Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬದನೆಕಾಯಿ ಚಟ್ನಿ ಹೀಗೊಮ್ಮೆ ಮಾಡಿ ನೋಡಿ ಅನ್ನಕ್ಕೆ ಈ ಚಟ್ನಿ ಒಂದೇ ಸಾಕು, ಅಷ್ಟೊಂದು ರುಚಿ
Recipes
oi-Reena TK
Posted By: Reena TK
ಬದನೆಕಾಯಿ ಚಟ್ನಿ ನೀವು ಈ ರೀತಿ ಒಮ್ಮೆ ಟ್ರೈ ಮಾಡಿ ನೋಡಿ ಇದರ ರುಚಿ ನಿಮ್ಮನ್ನು ಮೋಡಿ ಮಾಡುವುದರಲ್ಲಿ ಸಂಶಯವೇ ಇಲ್ಲ, ಸುಟ್ಟ ಬದನೆಕಾಯಿ ಗೊಜ್ಜು ಮಾಡುತ್ತೇವೆ, ಅದಕ್ಕೆ ಹೋಲುವ ರೆಸಿಪಿಯಿದು, ಆದರೆ ರುಚಿ ಸುಟ್ಟ ಬದನೆಕಾಯಿ ಗೊಜ್ಜುಗಿಂತ ಸ್ವಲ್ಪ ಭಿನ್ನ, ಇದನ್ನು ಕಲ್ಲಿನಲ್ಲಿ ಜಜ್ಜಿ ಮಾಡಬೇಕು ಸೂಪರ್ ಆಗಿರುತ್ತದೆ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
ನೀವು 3-4 ಬದನೆಕಾಯಿ ಕತ್ತರಿಸಿ ನೀರಿನಲ್ಲಿ ಹಾಕಿಡಿ
ಈಗ 8-10 ಚಿಕ್ಕ ಈರುಳ್ಳಿ ಸಿಪ್ಪೆ ಸುಲಿದು ಇಡಿ
10-15 ಬ್ಯಾಡಗಿ ಮೆಣಸು ತೆಗೆದುಕೊಳ್ಳಿ
ಸ್ವಲ್ಪ ಕರಿಬೇವು
ಸ್ವಲ್ಪ ಹುಣಸೆ ಹಣ್ಣು
ಉಪ್ಪು
ಮಾಡುವ ವಿಧಾನ
- ನೀರಿನಲ್ಲಿ ಹಾಕಿದ ಬದನೆಕಾಯಿ ತೆಗೆದು ಅದರ ನೀರಿನಂಶ ಹೋಗಲು ಟಿಶ್ಯೂ ಪೇಪರ್ ಅಥವಾ ಬಟ್ಟೆಯಲ್ಲಿ ಪ್ರೆಸ್ ಮಾಡಿ.
- ಪ್ಯಾನ್‌ಗೆ ಸ್ವಲ್ಪ ತೆಂಗಿನೆಣ್ಣೆ ಅಥವಾ ಇತರ ಅಡುಗೆ ಹಾಕಿ, ಎಣ್ಣೆ ಬಿಸಿಯಾದಾಗ ಬದನೆಕಾಯಿ ಹಾಕಿ ಫ್ರೈ ಮಾಡಿ
- ಫ್ರೈ ಮಾಡಿದ ಬದನೆಕಾಯಿ ತೆಗೆದು ತಟ್ಟೆಗೆ ಹಾಕಿಡಿ
- ಈಗ ಅದೇ ಎಣ್ಣೆಗೆ ಬ್ಯಾಡಗಿ ಮೆಣಸು ಹಾಕಿ ಫ್ರೈ ಮಾಡಿ ತೆಗೆದು ತಟ್ಟೆಯಲ್ಲಿ ಹಾಕಿಡಿ
- ಈಗ ಇದರಲ್ಲಿ ಚಿಕ್ಕ ಈರುಳ್ಳಿ ಹಾಕಿ, ಅದರ ಬಣ್ಣ ಬದಲಾದಾಗ ತೆಗೆದು ತಟ್ಟೆಯಲ್ಲಿ ಹಾಕಿ (ಈರುಳ್ಳಿ ತುಂಬಾ ಫ್ರೈ ಮಾಡಬೇಡಿ)
- ಈರುಳ್ಳಿ ಹಾಕುವಾಗ ಅದರ ಜೊತೆಗೆ ಹುಣಸೆಹಣ್ಣು, ಕರಿಬೇವು ಕೂಡ ಹಾಕಿ, ಎಣ್ಣೆಯಲ್ಲಿ ಸ್ವಲ್ಪ ಬಿಸಿ ಮಾಡಿ ತಟ್ಟೆಯಲ್ಲಿ ಹಾಕಿಡಿ
- ಈ ಎಲ್ಲಾ ಸಾಮಗ್ರಿ ತಣ್ಣಗಾದ ಮೇಲೆ ಒಣ ಮೆಣಸನ್ನು ಮಿಕ್ಸಿ ಜಾರ್‌ಗೆ ಹಾಕಿ ತರಿತರಿಯಾಗಿ ಪುಡಿ ಮಾಡಿ, ನುಣ್ಣನೆ ಪುಡಿ ಮಾಡಬೇಡಿ.
- ಈಗ ನಾವು ಈರುಳ್ಳಿ, ಬದನೆಕಾಯಿ, ಹುಳಿ, ಕರಿಬೇವು ಎಲ್ಲಾ ಕಲ್ಲಿಗೆ ಹಾಕಿ ಜಜ್ಜಿ ( ಈಗ ಬಹುತೇಕ ಮನೆಗಲಲ್ಲಿ ಅರಿಯುವ ಕಲ್ಲಿಲ್ಲ, ಬೆಳ್ಳುಳ್ಳಿ-ಶುಂಠಿ ಜಜ್ಜುವ ಕಲ್ಲಿನಲ್ಲಿ ಜಜ್ಜಿದರೆ ಸಾಕು)
- ಜಜ್ಜುವಾಗ ಸ್ವಲ್ಪ ಉಪ್ಪು ಹಾಕಿ ಜಜ್ಜಿ ಈ ಮಿಶ್ರಣ ಬೌಲ್‌ನಲ್ಲಿ ಹಾಕಿ, ಅದಕ್ಕೆ ಮೆಣಸಿನ ಪುಡಿ ಹಾಕಿ ಮಿಕ್ಸ್ ಮಾಡಿ ಅದಕ್ಕೆ 1ಚಮಚ ತೆಂಗಿನೆಣ್ಣೆ ಅಥವಾ ಆಲೀವ್ ಎಣ್ಣೆ ಸೇರಿಸಿ ಮಿಕ್ಸ್ ಮಾಡಿ, ಉಪ್ಪು ಸೇರಿಸಿ.
ಈಗ ರೆಡಿಯಾದ ಚಟ್ನಿಯನ್ನು ಅನ್ನದ ಜೊತೆ ಕಲೆಸಿ ತಿಂದು ನೋಡಿ ಸೂಪರ್ ಆಗಿರುತ್ತದೆ.
Comments
[ of 5 - Users]
Story first published: Thursday, February 27, 2025, 10:31 [IST]
Other articles published on Feb 27, 2025



Click it and Unblock the Notifications