Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಾಮೂಲಿ ಅಲ್ಲ ಇದು ಬಿಳಿ ಚಿತ್ರಾನ್ನ..! 5 ನಿಮಷದೊಳಗೆ ರೆಡಿಯಾಗುತ್ತೆ..!!
ಬೆಳಗ್ಗೆ ಬ್ರೇಕ್ ಫಾಸ್ಟ್ ಮಾಡುವಾಗ ನಾವು ಸುಲಭವಾಗಿ ಕಡಿಮೆ ಸಮಯದಲ್ಲಿ ಮಾಡಬಹುದಾದ ಕೆಲವು ತಿಂಡಿಗಳನ್ನೇ ಮಾಡಲು ಮುಂದಾಗುತ್ತೇವೆ. ಅದರಂತೆ ಹೆಚ್ಚಾಗಿ ಚಿತ್ರಾನ್ನ ಮಾಡುವುದು ನಮ್ಮಲ್ಲಿ ಕಾಮನ್, ಏಕೆಂದರೆ ಅನ್ನ ಉಳಿದಿದ್ದರೆ ಅಥವಾ ಗಡಿ ಬಿಡಿಯ ಸಮಯದಲ್ಲಿ ಚಿತ್ರಾನ್ನವೇ ಮೊದಲ ಆಯ್ಕೆಯಾಗಿರುತ್ತೆ. ಈ ಚಿತ್ರಾನ್ನವನ್ನ ಹಲವು ವಿಧದಲ್ಲಿ ಮಾಡಬಹುದು ಎಂಬುದನ್ನು ಕೂಡ ನಾವು ತಿಳಿದಿದ್ದೇವೆ.
ಚಿತ್ರಾನ್ನವನ್ನ ಕೆಲವರು ಇಷ್ಟ ಪಟ್ಟು ಸವಿದರೆ ಮತ್ತೆ ಕೆಲವರು ಚಿತ್ರಾನ್ನ ಅಂದ್ರೆ ಮೂಗು ಮುರಿಯುತ್ತಾರೆ. ಆದರೆ ನಾವಿಂದು ಹೇಳುವ ರೀತಿಯ ಚಿತ್ರಾನ್ನ ಮಾಡಿದರೆ ಮನೆ ಮಂದಿ ಎಲ್ಲರೂ ಕೂಡ ಸವಿಯು ಮುಂದಾಗುತ್ತಾರೆ. ಹಾಗೆ ಇಷ್ಟಪಡುತ್ತಾರೆ. ಸಾಮಾನ್ಯವಾಗಿ ಚಿತ್ರಾನ್ನವನ್ನ ಅರಶಿಣ ಹಾಕಿ ಹಳದಿಯಾಗಿ ಮಾಡುತ್ತಾರೆ. ಚಿತ್ರಾನ್ನ ಅಂದ್ರೆ ಅದು ಹಳದಿಯಾಗಿರಬೇಕು ಅನ್ನೋ ಅಲಿಖಿತ ನಿಯಮದಂತೆ.

ಆದ್ರೆ ನಾವಿಂದು ಮಾಡಲು ಹೊರಟಿರುವ ಈ ಚಿತ್ರಾನ್ನ ಬಿಳಿ ಚಿತ್ರಾನ್ನವಾಗಿದೆ. ಇದು ಉಳಿದ ಚಿತ್ರಾನ್ನದಂತೆ ಹಳದಿಯಾಗಿರುವುದಿಲ್ಲ ಬದಲಿಗೆ ಬಿಳಿ ಬಣ್ಣದಲ್ಲಿರಲಿದೆ. ಹಾಗಾದ್ರೆ ಇದರ ರುಚಿ ಹೇಗಿರುತ್ತೆ, ಮಾಡುವ ವಿಧಾನವೇನು? ಈ ಬಿಳಿ ಚಿತ್ರಾನ್ನ ಮಾಡುವುದು ಹೇಗೆ ಎಂಬೆಲ್ಲಾ ಮಾಹಿತಿ ನಾವಿಂದು ತಿಳಿದುಕೊಳ್ಳೋಣ. ಬಿಳಿ ಚಿತ್ರಾನ್ನ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಬೇಕಾಗುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಬಿಳಿ ಚಿತ್ರಾನ್ನ ಮಾಡಲು ಬೇಕಾಗುವ ಪದಾರ್ಥಗಳು
- ಅನ್ನ
- ಕಡಲೆ ಬೀಜ
- ಗೋಡಂಬಿ
- ಉದ್ದಿನ ಬೇಳೆ
- ಸಾಸಿವೆ
- ಕರಿಬೇವಿನ ಎಲೆ
- ಹಸಿರು ಮೆಣಸಿನಕಾಯಿ
- ಕೊತ್ತಂಬರಿ ಸೊಪ್ಪು
- ನಿಂಬೆ
- ರುಚಿಗೆ ಉಪ್ಪು
- ಹುರಿಗಡಲೆ
- ತೆಂಗಿನ ಕಾಯಿ ತುರಿ
- ಹುಣಸೆ ಹುಳಿ
- ಬೆಳ್ಳುಳ್ಳಿ
- ಎಣ್ಣೆ
ಬಿಳಿ ಚಿತ್ರಾನ್ನ ಮಾಡುವುದು ಹೇಗೆ?
ಮೊದಲು ಒಂದು ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಆದಕ್ಕೆ ಕಡಲೆ ಬೀಜ ಹಾಕಿ ಹುರಿದುಕೊಂಡು ಅದನ್ನು ಬದಿಗೆ ಇಟ್ಟುಕೊಳ್ಳಿ. ನಂತರ ಇದಕ್ಕೆ ಗೋಡಂಬಿ ಹಾಕಿ ಹುರಿದಿಟ್ಟುಕೊಳ್ಳಿ. ನಂತರ ಇದೇ ಎಣ್ಣೆಗೆ ಕಡಲೆ ಬೇಳೆ, ಉದ್ದಿನ ವೇಳೆ ಹಾಕಿ ನಂತರ ಇದಕ್ಕೆ ಸಾಸಿವೆ ಹಾಕಿ ಫ್ರೈ ಮಾಡಿಕೊಳ್ಳಿ.
ಅನಂತರ ಕರಿಬೇವು, ಹಸಿ ಮೆಣಸು ಹಾಕಿಕೊಂಡು ಹುರಿದುಕೊಳ್ಳಬೇಕು. ನಿಮಗೆ ಎಷ್ಟು ಖಾರ ಬೇಕೋ ಅಷ್ಟು ಮೆಣಸು ಹಾಕಿಕೊಳ್ಳಿ. ನಂತರ ಇದಕ್ಕೆ ಅನ್ನವನ್ನು ಹಾಕಿ ಮೇಲೆ ಒಂದು ನಿಂಬೆ ರಸ ಹಿಂಡಿಕೊಂಡು ಚೆನ್ನಾಗಿ ಒಂದು ಸುತ್ತು ತಿರುಗಿಸಿ. ನಂತರ ಇದರ ಮೇಲೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ಮತ್ತೆ ತಿರುಗಿಸಿಕೊಳ್ಳಿ. ಈಗ ಮೊದಲು ಹುರಿದುಕೊಂಡಿರುವ ಕಡಲೆ ಬೀಜ, ಗೋಡಂಬಿಯನ್ನು ಇದಕ್ಕೆ ಹಾಕಿ ತಿರುಗಿಸಿಕೊಂಡರೆ ಆಯಿತು. ನಿಮ್ಮ ಮುಂದೆ ಬಿಳಿ ಚಿತ್ರಾನ್ನ ರೆಡಿಯಾಗುತ್ತದೆ. ಕಡಿಮೆ ಸಮಯದಲ್ಲಿ ಅತ್ಯಂತ ರುಚಿಯ ತಿಂಡಿಯಾಗಿ ಇದನ್ನು ಮಾಡಬಹುದು. ಇದಕ್ಕೊಂದು ನೀರು ಚಟ್ನಿ ಮಾಡಿದ್ರೆ ಅದರ ರುಚಿಗೆ ನೀವು ಪದೇ ಪದೇ ಸವಿಯಲು ಮುಂದಾಗುತ್ತೀರಿ.
ಇದೊಂದು ಸುಲಭದ ರೆಸಿಪಿಯಾಗಿದ್ದು ಯಾವಾಗ ಬೇಕಾದರು ಮಾಡಬಹುದು. ಚಟ್ನಿಗೆ ಕೆಡಲೆ ಬೀಜ ಅಥವಾ ಹುರಿಗಡಲೆ ಕಾಂಬಿನೇಷನ್‌ನಲ್ಲಿ ಮಾಡಿದ್ರೆ ಇದರ ರುಚಿಗೆ ಎಲ್ಲರು ಫಿದಾ ಆಗೋದು ಪಕ್ಕ.



Click it and Unblock the Notifications