Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇಡ್ಲಿ, ದೋಸೆಗೆ ಈ ಚಟ್ನಿ ಪುಡಿ ಒಂದಿದ್ದರೆ ಸಾಕು ಯಾವ ಸಾಂಬಾರ್, ಚಟ್ನಿ ಬೇಕಾಗಿಲ್ಲ:ಒಮ್ಮೆ ಮಾಡಿದರೆ ತಿಂಗಳವೆಗೆ ಇಟ್ಟರೂ ಹಾಳಾಗಲ್
ಈಗಂತೂ ಪುಡಿ ದೋಸೆ, ಪುಡಿ ಇಡ್ಲಿ ಇವೆಲ್ಲಾ ಈಗ ಟ್ರೆಂಡ್ ಆಗಿದೆ, ಹೋಟೆಲ್‌ಗಳಲ್ಲಿ ಈ ದೋಸೆ ಮೇಲೆ ಚಟ್ನಿ ಪುಡಿ ಉದುರಿಸಿ ನೀಡುತ್ತಾರೆ, ಇಂಥ ದೋಸೆಗೆ ಸಕತ್ ಡಿಮ್ಯಾಂಡ್ ಬಂದಿದೆ, ಮಸಾಲೆ ದೋಸೆಗೆ ಸ್ಪರ್ಧೆ ನೀಡುತ್ತಿದೆ ಈ ಪುಡಿ ದೋಸೆ. ಈ ಪುಡಿ ದೋಸೆ ನೀವೂ ಕೂಡ ಮಾಡಬಹುದು, ಚಟ್ನಿ ಪುಡಿ ಮಾಡಿಟ್ಟು ನೀವು ದೋಸೆ ಅಥವಾ ಇಡ್ಲಿ ಮಾಡಿ ಅದರ ಮೇಲೆ ಹಾಕಿದರೆ ಸಾಕು ಪುಡಿ ಡ್ಲಿ, ಪುಡಿ ದೋಸೆ ರೆಡಿ.
ಇನ್ನು ಈ ಚಟ್ನಿ ಪುಡಿ ಮಾಡಿ ಅದರ ಜೊತೆ ಸ್ವಲ್ಪ ಬಿಸಿ ತುಪ್ಪ ಇದ್ದರೆ ಸಾಕು ಯಾವ ಸಾಂಬಾರ್, ಚಟ್ನಿ ಬೇಕಾಗಿಲ್ಲ, ಚಟ್ನಿ ಪುಡಿ ಜೊತೆಯೇ ದೋಸೆ ಅಥವಾ ಇಡ್ಲಿ ಸವಿಯಲು ಸೂಪರ್ ಆಗಿರುತ್ತದೆ. ಈ ಚಟ್ನಿ ಪುಡಿ ಮಾಡಿ ಗಾಳಿಯಾಡದ ಡಬ್ಬದಲ್ಲಿ ತುಂಬಿಟ್ಟರೆ ಸಾಕು ನೀವು ತಿಂಗಳವರೆಗೆ ಇಟ್ಟು ಬಳಸಬಹುದು.

ಇಡ್ಲಿ, ದೋಸೆಗೆ ಈ ಸ್ಪೆಷಲ್ ಚಟ್ನಿ ಪುಡಿ ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:
ಬೇಕಾಗುವ ಸಾಮಗ್ರಿ
3/4 ಕಪ್ ಕಡಲೆ ಬೇಳೆ
1/2 ಕಪ್ ಉದ್ದಿನ ಬೇಳ
1 ಚಮಚ ತೆಂಗಿನೆಣ್ಣೆ
10 ಬ್ಯಾಡಗಿ ಮೆಣಸು
ಸ್ವಲ್ಪ ಹುಣಸೆಹಣ್ಣು
ಅರ್ಧ ಕಪ್ ತೆಂಗಿನ ತುರಿ
1/4 ಚಮಚ ಇಂಗು
ಅರ್ಧ ಚಮಚ ಉಪ್ಪು
1 ಚಮಚ ಬೆಲ್ಲದ ಪುಡಿ
ಮಾಡುವ ವಿಧಾನ
- ನೀವು ದಪ್ಪ ತಳವಿರುವ ಪ್ಯಾನ್ ತೆಗೆದುಕೊಳ್ಳಿ, ಅದನ್ನು ಬಿಸಿ ಮಾಡಿ ಕಡಿಮೆ ಉರಿಯಲ್ಲಿ ಕಡ್ಲೆಬೇಳೆ , ಉದ್ದಿನ ಬೇಳೆ ಹಾಕಿ ಫ್ರೈ ಮಾಡಿ
- ಕಡ್ಲೆ ಬೇಳೆ ಗೋಲ್ಡನ್ ಬಣ್ಣಕ್ಕೆ ತಿರುಗುವಾಗ ತೆಗಿಯಿರಿ
- ಈಗ ಒಣ ಮೆಣಸು ಕೂಡ ರೋಸ್ಟ್ ಮಾಡಿ ಒಂದು ತಟ್ಟೆಯಲ್ಲಿ ಹಾಕಿಡಿ
- ನಂತರ ತೆಂಗಿನ ತುರಿ ಹಾಕಿ 1 ಚಮಚ ಎಣ್ಣೆ ಹಾಕಿ ತೆಂಗಿನ ತುರಿ ಬಣ್ಣ ಬದಲಾಗುವಷ್ಟು ಹೊತ್ತು ಫ್ರೈ ಮಾಡಿ, ತೆಂಗಿನ ತುರಿ ಕಂದು ಬಣ್ಣಕ್ಕೆ ಬರುವಷ್ಟು ಹೊತ್ತು ಫ್ರೈ ಮಾಡಿ, ಹೀಗೆ ಫ್ರೈ ಮಾಡುವಾಗ ಸ್ವಲ್ಪ ಕರಿಬೇವು ಕೂಡ ಸೇರಿಸಿ. ತೆಂಗಿನತುರಿ ಫ್ರೈ ಮಾಡುವಾಗ ಹಣಸೆಹಣ್ಣು ಕೂಡ ಸೇರಿಸಿ
- ಈಗ ನೀವು ಮಿಕ್ಸಿ ಜಾರ್‌ಗೆ ಈ ಮಿಶ್ರಣ ಹಾಕಿ ಅದಕ್ಕೆ ಇಂಗು ಮತ್ತು ಸ್ವಲ್ಪ ಬೆಲ್ಲ, ರುಚಿಗೆ ತಕ್ಕ ಉಪ್ಪು ಸೇರಿಸಿ, ನೀರು ಸೇರಿಸದೆ ಪುಡಿ ಮಾಡಿ.
- ಈಗ ರೆಡಿಯಾದ ಚಟ್ನಿ ಪುಡಿಯನ್ನು ನೀವು ಡಬ್ಬದಲ್ಲಿ ಹಾಕಿಟ್ಟು ಇಡ್ಲಿ ಹಾಗೂ ದೋಸೆ ಜೊತೆಗೆ ಸವಿಯಬಹುದು.
ಇತರ ಸಲಹೆ:
- ನೀವು ಖಾರ ಹೆಚ್ಚು ಬೇಕೆಂದರೆ ಬ್ಯಾಡಗಿ ಮೆಣಸು ಜೊತೆ 2-3 ಇತರ ಖಾರದ ಮೆಣಸು ಹಾಕಿ ರೋಸ್ಟ್ ಮಾಡಬಹುದು
- ಹುಣಸೆಹಣ್ಣು ತುಂಬಾ ಹಾಕಬೇಡಿ, ಚಟ್ನಿಗೆ ಹಾಕುವಂತೆ ಸ್ವಲ್ಪವೇ ಸ್ವಲ್ಪ ಹಾಕಿ
- ಬೆಲ್ಲ ಬಳಸದೆಯೂ ಇರಬಹುದು, ಬೆಲ್ಲ ಹಾಕಿದರೆ ಸ್ವಲ್ಪ ಸಿಹಿ ಮಿಶ್ರಿತ ಖಾರ ಟೇಸ್ಟ್ ಇರುತ್ತದೆ.
- ತುಂಬಾ ಸಮಯ ಇಡುವುದಾದರೆ ಕಲ್ಲುಪ್ಪು ಅಥವಾ ಪಿಂಕ್ ಸಾಲ್ಟ್ ಬಳಸುವುದು ಸೂಕ್ತ
- ನೀವು ಸಾಮಗ್ರಿಯನ್ನು ಕಡಿಮೆ ಉರಿಯಲ್ಲಿ ರೋಸ್ಟ್ ಮಾಡಬೇಕು. ಇಲ್ಲದಿದ್ದರೆ ಸೀದು ಹೋಗುತ್ತೆ, ಚಟ್ನಿ ಪುಡಿ ಚೆನ್ನಾಗಿರಲ್ಲ.
- ಬೇಕಿದ್ದರೆ ಈ ಚಟ್ನಿ ಪುಡಿಗೆ 2 ಎಸಳು ಬೆಳ್ಳುಳ್ಳಿ ಕೂಡ ರೋಸ್ಟ್ ಮಾಡಿ ಸೇರಿಸಬಹುದು.



Click it and Unblock the Notifications