Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
1 ಕಪ್ ಗೋಧಿ ಹಿಟ್ಟಿನಲ್ಲಿ ಶಂಕರಪಾಲಿ ಮಾಡಿ..! 15 ನಿಮಿಷದಲ್ಲಿ ತಿಂಡಿ ರೆಡಿ
ಮನೆಯಲ್ಲಿ ಮಕ್ಕಳಿಗೆ ಇಲ್ಲವೆ ಅತಿಥಿಗಳು, ಸಂಬಂಧಿಕರು ಬಂದಾಗ ಅವರಿಗೆ ಸವಿಯಲು ಕೊಡಲು ತಿಂಡಿ ಯಾವುದಾದರು ಇದ್ದರೆ ಉತ್ತಮ. ಇದಕ್ಕಾಗಿಯೇ ನೀವು ಅಂಗಡಿ, ಬೇಕರಿಯಿಂದ ಯಾವ ತಿಂಡಿ ಬೇಕಾದರು ತಂದು ಸವಿಯಲು ನೀಡಬಹುದು. ಆದರೆ ನೀವೆ ಮನೆಯಲ್ಲಿ ಮಾಡಿದ ತಿಂಡಿ ಹೇಗೆ?
ಮನೆಯಲ್ಲಿ ನೀವು ಫ್ರೀ ಇದ್ದಾಗ ಯಾವುದಾದರು ತಿಂಡಿ ಅಥವಾ ಸ್ನ್ಯಾಕ್ಸ್ ಮಾಡುವ ಉದ್ದೇಶ ನಿಮ್ಮದಾಗಿದ್ದರೆ ಶಂಕರಪಾಲಿ ಮಾಡಿ ನೋಡಿ. ಹೌದು ಬೇಕರಿಯಲ್ಲಿ ವಿವಿಧ ರೀತಿಯ ಶಂಕರಪಾಲಿ ನೀವು ನೋಡಿರುತ್ತೀರಿ. ಆದ್ರೆ ಮನೆಯಲ್ಲಿ ಗೋಧಿ ಹಿಟ್ಟು ಬಳಸಿ ಶಂಕರಪಾಲಿ ಮಾಡಿದ್ದೀರಾ?

ಗೋಧಿ ಹಿಟ್ಟಿನಲ್ಲಿ ಅದ್ಭುತ ರುಚಿಯ ಶಂಕರಪಾಲಿ ಮಾಡಬಹುದು. ಹಾಗಾದ್ರೆ ಶಂಕರಪಾಲಿ ಮಾಡುವ ಕುರಿತು ತಿಳಿದುಕೊಳ್ಳೋಣ. ಈ ಗೋಧಿ ಹಿಟ್ಟಿನ ಶಂಕರಪಾಲಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ತೆಗೆದುಕೊಳ್ಳುತ್ತೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಶಂಕರಪಾಲಿ ಮಾಡಲು ಬೇಕಾಗುವ ವಸ್ತುಗಳು
- ಗೋಧಿ ಹಿಟ್ಟು - 1 ಕಪ್
- ತುಪ್ಪ- ಕಾಲು ಕಪ್
- ಉಪ್ಪು
- ಸಕ್ಕರೆ - ಅರ್ಧ ಕಪ್
- ಏಲಕ್ಕಿ ಪುಡಿ
- ಎಣ್ಣೆ
ಗೋಧಿ ಹಿಟ್ಟಿನ ಶಂಕರಪಾಲಿ ಮಾಡುವ ವಿಧಾನ
ಒಂದು ಪಾತ್ರೆಯಲ್ಲಿ ಅರ್ಧ ಕಪ್ ಹಾಲು ತೆಗೆದುಕೊಂಡು ಅದಕ್ಕೆ ಕಾಲು ಕಪ್ ಸಕ್ಕರೆ, ಕಾಲು ಕಪ್ ತುಪ್ಪ ಹಾಕಿ ಕುದಿಯಲು ಬಿಡಬೇಕು. ತಳ ಹಿಡಿಯದಂತೆ ನಿಧಾನ ಉರಿಯಲ್ಲಿ ಇಟ್ಟು ತಿರುಗಿಸುತ್ತಾ ಇರಿ. ಕಾಲು ಚಮಚ ಉಪ್ಪು ಹಾಕಿ ಚೆನ್ನಾಗಿ ತಿರುಗಿಸಿ. ಇದಕ್ಕೆ ಏಲಕ್ಕಿ ಪುಡಿ ಹಾಕಿ ಕುದಿಸಿಕೊಳ್ಳಿ.
ಈಗ ಒಂದು ಬೌಲ್‌ನಲ್ಲಿ ಗೋಧಿ ಹಿಟ್ಟು ತೆಗೆದುಕೊಂಡು ಅದಕ್ಕೆ ಒಲೆ ಮೇಲಿರುವ ಪದಾರ್ಥವನ್ನು ಸೇರಿಸಿಕೊಳ್ಳಿ. ಬಳಿಕ ಚೆನ್ನಾಗಿ ಕಲಸಿಕೊಳ್ಳಿ. ಹೋಳಿಗೆ ಹೂರ್ಣದಂತೆ ಆಗುವವರೆಗೂ ಚೆನ್ನಾಗಿ ಕಲಸಿಕೊಳ್ಳಿ. ಚಪಾತಿ ಹಿಟ್ಟು ಅಥವಾ ಹೂರ್ಣದಂತೆ ಆಗುತ್ತದೆ. ನಂತರ ಈ ಹಿಟ್ಟನ್ನು ಚಪಾತಿ ಮಣೆಯಲ್ಲಿ ಲಟ್ಟಿಸಿಕೊಳ್ಳಿ. ದೊಡ್ಡ ರೊಟ್ಟಿಯಂತೆ ಲಟ್ಟಿಸಿಕೊಳ್ಳಿ. ನಂತರ ಅಂಚನ್ನು ಚೌಕಾಕಾರವಾಗಿ ಕತ್ತರಿಸಿಕೊಳ್ಳಿ.
ನಂತರ ನೇರವಾಗಿ ಸಾಲುಗಳ ಹಾಕಿ ಚಚೌಕವಾಗಿ ಸಣ್ಣ ಸಣ್ಣ ಚೌಕ ಬರುವಂತೆ ಕತ್ತರಿಸಿಕೊಳ್ಳಿ. ಈಗ ಒಲೆ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿಕೊಂಡಿ ಎಣ್ಣೆ ಕಾಯಲು ಇಡಿ. ಎಣ್ಣೆ ಕಾದ ಬಳಿಕ ಈ ಚಚೌಕವಾದ ಸಣ್ಣ ಹಿಟ್ಟಿನ ಉಂಡೆಯನ್ನ ಎಣ್ಣೆಗೆ ಹಾಕಿಕೊಳ್ಳಿ. ಸಣ್ಣ ಉರಿಯಲ್ಲಿ ಸುಮಾರು 15 ನಿಮಿಷ ಕರಿಯಬೇಕು. ಆಗಾಗ ಕೈಯಾಡಿಸುತ್ತಿದ್ದರೆ ಆಯಿತು. ಇದು ಗಾಢ ಕಾಫಿ ಬಣ್ಣಕ್ಕೆ ತಿರುಗಿದರೆ ಕರಿದು ಮುಗಿದಿದೆ ಎಂದರ್ಥ. ಇಷ್ಟಾದರೆ ನಿಮ್ಮ ಮುಂದೆ ಕರಿದ ಶಂಕರಪಾಲಿ ರೆಡಿಯಾಗುತ್ತದೆ.
ನೀವು ಸಹ ಒಮ್ಮೆ ಮನೆಯಲ್ಲಿ ಫ್ರೀ ಇದ್ದಾಗ ಈ ತಿಂಡಿ ಮಾಡಿ ನೋಡಿ. ಒಂದು ಬಾಕ್ಸ್‌ನಲ್ಲಿ ಹಾಕಿ ಇಟ್ಟರೆ ಸುಮಾರು 1 ತಿಂಗಳ ಕಾಲ ಇಟ್ಟು ಸವಿಯಬಹುದು. ಮನೆಯಲ್ಲಿ ಟೈ ಪಾಸ್ ಮಾಡುವಾಗ, ಟಿವಿ ನೋಡುವಾಗ ಸವಿಯಲು ಸಖತ್ ರುಚಿ ನೀಡಲಿದೆ.



Click it and Unblock the Notifications