Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಯಾವುದೇ ತಿಂಡಿ ಇರ್ಲಿ, ವಿದ್ಯಾರ್ಥಿ ಭವನದ ಚಟ್ನಿ ಮಾಡಿ! ಇಲ್ಲಿದೆ ರುಚಿಯ ರೆಸಿಪಿ!
ಬೆಳಗ್ಗೆ ತಿಂಡಿಯೊಂದಿಗೆ ನೀವು ರುಚಿಕರವಾಗಿ ಸವಿಯಲು ಯಾವುದಾದರು ಚಟ್ನಿ, ಪಲ್ಯ ಮಾಡುವುದು ಕಾಮನ್, ಅದ್ರಲ್ಲೂ ಚಟ್ನಿ ಹೆಸರು ಕೇಳಿದ್ರೆ ತೆಂಗಿನಕಾಯಿ ಬಳಸಿ ಮಾಡುವ ಚಟ್ನಿ ಅಥವಾ ಹುರಿಗಡಲೆ, ಕಡಲೆ ಕಾಳು ಬಳಸಿ ಮಾಡುವ ಚಟ್ನಿ ಬಹಳ ರುಚಿಕರವಾಗಿರಲಿದೆ. ಇನ್ನು ಹೋಟೆಲ್‌ಗಳಲ್ಲಿ ಬಗೆ ಬಗೆಯ ಚಟ್ನಿಯನ್ನು ಮಾಡಿ ಸವಿಯಲು ನೀಡುತ್ತಾರೆ.
ಕೆಲವೊಂದು ಹೋಟೆಲ್‌ಗಳಲ್ಲಿ ಗಟ್ಟಿ ಚಟ್ನಿ, ಕಾಯಿ ಚಟ್ನಿ ಬಹಳ ಫೇಮಸ್ ಆಗಿರಲಿವೆ. ಇಂತಹ ಫೇಮಸ್ ಚಟ್ನಿಗಳ ಪೈಕಿ ನಾವು ಬೆಂಗಳೂರಿನ ಫೇಮಸ್ ಹೋಟೆಲ್‌ಗಳಲ್ಲಿ ಒಂದಾದ ವಿದ್ಯಾರ್ಥಿ ಭವನದ ಕಾಯಿ ಚಟ್ನಿ ಕುರಿತಾಗಿ ತಿಳಿದುಕೊಳ್ಳೋಣ. ಬೆಂಗಳೂರಿನ ಫೇಮಸ್ ಹೋಟೆಲ್ ಆಗಿರುವ ವಿದ್ಯಾರ್ಥಿ ಭವನದ ದೋಸೆ ಅಂದ್ರೆ ಎಲ್ಲರ ಬಾಯಲ್ಲಿ ನೀರು ಬರಲಿದೆ.

ಈ ಬೆಂಗಳೂರಿನ ಹೋಟೆಲ್‌ನಲ್ಲಿ ಹಲವು ಖಾದ್ಯಗಳ ಪೈಕಿ ಅಲ್ಲಿ ಮಾಡುವ ತೆಂಗಿನಕಾಯಿಯ ಚಟ್ನಿ ಎಲ್ಲಾ ತಿಂಡಿಯೊಂದಿಗೂ ಸವಿಯಲು ಸೂಕ್ತವಾಗಿರಲಿದೆ. ಹಾಗೆ ಈ ಚಟ್ನಿ ಮನೆಯಲ್ಲಿ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ. ವಿದ್ಯಾರ್ಥಿ ಭವನದ ಕಾಯಿ ಚಟ್ನಿ ಮನೆಯಲ್ಲಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?, ಮಾಡುವ ವಿಧಾನವೇನು?, ಎಷ್ಟು ಸಮಯ ಹಿಡಿಯಲಿದೆ? ಎಂಬ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ವಿದ್ಯಾರ್ಥಿ ಭವನ ಚಟ್ನಿ ಮಾಡಲು ಬೇಕಾಗುವ ವಸ್ತುಗಳು
- ತೆಂಗಿನಕಾಯಿ ತುರಿ
- ಹುರಿಗಡಲೆ
- ಕೊತ್ತಂಬರಿ ಸೊಪ್ಪು
- ಹಸಿ ಮೆಣಸು
- ಹುಣಸೆ ಹುಳಿ
- ಉಪ್ಪು
- ಸಾಸಿವೆ
- ಒಣ ಮೆಣಸು
- ಕರಿಬೇವು
ವಿದ್ಯಾರ್ಥಿ ಭವನ ಚಟ್ನಿ ಮಾಡುವ ವಿಧಾನ
ಮೊದಲು ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ಹಸಿ ಮೆಣಸು, ಕೊತ್ತಂಬರಿ ಸುಪ್ಪು ಹಾಕಿ ಹುರಿದುಕೊಳ್ಳಿ. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಹುರಿಗಡಲೆ, ತೆಂಗಿನಕಾಯಿ ತುರಿ, ಹಾಗೆ ಹುರಿದುಕೊಂಡು ತಣ್ಣಗಾಗಲು ಇಟ್ಟ ಕೊತ್ತಂಬರಿ, ಹಸಿ ಮೆಣಸನ್ನು ಇದಕ್ಕೆ ಹಾಕಿಕೊಳ್ಳಿ.
ಹಾಗೆ ಇದಕ್ಕೆ ಕತ್ತರಿಸಿಕೊಂಡ ಶುಂಠಿ, ಉಪ್ಪು, ಹುಣಸೆ ಹುಳಿ, ಅಥವಾ ಹುಳಿ ಪೇಸ್ಟ್, ಹಾಕಿ ಪುಡಿ ಪುಡಿಯಾಗಿ ರುಬ್ಬಿಕೊಳ್ಳಿ. ಅನಂತರ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಬೇಕು. ತರಿ ತರಿಯಾಗಿ ತೆಳುವಾಗಿ ಈ ಚಟ್ನಿ ಬರಬೇಕು. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಮತ್ತೆ 2 ಸುತ್ತು ರುಬ್ಬಿಕೊಳ್ಳಬೇಕು.
ಈಗ ಒಂದು ಪಾತ್ರೆಗೆ ಈ ಚಟ್ನಿ ಹಾಕಿಕೊಂಡು ದಪ್ಪವಾಗಿದ್ದ ಚಟ್ನಿಯನ್ನು ಮಿಕ್ಸ್ ಮಾಡಿಕೊಂಡು ಇಟ್ಟುಕೊಳ್ಳಿ. ಈಗ ಸಾಸಿವೆ, ಒಣ ಮೆಣಸು, ಕರಿಬೇವಿನ ಸೊಪ್ಪು ಹಾಕಿ ಸಣ್ಣದಾದ ಒಗ್ಗರಣೆ ಹಾಕಿಕೊಳ್ಳಬಹುದು. ಹಾಕದೆ ಇದ್ದರೂ ಇದರ ರುಚಿ ದುಪ್ಪಟ್ಟಾಗಲಿದೆ.



Click it and Unblock the Notifications