Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ರೆಸಿಪಿ: ಮಾವಿನಕಾಯಿ ತೊಕ್ಕು ಸ್ವಲ್ಪ ಸೈಡ್‌ಗಿದ್ದರೆ ಊಟದ ರುಚಿ ಹೆಚ್ಚುವುದು
ಮಾವಿನಕಾಯಿ ತೊಕ್ಕು ಮಾಡಿದ್ದೀರಾ? ಟ್ರೈ ಮಾಡಿ ಅನ್ನ, ಚಪಾತಿ, ಚಿತ್ರಾನ್ನ, ದೋಸೆ, ಇಟ್ಲಿ ಹೀಗೆ ಯಾವುದೇ ಆಹಾರಕ್ಕಾದರೂ ಈ ಮಾವಿಕ ಕಾಯಿ ತೊಕ್ಕು ಸ್ವಲ್ಪ ಇದ್ದರೆ ರುಚಿ ಇನ್ನೂ ಹೆಚ್ಚುವುದು, ನೀವು ಬಿರಿಯಾನಿಗೂ ಸೈಡ್‌ನಲ್ಲಿ ಮಾವಿನ ತೊಕ್ಕು ಸ್ವಲ್ಪ ಹಾಕಬಹುದು. ಈ ಮಾವಿನಕಾಯಿ ತೊಕ್ಕು ಮಾಡುವುದು ಹೇಗೆ ಎಂದು 'ನೋಡೋಣ ಬನ್ನಿ:

ಬೇಕಾಗುವ ಸಾಮಗ್ರಿ
ಮಾವಿನಕಾಯಿ 2-3
1 ಚಮಚ ಮೆಣಸಿನ ಪುಡಿ
ಸ್ವಲ್ಪ ಅರಿಶಿಣ ಪುಡಿ
ಸ್ವಲ್ಪ ಇಂಗು
ರುಚಿಗೆ ತಕ್ಕ ಉಪ್ಪು
1/2 ಚಮಚ ಮೆಂತೆ
1/2 ಚಮಚ ಬೆಲ್ಲದ ಪುಡಿ
2 ಚಮಚ ಸಾಸಿವೆಯೆಣ್ಣೆ ( ತೆಂಗಿನೆಣ್ಣೆ ಕೂಡ ಬಳಸಬಹುದು, ಈ ಎರಡೂ ಎಣ್ಣೆ ವಾಸನೆ
ನಿಮಗೆ ಇಷ್ಟವಿಲ್ಲದಿದ್ದರೆ ನೀವು ಬಳಸುವ ಅಡುಗೆಯೆಣ್ಣೆ ಬಳಸಬಹುದು)
ಸಾಸಿವೆ
ಮಾಡುವ ವಿಧಾನ
- ಮಾವಿನಕಾಯಿ ಸಿಪ್ಪೆ ಸುಲಿದು ತುರಿದು ಇಡಿ
- ಈಗ ದಪ್ಪ ತಳವಿರುವ ಪಾತ್ರೆ ಬಿಸಿ ಮಾಡಿ
- ನಂತರ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಸಾಸಿವೆ ಮತ್ತು ಇಂಗು ಹಾಕಿ
- ನಂತರ ತುರಿದ ಮಾವಿನಕಾಯಿ ತುರಿ ಸೇರಿಸಿ ಕಡಿಮೆ ಉರಿಯಲ್ಲಿ 4-5 ನಿಮಿಷ ಫ್ರೈ ಮಾಡಿ
- ಮಾವಿನ ಕಾಯಿ ಮೆತ್ತಗಾದ ಮೇಲೆ ಮೆಣಸಿನ ಪುಡಿ, ಅರಿಶಿಣ ಪುಡಿ, ಉಪ್ಪು ಹಾಕಿ ಮಿಕ್ಸ್ ಮಾಡಿ
- ಇದೆ ಸಮಯದಲ್ಲಿ ಮೆಂತೆ ಪುಡಿ ಸ್ವಲ್ಪ ರೋಸ್ಟ್ ಮಾಡಿ ಸೇರಿಸಿ, ನಂತರ ಬೆಲ್ಲದ ಪುಡಿ ಸೇರಿಸಿ.
- ನಂತರ ಇನ್ನುಸ್ವಲ್ಪ ಹೊತ್ತು ಬೇಯಿಸ, ಹೀಗೆ ಬೇಯಿಸುವಾಗ ಸೌಟ್‌ನಿಂದ ಆಡಿಸಿ.
- ನಂತರ ಉರಿಯಿಂದ ಇಳಿಸಿ
- ನಂತರ ಒಗ್ಗರಣೆ ಪಾತ್ರೆಗೆ ಎಣ್ಣೆ ಸಾಸಿವೆ, ಕರಿಬೇವು ಹಾಕಿ ಒಗ್ಗರಣೆ ಸೇರಿಸಿ
- ಮಿಶ್ರಣ ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬದಲ್ಲಿ ಹಾಕಿಡಿ, ಫ್ರಿಡ್ಜ್‌ನಲ್ಲಿಟ್ಟರೆ ತುಂಬಾ ಸಮಯ ಬಳಕೆ ಬರುತ್ತದೆ.
ರೆಸಿಪಿ 2
ಬೇಕಾಗುವ ಸಾಮಗ್ರಿ
2 ಮಾವಿನ ಕಾಯಿ
100 ಗ್ರಾಂ ಶುಂಠಿ
1ಚನಚ ಹುಣಸೆರಸ
ಖಾರದ ಪುಡಿ 1 ಚಮಚ
ಸ್ವಲ್ಪ ಅರಿಶಿಣ ಪುಡಿ
1/2 ಚಮಚ ಮೆಂತೆ (ರೋಸ್ಟ್ ಮಾಡಿ,ಪುಡಿ ಮಾಡಿ)
ಸ್ವಲ್ಪ ಇಂಗು
2 ಚಮಚ ಎಣ್ಣೆ
ಉಪ್ಪು
ಮಾಡುವ ವಿಧಾನ
- ಸಿಪ್ಪೆ ಸುಲಿದು ತುರಿಯಿರಿ
- ಶುಂಠಿಯನ್ನು ಕೂಡ ಸಿಪ್ಪೆ ಕೆತ್ತಿ ತುರಿಯಿರಿ
- ನಂತರ ಮಾವಿನ ತುರಿ ಹಾಗೂ ಶುಂಠಿಯನ್ನು ಮಿಕ್ಸಿಯಲ್ಲಿ ಒಂದೆರಡು ರೌಂಡ್ ತಿರುಗಿಸಿ, ನೀರು ಸೇವಿಸಬಾರದು.
- ಪ್ಯಾನ್ ಬಿಸಿ ಮಾಡಿ ಎಣ್ಣೆ ಹಾಕಿ, ನಂತರ ಸಾಸಿವೆ ಹಾಕಿ, ಸಾಸಿವೆ ಚಟ್‌ಪಟ್ ಶಬ್ದ ಮಾಡುವಾಗ, ಸ್ವಲ್ಪ ಇಂಗು ಹಾಕಿ.
- ನಂತರ ಶುಂಠಿ ಮಾವಿನ ಕಾಯಿ ಪೇಸ್ಟ್ ಹಾಕಿ 5-6 ನಿಮಿಷ ಫ್ರೈ ಮಾಡಿ
- ನಂತರ ಖಾರದ ಪುಡಿ, ಅರಿಶಿಣ ಪುಡಿ, ಉಪ್ಪು ಸೇರಿಸಿ
- ಮತ್ತೆ 4-5 ನಿಮಿಷ ಫ್ರೈ ಮಾಡಿ
- ಬೆಲ್ಲ ಸೇರಿಸಿ, ಮೆಂತೆ ಪುಡಿ ಸೇರಿಸಿ ಮಿಕ್ಸ್ ಮಾಡಿ
- ನಂತರ ಮತ್ತೆ 2 ನಿಮಿಷ ಬೇಯಿಸಿ
ಈಗ ಉರಿಯಿಂದ ಇಳಿಸಿ ತಣ್ಣಗಾದ ಮೇಲೆ ಗಾಳಿಯಾಡದ ಗಾಜಿನ ಡಬ್ಬದಲ್ಲಿ ಹಾಕಿಡಿ.
ಈ ತೊಕ್ಕು ನೀವು ತಿಂಗಳವರೆಗೆ ಇಟ್ಟು ಬಳಸಬಹುದು. ಮಾವಿನಕಾಯಿ ಸೀಸನ್‌ನಲ್ಲಿ ಮನೆಯಲ್ಲಿ ಏನಾದರೂ ಪ್ರೋಗ್ರಾಂ ಇದ್ದರೆ ಇದನ್ನು ತಯಾರಿಸಿ, ಊಟದ ರುಚಿ ಹೆಚ್ಚಾಗುವುದು.
ತೊಕ್ಕು ಮಾಡಲು ಹುಳಿ ಮಾವಿನಕಾಯಿ ಒಳ್ಳೆಯದು
ನೀವು ತೊಕ್ಕು ಮಾಡಲು ಹುಳಿ ಅಧಿಕವಿರುವ ಮಾವಿನಕಾಯಿ ಬಳಸಿದರೆ ಒಳ್ಳೆಯದು. ಹುಳಿ ಕಡಿಮೆ ಇದ್ದರೆ ಅಷ್ಟೊಂದು ರುಚಿ ಕೊಡಲಿಲ್ಲ. ಕೆಲವೊಂದು ಮಾವಿನಕಾಯಿ ಬಲಿತಿರುತ್ತದೆ,ಆದರೂ ಹುಳಿ ಇರುತ್ತದೆ, ಹಣ್ಣಾದಾಗ ಸಿಹಿಯಾಗುವುದು, ಅಂಥ ಮಾವಿನಕಾಯಿ ಬಳಸಿ.



Click it and Unblock the Notifications