಿಕೊಂಡು ಬಿಸಿ ಮಾಡಿಕೊಳ್ಳಿ. ತುಪ್ಪ ಕರಗಿದ ಬಳಿಕ ಇದಕ್ಕೆ ಮೈದಾ ಹಿಟ್ಟು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ತುಪ್ಪ ಚೆನ್ನಾಗಿ ಹಿಟ್ಟಿಗೆ ಹಿಡಿಯುವಂತೆ ಮಿಕ್ಸ್ ಮಾಡಿಕೊಳ್ಳಿ. ಗಂಟುಗಳು ಇಲ್ಲದಂತೆ ಚೆನ್ನಾಗಿ ಹುರಿದುಕೊಳ್ಳಿ. ಈ ಹಿಟ್ಟು ಗಟ್ಟಿಯಾಗಲು ಆರಂಭಿಸಿದಾಗ ಇದು ರೆಡಿಯಾಗಿದೆ ಎಂದರ್ಥ, ಸುಮಾರು 15ರಿಂದ 20 ನಿಮಿಷ ಈ ಮೈದಾ ಹಾಗೂ ತುಪ್ಪವನ್ನು ಹುರಿದುಕೊಳ್ಳಬೇಕು.
ಅಂತಿನವಾಗಿ ಮೈದಾ ಬಣ್ಣ ಬದಲಾಗುತ್ತದೆ, ಸ್ವಲ್ಪ ಕೆಂಪಗಾಗುತ್ತದೆ. ತುಪ್ಪ ಸ್ವಲ್ಪ ಸ್ವಲ್ಪ ಬಿಡಲು ಆರಂಭಿಸಿದಾಗ ಗ್ಯಾಸ್ ಆಫ್ ಮಾಡಿ ಬೇರೆ ಪಾತ್ರೆಗೆ ಹಿಟ್ಟು ಹಾಕಿಕೊಳ್ಳಿ. ಈಗ ಪಾತ್ರೆಗೆ ಹರಡಿಕೊಳ್ಳಿ. ನಂತರ ಏಲಕ್ಕಿ ಪುಡಿ ಅಥವಾ ಏಲಕ್ಕಿ ಎಸೆನ್ಸ್ ಸಹ ಹಾಕಿಕೊಳ್ಳಬಹುದು. ಈಗ ಇದಕ್ಕೆ ಸಕ್ಕರೆಯನ್ನ ಚೆನ್ನಾಗಿ ಪುಡಿ ಮಾಡಿಕೊಂಡು ಅದನ್ನು ಕೈಯಿಂದ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಹಿಟ್ಟಿನ ಜೊತೆ ಸಕ್ಕರೆ ಚೆನ್ನಾಗಿ ಸೇರಬೇಕು. ಚಪಾತಿ ಹಿಟ್ಟು ಲಟ್ಟಿಸಿಕೊಳ್ಳುವಂತೆ ಹದ ಮಾಡಿಕೊಳ್ಳಿ. ನಂತರ ಒಂದು ಬಾಕ್ಸ್ ರೀತಿಯ ಪಾತ್ರೆಗೆ ಈ ಹಿಟ್ಟನ್ನು ಹಾಕಿಕೊಳ್ಳಿ. ನಂತರ ಹಿಟ್ಟನ್ನು ಒತ್ತಿ ಒಂದು ಸೈಜ್‌ಗೆ ಒತ್ತಿಕೊಳ್ಳಿ. ಬಳಿಕ 4ರಿಂದ 5 ಗಂಟೆ ಒಣಗಲು ಇಟ್ಟುಬಿಡಿ. ನಂತರ ಗಟ್ಟಿಯಾದ ಈ ಹಿಟ್ಟನ್ನು ಚಾಕುವಿನಿಂದ ಕತ್ತರಿಸಿಕೊಳ್ಳಿ.
ಈ ರೀತಿ ಯಾವ ಗಾತ್ರಕ್ಕೆ ಬೇಕಾದರು ನೀವು ಕತ್ತರಿಸಿಕೊಳ್ಳಬಹುದು. ಇಷ್ಟಾದರೆ ನಿಮ್ಮ ಮುಂದೆ ಬಾಲ್ಯ ನೆನಪು ತರುವಂತಹ ಹಾಲ್ಕೋವಾ ರೆಡಿಯಾಗುತ್ತದೆ. ನೀವು ಸಹ ಒಮ್ಮೆ ಮನೆಯಲ್ಲಿ ಸವಿದು ನೋಡಿ. ಇದನ್ನು ಮಕ್ಕಳಿಗೆ ಸವಿಯಲು ಮಾಡಿಕೊಡಬಹುದು, ಅವರಿಗೂ ಇದು ಇಷ್ಟವಾಗುತ್ತದೆ. ಪ್ರತಿಯೊಬ್ಬರು ಸಹ ಆರಾಮವಾಗಿ ಸವಿಯಬಹುದು. ಮೆದು ಆಗಿ ಬರುವುದರಿಂದ ವಯಸ್ಸಿನ ಮಿತಿ ಇಲ್ಲದೆ ಇದನ್ನು ಸವಿಯಬಹುದು.



Click it and Unblock the Notifications