ಗೋಧಿ ಹಿಟ್ಟಿನ ಪೇಡಾ ಮಾಡಿದ್ರೆ ಮನೆಯವ್ರೆಲ್ಲಾ ಇಷ್ಟ ಪಡ್ತಾರೆ!

Posted By:

ಗೋಧಿ ಹಿಟ್ಟಿನಿಂದ ಹಲವು ರೀತಿಯ ತಿಂಡಿಗಳ ಮಾಡಿ ಸವಿಯಬಹುದು ಎಂಬುದು ನಿಮಗೂ ತಿಳಿದಿದೆ. ಅದ್ರಲ್ಲೂ ಹೆಚ್ಚಾಗಿ ಗೋಧಿಯಿಂದ ಚಪಾತಿ ಹಿಟ್ಟಿನಿಂದ ಚಪಾತಿ ಹಾಗೂ ಪೂರಿಯನ್ನು ಎಲ್ಲರ ಮನೆಯಲ್ಲೂ ಮಾಡಿ ಸವಿಯೋದು ಕಾಮನ್. ಹಾಗೆ ಇದು ಆರೋಗ್ಯದ ದೃಷ್ಟಿಯಲ್ಲೂ ಬಹಳ ಉತ್ತಮ ಖಾದ್ಯ ಎಂಬುದಾಗಿ ಪರಿಗಣಿಸಲಾಗುತ್ತದೆ.

ಹಾಗೆ ಗೋಧಿಯಿಂದ ಹಲವು ಬಗೆಯ ಸಿಹಿ ತಿಂಡಿಯನ್ನ ಮಾಡಬಹುದು. ಅದ್ರಲ್ಲೂ ಉತ್ತರ ಕರ್ನಾಟಕ ಶೈಲಿಯಲ್ಲಿ ಅದರಲ್ಲೂ ಧಾರವಾಡದ ಸ್ಪೆಷಲ್ ಪೇಡಾದಂತೆ ಗೋಧಿ ಹಿಟ್ಟಿನಲ್ಲೂ ಸಿಹಿಯಾದ ಪೇಡಾ ಮಾಡಬಹುದು. ಈ ರುಚಿಯ ಪೇಡಾ ಒಮ್ಮೆ ನೀವು ಸವಿದರೆ ಯಾವಾಗಲು ಇದೇ ಸಿಹಿ ತಿಂಡಿ ಮಾಡಿ ಸವಿಯಲು ಮುಂದಾಗೋದು ಖಚಿತ.

How To Make Wheat Flour Sweet Peda At Home In Kannada

ಹಾಗೆ ಈ ಗೋದಿ ಹಿಟ್ಟಿನ ಪೇಡಾ ಮಾಡೋಕೆ ಹೆಚ್ಚು ವಸ್ತುಗಳ ಅಗತ್ಯವಿಲ್ಲ. ಸುಲಭವಾಗಿ ಮನೆ ಮಂದಿಗೆಲ್ಲಾ ಇಷ್ಟವಾಗುವಂತಹ ರುಚಿಯಲ್ಲಿ ಇದನ್ನು ಮಾಡಿ ಮುಗಿಸಬಹುದು. ಹಾಗೆ ನಿಮ್ಮ ಮನೆಯಲ್ಲಿ ಮಕ್ಕಳಿದ್ದರೆ ಈ ಸಿಹಿ ಅವರ ಬಾಯಲ್ಲಿ ನೀರು ತರಲಿದೆ. ಹಾಗಾದ್ರೆ ಗೋಧಿ ಹಿಟ್ಟಿನಿಂದ ಸುಲಭವಾಗಿ ಪೇಡಾ ಮಾಡಿ ಸವಿಯುವ ಕುರಿತು ತಿಳಿದುಕೊಳ್ಳೋಣ.

ಗೋಧಿ ಹಿಟ್ಟಿನ ಪೇಡಾ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ? ವಿಧಾನವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಗೋಧಿ ಹಿಟ್ಟಿನ ಪೇಡಾ ಮಾಡಲು ಬೇಕಾಗುವ ವಸ್ತುಗಳು

  • ಗೋಧಿ ಹಿಟ್ಟು
  • ಎಣ್ಣೆ ಅಥವಾ ತುಪ್ಪ
  • ಹಾಲಿನ ಪುಡಿ
  • ಸಕ್ಕರೆ ಪುಡಿ

ಗೋಧಿ ಹಿಟ್ಟಿನ ಪೇಡಾ ಮಾಡುವ ವಿಧಾನವೇನು?

ಮೊದಲಿಗೆ ಬಾಣಲೆಗೆ 1 ಕಪ್ ಗೋಧಿ ಹಿಟ್ಟು ಹಾಕಿಕೊಂಡು ಚೆನ್ನಾಗಿ ಹುರಿದುಕೊಳ್ಳಬೇಕು. ಕಡಿಮೆ ಉರಿಯಲ್ಲಿ ಇಟ್ಟುಕೊಂಡು ನಿಧಾನವಾಗಿ ಹುರಿದುಕೊಳ್ಳಬೇಕು. 5ರಿಂದ 6 ನಿಮಷ ಫ್ರೈ ಮಾಡಿಕೊಂಡರೆ ಸಾಕಾಗುತ್ತದೆ. ಇದಾದ ಬಳಿಕ 2 ಸ್ಪೂನ್ ಎಣ್ಣೆ ಅಥವಾ ತುಪ್ಪ ಕೂಡ ಹಾಕಿಕೊಂಡು ಮತ್ತೆ ಫ್ರೈ ಮಾಡಬೇಕು. 1 ನಿಮಿಷ ಬಿಟ್ಟು ಮತ್ತೆ 2 ಸ್ಪೂನ್ ಎಣ್ಣೆ ಹಾಕಿಕೊಂಡು ಮಿಕ್ಸ್ ಮಾಡಿ. ಇದು ಬ್ರೌನ್ ಕಲರ್‌ಗೆ ಬರುವವರೆಗೂ ಹುರಿಯಬೇಕು.

ಒಟ್ಟಾರೆ 6ರಿಂದ 7 ಸ್ಪೂನ್ ಎಣ್ಣೆ ಹಾಕಿಕೊಳ್ಳಬೇಕಾಗುತ್ತೆ. ಈ ಹಿಟ್ಟು ಮೃದುವಾಗಿ ಉಂಡೆ ಮಾಡಲು ಬರುವಂತಹ ಹದಕ್ಕೆ ಬರಬೇಕು. ನುಣ್ಣಗೆ ಬಂದ ಬಳಿಕ ಒಲೆ ಆಫ್ ಮಾಡಿಕೊಳ್ಳಿ. ಈಗ 4ರಿಂದ 5 ಸ್ಪೂನ್ ಹಾಲಿನ ಪುಡಿ ಹಾಕಬೇಕು. ಹಾಗೆ ಎನ್ನಾಗಿ ಮಿಕ್ಸ್ ಮಾಡಿ. ಗಂಟುಗಳು ಇಲ್ಲದಂತೆ ಮಿಕ್ಸ್ ಮಾಡಿ. ನಂತರ 1 ಕಪ್ ಸಕ್ಕರೆ ಪುಡಿ ಹಾಕಿಕೊಂಡು ಕೈಯಿಂದ ಮಿಕ್ಸ್ ಮಾಡಿ.

ಸಕ್ಕರೆಯನ್ನು ಮಿಕ್ಸಿ ಜಾರ್‌ಗೆ ಹಾಕಿ ಪುಡಿ ಮಾಡಬಹುದು, ಇಲ್ಲವೆ ಅಂಗಡಿಯಲ್ಲೂ ಇದು ಸಿಗಲಿದೆ. ಈಗ ಕೈಯಿಂದ ಒತ್ತಿಕೊಳ್ಳುತ್ತಾ ಉಂಡೆ ಕಟ್ಟಿಕೊಳ್ಳಬೇಕು. ನಂತರ ಈ ಉಂಡೆಯನ್ನು ಸಕ್ಕರೆ ಪುಡಿಯಲ್ಲಿ ಒಮ್ಮೆ ಹೊರಳಿಸಬೇಕು. ಅದರ ತುಂಬಿ ಬಿಳಿ ಬಿಳಿಯಾಗಿ ಸಕ್ಕರೆ ಪುಡಿ ಹಿಡಿಯಬೇಕು. ಇದೇ ವಿಧಾನವಾಗಿ ಎಲ್ಲಾ ಉಂಡೆಗಳನ್ನು ಮಾಡಿಕೊಳ್ಳಿ.

ಇಷ್ಟಾದರೆ ನಿಮ್ಮ ಮುಂದೆ ಸವಿಯಲು ಗೋಧಿ ಪೇಡಾ ಸಿದ್ದವಾಗುತ್ತೆ. ಇದರ ರುಚಿ ಒಮ್ಮೆ ಸವಿದು ನೋಡಿದ್ರೆ ಪದೇ ಪದೇ ಸವಿಯಲು ಮುಂದಾಗೋದು ಖಚಿತ. ಹಾಗೆ ಎಲ್ಲ ಹಬ್ಬದಲ್ಲೂ ಇದನ್ನು ಮಾಡಿ ಸವಿಯಲು ನೀವು ಮನಸ್ಸು ಮಾಡುತ್ತೀರಿ. ಹಾಗೆ ಮನೆಗೆ ಯಾರಾದರು ಸ್ನೇಹಿತರು, ಅತಿಥಿಗಳು ಬಂದಾಗಲಂತು ಇದನ್ನೇ ಮಾಡಿ ನೀಡಲು ಮುಂದಾಗುತ್ತೀರಿ. ಹಾಗೆ ಇದನ್ನು ಮಾಡೋದು ಕೂಡ ಬಹಳ ಸುಲಭ.

[ of 5 - Users]
Story first published: Wednesday, September 24, 2025, 11:20 [IST]
X
Desktop Bottom Promotion