Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೀನಿನ ಬಿರಿಯಾನಿ ಹೀಗೆ ಮಾಡಿದರೆ ಸಕತ್ ಟೆಸ್ಟಿ ಆಗಿರುತ್ತೆ
ನೀವು ಮೀನು ಪ್ರಿಯರಾಗಿದ್ದರೆ ನಾವಿಲ್ಲಿ ಮೀನಿನ ಬಿರಿಯಾನಿ ರೆಸಿಪಿ ನೀಡಿದ್ದೇವೆ ನೋಡಿ. ಈ ರೆಸಿಪಿ ಸುಲಭವಾಗಿ ಮಾಡಬಹುದು, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
* ಅಂಜಲ್ ಅಥವಾ ಮುಳ್ಳು ತುಂಬಾ ಕಡಿಮೆ ಇರುವ ದೊಡ್ಡ ಮೀನು
* 1 ಚಮಚ ಎಣ್ಣೆ ಅಥವಾ ತುಪ್ಪ
* ಈರುಳ್ಳಿ (ಮಸಾಲೆಗೆ ಹಾಕಲು)
* ಈರುಳ್ಳಿ (ಚೆನ್ನಾಗಿ ಫ್ರೈ ಮಾಡಲು)
* ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಚಮಚ
* ಹಸಿ ಮೆಣಸಿನ ಪೇಸ್ಟ್(3-4 ಮೆಣಸು, ಖಾರ ಬೇಕೆಂದರೆ ಇನ್ನೂ 2-3 ಹಸಿ ಮೆಣಸು
ಹಾಕಬಹುದು)
* ಟೊಮೆಟೊ ಕತ್ತರಿಸಿದ್ದು
* ಬಿರಿಯಾನಿ ಮಸಾಲ ಪುಡಿ 1 ಚಮಚ
* ಗಟ್ಟಿ ಮೊಸರು 3 ಚಮಚ
* ಸ್ವಲ್ಪ ಕೊತ್ತಂಬರಿ ಸೊಪ್ಪು
* ಸ್ವಲ್ಪ ಪುದೀನಾ
* ನಿಂಬೆರಸ
* ರುಚಿಗೆ ತಕ್ಕ ಉಪ್ಪು
ಮೀನಿಗೆ ಮಸಾಲೆ
* ಶುಂಠಿ ಬೆಳ್ಳುಳ್ಳಿ ಪೇಸ್ಟ್ 2 ಚಮಚ
ಅರಿಶಿಣ ಪುಡಿ 1 ಚಮಚ
ಖಾರದ ಪುಡಿ 2 ಚಮಚ
ಸೋಂಪು ಪುಡಿ 1/2 ಚಮಚ
ಬಿರಿಯಾನಿ ಅಕ್ಕಿಗೆ
ಬಾಸುಮತಿ ಅಕ್ಕಿ 21/2 ಕಪ್
ಈರುಳ್ಳಿ 2
ತುಪ್ಪ 3 ಚಮಚ
ಲವಂಗ 4
ಏಲಕ್ಕಿ 4
ಚಕ್ಕೆ
ಬಿಸಿ ನೀರು 4 ಕಪ್
ರುಚಿಗೆ ತಕ್ಕ ಉಪ್ಪು
ಮಾಡುವ ವಿಧಾನ
* ತಯಾರಿಸಿದ ಮೀನು ಮಸಾಲೆಯನ್ನು ಮೀನಿಗೆ ಚೆನ್ನಾಗಿ ಹಚ್ಚಿ ಅರ್ಧ ಗಂಟೆ
ಫ್ರಿಡ್ಜ್‌ನಲ್ಲಿಡಿ.
* ಅಕ್ಕಿಯನ್ನು ತೊಳೆದು ನೀರನ್ನು ಸೋಸಿ.
* ಬಿರಿಯಾನಿ ಮಾಡುವ ಪಾತ್ರೆಯನ್ನು ಬಿಸಿ ಮಾಡಿ 3 ಚಮಚ ತುಪ್ಪ ಹಾಕಿ.
* ತುಪ್ಪ ಬಿಸಿಯಾದಾಗ ಈರುಳ್ಳಿ ಹಾಕಿ ಈರುಳ್ಳಿ ಕಂದು ಬಣ್ಣ ಬರುವವರೆಗೆ ಫ್ರೈ
ಮಾಡಿ.
* ನಂತರ ಅಕ್ಕಿಯನ್ನು ತೊಳೆದು ಹಾಕಿ ಫ್ರೈ ಮಾಡಿ. ಅದರಲ್ಲಿರುವ ನೀರಿನಂಶ
ಹೋಗಬೇಕು, ಅಷ್ಟು ಹೊತ್ತು ಫ್ರೈ ಮಾಡಿ.
* ನಂತರ ಲವಂಗ, ಚಕ್ಕೆ , ಏಲಕ್ಕಿಯನ್ನು ಕೈಯಿಂದಲೇ ಸ್ವಲ್ಪ ಸ್ವಲ್ಪ ಪುಡಿ ಮಾಡಿ.
ಅಕ್ಕಿಯನ್ನು ತುಂಬಾನೇ ಸುವಾಸನೆ ಬರುತ್ತದೆ. ನಂತರ ಗ್ಯಾಸ್ ಆಫ್ ಮಾಡಿ ಪಾತ್ರೆಯ
ಬಾಯಿ ಮುಚ್ಚಿ. ಹೀಗೆ ಮಾಡುವುದರಿಂದ ಬಿರಿಯಾನಿ ತುಂಬಾ ಸುವಾಸನೆಯಿಂದ
ಕೂಡಿರುತ್ತದೆ.
ಮಸಾಲೆ ತಯಾರಿ
* ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮಾಡಿ, ಪೇಸ್ಟ್ ಫ್ರೆಷ್ ಮಾಡಿದರೆ ತುಂಬಾ
ರುಚಿಯಾಗಿರುತ್ತದೆ.
ಮೀನು ಫ್ರೈ
* ಮಸಾಲೆ ಮಿಕ್ಸ್ ಮಾಡಿಟ್ಟ ಮೀನನ್ನು ಫ್ರೈ ಮಾಡಿ.
ಮೀನಿನ ಮಸಾಲೆ ತಯಾರಿ
* ಈಗ ಮತ್ತೊಂದು ಪಾತ್ರೆಗೆ ಎಣ್ಣೆ ಹಾಕಿ ಈರುಳ್ಳಿ ಹಾಕಿ ಈರುಳ್ಳಿ
ಮೆತ್ತಗಾಗುವವರೆಗೆ ಫ್ರೈ ಮಾಡಿ, ಹಸಿ ಮೆಣಸಿಕಾಯಿ ಪೇಸ್ಟ್, ನಂತರ ಟೊಮೆಟೊ ಹಾಕಿ,
ಟೊಮೆಟೊ ಮೆತ್ತಗಾದ ಮೇಲೆ ನಂತರ ಪುದೀನಾ, ಕೊತ್ತಂಬರಿ ಹಾಕಿ, ಬಿರಿಯಾನಿ ಮಸಾಲೆ
ಪುಡಿ ಮೊಸರು, ಅರಿಶಿಣ ಪುಡ, ಸೋಂಪು ಪುಡಿ ಹಾಕಿ, ರುಚಿಗೆ ತಕ್ಕ ಉಪ್ಪು ಸೇರಿಸಿ
ಫ್ರೈ ಮಾಡಿ.
* ಈಗ ರೆಡಿಯಾದ ಮಸಾಲೆಗೆ ಫ್ರೈ ಮಾಡಿಟ್ಟ ಮೀನು ಹಾಕಿ ಮಿಕ್ಸ್ ಮಾಡಿ.
ಬಿರಿಯಾನಿಗೆ ಅನ್ನ ರೆಡಿ ಮಾಡಿ
ಈಗ ನೀವು ಬಿಸಿ ಮಾಡಿಟ್ಟ ಅಕ್ಕಿಗೆ ಅಕ್ಕಿಯೆಷ್ಟು ಬಳಸಿದರೋ ಅದರ ಎರಡು ಪಟ್ಟು
ಬಿಸಿ ನೀರು ಹಾಕಿ, ಚಿಟಿಕೆಯಷ್ಟು ಉಪ್ಪು ಹಾಕಿ ಬೇಯಿಸಿ.
ಅನ್ನವನ್ನು ತುಪ್ಪ ಬೇಯಿಸಬೇಡಿ, ಮುಕ್ಕಾಲು ಭಾಗ ಬೇಯಿಸಿ, ನಂತರ ಅದರ ಮೇಲೆ ರೆಡಿ
ಮಾಡಿಟ್ಟ ಮೀನು ಮಸಾಲೆ ಹಾಕಿ ಪಾತ್ರೆಯ ಬಾಯಿ ಮುಚ್ಚಿ ತುಂಬಾ ಕಡಿಮೆ ಉರಿಯಲ್ಲಿ
ಮತ್ತೆ 10 ನಿಮಿಷ ಬೇಯಿಸಿ.
* ನಂತರ ಮಿಕ್ಸ್ ಮಾಡಿ, ಇದಲೇ ಫ್ರೈ ಮಾಡಿಟ್ಟ ಈರುಳ್ಳಿ ಹಾಗೂ ಕೊತ್ತಂಬರಿ
ಸೊಪ್ಪಿನಿಂದ ಅಲಂಕರಿಸಿದ ಮೀನಿನ ಫ್ರೈ ರೆಡಿ.



Click it and Unblock the Notifications