Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮನೆಯಲ್ಲೇ ಮಾಡಿ ವಾಂಗಿಬಾತ್ ಗೊಜ್ಜು..! 5 ನಿಮಿಷಕ್ಕೆ ತಿಂಡಿ ಮಾಡಬಹುದು!!
ಬೆಳಗ್ಗೆ ತಿಂಡಿ ಮಾಡುವುದು ಅಂದ್ರೆ ಬಹುದೊಡ್ಡ ಕೆಲಸ ಆಗಿರುತ್ತೆ. ಹೀಗಾಗಿ ಬೆಳಗ್ಗೆ ತಿಂಡಿಗೆ ಏನು ಮಾಡಬೇಕು ಅನ್ನೋದೆ ದೊಡ್ಡ ಸವಾಲು. ಹೀಗಾಗಿ ನಾವು ಅತೀ ಕಡಿಮೆ ಸಮಯದಲ್ಲಿ ಬಹುಬೇಗ ಮಾಡುವಂತಹ ಖಾದ್ಯ ಯಾವುದಾದರು ಇದ್ದರೆ ಅದನ್ನೇ ಟ್ರೈ ಮಾಡುತ್ತೇವೆ. ಹೀಗಾಗಿ ರೈಸ್‌ನಿಂದ ಮಾಡುವಂತಹ ತಿಂಡಿಗಳನ್ನು ಹೆಚ್ಚಾಗಿ ಮಾಡುತ್ತೇವೆ.
ಅದರಲ್ಲೂ ಬೆಳಗ್ಗೆ ನಾವು ವಾಂಗಿಬಾತ್ ಮಾಡಿದ್ರೆ ಅದರ ರುಚಿಗೆ ಎಲ್ಲರು ಫಿದಾ ಆಗುತ್ತಾರೆ. ವಾಂಗಿಬಾತ್ ಮಾಡೋದು ಕೂಡ ತುಂಬಾನೆ ಸುಲಭ. ಮಸಾಲೆಗಳ ಹಾಕಿ ಈ ವಾಂಗಿಬಾತ್ ಮಾಡಿದ್ರೆ ಮನೆ ಮಂದಿ ಎಲ್ಲ ಕುಳಿತು ಸವಿಯುತ್ತಾರೆ. ಆದ್ರೆ ನಿತ್ಯ ಈ ವಾಂಗಿಬಾತ್ ಮಾಡೋದು ಅಂದ್ರೆ ಎಲ್ಲರಿಗೂ ಕಷ್ಟವೇ. ಆದ್ರೆ ನಾವು ಪುಳಿಯೋಗರೆ ಗೊಜ್ಜು, ಚಿತ್ರಾನ್ನದ ಗೊಜ್ಜು ಈ ರೀತಿ ವಾಂಗಿಬಾತ್ ಗೊಜ್ಜು ಕೂಡ ಮಾಡಬಹುದು.

ಬದನೆಕಾಯಿಯ ಜೊತೆ ಅನ್ನ ಹಾಗೂ ಉತ್ತಮ ಮಸಾಲೆಗಳ ಮಿಶ್ರಣದಿಂದ ತಯಾರಾಗುವ ಈ ಖಾದ್ಯವೇ ವಾಂಗಿಬಾತ್. ಬಾಂಗಿಬಾತ್ ಅನ್ನು ಮೊದಲೇ ಗೊಜ್ಜು ಮಾಡಿಟ್ಟರೆ 5 ನಿಮಿಷದಲ್ಲಿ ವಾಂಗಿಬಾತ್ ಮಾಡಬಹುದು. ಈ ವಾಂಗಿಬಾತ್ ಗೊಜ್ಜು ಮಾಡುವುದು ಹೇಗೆ? ಎಷ್ಟು ದಿನಗಳ ಕಾಲ ಈ ಗೊಜ್ಜು ಇಡಬಹುದು ಎಂಬುದನ್ನು ಇಲ್ಲಿ ತಿಳಿಯೋಣ.
ವಾಂಗಿಬಾತ್ ಗೊಜ್ಜು ಮಾಡಲು ಬೇಕಾಗುವ ಪದಾರ್ಥಗಳು, ಮಾಡುವ ವಿಧಾನವೇನು? ಮಾಡಲು ಎದಷ್ಟು ಸಮಯ ಬೇಕು? ಮಾಡುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ವಾಂಗಿಬಾತ್ ಮಾಡಲು ಬೇಕಾಗುವ ಪದಾರ್ಥಗಳು
- ಅನ್ನ
- ಬೆಲ್ಲ
- ಈರುಳ್ಳಿ
- ಖಾರದ ಪುಡಿ
- ಉಪ್ಪು
- ಹುಣಸೆ ಹುಳಿ
- ಜೀರಿಗೆ
- ಸಾಸಿವೆ
- ಕಸೂರಿ ಮೇಥಿ
- ಬಿರಿಯಾನಿ ಎಲೆ
- ಕರಿಬೇವು
- ಟಮೆಟೋ
- ಬಿಳಿ ಬದನೆಕಾಯಿ
- ವಾಂಗಿಬಾತ್ ಪುಡಿ
ವಾಂಗಿಬಾತ್ ಮಾಡುವ ವಿಧಾನ
ಮೊದಲು ಒಂದು ಉಂಡೆಯಷ್ಟು ಹುಣಸೆ ಹುಳಿಯ ರಸವನ್ನು ಹಿಂಡಿಕೊಂಡು ಬೌಲ್‌ಗೆ ಹಾಕಿ ಇಟ್ಟುಕೊಳ್ಳಿ. ನಂತರ ಈ ಬೌಲ್‌ಗೆ ಖಾರದ ಪುಡಿ, ಉಪ್ಪು, ಬೆಲ್ಲ ಹಾಕಿಕೊಂಡು ಚೆನ್ನಾಗಿ ಕಲಸಿಕೊಳ್ಳಬೇಕು. 1 ಸ್ಪೂನ್ ಬೆಲ್ಲ ಚೆನ್ನಾಗಿ ಕರಗಬೇಕು. ಈಗ ಈ ಮಿಶ್ರಣ ಬದಿಗಿಟ್ಟು ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಳ್ಳಿ.
ಈ ಎಣ್ಣೆ ಬಿಸಿಯಾದ ಬಳಿಕ ಇದಕ್ಕೆ ಸಾಸಿವೆ, ಜೀರಿಗೆ, ಕಸೂರಿ ಮೇಥಿ, ಬಿರಿಯಾನಿ ಎಲೆ, ಕರಿಬೇವು, ಸಣ್ಣದಾಗಿ ಕತ್ತರಿಸಿಕೊಂಡಿರುವ ಈರುಳ್ಳಿಯನ್ನು ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ. 1 ನಿಮಿಷದ ಬಳಿಕ ಒಂದು ಟೊಮೆಟೋ ಹೆಚ್ಚಿಕೊಂಡು ಇದಕ್ಕೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ 1 ನಿಮಿಷದ ಬಳಿಕ ಇದಕ್ಕೆ ಬಿಳಿ ಬದನೆಕಾಯಿಯನ್ನು ಹೆಚ್ಚಿಕೊಂಡು ಇದಕ್ಕೆ ಹಾಕಿ.
ಬಿಳಿ ಬದನೆಕಾಯಿಯನ್ನು ಉದ್ದವಾಗಿ ಹೆಚ್ಚಕೊಂಡು ಮಧ್ಯದಲ್ಲಿ ಸೀಲಿಕೊಳ್ಳಬೇಕು. ಹೆಚ್ಚಿಕೊಂಡು ಇದನ್ನು ನೀರಿಗೆ ಹಾಕಿಟ್ಟುಕೊಳ್ಳಿ. ಈಗ ನೀರಿನಿಂದ ತೆಗೆದು ಈ ಬಿಳಿ ಬದನೆಯನ್ನು ಮಸಾಲೆಯ ಪಾತ್ರೆಗೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಎಳೆಯ ಬದನೆಕಾಯಿ ಇದ್ದರೆ ಅಡುಗೆಗೆ ಸೂಕ್ತ. ಈಗ ಮೊದಲು ರೆಡಿ ಮಾಡಿಕೊಂಡಿರುವ ಹುಣಸೆ ಹುಳಿಯ ರಸವನ್ನು ಇದಕ್ಕೆ ಹಾಕಿ.
ನಂತರ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಿಮಗೆ ಬೇಕಾದರೆ ಸ್ವಲ್ಪವೇ ಸ್ವಲ್ಪ ನೀರು ಹಾಕಿಕೊಂಡು ಕುದಿಯಲು ಬಿಡಿ. ಮಸಾಲೆ ಕುದಿಯಲು ಆರಂಭಿಸಿದಾಗ ವಾಂಗಿಬಾತ್ ಪುಡಿಯನ್ನು ಹಾಕಬೇಕು. ಅಂಗಡಿಯಲ್ಲಿ ಸಿಗುವ ಸಾಮಾನ್ಯ ವಾಂಗಿಬಾತ್ ಪುಡಿ ಸಾಕಾಗುತ್ತದೆ. ಈ ಪುಡಿ ಹಾಕಿದ ಬಳಿಕ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಒಲೆ ಆಫ್ ಮಾಡಿಕೊಳ್ಳಿ. 1 ನಿಮಿಷ ಬೇಯಿಸಿದರೆ ಸಾಕು.
ಇದು ಗೊಜ್ಜು ಮಾಡುವ ವಿಧಾನವಾಗಿದೆ. ಇನ್ನು ನಿಮಗೆ ಎಷ್ಡು ಬೇಕೋ ಅಷ್ಟು ಅನ್ನ ತೆಗೆದುಕೊಂಡು ಅದಕ್ಕೆ ಗೊಜ್ಜು ಹಾಕಿಕೊಂಡಿ ಕಲಸಿಕೊಂಡರೆ ನಿಮ್ಮ ಮುಂದೆ ಬಾಂಗಿಬಾತ್ ರೆಡಿಯಾಗುತ್ತದೆ. ಈ ಗೊಜ್ಜನ್ನು ನೀವು ಹಲವು ವಾರಗಳ ಕಾಲ ಇಟ್ಟು ಆಗಾಗ ವಾಂಗಿಬಾತ್ ಮಾಡಿ ಸವಿಯಬಹುದು. ನೀವು ಕೂಡ ಈ ವಾಂಗಿಬಾತ್ ಮಾಡಿ ಸವಿದು ನೋಡಿ.



Click it and Unblock the Notifications