Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಚಪಾತಿ, ಅನ್ನಕ್ಕೆ ತುಂಬಾನೇ ರುಚಿಯಾಗಿರುತ್ತೆ ಈ ಮೆಂತೆ ಸೊಪ್ಪಿನ ಗಸಿ: ನಾರ್ತ್ ಇಂಡಿಯನ್ ರೆಸಿಪಿಯಿದು
ಇದು ಉತ್ತರ ಭಾರತದ ಶೈಲಿಯ ಅಡುಗೆಯಾಗಿದ್ದು, ನಾರ್ತ್ ಇಂಡಿಯನ್ ಡಬಾ , ರೆಸ್ಟೋರೆಂಟ್‌ಗಳಲ್ಲಿ ಸಿಗುತ್ತೆ. ಚಪಾತಿ, ಅನ್ನದ ಜೊತೆ ಸವಿಯಲು ಈ ಮೆಂತೆ ಸೊಪ್ಪಿನ ಗಸಿ ತುಂಬಾನೇ ರುಚಿಯಾಗಿರುತ್ತದೆ. ಇದನ್ನು ಮಾಡುವ ವಿಧಾನ ಸರಳವಾಗಿದೆ. ಎಣ್ಣೆಗಾಯಿಯಂತೆ ಈ ಮೆಂತೆಸೊಪ್ಪಿನ ಗಸಿ ಕೂಡ ರುಚಿಯಲ್ಲಿ ಅದ್ಭುತವಾಗಿರುತ್ತದೆ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
ಮೆಂತೆ ಕಟ್ಟು 2
10-12 ಬೆಳ್ಳುಳ್ಳಿ ಎಸಳು
2-3 ಚಮಚ ಎಣ್ಣೆ
ಪೇಸ್ಟ್ ಮಾಡಲು
1/4 ಕಪ್ ನೆಲೆಗಡಲೆ(ರೋಸ್ಟ್ ಮಾಡಿ, ಸಿಪ್ಪೆ ತೆಗೆಯಿರಿ)
1/4ಕಪ್ ಹುರಿಗಡಲೆ
3-4 ಚಮಚ ಬಿಳಿ ಎಳ್ಳು(ರೋಸ್ಟ್ ಮಾಡಿದ್ದು)
ಗಸಿ ಮಾಡುವಾಗ
2 ಚಮಚ ಎಣ್ಣೆ
2 ಟೊಮೆಟೊ
2 ಈರುಳ್ಳಿ
3-4 ಒಣ ಮೆಣಸು
1/ 2 ಚಮಚ ಅರಿಶಿಣ ಪುಡಿ
2 ಚಮಚ ಕಾಶ್ಮೀರಿ ಮೆಣಸಿನ ಪುಡಿ
1/2 ಚಮಚ ಅರಿಶಿಣ ಪುಡಿ
1/2 ಚಮಚ ಕೊತ್ತಂಬರಿ ಪುಡಿ
ರುಚಿಗೆ ತಕ್ಕ ಉಪ್ಪು
ಬೆಳ್ಳುಳ್ಳಿ ಚಿಕ್ಕದಾಗಿ ಕತ್ತರಿಸಿದ್ದು
ಮಾಡುವ ವಿಧಾನ
- ಪಾತ್ರೆಗೆ 2 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ, ನಂತರ 10-12 ಎಸಳು ಸಿಪ್ಪೆ ಸುಲಿದ ಬೆಳ್ಳುಳ್ಳಿ ಹಾಕಿ ಫ್ರೈ ಮಾಡಿ, ಬೆಳ್ಳುಳ್ಳಿ ಗೋಲ್ಡನ್ ಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿ
- ಈಗ 2 ಕಟ್ಟು ಮೆಂತೆ ಸೊಪ್ಪು ಹಾಕಿ ಕಡಿಮೆ ಉರಿಯಲ್ಲಿ ಸ್ವಲ್ಪ ಹೊತ್ತು ಫ್ರೈ ಮಾಡಿ. ಮೆಂತೆ ಸೊಪ್ಪು ಬೆಂದ ಮೇಲೆ ಅವುಗಳನ್ನು ತೆಗೆದು ಒಂದು ಬೌಲ್‌ನಲ್ಲಿ ಹಾಕಿಡಿ.
- ಈಗ ನೀವು ಮಿಕ್ಸಿ ಜಾರ್‌ಗೆ ರೋಸ್ಟ್ ಮಾಡಿದ ನೆಲೆಗಡಲೆ ಸೇರಿಸಿ, 1/4 ಕಪ್ ಹುರಿಗಡಲೆ ಸೇರಿಸಿ.
- ಈಗ 3-4 ಚಮಚ ರೋಸ್ಟ್ ಮಾಡಿದ ಬಿಳಿ ಎಳ್ಳು ಸೇರಿಸಿ
- ನಂತರ ಸ್ವಲ್ಪ ನೀರು ಸೇರಿಸಿ
- ನಂತರ ನುಣ್ಣನೆ ರುಬ್ಬಿ
- ಈಗ ಸೊಪ್ಪು ಫ್ರೈ ಮಾಡಿದ ಅದೇ ಪಾತ್ರೆಗೆ 2 ಚಮಚ ಎಣ್ಣೆ ಸೇರಿಸಿ
- ಎಣ್ಣೆ ಬಿಸಿಯಾದಾಗ 1 ಚಮಚ ಜೀರಿಗೆ ಹಾಕಿ
- ಜೀರಿಗೆ ಚಟ್‌ಪಟ್ ಶಬ್ದ ಮಾಡುವಾಗ ಚಿಕ್ಕದಾಗಿ ಕತ್ತರಿಸಿದ ಬೆಳ್ಳುಳ್ಳಿ ಹಾಕಿ, 3-4 ಒಣ ಮೆಣಸು ಮುರಿದು ಹಾಕಿ
- ಈಗ 2 ಈರುಳ್ಳಿ ಸೇರಿಸಿ(ಚಿಕ್ಕದಾಗಿ ಕತ್ತರಿಸಿದ್ದು), ಈರುಳ್ಳಿ ಮೆತ್ತಗಾಗುವವರೆಗೆ ಫ್ರೈ ಮಾಡಿ
- ನಂತರ 2 ಟೊಮೆಟೊ ಹಾಕಿ, ರುಚಿಗೆ ತಕ್ಕ ಉಪ್ಪು ಸೇರಿಸಿ, ಟೊಮೆಟೊ ಮೆತ್ತಗಾಗುವವರೆಗೆ ಫ್ರೈ ಮಾಡಿ
- ನಂತರ ಅರಿಶಿಣ ಸೇರಿಸಿ
- ಅರ್ಧ ಚಮಚ ಕೊತ್ತಂಬರಿ ಪುಡಿ ಸೇರಿಸಿ
- ಸ್ವಲ್ಪಬಿಸಿ ನೀರು ಸೇರಿಸಿ, ಈಗ ರುಬ್ಬಿಟ್ಟ ಪೇಸ್ಟ್ ಹಾಕಿ ಮಿಕ್ಸ್ ಮಾಡಿ 3-4 ನಿಮಿಷ ಬೇಯಿಸಿ, ಸ್ವಲ್ಪ ನೀರು ಸೇರಿಸಿ ಕುದಿಸಿ. ಮಿಶ್ರಣ ಚೆನ್ನಾಗಿ ಕುದಿ ಬಂದಾಗ ಅರ್ಧ ಚಮಚ ಗರಂ ಮಸಾಲ, ಕಾಶ್ಮೀರಿ ಮೆಣಸಿನ ಪುಡಿ ಸೇರಿಸಿ ಮಿಕ್ಸ್ ಮಾಡಿ
- ಈಗ ನೀವು ಫ್ರೈ ಮಾಡಿಟ್ಟ ಮೆಂತೆ ಸೊಪ್ಪು ಮಿಕ್ಸ್ ಮಾಡಿ 2 ನಿಮಿಷ ಕುದಿ ಬಂದ ಮೇಲೆ ಉರಿಯಿಂದ ಇಳಿಸಿ, ಸೂಪರ್ ರುಚಿಗೆ ಮೆಂತೆಸೊಪ್ಪಿನ ಗಸಿ ರೆಡಿಯಾಗಿರುತ್ತೆ.
ಸಲಹೆ:
ನೀವು ಬರಿ ಸೊಪ್ಪು ಹಾಕಬಹುದು ಅಥವಾ ಎಳೆಯ ದಂಟು ಕೂಡ ಹಾಕಬಹುದು, ಜಾಸ್ತಿ ಮೆಂತೆ
ಸೊಪ್ಪು ಬೇಡ , 2 ಚಿಕ್ಕ ಕಟ್ಟು ಸಾಕಾಗುತ್ತೆ
ಬೆಳ್ಳುಳ್ಳಿ ಸ್ವಲ್ಪ ಹೆಚ್ಚು ಬೇಕಾಗುತ್ತೆ
ಎಣ್ಣೆ ತೇಲುವಂತೆ ಬಳಸಬಹುದು
ಇನ್ನು ಮೆಣಸಿನ ಪುಡಿ ಬದಲಿಗೆ ಹಸಿ ಮೆಣಸು ಬಳಸಬಹುದು.



Click it and Unblock the Notifications