Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತೂಕ ಇಳಿಸಬೇಕಾ...ಈ ಗೋಧಿ ರವೆ ಉಪ್ಪಿಟ್ಟು ಟ್ರೈ ಮಾಡಿ ನೋಡಿ..!!
ಬೆಳಗ್ಗೆ ತಿಂಡಿ ಸವಿಯಲು ನೀವು ವಿವಿಧ ರೀತಿ ಖಾದ್ಯಗಳ ಮಾಡಿ ಸವಿಯುವುದು ಕಾಮನ್. ಅದ್ರಲ್ಲೂ ಒಂದೇ ರೀತಿಯ ಖಾದ್ಯಗಳನ್ನು ನಿತ್ಯವು ಮಾಡಿ ಸವಿಯುವುದಕ್ಕಿಂತ ವಿವಿಧ ರೀತಿಯ ತಿಂಡಿಗಳ ಮಾಡಿ ಸವಿಯುವುದು ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ನೀವು ಆರೋಗ್ಯದ ಕಡೆಗೂ ಅಷ್ಟೇ ಗಮನ ಹರಿಸುವ ಮಂದಿಯಾಗಿದ್ದರೆ ಹೊಸ ಹೊಸ ರೀತಿಯ ಬ್ರೇಕ್ ಫಾಸ್ಟ್ ರೆಡಿ ಮಾಡಿ ನೋಡಿ.
ಹಾಗೆ ಆರೋಗ್ಯಕರ ಜೀವನ ಶೈಲಿಯಲ್ಲಿ ನಾವಿಂದು ತಕ ಇಳಿಸಿಕೊಳ್ಳಲು ಸಹಕಾರಿಯಾಗುವಂತಹ ಗೋಧಿ ರವೆಯ ಉಪ್ಪಿಟ್ಟು ಮಾಡುವ ಕುರಿತು ತಿಳಿದುಕೊಳ್ಳೋಣ. ಗೋಧಿ ಹಿಟ್ಟು ನಿಮ್ಮ ತೂಕ ಇಳಿಸಿಕೊಳ್ಳಲು ಈ ಗೋಧಿ ಖಾದ್ಯಗಳು ಹಳ ಸಹಕಾರಿಯಾಗಲಿವೆ. ನಾವು ಚಪಾತಿ, ಗೋಧಿ ದೋಸೆಯಂತಹ ಖಾದ್ಯವನ್ನು ಮಾಡಿ ಸವಿದಿರುತ್ತೇವೆ. ಹಾಗೆ ಗೋಧಿ ರವೆಯ ಉಪ್ಪಿಟ್ಟು ಮಾಡುವುದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.

ಉಪ್ಪಿಟ್ಟು ಅಂದ್ರೆ ಎಲ್ಲರಿಗೂ ಇಷ್ಟಗಾಗುತ್ತೆ. ಹಾಗೆ ಇದರಲ್ಲಿ ಹಲವು ಬಗೆಯ ಉಪ್ಪಿಟ್ಟುಗಳಿವೆ. ಒಂದೊಂದು ಭಾಗದಲ್ಲಿ ಒಂದೊಂದು ರೀತಿ ಉಪ್ಪಿಟ್ಟು ಮಾಡಿ ಸವಿಯುವುದು ಕೂಡ ನೋಡಬಹುದು. ಇನ್ನು ಇಂದು ಗೋಧಿ ರವೆಯ ಉಪ್ಪಿಟ್ಟು ಮಾಡಿ ಸವಿಯುವುದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ಗೋಧಿ ರವೆ ಉಪ್ಪಿಟ್ಟು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು?, ಎಷ್ಟು ಸಮಯ ಹಿಡಿಯಲಿದೆ ಅನ್ನೋದನ್ನು ನಾವಿಂದು ತಿಳಿಯೋಣ.
ಗೋಧಿ ರವೆ ಉಪ್ಪಿಟ್ಟು ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಗೋಧಿ ರವೆ -1 ಕಪ್
- ತುಪ್ಪ - 1/2 ಟೀಸ್ಪೂನ್
- ಎಣ್ಣೆ - 2 ಟೀಸ್ಪೂನ್
- ಕಡಲೆ ಬೇಳೆ - 1 ಟೀಸ್ಪೂನ್
- ಉದ್ದಿನ ಬೇಳೆ - 1 ಟೀಸ್ಪೂನ್
- ಸಾಸಿವೆ - 1/2 ಟೀಸ್ಪೂನ್
- ಜೀರಿಗೆ - 1/4 ಟೀಸ್ಪೂನ್
- ಕರಿಬೇವು
- ಇಂಗು
- ಈರುಳ್ಳಿ - 1
- ಟೊಮೆಟೊ - 1
- ಬಟಾಣಿ - 1/2 ಕಪ್
- ಕ್ಯಾರೆಟ್ - 1
- ಬೀನ್ಸ್ - 1/2 ಕಪ್
- ಸಕ್ಕರೆ
- ಹಸಿಮೆಣಸಿನಕಾಯಿ
- ತೆಂಗಿನಕಾಯಿ
- ಕೊತ್ತಂಬರಿ ಸೊಪ್ಪು
ಗೋಧಿ ರವೆ ಉಪ್ಪಿಟ್ಟು ಮಾಡುವುದು ಹೇಗೆ?
ಮೊದಲು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ತುಪ್ಪ ಹಾಕಿಕೊಂಡು ಬಳಿಕ ಗೋದಿ ರವೆಯನ್ನು ಹಾಕಿ ಹುರಿದುಕೊಳ್ಳಬೇಕು. ಘಮ ಘಮ ಎನ್ನುವ ಸುವಾಸನೆ ಬರುವವರೆಗೂ ಹುರಿದುಕೊಳ್ಳಿ. ಬಳಿಕ ಇದನ್ನು ತೆಗೆದು ಪ್ಲೇಟ್‌ಗೆ ಹಾಕಿಟ್ಟುಕೊಳ್ಳಿ. ಈಗ ಅದೇ ಬಾಣಲೆಗೆ 2 ಚಮಚ ಎಣ್ಣೆ ಹಾಕಿ ಬಳಿಕ ಕಡಲೆ ಬೇಳೆ, ಉದ್ದಿನ ಬೇಳೆ, ಸಾಸಿವೆ, ಜೀರಿಗೆ, ಕರಿಬೇವು, ಇಂಗು ಸಹ ಹಾಕಿಕೊಂಡು ಮಿಕ್ಸ್ ಮಾಡಿ ಫ್ರೈ ಮಾಡಿಕೊಳ್ಳಿ.
1 ನಿಮಿಷ ಫೈ ಮಾಡಿದ ಬಳಿಕ ಸಣ್ಣದಾಗಿ ಹೆಚ್ಚಿಕೊಂಡಿರುವ ಈರುಳ್ಳಿಯನ್ನು ಕೂಡ ಹಾಕಿಕೊಳ್ಳಿ. ಹಾಗೆ ಫ್ರೈ ಮಾಡಿಕೊಂಡ ಬಳಿಕ ಇದಕ್ಕೆ 1 ಸಣ್ಣದಾಗಿ ಹೆಚ್ಚಿದ ಟೊಮೆಟೋ, ಬಟಾಣಿ, ಕ್ಯಾರೆಟ್, ಬೀನ್ಸ್ ಸಹ ಹಾಕಿಕೊಂಡು ಚೆನ್ನಾಗಿ ಫೈ ಮಾಡಿಕೊಳ್ಳಿ. ಹಾಗೆ ರುಚಿಗೆ ತಕ್ಕಷ್ಟು ಉಪ್ಪು ಹಾಗೆ ಅರ್ಧ ಚಮಚ ಸಕ್ಕರೆ ಸಹ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಹಸಿ ಮೆಣಸು ಹಾಕಿ 2 ನಿಮಿಷ ಫ್ರೈ ಮಾಡಿಕೊಳ್ಳಿ. ಮುಚ್ಚಳ ಮುಚ್ಚಿ 5 ನಿಮಿಷ ಬೇಯಿಸಿ.
ಈಗ ರವೆ ತೆಗೆದುಕೊಂಡಿದ್ದ ಅಳತೆ ಕಪ್‌ನಲ್ಲೇ 1 ಕಪ್ ರವೆಗೆ ಮೂರು ಕಪ್ ಅಳತೆಯ ನೀರು ಬಳಸಬೇಕು. ಗೋಧಿ ರವೆಗೆ ನೀರು ಹೆಚ್ಚು ಬಳಸಬೇಕು. ನೀರು ಹಾಕಿ ಮಿಕ್ಸ್ ಮಾಡಿ ಕುದಿಬರಲು ಬಿಡಿ. ನೀರು ಕುದಿಬರುವಾಗ ಗೋಧಿ ರವೆಯನ್ನು ನಿಧಾನವಾಗಿ ಹಾಕಿ ಮಿಕ್ಸ್ ಮಾಡಿಕೊಳ್ಳಿ.
ಹಾಗೆ ತೆಂಗಿನಕಾಯಿ ತುರಿ ಸಹ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ಮುಚ್ಚಳ ಮುಚ್ಚಿ 10ರಿಂದ 13 ನಿಮಿಷ ಬೇಯಿಸಬೇಕು. ನಂತರ ಮುಚ್ಚಳ ತೆಗೆದು ಮಿಕ್ಸ್ ಮಾಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಮಿಕ್ಸ್ ಮಾಡಿ ಒಲೆ ಆಫ್ ಮಾಡಿಕೊಳ್ಳಿ.



Click it and Unblock the Notifications