Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೆಳಗ್ಗೆ ತಿಂಡಿಗೆ ರುಚಿ ರುಚಿಯ ಗೋಧಿ ಹಿಟ್ಟಿನ ಪರೋಟ ಮಾಡಿ! ಮಾಡೋದು ಹೇಗೆ?
ಬೆಳಗ್ಗೆ ತಿಂಡಿಗೆ ರುಚಿ ರುಚಿಯಾದ ಹಾಗೆ ವಿಶೇಷ ರೀತಿಯ ಸ್ವಾದ ನೀಡುವ ಖಾದ್ಯ ಮಾಡಿ ಸವಿಯೋದು ಅಂದ್ರೆ ನಿಮಗೆ ಬಹಳ ಇಷ್ಟವಾಗಬಹುದು. ಅದ್ರಲ್ಲೂ ಬಹಳ ಸುಲಭವಾಗಿ ಹಾಗೆ ಎಲ್ಲರಿಗೂ ಇಷ್ಟವಾಗುವಂತಹ ತಿಂಡಿ ಮಾಡುವುದು ನಿಮಗೂ ಇಷ್ಟವಾಗಿರುತ್ತೆ. ನಿತ್ಯ ಒಂದೇ ರೀತಿಯ ತಿಂಡಿಗಳ ಮಾಡುವುದು ಅಂದ್ರೆ ಯಾರಿಯೂ ಸವಿಯಲು ಇಷ್ಟವಾಗೋದಿಲ್ಲ. ಹಾಗೆ ಈ ರುಚಿಯ ತಿಂಡಿಗಳನ್ನು ಮಧ್ಯಾಹ್ನದ ಬಾಕ್ಸ್‌ಗೂ ನೀಡಬೇಕಾದರೆ ನೀವು ನಿತ್ಯ ಬೆಳಗ್ಗೆ ಯೋಚಿಸಬೇಕಾಗುತ್ತದೆ.
ಇನ್ನು ಮನೆಯಲ್ಲಿ ಮಕ್ಕಳಿದ್ದರೆ ಅವರಿಗೆ ಇಷ್ಟವಾಗುವಂತಹ ರುಚಿಯ ತಿಂಡಿ ಮಾಡಬೇಕಾಗುತ್ತದೆ. ಅಂತಹ ರುಚಿಕರ ತಿಂಡಿಯಲ್ಲಿ ನಾವಿಂದು ಗೋಧಿ ಹಿಟ್ಟಿನಿಂದ ಮಾಡುವ ಪರೋಟ ಕುರಿತು ತಿಳಿಯೋಣ. ಸಾಮಾನ್ಯನಾಗಿ ಮೈದಾ ಹಿಟ್ಟು ಬಳಸಿ ಈ ಪರೋಟ ಮಾಡಲಾಗುತ್ತದೆ. ಆದ್ರೆ ಮೈದಾ ನಮ್ಮ ದೇಹಕ್ಕೆ ಅದ್ರಲ್ಲೂ ಮಕ್ಕಳ ಜೀರ್ಣಕ್ರಿಯೆಗೆ ಉತ್ತಮ ಆಹಾರವಲ್ಲ. ಹೀಗಾಗಿ ಗೋಧಿ ಹಿಟ್ಟನಿಂದ ಮಾಡಿ ಸವಿಯೋದು ಬಹಳ ಉತ್ತಮ.

ಗೋಧಿ ಹಿಟ್ಟು ಬಳಸಿಕೊಂಡು ಹಲವು ರೀತಿಯ ಖಾದ್ಯ ಮಾಡಬಹುದು. ಅದರಂತೆ ನಾವಿಂದು ಬಹಳ ಸುಲಭವಾಗಿ ಹಾಗೆ ಎಲ್ಲರಿಗೂ ಇಷ್ಟವಾಗುವಂತಹ ಗೋಧಿ ಹಿಟ್ಟಿನ ಪರೋಟ ಮಾಡುವ ಕುರಿತು ಇಲ್ಲಿ ತಿಳಿಯೋಣ. ಗೋಧಿ ಹಿಟ್ಟಿನ ಪರೋಟ ಮಾಡಲು ಯಾವೆಲ್ಲಾ ವಸ್ತು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಗೋಧಿ ಪರೋಟ ಮಾಡಲು ಬೇಕಾಗುವ ವಸ್ತುಗಳು
- ಗೋಧಿ ಹಿಟ್ಟು
- ತುಪ್ಪ
- ಎಣ್ಣೆ
- ಮೈದಾ ಹಿಟ್ಟು
ಗೋಧಿ ಪರೋಟ ಮಾಡುವ ವಿಧಾನವೇನು?
ಮೊದಲು ಒಂದು ಬೌಲ್ ತೆಗೆದುಕೊಂಡು ಅದಕ್ಕೆ 1 ಕಪ್ ಮೈದಾ ಹಾಗೆ 1 ಕಪ್ ಗೋಧಿ ಹಿಟ್ಟು ಹಾಕಿಕೊಂಡು ಮಿಶ್ರಣ ಮಾಡಿ. ಹಾಗೆ ರುಚಿಗೆ ತಕ್ಕಷ್ಟು ಉಪ್ಪು, 1 ಸ್ಪೂನ್ ಎಣ್ಣೆ, ಹಾಕಿಕೊಂಡು ಕೈಯಿಂದ ಮಿಕ್ಸ್ ಮಾಡಿಕೊಳ್ಳಿ. ಚೆನ್ನಾಗಿ ಮಿಶ್ರಣ ಮಾಡಿ ನಿಧಾನವಾಗಿ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಕಲಸಿಕೊಳ್ಳಬೇಕು.
ಇದು ಚಪಾತಿ ಹಿಟ್ಟಿನ ಹದಕ್ಕಿಂತ ಸ್ವಲ್ಪ ಗಟ್ಟಿಯಾಗಿರಬೇಕು. ಈ ಹಿಟ್ಟು ಮೆತ್ತಗೆ ಬರಬೇಕು. ಈ ಹಿಟ್ಟಿನ ಮೇಲೆ 1 ಸ್ಪೂನ್ ಎಣ್ಣೆ ಹಾಕಿ ಪಾತ್ರೆಯಲ್ಲಿ ಮುಚ್ಚಿ ಇಟ್ಟುಕೊಳ್ಳಿ. ಸುಮಾರು 15 ನಿಮಿಷ ಬಿಡಬೇಕು. ಅನಂತರ ಮತ್ತೆ ಹದ ಮಾಡಿಕೊಳ್ಳಬೇಕು. ಒಮ್ಮೆ ಕಲಸಿಕೊಂಡು ಮೃದುವಾಗಿಸಿಕೊಳ್ಳಿ.
ಈಗ ಹಿಟ್ಟನ್ನು ಉಂಡೆ ಕಟ್ಟಿಕೊಳ್ಳಬೇಕು. ನಿಂಬೆ ಗಾತ್ರಕ್ಕೆ ಉಂಡೆಗಳ ಕಟ್ಟಿಕೊಂಡು ಇಟ್ಟುಕೊಳ್ಳಿ. ಈಗ ಚಪಾತಿ ಲಟ್ಟಣಿಗೆ ತೆಗೆದುಕೊಂಡು ಅದಕ್ಕೆ ಎಣ್ಣೆ ಹಚ್ಚಿಕೊಂಡು ಚಪಾತಿ ಲಟ್ಟಿಸಿದಂತೆ ಲಟ್ಟಿಸಿಕೊಳ್ಳಬೇಕು. ಈಗ ಪರೋಟದ ಮೇಲೆ ಎಣ್ಣೆ ಸವರಿಕೊಳ್ಳಿ. ನಂತರ ಅದರ ಮೇಲೆ ಗೋಧಿ ಹಿಟ್ಟು ಸವರಿಕೊಳ್ಳಬೇಕು. ಈ ಸಮಯದಲ್ಲಿ ನೀವು ಬೇಕಿದ್ದರೆ ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು ಸಣ್ಣದಾಗಿ ಕತ್ತರಿಸಿಕೊಂಡು ಇದರ ಮೇಲೆ ಹಾಕಿಕೊಳ್ಳಬಹುದು. ಹಾಕದೆ ಇದ್ದರೂ ನಡೆಯುತ್ತದೆ.
ಈಗ ಗೋಧಿ ಹಿಟ್ಟಿನ ಈ ಪರೋಟವನ್ನು ವೃತ್ತಾಕಾರವಾಗಿ ಮಡಚಿಕೊಳ್ಳಬೇಕು.
ಚಾಪೆಯನ್ನು ಸುತ್ತಿದ ರೀತಿ ಸುತ್ತಿಕೊಂಡು ನಂತರ ಉಂಡೆಯಂತೆ ಅದನ್ನು ಸುತ್ತಬೇಕು.
ಅನಂತರ ಮತ್ತೆ ಎಣ್ಣೆ ಹಚ್ಚಿಕೊಂಡು ಲಟ್ಟಿಸಿಕೊಳ್ಳಬೇಕು. ಈಗ ತೆಳುವಾಗಿ ಮಾಡದೆ
ದಪ್ಪವಾಗಿ ಲಟ್ಟಿಸಿಕೊಳ್ಳಿ. ಈಗ ಒಲೆ ಮೇಲೆ ಒಂದು ಕಾವಲಿ ಇಟ್ಟು ಅದಕ್ಕೆ ತುಪ್ಪ
ಅಥವಾ ಎಣ್ಣೆ ಹಾಕಿ ಈ ಪರೋಟವನ್ನು ಹಾಕಿಕೊಂಡು ಎರಡೂ ಭಾಗದಲ್ಲೂ ಚೆನ್ನಾಗಿ
ಬೇಯಿಸಿಕೊಳ್ಳಬೇಕು.
ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯಾದ ಪರೋಟ ಸಿದ್ದವಾಗುತ್ತೆ. ನೀವು ಸಹ
ಮನೆಯಲ್ಲಿ ಇದನ್ನೊಮ್ಮೆ ಮಾಡಿ ಸವಿದು ನೋಡಿ.



Click it and Unblock the Notifications