Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈರುಳ್ಳಿಯಷ್ಟೇ ಸಾಕು , ಐದೇ ನಿಮಿಷದೊಳಗೆ ರೆಡಿ ಮಾಡಬಹುದು ರುಚಿಯಾದ ಸಾರು
ಕೆಲವೊಮ್ಮೆ ಸಾರಿಗೆ ಏನು ಮಾಡುವುದು ಎಂಬ ಚಿಂತೆಯಾಗುತ್ತೆ, ಬರಿ ಈರುಳ್ಳಿ ಹಾಗೂ ಸ್ವಲ್ಪ ಮೊಸರಿದ್ದರೆ ಸಾಕು ಮತ್ಯಾವ ತರಕಾರಿ ಬೇಕಾಗಿಲ್ಲ, ರುಚಿಯಾದ ಸಾರು ರೆಡಿಯಾಗುತ್ತೆ. ಇದನ್ನು ಐದು ನಿಮಿಷದೊಳಗೆ ಮಾಡಬಹುದಾದ ರೆಸಿಪಿಯಿದು, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
ಅರ್ಧ ಲೀಟರ್ ಮೊಸರು
ಅರ್ಧಲೀಟರ್ ನೀರು
2 ಚಮಚ ಎಣ್ಣೆ
ಸ್ವಲ್ಪ ಜೀರಿಗೆ
ಸ್ವಲ್ಪ ಸಾಸಿವೆ
ಸ್ವಲ್ಪ ಕರಿಬೇವು
ಈರುಳ್ಳಿ
ಅರಿಶಿಣ ಪುಡಿ
ರುಚಿಗೆ ತಕ್ಕ ಉಪ್ಪು
ಸ್ವಲ್ಪ ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
ನೀವು ಅರ್ಧ ಲೀಟರ್ ಮೊಸರಿಗೆ ಅರ್ಧ ಲೀಟರ್ ನೀರು ಹಾಕಿ ಮಿಕ್ಸ್ ಮಾಡಿದರೆ
ಮಜ್ಜಿಗೆ ರೆಡಿ.
ಬಾಣಲೆಗೆ 2 ಚಮಚ ಎಣ್ಣೆ ಹಾಕಿ
ನಂತರ ಸ್ವಲ್ಪ ಜೀರಿಗೆ, ಸ್ವಲ್ಪ ಸಾಸಿವೆ ಸೇರಿಸಿ
ಜೀರಿಗೆ, ಸಾಸಿವೆ ಚಟ್‌ಪಟ್ ಶಬ್ದ ಮಾಡುವಾಗ 2 ಹಸಿ ಮೆಣಸು ಸೇರಿಸಿ
ಸ್ವಲ್ಪ ಕರಿಬೇವು ಹಾಕಿ
5-6 ಎಸಳು ಬೆಳ್ಳುಳ್ಳಿ, ಸ್ವಲ್ಪ ಶುಂಠಿ ಜಜ್ಜಿ ಹಾಕಿ
ಈರುಳ್ಳಿ ಹಾಕಿ, ಈರುಳ್ಳಿ ಸ್ವಲ್ಪ ಬಣ್ಣ ಬದಲಾಗುವವರೆಗೆ ಫ್ರೈ ಮಾಡಿ
ನಂತರ ಸ್ವಲ್ಪ ಅರಿಶಿಣ ಸೇರಿಸಿ
ಈಗ ಸ್ವಲ್ಪ ನೀರು ಸೇರಿಸಿ
ಈಗ ರೆಡಿ ಮಾಡಿದ ಮಜ್ಜಿಗೆ ಸೇರಿಸಿ, ಉಪ್ಪು ಸೇರಿಸಿ ಮಿಕ್ಸ್ ಮಾಡಿ
ನಂತರ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿದರೆ ಈರುಳ್ಳಿ ತಂಬುಳಿ
ರೆಡಿ.
ಬೇಸಿಗೆಯಲ್ಲಿ ತುಂಬಾನೇ ಮಸಾಲೆ ಹಾಕಿದ ಸಾರು ತಿನ್ನುವುದಕ್ಕಿಂತ ಈ ಬಗೆಯ ಸಾರು ತುಂಬಾ ಹಿತ ಅನಿಸುವುದು. ಅಲ್ಲದೆ ಈ ಸಮಯಕ್ಕೆ ಹೇಳಿ ಮಾಡಿಸಿದ ಸಾರು ಇದಾಗಿದೆ.
ಮೊಸರು ಸಾರು ಈ ಬಗೆಯ ಆರೋಗ್ಯಕರ ಗುಣಗಳನ್ನು ಹೊಂದಿದೆ:
ದೇಹಕ್ಕೆ ತಂಪು: ಮೊಸರು ದೇಹಕ್ಕೆ ತುಂಬಾನೇ ತಂಪು, ಹಾಗಾಗಿ ಮಸಾಲೆ ಹಾಕಿದ ಸಾರಿಗಿಂತ ಈ ಬಗೆಯ ಸಾರು ತುಂಬಾ ಒಳ್ಳೆಯದು, ಈ ಬಗೆಯ ಸಾರು ಮೈ ಉಷ್ಣಾಂಶ ಕಾಪಾಡುವಲ್ಲಿ ಸಹಕಾರಿ.
ತೂಕ ನಿಯಂತ್ರಣಕ್ಕೆ ಸಹಕಾರಿ:ಮೊಸರು ಸಾರು ಸೇವಿಸುವುದರಿಂದ ತೂಕ ನಿಯಂತ್ರಣಕ್ಕೆ ಸಹಕಾರಿ. ಇದರಲ್ಲಿ ಅತಿ ಹೆಚ್ಚಿನ ಕ್ಯಾಲೋರಿ ಆಗಲಿ, ಕೊಲೆಸ್ಟ್ರಾಲ್ ಆಗಲಿ ಇರುವುದಿಲ್ಲ, ಚಯಪಚಯ ಕ್ರಿಯೆಗೆ ತುಂಬಾ ಒಳ್ಳೆಯದು.
ಮೂಳೆಯ ಆರೋಗ್ಯಕ್ಕೆ ಒಳ್ಳೆಯದು: ಮೊಸರಿನಲ್ಲಿ ಕ್ಯಾಲ್ಸಿಯಂ ಅಧಿಕವಿರುತ್ತದೆ. ಹಾಗಾಗಿ ಮೂಳೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಹೊಟ್ಟೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು: ಮೊಸರು ಹೊಟ್ಟೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ತ್ವಚೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು: ಮೊಸರಿನಲ್ಲಿ ಲ್ಯಾಕ್ಟಿಕ್ ಆಮ್ಲ ಅಧಿಕವಿರುತ್ತದೆ, ಹಾಗಾಗಿ ತ್ವಚೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ರೋಗ ನಿರೋಧಕ ಶಕ್ತಿ ಹೆಚ್ಚುವುದು: ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ, ಮೈ ಉಷ್ಣಾಂಶ ಕಾಪಾಡುವಲ್ಲಿ ಸಹಕಾರಿ, ಬೆವರು ಕಜ್ಜಿ ಈ ಬಗೆಯ ಸಮಸ್ಯೆ ತಡೆಗಟ್ಟಲು ಸಹಕಾರಿ.
ಮೊಸರು ಮಾನಸಿಕ ಒತ್ತಡ ಕಡಿಮೆ ಮಾಡುವಲ್ಲಿ ಸಹಕಾರಿ.



Click it and Unblock the Notifications