Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸೂಪರ್ ಆಗಿರುತ್ತೆ ಈ ಗ್ರೀನ್ ಕೈಮಾ: ಇಲ್ಲಿದೆ ಸರಳವಾದ ಸ್ಟೆಪ್ ಬೈ ಸ್ಟೆಪ್ ರೆಸಿಪಿ
ಮಟನ್ ಪ್ರಿಯರಿಗೆ ಪಂಚಪ್ರಾಣ ಮಟನ್ ಕೈಮಾ, ನಾವಿಲ್ಲಿ ಗ್ರೀನ್ ಕೈಮಾ ರೆಸಿಪಿ ನೀಡಿದ್ದೇವೆ, ಈ ಗ್ರೀನ್ ಕೈಮಾ ರೆಸಿಪಿ ಸರಳವಾಗಿ ನೀಡಲಾಗಿದೆ, ಈ ರೀತಿ ಟ್ರೈ ಮಾಡಿದರೆ ರುಚಿಯಾದ ಕೈಮಾ ರೆಡಿಯಾಗುತ್ತೆ.
ಬೇಕಾಗುವ ಸಾಮಗ್ರಿ
1/3 ಕಪ್ ಎಣ್ಣೆ
2-3 ಈರುಳ್ಳಿ
3-4 ಚಮಚ ಶುಂಠಿ ಬೆಳ್ಳುಳ್ಳ ಪೇಸ್ಟ್
3-4 ಹಸಿ ಮೆಣಸು (ಹೆಚ್ಚು ಖಾರ ಇಲ್ಲದಿರುವುದು)
ರುಚಿಗೆ ತಕ್ಕ ಉಪ್ಪು

ಕೈಮಾ ಮಸಾಲೆಗೆ
ಅರ್ಧ ಕೆಜಿ ಮಟನ್ ಕೈಮಾ
ರುಚಿಗೆ ತಕ್ಕ ಉಪ್ಪು
1 ಚಮಚ ಅರಿಶಿಣ ಪುಡಿ
1/2 ಚಮಚ ಕೊತ್ತಂಬರಿ ಪುಡಿ
1/2 ಕಪ್ ಮೊಸರು
ಶುಂಠಿ-ಬೆಳ್ಳುಳ್ಳಿ ಪೇಸ್ಟ್ 2 ಚಮಚ
'
ಗ್ರೀನ್ ಪೇಸ್ಟ್ಗೆ
2-3 ಹಸಿ ಮೆಣಸು (ಖಾರ ಕಡಿಮೆ ಇರುವ ಹಸಿ ಮೆಣಸು ಬಳಸಿ)
ಒಂದು ಚಿಕ್ಕ ತುಂಡು ಶುಂಠಿ
1/4 ಕಪ್ ಪುದೀನಾ ಎಲೆ
1 ಕಪ್ ಕೊತ್ತಂಬರಿ ಸೊಪ್ಪು
2-3 ಚಮಚ ನೀರು
1/2 ಚಮಚ ಎಣ್ಣೆ
ಕೈಮಾ ಬೇಯಿಸಲು
2-3 ಚಮಚ ಎಣ್ಣೆ
1 ಪಲಾವ್ ಎಲೆ
1 ಚಮಚ ಜೀರಿಗೆ
1/2 ಚಮಚ ಸೋಂಪು
ಹಾಗೂ ಮಸಾಲೆ ಮಿಕ್ಸ್ ಮಾಡಿಟ್ಟ ಮಟನ್
ಒಗ್ಗರಣೆಗೆ'
2-3 ಚಮಚ
2 ದೊಡ್ಡ ಈರುಳ್ಳಿ
ಗ್ರೀನ್ ಪೇಸ್ಟ್
1/4 ಕಪ್ ಹಸಿ ಬಟಾಣಿ
ಬೇಯಿಸಿದ ಕೈಮಾ
ಮಟನ್ ಕೈಮಾ ರೆಡಿ ಮಾಡುವಾಗ ಹಾಕಲು
ಸ್ವಲ್ಪ ಕೊತ್ತಂಬರಿ ಸೊಪ್ಪು
2-3 ಹಸಿ ಮೆಣಸು
ಸ್ವಲ್ಪ ಸಬ್ಸಿಗೆ ಸೊಪ್ಪು
2 ಚಮಚ ಬೆಣ್ಣೆ (1 ಕ್ಯೂಬ್ ಕೂಡ ಹಾಕಬಹುದು)
ಮೊಟ್ಟೆ ಫ್ರೈ ಮಾಡಲು
1 ಚಮಚ ಎಣ್ಣೆ
1 ಮೊಟ್ಟೆ
ರುಚಿಗೆ ತಕ್ಕ ಉಪ್ಪು
ಅಲಂಕಾರಕ್ಕೆ
ಸ್ವಲ್ಪ ಕೊತ್ತಂಬರಿ ಸೊಪ್ಪು
ನಿಂಬೆ ತುಂಡು
ತುಪ್ಪದಲ್ಲಿ ಫ್ರೈ ಮಾಡಿದ ಈರುಳ್ಳಿ
ಟೊಮೆಟೊ
ಹಸಿ ಮೆಣಸು
ಈಗ ಮಾಡುವ ವಿಧಾನ
ಸ್ಟೆಪ್ 1 ಶುಂಠಿ-ಬೆಳ್ಳುಳ್ಳಿ, ಹಸಿ ಮೆಣಸು, ಸ್ವಲ್ಪ ಉಪ್ಪು ಹಾಕಿ ತರಿತರಿಯಾಗಿ
ರುಬ್ಬಿ ಇಟ್ಟುಕೊಳ್ಳಿ, ಕಲ್ಲಿನಲ್ಲಿ ಕುಟ್ಟುದರೂ ಸಾಕಾಗುತ್ತೆ.
ಸ್ಟೆಪ್ 2
ಕೈಮಾವನ್ನು ತೊಳೆದು ಮಸಾಲೆ ಮಿಕ್ಸ್ ಮಾಡಿ. ಕೈಮಾಗೆ ರುಚಿಗೆ ತಕ್ಕ ಉಪ್ಪು,
ಅರಿಶಿಣ ಪುಡಿ, ಕೊತ್ತಂಬರಿ ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಮೊಸರು ಹಾಕಿ
ಮಿಕ್ಸ್ ಮಾಡಿ ಅರ್ಧ ಗಂಟೆ ಇಡಿ, ಅಷ್ಟು ಸಮಯವಿಲ್ಲ ಎಂದಾದರೆ ಕನಿಷ್ಠ 10
ನಿಮಿಷವಾದರೂ ಇಡಿ.
ಗ್ರೀನ್ ಪೇಸ್ಟ್ಗೆ
ನೀವು ಮಿಕ್ಸಿ ಜಾರ್ಗೆ ಹಸಿ ಎಮಣಸು, ಪುದೀನ, ಕೊತ್ತಂಬರಿ ಸೊಪ್ಪು, ನೀರ, ಸ್ವಲ್ಪ
ಶುಂಠಿ ಹಾಕಿ ರುಬ್ಬಿಕೊಳ್ಳಿ.
ಕೈಮಾ ಕುಕ್ಕಿಂಗ್ ಮಾಡಲು
- ಈಗ ನೀವು ದಪ್ಪ ತಳವಿರುವ ಪಾತ್ರೆ ತೆಗೆದು ಬಿಸಿ ಮಾಡಿ ಎಣ್ಣೆ ಹಾಕಿ ಹಾಕಿ, ಅದರಲ್ಲಿ ಪಲಾವ್ ಎಲೆ ಹಾಕಿ, ಜೀರಿಗೆ ಹಾಕಿ, ಸ್ವಲ್ಪ ಸೋಂಪು ಸೇರಿಸಿ, ಜೀರಿಗೆ ಚಟ್ಪಟ್ ಶಬ್ದ ಮಾಡುವಾಗ ಮಸಾಲೆ ಮಿಕ್ಸ್ ಮಾಡಿಟ್ಟ ಕೈಮಾ ಹಾಕಿ ಮಿಕ್ಸ್ ಮಾಡಿ, ಸ್ವಲ್ಪ ನೀರು ಸೇರಿಸಿ
- ಸಾಧಾರಣ ಉರಿಯಲ್ಲಿ 10-15 ನಿಮಿಷ ಬೇಯಿಸಿ. ಹೀಗೆ ಬೇಯಿಸುವಾಗ ತಳ ಹಿಡಿಯದಿರಲು ಆಗಾಗ ಸೌಟು ಆಡಿಸುತ್ತಾ ಇರಿ.
- ಈಗ ಮತ್ತೊಂದು ಪಾತ್ರೆ ಬಿಸಿ ಮಾಡಿ ಅದರಲ್ಲಿ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ. ಮೊದಲೇ ರೆಡಿಮಾಡಿಟ್ಟ ಶುಂಠಿ-ಬೆಳ್ಳುಳ್ಳಿ-ಹಸಿ ಮೆಣಸಿನ ಪೇಸ್ಟ್ ಹಾಕಿ
- ಈಗ ರೆಡಿ ಮಾಡಿಟ್ಟ ಗ್ರೀನ್ ಪೇಸ್ಟ್ ಹಾಕಿ
- ಹಸಿ ಬಟಾಣಿ ಸೇರಿಸಿ, ಸ್ವಲ್ಪ ಸಬ್ಸಿಗೆ ಸೊಪ್ಪು ಕೂಡ ಸೇರಿಸಿ 10-15 ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿ
- ಹಸಿ ಮೆಣಸು, ಕೊತ್ತಂಬರಿ ಸೊಪ್ಪು ಹಾಕಿ
- ಈ ಬೇಯಸಿದ ಕೈಮಾ ಸೇರಿಸಿ, ಬೆಣ್ಣೆ ಹಾಕಿ ಮಿಕ್ಸ್ ಮಾಡಿದರೆ ಕೈಮಾ ರೆಡಿಯಾಗುತ್ತದೆ.
ಈಗ ರೆಡಿಆದಸ ಕೈಮಾ ಮೇಲೆ ಕೊತ್ತಂಬರಿ ಸೊಪ್ಪು, ನಿಂಬೆ ಹಣ್ಣಿನ ತುಂಡು, ಹಸಿ ಮೆಣಸು, ಈರಳ್ಳಿ, ಟೊಮೆಟೊ ಇಟ್ಟು ಅಲಂಕರಿಸಿದರೆ ಸರ್ವ್ ಮಾಡು ಕೈಮಾ ರೆಡಿ.
ಈಗ ನೀವು ಮೊಟ್ಟೆ ಕೂಡ ಬುರ್ಜಿ ರೀತಿ ಮಾಡಿ ಪಕ್ಕದಲ್ಲಿಟ್ಟು ಸರ್ವ್ ಮಾಡಿ.



Click it and Unblock the Notifications