ದೇಹದಲ್ಲಿ ರಕ್ತ ಕಡಿಮೆ ಆಗಿದ್ರೆ ಈ ಎಳ್ಳುಂಡೆ ಮಾಡಿ: ತಿಂಗಳ ಕಾಲ ಇಟ್ಟು ಸವಿಯಬಹುದು!

Posted By:

ಬಹಳಷ್ಟು ಮಂದಿ ಇತ್ತೀಚಿಗೆ ಎದುರಿಸುವ ಸಮಸ್ಯೆಗಳಲ್ಲಿ ಈ ರಕ್ತಹೀನತೆ ಸಹ ಒಂದಾಗಿದೆ. ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆಯಾದರೆ ನಿಮಗೆ ಹಲವು ರೀತಿಯ ಅನಾರೋಗ್ಯ ಸಮಸ್ಯೆಗಳು ಕಾಡುವುದು ನೋಡಬಹುದು. ರಕ್ತದಲ್ಲಿನ ಕೆಂಪು ರಕ್ತಕಣಗಳು ಅಥವಾ ಹಿಮೋಗ್ಲೋಬಿನ್ ಪ್ರಮಾಣವು ಸಾಮಾನ್ಯಕ್ಕಿಂತ ಕಡಿಮೆಯಾಗಿ, ಅಂಗಾಂಶಗಳಿಗೆ ಆಮ್ಲಜನಕದ ಪೂರೈಕೆ ಕಡಿಮೆಯಾಗುವ ಸ್ಥಿತಿ ಎನ್ನಬಹುದು.

ಈ ರೀತಿ ಆದರೆ ದೇಹದಲ್ಲಿ ಹಲವು ರೀತಿಯ ಬದಲಾವಣೆಗಳನ್ನು ನೋಡಬಹುದು. ಹಾಗೆ ರಕ್ತಹೀನತೆಯಿಂದ ದೇಹದಲ್ಲಿ ಶಕ್ತಿ ಕೊರತೆ ಎದುರಿಸಬಹುದು. ಇನ್ನು ಈ ಸಮಸ್ಯೆಯಿಂದ ಹೊರಬರಲು ಹಲವು ಉಪಾಯಗಳಿವೆ. ರಕ್ತದಲ್ಲಿ ಕೆಂಪು ರಕ್ತ ಕಣ ಹೆಚ್ಚಾಗುವಂತೆ ಮಾಡಲು ನಾವು ಸುಲಭವಾಗಿ ಮನೆಯಲ್ಲೇ ಕೆಲವು ಉಪಾಯಗಳ ಮಾಡಬಹುದು.

Sesame Laddu For Body Health

ಹಾಗೆ ಮನೆಯಲ್ಲಿ ಈ ರೀತಿಯಾಗಿ ಕಡಲೆ ಬೀಜ ಹಾಗೂ ಎಳ್ಳು ಬಳಸಿ ಮಾಡುವ ಉಂಡೆಯು ನಿಮ್ಮ ದೇಹದ ಬಹಳಷ್ಟು ಸಮಸ್ಯೆಗಳಿಗೆ ಮುಕ್ತಿ ನೀಡಲಿದೆ. ಹಾಗೆ ರಕ್ತಹೀನತೆಯಂತಹ ಗಂಭೀರ ಸಮಸ್ಯೆಗೂ ಇದು ಪರಿಹಾರ ನೀಡಲಿದೆ. ಹಾಗಾದ್ರೆ ಈ ಎಳ್ಳಿನ ಉಂಡೆ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಬೇಕಾಗುತ್ತದೆ ಎಂಬೆಲ್ಲಾ ಕುರಿತಾಗಿ ಇಲ್ಲಿ ತಿಳಿದುಕೊಳ್ಳೋಣ.

ಕಡ್ಲೆ ಎಳ್ಳು ಉಂಡೆ ಮಾಡಲು ಬೇಕಾಗುವ ವಸ್ತುಗಳು

  • ಶೇಂಗಾ ಕಡ್ಲೆ
  • ಎಳ್ಳು
  • ಗಸೆಗಸೆ
  • ಎಣ್ಣೆ
  • ತುಪ್ಪ
  • ಬೆಲ್ಲ

ಕಡ್ಲೆ ಎಳ್ಳು ಉಂಡೆ ಮಾಡುವ ವಿಧಾನವೇನು?

ಮೊದಲು ಬಾಣಲೆಯಲ್ಲಿ ಕಡಲೆ ಬೀಜ ಹಾಕಿ ಹುರಿದುಕೊಳ್ಳಬೇಕು. ಅದರ ಸಿಪ್ಪೆ ಬಿಡುವಂತೆ ಹುರಿಯಬೇಕು. ನಂತರ ಶೇಂಗಾವನ್ನು ತೆಗೆದು ಬದಿಗಿಟ್ಟುಕೊಳ್ಳಿ. ಈಗ ಅದೇ ಪಾತ್ರೆಗೆ ಬಿಳಿ ಎಳ್ಳನ್ನು ಹಾಕಿಕೊಂಡು ಹುರಿದುಕೊಳ್ಳಬೇಕು. 2 ಕಪ್ ಶೇಂಗಾಕ್ಕೆ 1 ಕಪ್ ಬಿಳಿ ಎಳ್ಳು ಬಳಸಿ. ಎಳ್ಳು ಸ್ವಲ್ಪ ಬ್ರೌನ್ ಬಣ್ಣಕ್ಕೆ ಬರಬೇಕು. ನಂತರ ಇದನ್ನು ಸಹ ತೆಗೆದಿಟ್ಟುಕೊಳ್ಳಿ.

ಈಗ ಅದೇ ಬಾಣಲೆಗೆ 2 ಸ್ಪೂನ್ ಗಸೆಗಸೆ ಸಹ ಹಾಕಿ ಹುರಿದು ಬದಿಗಿಟ್ಟುಕೊಳ್ಳಿ. ಈಗ ಹುರಿದ ಕಡಲೆಯನ್ನು ಒಡೆದು ಎರಡು ಭಾಗ ಮಾಡಿ ಸಿಪ್ಪೆಯಿಂದ ಬೇರೆ ಮಾಡಿ. ಈಗ ಒಂದು ಮಿಕ್ಸಿ ಜಾರ್‌ಗೆ ಕಡಲೆ, ಗಸೆಗಸೆ, ಬಿಳಿ ಎಳ್ಳು ಹಾಕಿಕೊಳ್ಳಬೇಕು. ನಂತರ ಮಿಕ್ಸಿಯಲ್ಲಿ ತರಿ ತರಿಯಾಗಿ ರುಬ್ಬಿಕೊಳ್ಳಬೇಕು. ಹುಡಿ ಹುಡಿಯಾಗಿ ಬರಬೇಕು.

ಈಗ ಒಂದು ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ 2 ಕಪ್ ಬೆಲ್ಲ ಸ್ವಲ್ಪ ನೀರು ಹಾಕಿ ಕರಗಲು ಬಿಡಿ. ಬೆಲ್ಲ ನೀರಾದರೆ ಸಾಕಾಗುತ್ತದೆ. ಅನಂತರ ಬೆಲ್ಲದ ನೀರನ್ನು ಜರಡಿ ಹಿಡಿದು ಇಟ್ಟುಕೊಳ್ಳಿ. ಮತ್ತೆ ಬಾಣಲೆಗೆ 2 ಕಪ್ ಒಣ ಕೊಬ್ಬರಿ ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು. ಹಾಗೆ ಇದಕ್ಕೆ ಬೆಲ್ಲದ ನೀರು ಸಹ ಸೇರಿಸಿ ಒಂದು ನಿಮಿಷ ಚೆನ್ನಾಗಿ ಬೇಯಿಸಿಕೊಳ್ಳಿ.

1 ನಿಮಿಷ ಬಿಟ್ಟ ಬಳಿಕ ಇದಕ್ಕೆ ಮಿಕ್ಸಿಯಲ್ಲಿ ಪುಡಿ ಮಾಡಿಕೊಂಡಿದ್ದ ಮಿಶ್ರಣವನ್ನು ಇದಕ್ಕೆ ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ. ಉರಿಯನ್ನು ಸಣ್ಣದಾಗಿ ಇಟ್ಟು ಇದನ್ನು ಮಿಶ್ರಣ ಮಾಡಿ. 2 ನಿಮಿಷ ಮಿಕ್ಸ್ ಮಾಡಿದರೆ ಸಾಕು. ಹೂರ್ಣದಂತೆ ಬಂದಾಗ ಒಲೆ ಆಫ್ ಮಾಡಿಕೊಳ್ಳಿ. ಬೇಕಿದ್ದರೆ 1 ಸ್ಪೂನ್ ತುಪ್ಪ ಹಾಕಿಕೊಳ್ಳಬಹುದು. ಹಾಕದೆ ಇದ್ದರೂ ನಡೆಯಲಿದೆ.

ಈಗ ಸ್ವಲ್ಪ ತಣ್ಣಗಾಗಲು ಬಿಟ್ಟು ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಉಂಡೆ ಕಟ್ಟಿಕೊಳ್ಳಿ. ನಂತರ ಒಂದು ಬಾಕ್ಸ್‌ಗೆ ಹಾಕಿಟ್ಟರೆ ಒಂದು ತಿಂಗಳ ಕಾಲ ಇದನ್ನು ನೀವು ಸವಿಯಬಹುದು. ನೀವು ವಾರದಲ್ಲಿ ಎರಡು ಉಂಡೆ ಸೇವಿಸಿದರೂ ಸಹ ರಕ್ತಹೀನತೆ ದೂರಾಗಲಿದೆ.

ಶೇಂಗಾ ಕಡ್ಲೆ
ಎಳ್ಳು
ಗಸೆಗಸೆ
ಎಣ್ಣೆ
ತುಪ್ಪ
ಬೆಲ್ಲ

[ of 5 - Users]
Story first published: Friday, March 6, 2026, 13:59 [IST]
X
Desktop Bottom Promotion